ವಾಟ್ಸಾಪ್‌ನಲ್ಲಿ ವೀಡಿಯೊ ಆಟೊ ಡೌನ್‌ಲೋಡ್ ನಿಲ್ಲಿಸುವುದು ಹೇಗೆ?

ಮೀಡಿಯಾ ಫೈಲ್‌ಗಳು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುವುದು ಹೆಚ್ಚುವರಿ ಡೇಟಾವನ್ನು ಕಬಳಿಸಬಹುದು ಅದಕ್ಕಾಗಿ ಇದನ್ನು ನಿಲ್ಲಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ.

Written By:

ಇಂದು ಹೆಚ್ಚು ಬಳಕೆಯಾಗುತ್ತಿರುವ ಸಾಮಾಜಿಕ ತಾಣಗಳಲ್ಲಿ ಪ್ರಥಮವಾಗಿ ಕೇಳಿಬರುವುದೇ ವಾಟ್ಸಾಪ್ ಹೆಸರಾಗಿದೆ. ಫೋಟೋ, ವೀಡಿಯೊ, ಆಡಿಯೊ, ಲೊಕೇಶನ್, ಸಂಪರ್ಕಗಳು ಮತ್ತು ಜಿಫ್ಸ್, ಪಿಡಿಎಫ್ ಫೈಲ್‌ಗಳನ್ನು ಶೇರ್ ಮಾಡಿಕೊಳ್ಳಬಹುದಾಗಿದೆ. ಇದೀಗ ವಾಟ್ಸಾಪ್ ನಿಮ್ಮ ಸಂವಾದವನ್ನು ಇನ್ನಷ್ಟು ಮಧುರಗೊಳಿಸಲು ಆಟೊ ಡೌನ್‌ಲೋಡ್ ಆಪ್ಶನ್ ಅನ್ನು ನೀಡಿದೆ.

ಓದಿರಿ: ವಾಟ್ಸಾಪ್‌ನ ಐದು ಹೊಸ ಫೀಚರ್ಸ್! ಟ್ರೈ ಮಾಡಿದ್ದೀರಾ?

ಆದರೆ ಈ ಮೀಡಿಯಾ ಫೈಲ್‌ಗಳು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುವುದು ಹೆಚ್ಚುವರಿ ಡೇಟಾವನ್ನು ಕಬಳಿಸಬಹುದು ಅದಕ್ಕಾಗಿ ಇದನ್ನು ನಿಲ್ಲಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ.

ಓದಿರಿ: ಆನ್‌ಲೈನ್‌ನಲ್ಲಿ ಸುರಕ್ಷಿತರಾಗಿರುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಆಂಡ್ರಾಯ್ಡ್ ಡಿವೈಸ್‌ನಲ್ಲಿ

ವಾಟ್ಸಾಪ್ ಸೆಟ್ಟಿಂಗ್ಸ್‌ಗೆ ಹೋಗಿ
'ಡೇಟಾ ಯೂಸೇಜ್' ಆಪ್ಶನ್ ಅನ್ನು ನೀವು ಕಾಣುತ್ತೀರಿ, ಅದನ್ನು ಕ್ಲಿಕ್ ಮಾಡಿ
ಇದು ಇನ್ನೊಂದು ವಿಂಡೊಗೆ ನಿಮ್ಮನ್ನು ಕೊಂಡೊಯ್ಯುತ್ತದೆ ಇಲ್ಲಿ ನಿಮಗೆ ಮೀಡಿಯಾ ಆಟೊ ಡೌನ್‌ಲೋಡ್ ಆಪ್ಶನ್ ದೊರೆಯುತ್ತದೆ. ಅದನ್ನು ಸ್ಪರ್ಶಿಸಿ.
ಮೀಡಿಯಾ ಆಟೊ ಡೌನ್‌ಲೋಡ್ ಆಪ್ಶನ್ ಅಡಿಯಲ್ಲಿ, ಇಲ್ಲಿ ಮೂರು ಆಪ್ಶನ್‌ಗಳು ನಿಮಗೆ ದೊರೆಯುತ್ತದೆ. ಮೊಬೈಲ್ ಡೇಟಾ, ವೈಫೈಗೆ ಕನೆಕ್ಟ್ ಆಗಿರುವಾಗ, ರೋಮಿಂಗ್ ಆಗುತ್ತಿರುವಾಗ ಎಂದಾಗಿದೆ. ನೀವು ಪ್ರತೀ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು ಮತ್ತು ಅನ್‌ಚೆಕ್ ಮಾಡಬೇಕು. ಓಕೆ ಕ್ಲಿಕ್ ಮಾಡಿ. ನಿಮ್ಮ ಕೆಲಸ ಆದಂತೆಯೇ!

ಐಫೋನ್‌ನಲ್ಲಿ

ವಾಟ್ಸಾಪ್ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಚಾಟ್ಸ್ ಕ್ಲಿಕ್ ಮಾಡಿ ಇಲ್ಲಿ ನಿಮಗೆ ಮೀಡಿಯಾ ಸೇವಿಂಗ್ ಆಪ್ಶನ್ ಪಕ್ಕದಲ್ಲಿ ಆನ್/ಆಫ್ ಬಟನ್ ದೊರೆಯುತ್ತದೆ. ಆಟೊ ಡೌನ್‌ಲೋಡ್ ನಿಲ್ಲಿಸಲು ಇದನ್ನು ಆಫ್ ಮಾಡಿದರೆ ಆಯಿತು

ವಿಂಡೋಸ್ ಬಳಕೆದಾರರಿಗೆ

ಸೆಟ್ಟಿಂಗ್ಸ್‌ಗೆ ಹೋಗಿ, ಚಾಟ್ ಮತ್ತು ಕಾಲ್ಸ್ ಆಪ್ಶನ್ ದೊರೆಯುತ್ತದೆ. ಕ್ಲಿಕ್ ಮಾಡಿ
ಮೀಡಿಯಾ ಆಟೊ ಡೌನ್‌ಲೋಡ್ ಇಲ್ಲಿ ಸ್ಪರ್ಶಿಸಿ
ನಿಮಗೆ 4 ಆಪ್ಶನ್ ದೊರೆಯುತ್ತದೆ. ಇಮೇಜಸ್, ವೀಡಿಯೊ, ಆಡಿಯೊ ಮತ್ತು ಡಾಕ್ಯುಮೆಂಟ್ಸ್ ಎಂದಾಗಿದೆ. ನೀವು ಪ್ರತೀ ಆಪ್ಶನ್ ಮೇಲ್ ಕ್ಲಿಕ್ ಮಾಡಿದಂತೆಲ್ಲಾ ನಿಮಗೆ 'ನೆವರ್' ಕ್ಲಿಕ್ ಆನ್ ಎಂಬ ಸಂದೇಶ ದೊರೆಯುತ್ತದೆ. ಇದರ ಮೇಲೆ ಕ್ಲಿಕ್ ಮಾಡಿ ಮತ್ತು ಮೀಡಿಯಾ ಫೈಲ್‌ಗಳ ಆಟೊ ಡೌನ್‌ಲೋಡ್ ಇದು ನಿಲ್ಲಿಸುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
In this tutorial, we have shared how to stop media from auto downloading on WhatsApp. You can be an Android or Windows phone or iPhone user, this guide covers it all. So here you go.
Please Wait while comments are loading...
Opinion Poll

Social Counting