ಹೊಸ ಫೋನ್ ಖರೀದಿಗೆ ಸಹಾಯಕವಾಗಿರುವ ಸರಳ ಸಲಹೆಗಳು

By Shwetha
|

ಹೊಸ ಸ್ಮಾರ್ಟ್‌ಫೋನ್ ಅನ್ನು ಖರೀದಿಸುವುದೆಂದರೆ ಹಬ್ಬವಿದ್ದಂತೆ. ಹೆಚ್ಚಿನ ಕಾತರ ಮತ್ತು ಹಂಬಲಗಳನ್ನು ನಮ್ಮ ಮನಸ್ಸಿನಲ್ಲಿರಿಸಿಕೊಂಡು ನಮ್ಮ ಬಯಕೆಯ ಫೋನ್ ಅನ್ನು ನಾವು ಖರೀದಿಸುತ್ತೇವೆ. ಸಾಧ್ಯವಾದಷ್ಟೂ ನಮ್ಮ ಬಯಕೆಯ ಫೋನ್ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತೇವೆ.

ಇದನ್ನೂ ಓದಿ: ನಿಮ್ಮ ಲ್ಯಾಪ್‌ಟಾಪ್‌ ಅನ್ನು ಟಿವಿಗೆ ಸಂಪರ್ಕಪಡಿಸುವುದು ಹೇಗೆ?

ಆದರೂ ಒಮ್ಮೊಮ್ಮೆ ಫೋನ್ ಅನ್ನು ಖರೀದಿಸಿದ ನಂತರ ಕೂಡ ನಮಗೆ ತೃಪ್ತಿ ಉಂಟಾಗುವುದಿಲ್ಲ. ಫೋನ್ ಖರೀದಿಯ ನಂತರ ನಮಗೆ ಅದು ನಷ್ಟವನ್ನುಂಟು ಮಾಡುವ ಸಂದರ್ಭ ಕೂಡ ಇರುತ್ತದೆ. ಇದು ಏಕೆಂಬುದನ್ನು ಆಲೋಚಿಸಿದ್ದೀರಾ?

ಇದನ್ನೂ ಓದಿ: ಪ್ರೊಫೈಲ್ ಚಿತ್ರದ ಅಂದವನ್ನು ಹೆಚ್ಚಿಸುವ ತೀಕ್ಷ್ಣ ವಿಧಾನಗಳು

ಹಾಗಿದ್ದರೆ ನಿಮ್ಮ ಸಮಸ್ಯೆಯನ್ನು ನಮಗೆ ಬಿಟ್ಟು ಬಿಡಿ. ಇಂದಿನ ಲೇಖನದಲ್ಲಿ ಅತಿ ಸರಳವಾದ ಸಲಹೆಗಳನ್ನು ನಾವು ನೀಡಿದ್ದು ಇದು ಖಂಡಿತ ನಿಮಗೆ ಉಪಯೋಗಕಾರಿಯಾಗಲಿದೆ. ಹೊಸ ಫೋನ್ ಅನ್ನು ಖರೀದಿಸುವಾಗ ಏನು ಮಾಡಬೇಕು? ಖರೀದಿಸಿದ ನಂತರ ಅದನ್ನು ಹೇಗೆ ಜಾಗರೂಕತೆಯಾಗಿ ಇರಿಸಿಕೊಳ್ಳಬೇಕು ಮೊದಲಾದ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ನೀಡಿದ್ದೇವೆ.

ಇದನ್ನೂ ಓದಿ: ವೈಫೈ ಭದ್ರತೆಯನ್ನು ಪರಿಶೀಲಿಸುವುದು ಹೇಗೆ?

#1

#1

ನೀವು ಫೋನ್ ಅನ್ನು ಖರೀದಿಸುವ ಮುನ್ನ ನೀವು ಬಯಸುವ ಫೀಚರ್ ಅನ್ನು ಫೋನ್ ಹೊಂದಿದೆಯೇ ಎಂಬುದನ್ನು ತನಿಖೆ ಮಾಡುವುದು ಅತೀ ಮುಖ್ಯವಾದುದು. ಅದು ಬ್ರ್ಯಾಂಡೆಡ್ ಫೋನ್ ಆಗಿದೆ ಎಂಬುದನ್ನು ಮೊತ್ತ ಮೊದಲು ಅರಿತುಕೊಳ್ಳಿ ಮತ್ತು ಅದರ ಆಕಾರ ವಿನ್ಯಾಸ ನಿಮಗಿಷ್ಟವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಅಜಾಗರೂಕತೆ ನಿಮ್ಮ ಹಣವನ್ನೂ ಸಮಯವನ್ನೂ ಹಾಳು ಮಾಡಬಹುದು.

#2

#2

ಯಾವುದೇ ಸ್ಕ್ರಾಚ್ ಮತ್ತು ಇತರ ಅಪಾಯಗಳಿಂದ ನಿಮ್ಮ ಫೋನ್ ಅನ್ನು ಸ್ಕ್ರೀನ್ ಪ್ರೊಟೆಕ್ಟರ್ ರಕ್ಷಿಸುತ್ತದೆ. ದೀರ್ಘ ಕಾಲ ಫೋನ್ ಅನ್ನು ಸಂರಕ್ಷಿಸಿ ಇತರ ಆಂತರಿಕ ಹಾನಿಯಿಂದ ನಿಮ್ಮ ಸೆಲ್ ಫೋನ್ ಅನ್ನು ಕೇಸ್ ಮತ್ತು ಸ್ಕ್ರೀನ್ ಪ್ರೊಟೆಕ್ಟರ್ ರಕ್ಷಿಸುತ್ತದೆ.

#3

#3

ನಿಮ್ಮ ಫೋನ್ ಅನ್ನು ನೀವು ಬಳಸದೇ ಇರುವ ಸಂದರ್ಭದಲ್ಲಿ ಅದನ್ನು ಜೋಪಾನವಾಗಿ ಸುರಕ್ಷಿತ ಸ್ಥಳದಲ್ಲಿ ಇರಿಸಿ. ಡೆಸ್ಕ್, ಪುಸ್ತಕದ ಶೆಲ್ಫ್, ಅಥವಾ ಕ್ಯಾಬಿನೆಟ್‌ನಲ್ಲಿ ನಿಮ್ಮ ಫೋನ್ ಅನ್ನು ಇರಿಸುವುದು ಉತ್ತಮ ಉಪಾಯವಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಒಂದೇ ಸ್ಥಳವನ್ನು ನಿಮ್ಮ ಫೋನ್ ಅನ್ನು ಇರಿಸಲು ಆಯ್ಕೆ ಮಾಡಿ.

#4

#4

ಮಳೆ ಬರುತ್ತಿರುವಾಗ ನಿಮ್ಮ ಫೋನ್‌ನಲ್ಲಿ ಮಾತನಾಡದಿರಿ. ಫೋನ್‌ನ ಸಮೀಪ ತಿನ್ನುವುದು, ಕುಡಿಯುವುದು ಮಾಡದಿರಿ. ನೀರಿನ ಸಮೀಪ ನಿಮ್ಮ ಫೋನ್ ಅನ್ನು ತೆಗೆದುಕೊಂಡು ಹೋಗುವುದನ್ನು ಆದಷ್ಟು ತಪ್ಪಿಸಿ.

#5

#5

ಒಣಗಿದ ಟಿಶ್ಯೂ ಪೇಪರ್ ಅಥವಾ ಆಲ್ಕೋಹಾಲ್ ವೈಪ್ಸ್ ಅನ್ನು ಫೋನ್ ಸ್ವಚ್ಛಗೊಳಿಸಲು ಬಳಸಿ. ನೀರು, ಬೇಬಿ ವೈಪ್ಸ್ ಅಥವಾ ಇತರ ಸ್ವಚ್ಛಕಗಳನ್ನು ಫೋನ್ ಶುಚಿಗೊಳಿಸಲು ಬಳಸದಿರಿ.

#6

#6

ಕೆಲವು ಫೋನ್‌ಗಳಿಗೆ ವಾರಕ್ಕೊಮ್ಮೆ ಚಾರ್ಜ್ ಮಾಡಿದರೆ ಸಾಕು ಆದರೆ ಇನ್ನು ಕೆಲವು ಫೋನ್‌ಗಳಿಗೆ ದಿನಂಪ್ರತಿ ಅಥವಾ ದಿನ ಬಿಟ್ಟು ದಿನ ಚಾರ್ಜ್ ಮಾಡಬೇಕಾದ ಅಗತ್ಯವಿರುತ್ತದೆ. ನೀವು ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತೀರಿ ಎಂದಾದಲ್ಲಿ ನಿಮ್ಮ ಫೋನ್‌ನ ಚಾರ್ಜ್ ಕೂಡಲೇ ಮಾಡಿ.

#7

#7

ನೀವು ಚಿತ್ರಮಂದಿರದಲ್ಲಿದ್ದಾಗ, ಪ್ರಾರ್ಥನಾ ಮಂದಿರಲ್ಲಿದ್ದಾಗ ನಿಮ್ಮ ಫೋನ್ ಅನ್ನು ಆದಷ್ಟು ಸೈಲೆಂಟ್ ಮೋಡ್‌ನಲ್ಲಿರಿಸಿ. ಇಂತಹ ಸ್ಥಳಗಳಲ್ಲಿ ಆದಷ್ಟೂ ಫೋನ್ ಅನ್ನು ಮೌನವಾಗಿರಿಸಿ. ಇದರಿಂದ ಇತರರಿಗೆ ತೊಂದರೆಯುಂಟಾಗುವುದನ್ನು ತಪ್ಪಿಸಹುದು.

Best Mobiles in India

English summary
This article tells about How to Take Proper Care of Your New Cell Phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X