ಒಂದೇ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ?

By Shwetha
|

ವಾಟ್ಸಾಪ್ ಹೆಚ್ಚು ಜನಪ್ರಿಯ ಮತ್ತು ಹೆಚ್ಚು ಬಳಕೆಯಲ್ಲಿರುವ ಮೆಸೆಂಜರ್ ಅಪ್ಲಿಕೇಶನ್ ಎಂದೇ ಪರಿಗಣಿತವಾಗಿದ್ದು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ಸ್, ಮತ್ತು ಡೆಸ್ಕ್‌ಟಾಪ್‌ಗೂ ಇದು ಲಭ್ಯವಿದೆ. ಪಠ್ಯ, ವೀಡಿಯೊ, ಆಡಿಯೊ, ಚಿತ್ರಗಳು ಮತ್ತು ಇತರರಿಗೆ ಸಂಪರ್ಕಗಳನ್ನು ಕಳುಹಿಸಲು ಇದು ಹೆಚ್ಚು ಅನುಕೂಲಕರ ಎಂದೆನಿಸಿದೆ.

ಓದಿರಿ: ವಿಶ್ವ ಅಂತ್ಯವಾದಾಗ ಹೀಗೆಲ್ಲಾ ಸಂಭವಿಸುತ್ತದಂತೆ!

ಅದಾಗ್ಯೂ ಈ ಅಪ್ಲಿಕೇಶನ್ ಕೆಲವೊಂದು ಮಿತಿಗಳನ್ನು ಹೊಂದಿದ್ದು ಇಂದು ಅದನ್ನೇ ಈ ಲೇಖನದ ಮೂಲಕ ನಿಮಗೆ ತಿಳಿಸಲಿದ್ದೇವೆ. ಒಂದೇ ಡಿವೈಸ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಬಳಸುವುದು ಹೇಗೆ ಎಂಬ ಮಾಹಿತಿಯೇ ಇದಾಗಿದೆ. ಡ್ಯುಯಲ್ ಸಿಮ್ ಬಳಸುವವರು ಎದುರಿಸುವ ಸಂಕಷ್ಟಗಳಲ್ಲಿ ಇದೂ ಒಂದಾಗಿದ್ದು ಇಲ್ಲಿದೆ ಅದಕ್ಕೆ ಪರಿಹಾರ.

ಓದಿರಿ: ಮನೆಯ ವೈಫೈ ಸುಧಾರಣೆಗೆ 5 ಟಿಪ್ಸ್‌ಗಳು

ಎರಡೂ ಸಂಖ್ಯೆಗಳಿಗೆ ಎರಡು ವಾಟ್ಸಾಪ್ ಖಾತೆಗಳನ್ನು ರಚಿಸಿಕೊಳ್ಳುವುದು ಸಾಧ್ಯ, ಆದರೆ ಒಂದೇ ಸಮಯದಲ್ಲಿ ಒಂದೇ ಫೋನ್‌ನಲ್ಲಿ ಬಳಸುವುದು ಮಾತ್ರ ಸಾಧ್ಯವಿಲ್ಲ. ಒಂದೇ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಡ್ಯುಯಲ್ ವಾಟ್ಸಾಪ್ ಖಾತೆಗಳನ್ನು ಪ್ರವೇಶಿಸುವುದು ಇದೀಗ ಸಾಧ್ಯವಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡ್ಯುಯಲ್ ಮೆಸೆಂಜರ್ ವಾಟ್ಸಾಪ್ ಅಪ್ಲಿಕೇಶನ್ ಲಭ್ಯವಿದ್ದು ಇದರ ಸಹಾಯದೊಂದಿಗೆ ನಿಮ್ಮ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಹಂತಗಳನ್ನು ಕೆಳಗೆ ನಾವು ನೀಡಿದ್ದು ಅದರ ಪ್ರಯೋಜನವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

#1

#1

ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ.

#2

#2

ವಾಟ್ಸಾಪ್‌ನಲ್ಲಿ ನೀವು ಮಾಡುವಂತೆಯೇ ಖಾತೆಯನ್ನು ನೀವು ರಚಿಸಿಕೊಳ್ಳಬೇಕು. (ಎಲ್ಲಿಯಾದರೂ ಸಮಸ್ಯೆಯಾದಲ್ಲಿ, ಬ್ಯಾಕಪ್ ಮಾಡಿ ಮೂಲ ವಾಟ್ಸಾಪ್ ಖಾತೆಯನ್ನು ರಿಮೂವ್ ಮಾಡಿ ಮತ್ತು ಇದನ್ನು ಇನ್‌ಸ್ಟಾಲ್ ಮಾಡಿ)

#3

#3

ವಾಟ್ಸಾಪ್‌ನ ಚಾಟ್ ಸೆಟ್ಟಿಂಗ್‌ನಿಂದ ನಿಮ್ಮ ಚಾಟ್‌ಗಳನ್ನು ಬ್ಯಾಕಪ್ ಮಾಡಿ ನಂತರ ನಿಮ್ಮ ಫೋನ್‌ನ ಅಪ್ಲಿಕೇಶನ್ ಮ್ಯಾನೇಜರ್‌ಗೆ ಹೋಗಿ ಮತ್ತು ವಾಟ್ಸಾಪ್‌ನಲ್ಲಿ ಕ್ಲಿಯರ್ ಡೇಟಾ ಆಪ್ಶನ್ ಅನ್ನು ಸ್ಪರ್ಶಿಸಿ.

#4

#4

ನಿಮ್ಮ ಫೋನ್‌ನ ಫೈಲ್ ಮ್ಯಾನೇಜರ್‌ನಿಂದ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಮರುಹೆಸರಿಸಬೇಕು ಇದರಿಂದ ಮೂಲ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಬಹುದು.

#5

#5

ನಿಮ್ಮ ಡಿವೈಸ್‌ನಲ್ಲಿ OGWhatsappfile ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ. ಖಾತೆಯನ್ನು ರಚಿಸಿ ಮತ್ತು ಸಿಂಗಲ್ ಡಿವೈಸ್‌ನಲ್ಲಿ ಡ್ಯುಯಲ್ ವಾಟ್ಸಾಪ್ ಖಾತೆಗಳನ್ನು ಬಳಸಿ
(ಗಮನಿಸಿ: ಒಂದೇ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಡ್ಯುಯಲ್ ವಾಟ್ಸಾಪ್ ಖಾತೆಗಳನ್ನು ಈ ವಿಧಾನಗಳು ಬೆಂಬಲಿಸುತ್ತವೆ, ಆದರೆ ವಾಟ್ಸಾಪ್ ಮೂಲಕ ಅಧಿಕೃತವಾಗಿ ಇದನ್ನು ರೂಲ್ ಮಾಡಲಾಗುವುದಿಲ್ಲ.)

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವಾಟ್ಸಾಪ್‌ನಲ್ಲಿ ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು ಹೇಗೆ?</a><br /><a href=ಬರೇ 15 ನಿಮಿಷದಲ್ಲಿ ಇಂಟರ್ನೆಟ್‌ನಲ್ಲಿ ಫೇಮಸ್ ಆದವರು!
"ವಾಟ್ಸಾಪ್‌ ಗೋಲ್ಡ್‌" ಸ್ಕ್ಯಾಮ್: ವಾಟ್ಸಾಪ್‌ ಪ್ರಿಯರೇ ಎಚ್ಚರ!!" title="ವಾಟ್ಸಾಪ್‌ನಲ್ಲಿ ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು ಹೇಗೆ?
ಬರೇ 15 ನಿಮಿಷದಲ್ಲಿ ಇಂಟರ್ನೆಟ್‌ನಲ್ಲಿ ಫೇಮಸ್ ಆದವರು!
"ವಾಟ್ಸಾಪ್‌ ಗೋಲ್ಡ್‌" ಸ್ಕ್ಯಾಮ್: ವಾಟ್ಸಾಪ್‌ ಪ್ರಿಯರೇ ಎಚ್ಚರ!!" loading="lazy" width="100" height="56" />ವಾಟ್ಸಾಪ್‌ನಲ್ಲಿ ಹಣ ಕಳುಹಿಸುವುದು ಮತ್ತು ಸ್ವೀಕರಿಸುವುದು ಹೇಗೆ?
ಬರೇ 15 ನಿಮಿಷದಲ್ಲಿ ಇಂಟರ್ನೆಟ್‌ನಲ್ಲಿ ಫೇಮಸ್ ಆದವರು!
"ವಾಟ್ಸಾಪ್‌ ಗೋಲ್ಡ್‌" ಸ್ಕ್ಯಾಮ್: ವಾಟ್ಸಾಪ್‌ ಪ್ರಿಯರೇ ಎಚ್ಚರ!!

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ

ಮತ್ತಷ್ಟು ಸುದ್ದಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
With the help of the Dual Messenger WhatsApp app available on Google Play Store. This will help in creating another WhatsApp account on the same device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X