ಪವರ್ ಕಟ್ ಆದಲ್ಲಿ ಫೋನ್ ಚಾರ್ಜ್ ಮಾಡುವುದು ಹೇಗೆ?

By Shwetha
|

ಈಗಂತೂ ದಿನನಿತ್ಯದ ಕೆಲಸಕಾರ್ಯಗಳು ಯಾವಮಟ್ಟಿಗೆ ಇರುತ್ತವೆ ಎಂದರೆ ನಮ್ಮ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಲೂ ಕೂಡಾ ಸಮಯವಿರುವುದಿಲ್ಲ. ಈ ರೀತಿ ಶರವೇಗದಿ ಸಾಗುತ್ತಿರುವ ದೈನಂದಿನ ಚಟುಚಟಿಕೆಗಳಲ್ಲಿ ಅಂತೂ ಇಂತೂ ಸ್ವಲ್ಪ ಕಾಲ ಮೊಬೈಲ್‌ ಫೋನ್‌ ಚಾರ್ಜ್‌ಮಾಡಲು ಮುಂದಾದಾಗ ಪವರ್‌ಕಟ್‌ ಆದರಂತೂ ತಲೆ ಸಿಡಿದು ಹೋದಂತಾಗುತ್ತದೆ.

ಓದಿರಿ: ಅರೆ ಏನಾಶ್ಚರ್ಯ! ಗಾಳಿಯಿಂದ ಫೋನ್ ಚಾರ್ಜ್

ಇಂತಹ ಸಂದರ್ಭದಲ್ಲಿ ಮೊಬೈಲ್‌ ಫೋನ್‌ ಚಾರ್ಜ್‌ ಮಾಡುವುದಾದರೂ ಹೇಗೆ? ಮೊಬೈಲ್‌ ಫೋನ್‌ ಇಲ್ಲದೇ ಹೋದಲ್ಲಿ ಯಾವ ಕೆಲಸವನ್ನೂ ಕೂಡ ಸರಿಯಾಗಿ ಮಾಡಲಾಗದಷ್ಟು ಅವಲಂಬಿತರಾಗಿ ಬಿಟ್ಟಿದ್ದೇವೆ. ಅದಕ್ಕಾಗಿಯೇ ಗಿಜ್‌ಬಾಟ್ ಇಂದು ಪವರ್‌ ಕಟ್‌ ಸಂದರ್ಭಗಳಲ್ಲಿ ಮೊಬೈಲ್‌ ಫೋನ್‌ಗಳನ್ನು ಯಾವ ರೀತಿ ಚಾರ್ಜ್‌ ಮಾಡಿಕೊಳ್ಳಬಹುದು ಎಂಬುದನ್ನು ಕುರಿತ ಸುಲಭ ಹಾಗೂ ಸರಳ ವಿಧಾನವನ್ನು ನಿಮಗೆ ತಿಳಿಸಲಿದೆ.

ಬ್ಯಾಕಪ್‌ ಬ್ಯಾಟರಿ

ಬ್ಯಾಕಪ್‌ ಬ್ಯಾಟರಿ

ಅಂದಹಾಗೆ ನೀವು ಆಗಿಂದ್ದಾಗೆ ಊರಿಂದ ಊರಿಗೆ ಹೆಚ್ಚು ಪ್ರಯಾಣ ಬೆಳೆಸುವವರಾಗಿದ್ದರೆ ನಿಮ್ಮ ಬಳಿ ಸದಾ ಒಂದು ಬ್ಯಾಕಪ್‌ ಬ್ಯಾಟರಿ ಇಟ್ಟು ಕೊಳ್ಳುವುದು ಸೂಕ್ತ. ಈ ಬ್ಯಾಕಪ್‌ ಬ್ಯಾಟರಿಯ ಮೂಲಕ ನೀವು ನಿಮ್ಮ ಮೊಬೈಲ್‌ ಫೋನ್‌ ಅಷ್ಟೇ ಅಲ್ಲಾ ಕ್ಯಾಮೆರಾ, ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್ಲೆಟ್‌ಗಳನ್ನೂ ಕೂಡಾ ಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಇಂತಹ ಬ್ಯಾಕಪ್‌ ಬ್ಯಾಟರಿಗಳು ಮಾರು ಲಭ್ಯವಿದ್ದು ಗ್ರಾಹಕರು ಖರಿದಿಸಿ ಕೊಳ್ಳಬಹುದಾಗಿದೆ. ಅಂದಹಾಗೆ ವಿವಿಧ ಗಾತ್ರಗಳಲ್ಲಿ ಲಭ್ಯವಿರುವ ಈ ಬ್ಯಾಕಪ್‌ ಬ್ಯಾಟರಿಗಳಲ್ಲಿ ಹೆಚ್ಚಿನ ಪವರ್‌ ಸ್ಟೋರ್‌ ಮಾಡಿ ಇಡಬಹುದಾಗಿದೆ.

ಸೋಲಾರ್‌ ಚಾರ್ಜರ್‌

ಸೋಲಾರ್‌ ಚಾರ್ಜರ್‌

ಮುಂಬರುವ ದಿನಗಳಲ್ಲಿ ಪವರ್‌ ಶಾರ್ಟೇಜ್‌ನಂತಹ ಸಮಸ್ಯೆಗಳು ಹೆಚ್ಚಾಗಬಹುದು ಅದಕ್ಕಾಗಿ ಮಾರುಕಟ್ಟೆಯಲ್ಲಿ ವಿವಿಧ ಗ್ಯಾಜೆಟ್‌ಗಳ ಚಾರ್ಜಿಂಗ್‌ಗಾಗಿ ಲಭ್ಯವಿರುವಂತಹ ಸೋಲಾರ್‌ ಚಾರ್ಜರ್‌ ಖರೀದಿಸಿಕೊಳ್ಳುವುದು ಉತ್ತಮ. ಸುಲಭವಾಗಿ ಕೊಂಡೊಯ್ಯಬಹುದಾದ ಈ ಸೋಲಾರ್‌ ಚಾರ್ಜರ್‌ ಅನ್ನು ಯುಎಸ್‌ಬಿ ಮೂಲಕ ಕನೆಕ್ಟ್‌ ಮಾಡಿಕೊಳ್ಳ ಬಹುದಾಗಿದೆ.

ಲ್ಯಾಪ್‌ಟಾಪ್‌

ಲ್ಯಾಪ್‌ಟಾಪ್‌

ಲ್ಯಾಪ್‌ಟಾಪ್‌ ಮೂಲಕ ಮೋಬೈಲ್‌ ಫೋನ್‌ ಚಾರ್ಜ್‌ ಮಾಡಿಕೊಳ್ಳುವುದು ಅತ್ಯಂತ ಸುಲಭದ ಮಾರ್ಗವಾಗಿದೆ. ನಿಮ್ಮ ಬಳಿ ಲ್ಯಾಪ್‌ ಟಾಪ್‌ ಇದ್ದು ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ವೇಳೆ ಡೇಟಾ ಕೇಬಲ್‌ ಮೂಲಕ ನಿಮ್ಮ ಮೊಬೈಲ್‌ ಫೋನ್‌ಗೆ ಕನೆಕ್ಟ್‌ ಮಾಡಿ ಚಾರ್ಜ್‌ ಮಾಡಿಕೊಳ್ಳ ಬಹುದಾಗಿದೆ. ಹೀಗಾಗಿ ನಿಮ್ಮ ಕೆಲಸದ ವೇಳೆಯಲ್ಲಿಯೇ ನಿಮ್ಮ ಫೋನ್‌ ಚಾರ್ಜ್‌ ಮಾಡಿಕೊಂಡಂತಾಗುತ್ತದೆ. ಫೋನ್‌ ಚಾರ್ಜ್‌ ಮಾಡಲೆಂದೇ ಪ್ರತ್ಯೇಕ ಸಮಯ ತೆಗೆಯುವ ಅವಧ್ಯಕತೆ ಇರುವುದಿಲ್ಲ.

ಕಾರ್‌ ಮೂಲಕ ಚಾರ್ಜ್‌ ಮಾಡಿ

ಕಾರ್‌ ಮೂಲಕ ಚಾರ್ಜ್‌ ಮಾಡಿ

ನಿಮ್ಮ ಕಾರ್‌ನಲ್ಲಿ ಖಚೇರಿಗೆ ತೆರಳುತ್ತಿರುವ ಸಂದರ್ಭದಲ್ಲೇ ನಿಮ್ಮ ಮೊಬೈಲ್‌ ಫೋನ್‌ ಕೂಡಾ ಚಾರ್ಜ್‌ ಮಾಡಿಕೊಳ್ಳ ಬಹುದಾಗಿದೆ ಇದಕ್ಕಾಗಿ ಡೇಟಾಕೇಬಲ್‌ ಒಂದನ್ನು ನಿಮ್ಮ ಕಾರ್‌ನ ಆಡಿಯೋ ಸಿಸ್ಟಂ ನಲ್ಲಿ ನೀಡಲಾಗಿರುವ ಯುಎಸ್‌ಬಿ ಪೋರ್ಟ್‌ಗೆ ಕನೆಕ್ಟ್‌ ಮಾಡಿ ನೀವು ಕಚೇರಿ ತಲುಪುವ ವೇಳೆಗೆ ನಿಮ್ಮ ಮೊಬೈಲ್‌ ಚಾರ್ಜ್‌ ಆಗಿರುತ್ತದೆ.

ಪವರ್ ಉಳಿತಾಯ

ಪವರ್ ಉಳಿತಾಯ

ನಿಮ್ಮ ಫೋನ್‌ನಲ್ಲಿ ಹಿನ್ನಲೆಯಲ್ಲಿ ಚಾಲನೆಯಾಗುತ್ತಿರುವ ಅಪ್ಲಿಕೇಶನ್‌ಗಳನ್ನು ಆಫ್ ಮಾಡಿ ಅಂದರೆ ವೈಫೈ ಮತ್ತು ಬ್ಲ್ಯೂಟೂತ್

ಸಂದೇಶ ರವಾನೆ

ಸಂದೇಶ ರವಾನೆ

ಸಾಧ್ಯವಾದಷ್ಟು ಫೋನ್ ಕರೆಯ ಬದಲಿಗೆ ಸಂದೇಶ ರವಾನೆಯನ್ನು ಆಯ್ಕೆಮಾಡಿಕೊಳ್ಳಿ.

ಫೋನ್ ಸ್ಕ್ರೀನ್ ಬ್ರೈಟ್‌ನೆಸ್ ಕಡಿಮೆ ಮಾಡಿ

ಫೋನ್ ಸ್ಕ್ರೀನ್ ಬ್ರೈಟ್‌ನೆಸ್ ಕಡಿಮೆ ಮಾಡಿ

ಫೋನ್ ಪರದೆಯ ಬ್ರೈಟ್‌ನೆಸ್ ಅನ್ನು ಕಡಿಮೆ ಮಾಡಿಕೊಳ್ಳಿ (ಇದು ಲ್ಯಾಪ್‌ಟಾಪ್‌ಗೂ ಅನ್ವಯವಾಗುತ್ತದೆ)

ಅಪ್ಲಿಕೇಶನ್ ಡೌನ್‌ಲೋಡ್

ಅಪ್ಲಿಕೇಶನ್ ಡೌನ್‌ಲೋಡ್

ನಿಮ್ಮ ಚಾರ್ಜ್ ಅನ್ನು ದೀರ್ಘ ಸಮಯದವರೆಗೆ ಇರಿಸುವಂತಹ ವಿನ್ಯಾಸಗೊಳಿಸಲಾದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ.

Best Mobiles in India

English summary
In this article we are laid down some simple steps on how to charge your phone during power cut. These tricks are considered as more powerful and effective.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X