'ವಿಂಡೋಸ್ 10' ಓಎಸ್ ಉಚಿತವಾಗಿ ಡೌನ್‌ಲೋಡ್ ಪಡೆಯುವುದು ಹೇಗೆ?

ಕಳೆದ ವರ್ಷ 'ವಿಂಡೋಸ್ 10' ಓಎಸ್ ಅನ್ನು ಪ್ರಪಂಚದ 190 ದೇಶಗಳಲ್ಲಿ ಅಧಿಕೃತವಾಗಿ ಹೊಸ ಲ್ಯಾಪ್‌ಟಾಪ್‌ ಮತ್ತು ಪಿಸಿ ಖರೀದಿಸುವವರಿಗಾಗಿ ಲಾಂಚ್‌ ಮಾಡದೆ

By Suneel
|

ಕಳೆದ ವರ್ಷ 'ವಿಂಡೋಸ್ 10' ಓಎಸ್ ಅನ್ನು ಪ್ರಪಂಚದ 190 ದೇಶಗಳಲ್ಲಿ ಅಧಿಕೃತವಾಗಿ ಹೊಸ ಲ್ಯಾಪ್‌ಟಾಪ್‌ ಮತ್ತು ಪಿಸಿ ಖರೀದಿಸುವವರಿಗಾಗಿ ಲಾಂಚ್‌ ಮಾಡಲಾಗಿದೆ. ಆದರೆ ಇದುವರೆಗೂ ಸಹ ಹಲವರು ವಿಂಡೋಸ್ ಓಎಸ್‌ ಅನ್ನು ಅಪ್‌ಗ್ರೇಡ್ ಮಾಡಿಕೊಂಡಿಲ್ಲ. ಇನ್ನೂ ಹಲವರಿಗೆ ಅಪ್‌ಗ್ರೇಡ್ ಮಾಡಿಕೊಳ್ಳುವುದು ಹೇಗೆ ಎಂತಲೂ ಸಹ ತಿಳಿದಿಲ್ಲ. ಯಾವ ವಿಂಡೋಸ್‌ ಓಎಸ್ ಬಳಕೆದಾರರು ಅಪ್‌ಗ್ರೇಡ್ ಮಾಡಿಕೊಳ್ಳಬಹುದು ಎಂಬ ಪ್ರಶ್ನೆ ಇನ್ನೂ ಹಲವರಿಗಿದೆ. ಆದ್ದರಿಂದ ಇಂದಿನ ಲೇಖನದಲ್ಲಿ ಈ ಬಗ್ಗೆ ಸಂಪೂರ್ಣ ಡಿಟೇಲ್ಸ್ ನೀಡುತ್ತಿದ್ದು,‌ ಮಿಸ್‌ ಮಾಡದೇ ಓದಿಕೊಳ್ಳಿ. ವಿಂಡೋಸ್ 10 ಅನ್ನು ಉಚಿತವಾಗಿ ಡೌನ್‌ಲೋಡ್ ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳಿ.

ವಿಂಡೋಸ್ 10 ನಿಂದ ಹಳೆಯ ಆವೃತ್ತಿಗೆ ಮರಳುವುದು ಹೇಗೆ?

 'ವಿಂಡೋಸ್ 10' ಉಚಿತ ಅಪ್‌ಗ್ರೇಡ್ ಯಾವ ಓಎಸ್‌ಗಳಿಗೆ?

'ವಿಂಡೋಸ್ 10' ಉಚಿತ ಅಪ್‌ಗ್ರೇಡ್ ಯಾವ ಓಎಸ್‌ಗಳಿಗೆ?

'ವಿಂಡೋಸ್ 10' ಉಚಿತ ಅಪ್‌ಗ್ರೇಡ್ ವಿಂಡೋಸ್ 7, ವಿಂಡೋಸ್ 8, ವಿಂಡೋಸ್ 8.1 ಬಳಕೆದಾರರಿಗೆ ಲಭ್ಯ. ಆದರೆ ಇವುಗಳಿಗಿಂತ ಹಳೆಯ ವರ್ಸನ್ ಓಎಸ್ ಬಳಕೆದಾರರು ತಮ್ಮ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ಆಧಾರದಲ್ಲಿ ಹೊಸ 'ವಿಂಡೋಸ್ 10' ಓಎಸ್‌ ಅನ್ನು ಖರೀದಿಸಬೇಕಾಗುತ್ತದೆ.

 'ವಿಂಡೋಸ್ 10' ಐಓಎಸ್ ಡೌನ್‌ಲೋಡ್

'ವಿಂಡೋಸ್ 10' ಐಓಎಸ್ ಡೌನ್‌ಲೋಡ್

'ವಿಂಡೋಸ್ 10' ಪಡೆಯಲು ಉತ್ತಮವಾದ ಮಾರ್ಗವೆಂದರೆ 'ಮೈಕ್ರೋಸಾಫ್ಟ್‌ ವೆಬ್‌ಸೈಟ್‌'ಗೆ ಹೋಗಿ ಮತ್ತು 'ವಿಂಡೋಸ್ 10' ಫೈಲ್‌ ಅನ್ನು ಡೌನ್‌ಲೋಡ್‌ ಮಾಡಿ. ಡೌನ್‌ಲೋಡ್‌ ಸೈಜ್‌ಗೆ ಸಂಬಂಧಿಸಿ ಹೇಳುವುದಾದರೆ, ಅತಿವೇಗದ ಇಂಟರ್ನೆಟ್ ಸಂಪರ್ಕ ಬೇಕು. ಯುಎಸ್‌ಬಿ ಡ್ರೈವ್ ಮತ್ತು ಡಿವಿಡಿ ಡ್ರೈವ್‌ಗಳಿಗೆ ಬರ್ನ್‌ ಮಾಡಿ ನಂತರ ಪಿಸಿ, ಲ್ಯಾಪ್‌ಗಳಲ್ಲಿಯೂ ಸಹ Run>>Setup ಮಾಡಬಹುದು.
ಇತರೆ ಸೂಚನೆಗಳು ಮತ್ತು ಲೈಸನ್ಸ್ ಕುರಿತ ಮಾಹಿತಿಗಾಗಿ ಮೈಕ್ರೋಸಾಫ್ಟ್‌ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಂಡೊಸ್ 7 ಅಥವಾ ವಿಂಡೋಸ್ 8.X ಗಳಿಂದ ಅಪ್‌ಗ್ರೇಡ್

ವಿಂಡೊಸ್ 7 ಅಥವಾ ವಿಂಡೋಸ್ 8.X ಗಳಿಂದ ಅಪ್‌ಗ್ರೇಡ್


ಮೊದಲೇ ಹೇಳಿದಂತೆ ನಿಮ್ಮ ಸಿಸ್ಟಮ್ ವಿಂಡೊಸ್ 7 ಅಥವಾ ವಿಂಡೋಸ್ 8.X ಗಳಿಂದ ರನ್‌ ಆಗುತ್ತಿದ್ದಲ್ಲಿ ಉಚಿತವಾಗಿ ವಿಂಡೊಸ್ 10 ಅಪ್‌ಗ್ರೇಡ್ ಪಡೆಯಬಹುದು.

* Start Menu ಅಥವಾ Start Screen ಗೆ ಹೋದಿ 'Windows Update' ಸರ್ಚ್‌ ಮಾಡಿ
* ನಿಮ್ಮ ಕಂಪ್ಯೂಟರ್ ಅಪ್‌ಗ್ರೇಡ್‌ಗೆ ಅರ್ಹವಾಗಿದ್ದಲ್ಲಿ, 'Upgrade to Windows 10' ಆಪ್ಶನ್ ನೋಡಬಹುದು.

ಕೆಲವೊಮ್ಮೆ ವಿಂಡೋಸ್ 7 ಬಳಕೆದಾರರು ವಿಂಡೋಸ್ 10 ಅಪ್‌ಗ್ರೇಡ್‌ಗೆ ಮೊದಲು SP1 ಡೌನ್‌ಲೋಡ್ ಮಾಡಬೇಕು. ಒಂದು ವೇಳೆ ಅಪ್‌ಗ್ರೇಡ್ ಆಪ್ಶನ್ ಸಿಗದಿದ್ದಲ್ಲಿ, ಮ್ಯಾನುವಲಿ ವಿಂಡೋಸ್ 10 ಅಪ್‌ಗ್ರೇಡ್‌ ಆಗುವಂತೆ ವ್ಯವಸ್ಥೆ ಮಾಡಬಹುದು. ಅಥವಾ ಅಪ್‌ಗ್ರೇಡ್ ಪ್ರದರ್ಶನವಾಗುವವರೆಗೆ ಕಾಯಲು ಆಗದಿದ್ದಲ್ಲಿ ಈ ಸರಳ ಹಂತಗಳನ್ನು ಫಾಲೋ ಮಾಡಿ ಅಪ್‌ಗ್ರೇಡ್ ಮಾಡಬಹುದು.

ಒಂದು ವೇಳೆ ನಿಮ್ಮ ಸಿಸ್ಟಮ್ ಸ್ವಯಂ ಚಾಲಿತವಾಗಿ ಅಪ್‌ಗ್ರೇಡ್ ತೆಗೆದುಕೊಂಡಲ್ಲಿ, ಹೊಸ ವಿಂಡೊಸ್ 10 ಡೌನ್‌ಲೋಡ್ ಆಗುತ್ತದೆ.

ವಿಂಡೋಸ್ 10 ಓಎಸ್‌ ಅನ್ನು ರಿಟೇಲ್‌ ಸ್ಟೋರ್‌ನಿಂದ ಖರೀದಿಸಿದಲ್ಲಿ?

ವಿಂಡೋಸ್ 10 ಓಎಸ್‌ ಅನ್ನು ರಿಟೇಲ್‌ ಸ್ಟೋರ್‌ನಿಂದ ಖರೀದಿಸಿದಲ್ಲಿ?

-ವಿಂಡೋಸ್ 10 ಯುಎಸ್‌ಬಿ ಡ್ರೈವ್‌ ಅನ್ನು ಅಥವಾ ಡಿಸ್ಕ್‌ ಅನ್ನು ಡಿವಿಡಿ ಡ್ರೈವ್'ಗೆ ಇನ್‌ಸರ್ಟ್‌ ಮಾಡಿ
- ನಂತರ ನಿಮ್ಮ ಕಂಪ್ಯೂಟರ್ ಅನ್ನು ರೀಬೂಟ್‌ ಮಾಡಿ
- USB ಅಥವಾ ಡಿವಿಡಿ ಡ್ರೈವ್'ನಿಂದ ಸ್ಟ್ಯಾಂಡರ್ಡ್ ಬೂಟ್ ಆದ್ಯತೆ ನೀಡಲು Esc(ಎಸ್ಕೇಪ್ ಕೀ) ಅಥವಾ F1 ಕೀಗಳನ್ನು ಬೂಟಿಂಗ್ ಪ್ರೊಸೆಸ್ ಆರಂಭವಾಗುವ ಮೊದಲೇ ಪ್ರೆಸ್‌ ಮಾಡಿ. ಇದು ಸಿಸ್ಟಮ್‌ ಮದರ್‌ಬೋರ್ಡ್‌ ಆಧಾರಿತವಾಗಿರುತ್ತದೆ.
- ನಂತರ ಮುಂದುವರೆಸಲು ಯಾವುದೇ ಕೀ ಪ್ರೆಸ್‌ ಮಾಡಿ, 'Next' ಆಯ್ಕೆ ಮಾಡಿ
- ಇನ್‌ಸ್ಟಾಲ್ ಕ್ಲಿಕ್ ಮಾಡಿ
- ಹಿಂದಿನ ಆಪರೇಟಿಂಗ್ ಸಿಸ್ಟಮ್‌ ಬೇಕೆಂದಲ್ಲಿ ಮೊದಲ ಆಪ್ಶನ್ ಕ್ಲಿಕ್ ಮಾಡಿ. ವಿಂಡೋಸ್ 10 ಆಪ್ಶನ್ ಬೇಕೆಂದಲ್ಲಿ ಕಸ್ಟಮ್ ಆಪ್ಶನ್ ಕ್ಲಿಕ್ ಮಾಡಿ
- ಕಂಪ್ಯೂಟರ್ ವಿಂಡೋಸ್ 10 ಇನ್‌ಸ್ಟಾಲ್‌ ತೆಗೆದುಕೊಳ್ಳಲು ಆರಂಭಿಸುತ್ತದೆ.

ವಿಂಡೋಸ್ 10 ಡೆವಲಪರ್ ಪ್ರಿವೀವ್ ಬಳಸುತ್ತಿದ್ದಲ್ಲಿ

ವಿಂಡೋಸ್ 10 ಡೆವಲಪರ್ ಪ್ರಿವೀವ್ ಬಳಸುತ್ತಿದ್ದಲ್ಲಿ

ವಿಂಡೋಸ್ 10 ಡೆವಲಪರ್ ಪ್ರಿಪೀವ್ ಬಳಸುತ್ತಿದ್ದಲ್ಲಿ, ಮೈಕ್ರೋಸಾಫ್ಟ್ ಸ್ವಯಂಚಾಲಿತವಾಗಿ ಲೇಟೆಸ್ಟ್ ವರ್ಸನ್‌ ಅಪ್‌ಡೇಟ್ ಅನ್ನು ಡೌನ್‌ಲೋಡ್‌ ಮಾಡುತ್ತದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
How to Download Windows 10 for Free. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X