ಕ್ಯಾಮೆರಾ ಹಿಂದಿನ ಕಾಣದ ಕಣ್ಣನ್ನು ನೋಡುವುದು ಹೇಗೆ?

By Shwetha
|

ಒಂದು ಕೊಠಡಿಯನ್ನು ಪ್ರವೇಶಿಸಿದಾಗ ಅಲ್ಲಿರುವ ಸ್ಪೈ ಕ್ಯಾಮೆರಾವನ್ನು ನೀವು ನೋಡಿದ್ದೀರಾ? ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೀರಿ ಆಗ ನಿಮ್ಮನ್ನು ಯಾರೋ ವೀಕ್ಷಿಸುತ್ತಿದ್ದಾರೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಈ ರೀತಿ ನಿಮಗೆ ಅನಿಸುವುದು ಸಹಜವಾಗಿದೆ. ಏಕೆಂದರೆ ಈಗೀಗ ಸ್ಪೈ ಕ್ಯಾಮೆರಾ ತನ್ನ ಕಬಂಧ ಬಾಹುವನ್ನು ಎಲ್ಲೆಡೆ ಚಾಚಿದೆ. ಸ್ಪೈ ಕ್ಯಾಮೆರಾವನ್ನು ತಪ್ಪಿಸಿ ನಮಗೆ ಯಾವ ಕೆಲಸವನ್ನು ಮಾಡಲಾಗುವುದಿಲ್ಲ.

ಇದನ್ನೂ ಓದಿ: ಸ್ಯಾಮ್‌ಸಂಗ್ ನೋಟ್ ಎಡ್ಜ್ ಕರ್ವ್ ವಿಶೇಷತೆ

ಹೋಟೆಲ್, ಬಟ್ಟೆ ಅಂಗಡಿ, ಕಚೇರಿ, ಶಾಲಾ ಕಾಲೇಜು, ಪ್ರಾರ್ಥನಾ ಮಂದಿರಗಳು ಹೀಗೆ ಹಿಡನ್ ಕ್ಯಾಮೆರಾ ಇಲ್ಲದ ಸ್ಥಳವನ್ನು ಊಹಿಸಲು ಅಸಾಧ್ಯವಾಗಿದೆ. ಹಿಡನ್ ಕ್ಯಾಮೆರಾಗಳು ಒಮ್ಮೊಮ್ಮೆ ನಮಗೆ ಸಹಕಾರಿಯಾಗಿದ್ದರೆ ಒಮ್ಮೊಮ್ಮೆ ಇವುಗಳಿಂದ ಆಪತ್ತೂ ಇದೆ. ಹೋಟೆಲ್ ಕೊಠಡಿ, ಬಟ್ಟೆಯಂಗಡಿಗಳಲ್ಲಿ ಟ್ರೈಯಲ್ ರೂಮ್ ಮುಂತಾದ ಕಡೆಗಳಲ್ಲಿ ಸ್ಪೈ ಕ್ಯಾಮೆರಾಗಳನ್ನು ಇರಿಸುವುದು ನಮಗೆ ಆಪತ್ತನ್ನು ತಂದೊಡ್ಡುತ್ತದೆ.

ಹಾಗಿದ್ದರೆ ಈ ಹಿಡನ್ ಕ್ಯಾಮೆರಾಗಳನ್ನು ಎಲ್ಲಿ ಇರಿಸಲಾಗಿದೆ ಎಂಬುದನ್ನು ಹುಡುಕುವುದು ಹೇಗೆ? ಅದನ್ನು ಕುರಿತ ಕೆಲವೊಂದು ಟಿಪ್ಸ್‌ಗಳನ್ನು ಇಂದಿನ ಲೇಖನದಲ್ಲಿ ನಾವು ನೀಡಿರುವೆವು.

#1

#1

ವೈಯಕ್ತಿಕ ಸ್ಥಳಗಳಲ್ಲಿ ಅಂದರೆ ರೆಸಿಡೆನ್ಸ್ ಇಲ್ಲವೇ ವ್ಯವಹಾರ ಪ್ರದೇಶಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ಇರಿಸುವುದು ಸಾಮಾನ್ಯವಾಗಿದೆ. ಮಲಗುವ ಕೋಣೆ, ಲಿವಿಂಗ್ ರೂಮ್ ಮತ್ತು ಮೌಲ್ಯಯುತ ಐಟಮ್‌ಗಳನ್ನು ನಿಮ್ಮ ಕೊಠಡಿ ಹೊಂದಿದೆ ಎಂದಾದಲ್ಲಿ ಇಲ್ಲಿ ಹಿಡನ್ ಕ್ಯಾಮೆರಾಗಳು ಸಾಮಾನ್ಯವಾಗಿರುತ್ತವೆ.

#2

#2

ಪುಸ್ತಕಗಳು, ಹೊಗೆ ಪರಿಶೋಧಕಗಳು, ಡೆಸ್ಕ್‌ ಕೆಳಗೆ, ಟಿಶ್ಯೂ ಬಾಕ್ಸ್‌ಗಳಲ್ಲಿ ಹಿಡನ್ ಕ್ಯಾಮೆರಾಗಳನ್ನು ನಿಮಗೆ ಕಾಣಬಹುದಾಗಿದೆ. ಇಂತಹ ಸ್ಥಳದಲ್ಲಿ ಹಿಡನ್ ಕ್ಯಾಮೆರಾಗಳನ್ನು ಸಾಮಾನ್ಯವಾಗಿ ಇರಿಸಲಾಗುತ್ತದೆ.

#3

#3

ಜಿಮ್‌ಬ್ಯಾಗ್, ಪರ್ಸ್, ಡಿವಿಡಿ ಕೇಸ್, ಕನ್ನಡಕ ಮುಂತಾದ ವಸ್ತುಗಳಲ್ಲಿ ಕೂಡ ನಿಮಗೆ ಹಿಡನ್ ಕ್ಯಾಮರಾಗಳು ಕಂಡುಬರಬಹುದು.

#4

#4

ಜಿಮ್‌ಬ್ಯಾಗ್, ಪರ್ಸ್, ಡಿವಿಡಿ ಕೇಸ್, ಕನ್ನಡಕ ಮುಂತಾದ ವಸ್ತುಗಳಲ್ಲಿ ಕೂಡ ನಿಮಗೆ ಹಿಡನ್ ಕ್ಯಾಮರಾಗಳು ಕಂಡುಬರಬಹುದು.

#5

#5

ಎತ್ತರದ ಕಟ್ಟಡಗಳಲ್ಲಿ ಕೂಡ ಹಿಡನ್ ಕ್ಯಾಮರಾಗಳನ್ನು ಇರಿಸಿರುತ್ತಾರೆ. ತೆರೆದ ಮೇಲ್ಛಾವಣಿಯಲ್ಲಿ ಹಿಡನ್ ಕ್ಯಾಮರಾಗಳನ್ನು ನಿಮಗೆ ಕಾಣಬಹುದು.

#6

#6

ನೀವು ಇರುವ ಕೊಠಡಿಯನ್ನು ಸರಿಯಾಗಿ ಪರಿಶೀಲಿಸಿ. ಅಂದರೆ ಫ್ಲವರ್ ವಾಜ್, ಗೋಡೆಯ ಮೇಲಿರುವ ಪೇಂಟಿಂಗ್, ನಿಮ್ಮ ಕಣ್ಣಿಗೆ ಭಿನ್ನವಾಗಿ ಕಾಣುವ ವಸ್ತುಗಳನ್ನು ಸರಿಯಾಗಿ ಪರಿಶೀಲಿಸಿ.

#7

#7

ಸಣ್ಣ ಚಲನೆ, ಅಥವಾ ಕ್ಯಾಮರಾ ರೋಲ್ ಆಗುವ ಧ್ವನಿ ನಿಮಗೆ ಕೇಳಿಸುತ್ತದೆಯೇ ಎಂಬುದನ್ನು ಪರಿಶೀಲಿಸಿ.

#8

#8

ಕೊಠಡಿಯಲ್ಲಿರುವ ಎಲ್ಲಾ ಲೈಟ್‌ಗಳನ್ನು ಆಫ್ ಮಾಡಿ ಮತ್ತು ಹಸಿರು, ಕೆಂಪು ಬೆಳಕಿಗಾಗಿ ಹುಡುಕಾಡಿ.

#9

#9

ಕೊಠಡಿಯ ಎಲ್ಲಾ ಲೈಟ್ ಅನ್ನು ಆಫ್ ಮಾಡಿ ಮತ್ತು ಟಾರ್ಚ್ ಅನ್ನು ಬಳಸಿ ಕೊಠಡಿಯಲ್ಲಿ ಕಾಣುವ ನೀಲಿ, ಕೆಂಪು ಬೆಳಕಿಗಾಗಿ ಹುಡುಕಿ. ಕತ್ತಲೆಯಲ್ಲಿ ಕ್ಯಾಮೆರಾದ ಬೆಳಕು ಕಾಣುತ್ತಿದೆಯೇ ಎಂಬುದನ್ನು ಅವಲೋಕಿಸಿ.

#10

#10

ಪಿನ್ ಹೋಲ್ ಕ್ಯಾಮೆರಾದಲ್ಲಿ ಸಿಸಿಡಿಯನ್ನು ನಿಮಗೆ ಕಾಣಬಹುದು. ಪೇಪರ್ ಟಿಶ್ಯೂವನ್ನು ಬಳಸಿಕೊಂಡು ಅದನ್ನು ರೋಲ್‌ನಂತೆ ಸುತ್ತಿ. ಮತ್ತು ಪಿನ್ ಹೋಲ್ ಕ್ಯಾಮೆರಾಗಳಿಗಾಗಿ ಹುಡುಕಿ.

#11

#11

ಆರ್‌ಎಫ್ ಸಿಗ್ನಲ್ ಡಿಟೆಕ್ಟರ್ ಅನ್ನು ಬಳಸಿ
ನಿಮ್ಮನ್ನು ಯಾರಾದರೂ ಹಿಡನ್ ಕ್ಯಾಮೆರಾ ಇಟ್ಟುಕೊಂಡು ಹಿಂಬಾಲಿಸುತ್ತಿದ್ದಾರೆ ಎಂದಾದಲ್ಲಿ ರೇಡಿಯೊ ಫ್ರಿಕ್ವೆನ್ಸಿಯನ್ನು ಬಳಸಿ ಹಿಡನ್ ಕ್ಯಾಮೆರಾವನ್ನು ಪತ್ತೆ ಹಚ್ಚಬಹುದು.

Best Mobiles in India

English summary
This article tells about How to Find Hidden Cameras in a simple way.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X