ಆಪಲ್ ಕ್ಲಿಪ್ಸ್ ಆಪ್: ನಿಮ್ಮ ಐಫೋನ್ ನಲ್ಲೇ ವಿಡಿಯೋ ಎಡಿಟ್ ಮಾಡಿ..!!

ನಿಮ್ಮ ಐಫೋನ್ ನಲ್ಲೇ ವಿಡಿಯೋ ಎಡಿಟ್ ಮಾಡಿ..!!

By Precilla Dias
|

ಆಪಲ್ ಒಂದು ಆಪ್ ಲಾಂಚ್ ಮಾಡಿದ್ದು, ಇದು ಸಣ್ಣ ವಿಡಿಯೋ ಎಡಿಟಿಂಗ್ ಆಪ್ ಆಗಿದ್ದು, ಇದು ಸೋಶಿಯಲ್ ಮಿಡಿಯಾ ದಂತೆ ಕಾರ್ಯ ನಿರ್ವಹಿಸದೆ ವಿಡಿಯೋ ಎಡಿಟ್ ಮಾಡಿ ನೀವೆ ಇಟ್ಟುಕೊಳ್ಳಬಹುದಾಗಿದೆ.

ಆಪಲ್ ಕ್ಲಿಪ್ಸ್ ಆಪ್: ನಿಮ್ಮ ಐಫೋನ್ ನಲ್ಲೇ ವಿಡಿಯೋ ಎಡಿಟ್ ಮಾಡಿ..!!


ಸ್ನಾಪ್ ಚಾಟ್ ಇಂದು ಹೆಚ್ಚು ಸದ್ದು ಮಾಡುತ್ತಿರುವುದು ತಾನು ನೀಡಿರುವ ಹೊಸ ಆಯ್ಕೆಗಳಿಗಿಂತ ಅದು ನೀಡುತ್ತಿರುವ ಹೊಸ ಹೊಸ ಆಯ್ಕೆಗಳನ್ನು ಮತ್ತೊಬ್ಬರು ಕದ್ದು ತಮ್ಮಲ್ಲಿ ಅಳವಡಿಸಿಕೊಳ್ಳಲು ಮುಂದಾಗುತ್ತಿರುವುದರಿಂದ. ಸೋಶಿಯಲ್ ಮಿಡಿಯಾ ದೈತ್ಯ ಫೇಸ್ ಬುಕ್ ತನ್ನ ಮಾಲೀಕತ್ವದಲ್ಲಿರುವ ಫೇಸ್ ಬುಕ್, ಇನ್ಸ್ ಸ್ಟಾಗ್ರಾಮ್, ವಾಟ್ಸ್ಆಪ್ ಮತ್ತು ಮೇಸೆಂಜರ್ ಗಳಲ್ಲಿ ಸ್ನಾಪ್ ಚಾಟ್ ಆಯ್ಕೆಯನ್ನು ನೀಡುತ್ತಿದೆ. ಸದ್ಯ ಇದೇ ಹಾದಿಯಲ್ಲಿ ಸಾಗಿದೆ ಆಪಲ್ ಸಹ.

ಸದ್ಯ ಆಪಲ್ ಒಂದು ಆಪ್ ಲಾಂಚ್ ಮಾಡಿದ್ದು, ಇದು ಸಣ್ಣ ವಿಡಿಯೋ ಎಡಿಟಿಂಗ್ ಆಪ್ ಆಗಿದ್ದು, ಇದು ಸೋಶಿಯಲ್ ಮಿಡಿಯಾ ದಂತೆ ಕಾರ್ಯ ನಿರ್ವಹಿಸದೆ ವಿಡಿಯೋ ಎಡಿಟ್ ಮಾಡಿ ನೀವೆ ಇಟ್ಟುಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ಈ ಆಪ್ ಅನ್ನು ಬಳಸುವುದು ಹೇಗೆ ಎಂಬುದನ್ನು ನಾವು ತಿಳಿಸಿಕೊಡಲಿದ್ದೇವೆ. ಅಲ್ಲದೇ ಆಪಲ್ ಲಾಂಚ್ ಮಾಡಿರುವ ಈ ಆಪ್ 36 ಭಾಷೆಗಳಿಗೆ ಸಪೋರ್ಟ್ ಮಾಡಲಿದೆ. ಇದನ್ನ ಐಪೋನ್ ಮತ್ತು ಐಪ್ಯಾಡ್ ನಲ್ಲಿ ಬಳಸಬಹುದಾಗಿದೆ.

ಆಪಲ್ ಕ್ಲಿಪ್ಸ್ ಆಪ್: ನಿಮ್ಮ ಐಫೋನ್ ನಲ್ಲೇ ವಿಡಿಯೋ ಎಡಿಟ್ ಮಾಡಿ..!!

ಆಪ್ ಬಳಸಲು ಶುರು ಮಾಡಿ:

ನೀವು ಈ ಆಪ್ ಬಳಸಬೇಕಾದರೆ ವಿಡಿಯೋ ಮತ್ತು ಫೋಟೋಗಳನ್ನು ಬಳಸಿಕೊಂಡು ವಿಡಿಯೋ ವನ್ನು ಮಾಡಬಹುದಾಗಿದೆ. ಅಲ್ಲದೇ ಈ ಆಪ್ ಅನ್ನು ಓಪನ್ ಮಾಡಿದರೆ ಸಾಕು ಕ್ಯಾಮೆರಾ ಶೂಟ್ ಮಾಡಲು ರೆಡಿಯಾಗಿರಲಿದೆ. ಅಲ್ಲದೇ ಇದರಲ್ಲಿ ಸುಲಭವಾಗಿ ವಿಡಿಯೋ ಮತ್ತು ಫೋಟೋವನ್ನು ಕ್ಲಿಕ್ ಮಾಡಬೇಕಾಗಿದೆ. ಅಲ್ಲದೇ ಇದಕ್ಕಾಗಿ ಒಂದೇ ಒಂದು ಬಟನ್ ಕ್ಲಿಕ್ ಮಾಡಿದರೆ ಸಾಕು.

ಲೈವ್ ಟೈಟಲ್:

ನೀವು ವಿಡಿಯೋ ಮಾಡುತ್ತಿದ್ದ ಸಮಯದಲ್ಲೇ ಲೈವ್ ಟೆಕ್ಸಟ್ ಅನ್ನು ಹಾಕಬಹುದಾಗಿದೆ. ಅಲ್ಲದೇ ನೀವು ವಾಯ್ಸ್ ಮೂಲಕವು ಟೆಕ್ಸಟ್ ನೀಡಬಹುದಾಗಿದೆ. ಅದರೆ ನೀವು ನಿಧಾನವಾಗಿ ಮತ್ತು ಕ್ಲಿಯರ್ ಆಗಿ ಮಾತನಾಡಬೇಕಾಗಿದೆ.

ಫನಿ ಫಿಲ್ಟರ್ ಗಳು:

ಬೇರೆ ಆಪ್ ಗಳ ಮಾದರಿಯಲ್ಲಿ ಆಪಲ್ ಕ್ಲಿಪ್ ನಲ್ಲಿ ವಿವಿಧ ಡಿಫರೆಂಟ್ ಫಿಲ್ಟರ್ ಗಳನ್ನು ನೀಡಲಾಗಿದೆ. ಅಲ್ಲದೇ ಇದು ಕಾಮಿಕ್ ಬುಕ್ ಮಾದರಿಯಲ್ಲಿ ಇರಲಿದೆ. ಇದನ್ನು ಪೋಟೋ ಮತ್ತು ವಿಡಿಯೋ ಗಳಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ಆಪಲ್ ಕ್ಲಿಪ್ಸ್ ಆಪ್: ನಿಮ್ಮ ಐಫೋನ್ ನಲ್ಲೇ ವಿಡಿಯೋ ಎಡಿಟ್ ಮಾಡಿ..!!

ಎಮೋಜಿಗಳನ್ನು ಬಳಸಬಹುದು:

ಇದಲ್ಲದೇ ನೀವು ವಿಡಿಯೋ ಇಲ್ಲವೇ ಫೋಟೋಗಳನ್ನು ಶೂಟ್ ಮಾಡುತ್ತಿರುವ ಸಂದರ್ಭದಲ್ಲಿ ಎನೋಜಿಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಅವುಗಳನ್ನು ರಿ ಸೈಜ್ ಮಾಡಿಕೊಳ್ಳಬಹುದಾಗಿದೆ.

ಇಂಟ್ರೋ ಅಂಡ್ ಎಂಡ್ ಕಾರ್ಡ್:

ಇದಲ್ಲದೇ ನೀವು ಈ ಆಪ್ ನಲ್ಲಿ ವಿಡಿಯೋ ಮಾಡಬೇಕಾದ ಸಂದರ್ಭದಲ್ಲಿ ಇಂಟ್ರೋ ಮತ್ತು ಎಂಡ್ ಕಾರ್ಡ್ ನಲ್ಲಿ ಅನಿಮೇಟೆಡ್ ಪೋಸ್ಟರ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಆಪಲ್ ಕ್ಲಿಪ್ಸ್ ಆಪ್: ನಿಮ್ಮ ಐಫೋನ್ ನಲ್ಲೇ ವಿಡಿಯೋ ಎಡಿಟ್ ಮಾಡಿ..!!

ವಿಡಿಯೋ ಎಡಿಟ್ ಮಾಡುವುದು ಸುಲಭ:

ನೀವು ಶೂಟ್ ಮಾಡಿದ ವಿಡಿಯೋವನ್ನು ಈ ಆಪ್ ನಲ್ಲಿ ಸುಲಭವಾಗಿ ಎಡಿಟ್ ಮಾಡಬಹುದಾಗಿದೆ. ಅದಕ್ಕಾಗಿ ಹೆಚ್ಚಿನ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೂ ಇಲ್ಲ. ಕೇವಲ ಒಂದು ಟೆಚ್ ನಲ್ಲೇ ನಿಮ್ಮ ವಿಡಿಯೋ ಟ್ರೀಮ್ ಆಗಲಿದೆ.

ನಿಮ್ಮ ವಿಡಿಯೋ ಗೆ ಮ್ಯೂಸಿಕ್ ಕೂಡ ಹಾಕಬಹುದು:

ನೀವು ಶೂಟ್ ಮಾಡಿರುವ ವಿಡಿಯೋಗೆ ನಿಮ್ಮ ನೆಚ್ಚಿನ ಮ್ಯೂಸಿಕ್ ಅನ್ನು ಹಾಕುವ ಅವಕಾಶವನ್ನು ಈ ಆಪ್ ಮಾಡಿಕೊಡಲಿದೆ. ಇದರಿಂದ ನಿಮ್ಮ ವಿಡಿಯೋ ಇನ್ನಷ್ಟು ಸುಂದರವಾಗಲಿದೆ.

ವಿಡಿಯೋ ಶೇರ್ ಸಹ ಮಾಡಬಹುದು:

ಇದಲ್ಲದೇ ಇವು ಎಡಿಟ್ ಮಾಡಿದ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಆಯ್ಕೆಯನ್ನು ಈ ಆಪ್ ಹೊಂದಿದೆ ಎನ್ನಬಹುದು.

Best Mobiles in India

Read more about:
English summary
Copying Snapchat is the new trend right now! Following the footpath of Facebook, Instagram, and even Whatsapp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X