'CDM' ಮಷಿನ್ ಬಳಸಿ ಹಣ ಡೆಪಾಸಿಟ್ ಮಾಡುವುದು ಹೇಗೆ? ಸೂಚನೆಗಳು..!

ಕ್ಯಾಶ್‌ ಡೆಪಾಸಿಟ್ ಮಷಿನ್‌(CDM) ಬಳಸಿ ಹಣ ಸಂದಾಯ ಮಾಡುವುದು ಹೇಗೆ, ಸೂಚನೆಗಳು ಮತ್ತು ಪರಿಮಿತಿಗಳ ಬಗ್ಗೆ ತಿಳಿಯಿರಿ.

By Suneel
|

ಹಣ ಸಂದಾಯ ಮಾಡ್‌ತೀವಿ ಅಂದ್ರು ಕ್ಯೂ. ಹಣ ತೆಗೆಬೇಕು ಅಂದ್ರು ಕ್ಯೂ. ಬ್ಯಾಂಕ್‌ಗಳಲ್ಲಿ ಜನರ ಈ ಸಮಸ್ಯೆಗಳನ್ನು ನೋಡಲಾಗದೇ ಟೆಕ್‌ ತಜ್ಞರು ಬ್ಯಾಂಕ್ ಖಾತೆಯಲ್ಲಿರುವ ಹಣ ಬಿಡಿಸಿಕೊಳ್ಳಲು ಎಟಿಎಂ ಅನ್ನು ಅಭಿವೃದ್ದಿಗೊಳಿಸಿದರೂ. ಹಾಗೆ ಹಣ ಸಂದಾಯ ಮಾಡಲು CDM(Cash Deposit Machine) ಮಷಿನ್‌ ಅನ್ನು ಅಭಿವೃದ್ದಿಗೊಳಿಸಿದರು. ಆದರೆ ಇಂದು ಹಳೆಯ 500, 1,000 ರೂಪಾಯಿಗಳ ನೋಟುಗಳ ರದ್ದಿನಿಂದಾಗಿ ಇಂದಿಗೂ ಸಹ ಕ್ಯೂ ಬ್ಯಾಂಕ್‌, ಎಟಿಎಂ, ಸಿಡಿಎಂ(CDM) ಗಳ ಮುಂದೆ ಕಡಿಮೆ ಅಂತೂ ಆಗಿಲ್ಲ.

'CDM' ಮಷಿನ್ ಬಳಸಿ ಹಣ ಡೆಪಾಸಿಟ್ ಮಾಡುವುದು ಹೇಗೆ? ಸೂಚನೆಗಳು..!

ಅಂದಹಾಗೆ ಡೆಬಿಟ್ ಕಾರ್ಡ್ ಇರುವವರಿಗೆ ಯಾವುದೇ ಎಟಿಎಂಗಳಿಗೆ ಹೋದ್ರು ಹಣ ಬಿಡಿಸುವುದು ಹೇಗೆ ಎಂದು ಗೊತ್ತು. ಆದ್ರೆ ಡೆಬಿಟ್ ಕಾರ್ಡ್‌ ಹೊಂದಿರುವ ಎಲ್ಲರಿಗೂ ಸಿಡಿಎಂ(CDM) ಮಷಿನ್‌ನಲ್ಲಿ ಹಣ ಸಂದಾಯ ಮಾಡುವುದು ಹೇಗೆ ಎಂದು ಗೊತ್ತಿಲ್ಲಾ. ಯಾರಿಗೆ ಆದ್ರು ಯಾವುದೇ ಹೊಸ ವಿಷಯಗಳ ಬಗ್ಗೆ ಒಂದು ಬಾರಿ ಪರಿಚಯ ಬೇಕು. ಎಜುಕೇಟೆಡ್‌ಗಳೇ ಆದ್ರು ಮೊದಲ ಬಾರಿಗೆ ಸಿಡಿಎಂನಲ್ಲಿ ಹಣ ಸಂದಾಯ ಮಾಡಲು ಹೋದರೆ ತಡವರಿಸುವುದು ಖಂಡಿತ. ಆದ್ದರಿಂದ ಇಂದಿನ ಲೇಖನದಲ್ಲಿ ಸಿಡಿಎಂನಲ್ಲಿ ಹಣ ಸಂದಾಯ(ಡೆಪಾಸಿಟ್) ಮಾಡುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.

ಬ್ಯಾಂಕ್‌ ಖಾತೆ ಹೊಂದಿರುವವರು ನೆಟ್‌ಬ್ಯಾಂಕಿಂಗ್ ಬಳಸುವುದು ಹೇಗೆ? ಕಂಪ್ಲೀಟ್ ಡೀಟೇಲ್ಸ್..

ಲೇಖನದಲ್ಲಿ ಎಸ್‌ಬಿಐ ಬ್ಯಾಂಕ್‌ ಖಾತೆದಾರರು ತಮ್ಮ ಖಾತೆಗೆ ಸಿಡಿಎಂ ಮಷಿನ್‌ ಮುಖಾಂತರ ಹಣ ಸಂದಾಯ ಮಾಡುವುದು ಹೇಗೆ ಎಂದು ಉದಾಹರಣೆಗೆ ತಿಳಿಸುತ್ತಿದ್ದೇವೆ. ಇತರೆ ಬ್ಯಾಂಕ್‌ ಖಾತೆದಾರರು ಸಹ ಇದೇ ಸ್ಟೆಪ್‌ಗಳನ್ನು ಆಯಾ ಬ್ಯಾಂಕ್‌ನ ಸಿಡಿಎಂಗಳಲ್ಲಿ ಫಾಲೋ ಮಾಡಿದರಾಯಿತು. ಮಾಹಿತಿಗಾಗಿ ಮುಂದೆ ಓದಿರಿ.

ಸಿಡಿಎಂ ಮಷಿನ್‌ ಇರುವ ಎಟಿಎಂ ಕೇಂದ್ರಗಳಿಗೆ ಭೇಟಿ ನೀಡಿ

ಸಿಡಿಎಂ ಮಷಿನ್‌ ಇರುವ ಎಟಿಎಂ ಕೇಂದ್ರಗಳಿಗೆ ಭೇಟಿ ನೀಡಿ

ಮೊದಲಿಗೆ ಸಿಡಿಎಂ ಮಷಿನ್‌ ಇರುವ ಎಟಿಎಂ ಕೇಂದ್ರಗಳಿಗೆ ಭೇಟಿ ನೀಡಿ. ಸಾಮಾನ್ಯವಾಗಿ ಸಿಡಿಎಂ ಮಷಿನ್ ಎಟಿಎಂ ನಂತೆಯೇ ಕಂಡರೂ ಅದಕ್ಕಿಂತ ಭಿನ್ನವಾಗಿದೆ. ಅಂದಹಾಗೆ ಈ ಮಷಿನ್‌ನಲ್ಲಿ ಕೇವಲ ಹಣ ಸಂದಾಯ ಮಾಡಬಹುದು. ಎಟಿಎಂ ರೀತಿಯಲ್ಲಿ ಹಣ ಬಿಡಿಸಲು ಸಾಧ್ಯವಿಲ್ಲ.

ಎಟಿಎಂ ಕಾರ್ಡ್‌ ಇನ್‌ಸರ್ಟ್ ಮಾಡಿ

ಎಟಿಎಂ ಕಾರ್ಡ್‌ ಇನ್‌ಸರ್ಟ್ ಮಾಡಿ

ಸಿಡಿಎಂ ಮಷಿನ್‌ನಲ್ಲಿ, ಎಟಿಎಂ ಮಷಿನ್‌ನಲ್ಲಿ ಡೆಬಿಟ್‌ ಕಾರ್ಡ್‌ ಅನ್ನು ಇನ್‌ಸರ್ಟ್‌ ಮಾಡಿದಂತೆಯೇ ಮೊದಲು ನಿಮ್ಮ ಎಸ್‌ಬಿಐ ಡೆಬಿಟ್‌ ಕಾರ್ಡ್‌ ಅನ್ನು ಇನ್‌ಸರ್ಟ್‌ ಮಾಡಿ. 10 ಸೆಕೆಂಡ್‌ನಂತರ ರಿಮೂವ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಂಕಿಂಗ್ ಸೆಲೆಕ್ಟ್ ಮಾಡಿ

ಬ್ಯಾಂಕಿಂಗ್ ಸೆಲೆಕ್ಟ್ ಮಾಡಿ

ನಂತರ ಸಿಡಿಎಂ ಮಷಿನ್ ಸ್ಕ್ರೀನ್‌ನಲ್ಲಿ 'Banking' ಆಪ್ಶನ್‌ ಕಾಣುತ್ತದೆ. ಅದನ್ನು ಸೆಲೆಕ್ಟ್‌ ಮಾಡಿ. ನಿಮ್ಮ ಭಾಷೆ ಆಯ್ಕೆ ಮಾಡಿ.

ಪಿನ್‌ ನಂಬರ್ ಎಂಟರ್ ಮಾಡಿ

ಪಿನ್‌ ನಂಬರ್ ಎಂಟರ್ ಮಾಡಿ

ಭಾಷೆ ಆಯ್ಕೆ ಮಾಡಿದ ನಂತರ ಸಿಡಿಎಂ ಮಷಿನ್ ಸ್ಕ್ರೀನ್‌ನಲ್ಲಿ ನಿಮ್ಮ ಡೆಬಿಟ್ ಕಾರ್ಟ್‌ ಪಿನ್‌ ನಂಬರ್‌(ಪಾಸ್‌ವರ್ಡ್‌) ಕೇಳಲಾಗುತ್ತದೆ. ನಿಮ್ಮ ಪಿನ್‌ ನಂಬರ್ ಅನ್ನು ಎಂಟರ್‌ ಮಾಡಿ.

ಡೆಪಾಸಿಟ್ ಆಯ್ಕೆ ಮಾಡಿ(Deposit)

ಡೆಪಾಸಿಟ್ ಆಯ್ಕೆ ಮಾಡಿ(Deposit)

ಮುಂದಿನ ಹಂತದಲ್ಲಿ 'Deposit' ಆಪ್ಶನ್ ಆಯ್ಕೆ ಮಾಡಿ ನಂತರ 'Cash Deposit' >> Confirm >> ನಿಮ್ಮ ಖಾತೆ ವಿಧ Current ಅಥವಾ Savings ಯಾವುದು ಆಯ್ಕೆ ಮಾಡಿ.

ಕೇವಲ 100, 500, 1000 ನೋಟುಗಳ ಡೆಪಾಸಿಟ್

ಕೇವಲ 100, 500, 1000 ನೋಟುಗಳ ಡೆಪಾಸಿಟ್

ಅಂದಹಾಗೆ ಸಿಡಿಎಂ ಮಷಿನ್‌ನಲ್ಲಿ 100, 500, 1000 ನೋಟುಗಳನ್ನು ಮಾತ್ರ ಡೆಪಾಸಿಟ್ ಮಾಡಬಹುದು. ಖಾತೆ ವಿಧ ಆಯ್ಕೆ ಮಾಡಿದಲ್ಲಿ ಈ ಬಗ್ಗೆ ಸೂಚನೆಯು ಸ್ಕ್ರೀನ್‌ನಲ್ಲಿ ಪ್ರದರ್ಶನವಾಗುತ್ತದೆ. ನಿಮ್ಮಲ್ಲಿರುವ 100, 500, 1000 ರೂ ನೋಟುಗಳನ್ನು ಕ್ಯಾಶ್‌ ಡೆಪಾಸಿಟ್ ಮಾಡುವಲ್ಲಿ ಇನ್‌ಸರ್ಟ್‌ ಮಾಡಿ(ಇಟ್ಟು) ಸ್ಕ್ರೀನ್‌ನಲ್ಲಿನ 'Enter' ಬಟನ್ ಟ್ಯಾಪ್‌ ಮಾಡಿ.

ಕೆಲವೊಮ್ಮೆ ಕೆಲವೊಂದು ನೋಟು ಹೊರಗಡೆ ಬರುತ್ತದೆ

ಕೆಲವೊಮ್ಮೆ ಕೆಲವೊಂದು ನೋಟು ಹೊರಗಡೆ ಬರುತ್ತದೆ

ಕೆಲವೊಮ್ಮೆ ಕೆಲವೊಂದು ನೋಟುಗಳನ್ನು ಮಷಿನ್ ಹಿಂದಕ್ಕೆ ನೀಡುತ್ತದೆ. ಇದಕ್ಕಾಗಿ ಗಾಬರಿ ಪಡುವ ಅವಶ್ಯಕತೆ ಇಲ್ಲ. ಸ್ಕ್ರೀನ್‌ನಲ್ಲಿ 'Add More Cash' ಎಂಬ ಆಪ್ಶನ್‌ ಅನ್ನು ಟ್ಯಾಪ್‌ ಮಾಡಿ, ಪುನಃ ಕ್ಯಾಶ್‌ ಅನ್ನು ಮಷಿನ್‌ನೊಳಗೆ ಹಾಕಿ. ಯಶಸ್ವಿಯಾಗಿ ಹಣ ಸಂದಾಯವಾಗುತ್ತದೆ.

ನಂತರ 100, 500 ನೋಟುಗಳನ್ನು ಯಾವುದನ್ನು ಎಷ್ಟೆಷ್ಟು ನೋಟುಗಳನ್ನು ಹಾಕಿದ್ದೀರಿ ಎಂದು ಸ್ಕ್ರೀನ್‌ನಲ್ಲಿ ಮಾಹಿತಿ ತೋರಿಸಲಾಗುತ್ತದೆ. ಸರಿ ಇದ್ದಲ್ಲಿ 'Confirm' ಎಂಬ ಆಪ್ಶನ್ ಅನ್ನು ಟ್ಯಾಪ್‌ ಮಾಡಿ. ಹಣ ಸಂದಾಯ ಯಶಸ್ವಿಯಾಗುತ್ತದೆ.

ಸೂಚನೆಗಳು

ಸೂಚನೆಗಳು

* ನಕಲಿ ನೋಟುಗಳನ್ನು ಸಂದಾಯ ಮಾಡಲು ಪ್ರಯತ್ನಿಸಿದರೆ ನಿಮ್ಮ ಖಾತೆ ಬ್ಲಾಕ್‌ ಆಗುವ ಸಂಭವವಿರುತ್ತದೆ.
* ಸಿಡಿಎಂ ಮಷಿನ್‌ನಲ್ಲಿ ಹಣ ಸಂದಾಯ ಮಾಡಲು ಡೆಬಿಟ್‌ ಕಾರ್ಡ್‌ ಹೊಂದಿರಬೇಕು.
* ಕೇವಲ 100, 500, 1000 2000 ನೋಟುಗಳನ್ನು ಮಾತ್ರ ಸಂದಾಯ ಮಾಡಬಹುದು.
* ಯಾವುದೇ ಫಾರ್ಮ್‌ ಫಿಲ್‌ ಮಾಡುವ ಅವಶ್ಯಕತೆ ಇಲ್ಲ.
* ಶೀಘ್ರದಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.
* ಸಿಡಿಎಂ ಮಷಿನ್‌ನಲ್ಲಿ ಬ್ಯಾಲೆನ್ಸ್ ಚೆಕ್‌ ಮಾಡುವುದು ಮತ್ತು ಮಿನಿ ಸ್ಟೇಟ್‌ಮೆಂಟ್‌ ಸೇವೆ ಲಭ್ಯ.
* ಸಿಡಿಎಂ ಮಷಿನ್‌ನಲ್ಲಿ ದಿನದ 24 ಗಂಟೆಗಳಲ್ಲೂ ಹಣ ಸಂದಾಯ ಮಾಡಬಹುದು. ಯಾರು ಎಷ್ಟು ಬಾರಿಯಾದರೂ ಹಣ ಸಂದಾಯ ಮಾಡಬಹುದು.
* ಒಮ್ಮೆ 49,000 ರೂ ಮಾತ್ರ ಸಂದಾಯ ಮಾಡಬಹುದು.
* ಒಮ್ಮೆ ಸಂದಾಯ ಮಾಡಬೇಕಾದರೆ 200 ನೋಟುಗಳವರೆಗೆ ಸಂದಾಯ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
How To use Cash Deposit Machine(CDM) easily. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X