ಪೋನಿಲ್ಲವಾದರು ಡಾಂಗಲ್ ನಲ್ಲಿ ಜಿಯೋ 4G ಬಳಸಬಹುದು..!

ರಿಲಯನ್ಸ್ ಜಿಯೋ ಸ್ಮಾರ್ಟ್‌ ಪೋನಿಗೆ ಮಾತ್ರವಲ್ಲದೇ. ಡಾಂಗಲ್ ಗಳಲ್ಲಿಯು ಬಳಸುವಂತೆ ತಯಾರು ಮಾಡಲಾಗಿದೆ.

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಿ, ಬೇರೆ ಟೆಲಿಕಾಂ ಕಂಪನಿಗಳು ನಷ್ಟದ ಹಾದಿ ಹಿಡಿಯುವಂತೆ ಮಾಡಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಸೇವೆಯನ್ನು 4G ಸ್ಮಾರ್ಟ್‌ಪೋನ್‌ ಇದ್ದವರು ಮಾತ್ರ ಬಳಸಲು ಸಾಧ್ಯವಾಗಿತ್ತು. ಈ ಹಿನ್ನಲೆಯಲ್ಲಿ ಜಿಯೋ ಸಿಮ್‌ ಅನ್ನು ಡಾಂಗಲ್ ಗಳಿಗೆ ಹಾಕಿ ಬಳಸುವುದು ಹೇಗೆ ಎಂಬುದನ್ನು ನಾವಿಲ್ಲಿ ಹೇಳಿ ಕೊಡಲಿದ್ದೇವೆ..!

ಪೋನಿಲ್ಲವಾದರು ಡಾಂಗಲ್ ನಲ್ಲಿ ಜಿಯೋ 4G ಬಳಸಬಹುದು..!

ಓದಿರಿ..: ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಸೇವೆ ನೀಡಲು ಮುಂದಾದ ಅಮೆಜಾನ್

ರಿಲಯನ್ಸ್ ಜಿಯೋ ಸ್ಮಾರ್ಟ್‌ ಪೋನಿಗೆ ಮಾತ್ರವಲ್ಲದೇ. ಡಾಂಗಲ್ ಗಳಲ್ಲಿಯು ಬಳಸುವಂತೆ ತಯಾರು ಮಾಡಲಾಗಿದ್ದು, ನಿಮ್ಮ ಬಳಿ ಇರುವ 4G ಸಪೋರ್ಟ್ ಮಾಡುವ ಡಾಂಗಲ್ ಇದ್ದಲ್ಲಿ ಅದಕ್ಕೆ ಜಿಯೋ ಸಿಮ್ ಹಾಕಿ ಮನೆಯಲ್ಲಿ ವೈ-ಫೈ ಕ್ರಿಯೇಟ್ ಮಾಡಿಕೊಳ್ಳಬಹುದು, ಇಲ್ಲವೇ ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್‌ ಅನ್ನು ಸಂಪರ್ಕಿಸಿಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಮೊದಲು ಜಿಯೋ ಸಿಮ್ ಕಾರ್ಡ್‌ ಖರೀದಿಸಿ:

ಸದ್ಯ ಮಾರುಕಟ್ಟೆಯಲ್ಲಿ ಸುಲಭವಾಗಿ ಜಿಯೋ ಸಿಮ್ ದೊರೆಯುತ್ತಿದ್ದು, ರಿಲಯನ್ಸ್ ಮಿನಿ, ರಿಲಯನ್ಸ್ ಡಿಜಿಟಲ್ ನಲ್ಲಿ ಸಿಮ್ ಕಾರ್ಡ್‌ಗಳು ಉಚಿತವಾಗಿ ಲಭ್ಯವಿವೆ. ಈ ಸಿಮ್ ಪಡೆಯಲು ಆಧಾರ್ ಕಾರ್ಡ್‌ ಅಗತ್ಯವಾಗಿ ಬೇಕಾಗಿದೆ. ಆಧಾರ್ ಇಲ್ಲ ಅಂದ್ರೆ ಜಿಯೋ ಸಿಮ್ ಪಡೆಯುವುದು ಕಷ್ಟ. ಅಲ್ಲದೇ ಆಧಾರ್ ಕಾರ್ಡ್‌ ಹೊಂದಿರವ ವ್ಯಕ್ತಿಯೇ ಖುದ್ದಾಗಿ ಹೋಗಿ ಸಿಮ್ ಪಡೆಯಬೇಕಾಗಿದೆ.

ನಂತರ ಜಿಯೋ ಸಿಮ್ ಆನ್ನು ಡಾಂಗಲ್‌ಗೆ ಹಾಕಿರಿ:

ಸಿಮ್ ಆಕ್ಟಿವೇಟ್ ಆದ ನಂತರದಲ್ಲಿ ಸಿಮ್ ಅನ್ನು ನಿಮ್ಮ ಬಳಿ ಇರುವ ಡಾಂಗಲ್ ಗೆ ಹಾಕಿರಿ. 4G ಸಪೋರ್ಟ್ ಮಾಡುವ ಯಾವುದೇ ಡಾಂಗಲ್ ಆಗಿರಲಿ, ಏರ್‌ಟೆಲ್ ಇಲ್ಲವೇ ವೊಡೋಪೋನ್ ನದ್ದು ಆದರೂ ಸಹ ನಿಮ್ಮ ಜಿಯೋ ಸಿಮ್‌ ಅನ್ನು ಅದರಲ್ಲಿ ಬಳಸಬಹುದಾಗಿದೆ. ನಂತರ ನಿಮ್ ಡಾಂಗಲ್ ಅನ್ನು ಪಿಸಿ ಇಲ್ಲವೇ ಲ್ಯಾಪ್‌ಟಾಪ್‌ ಗೆ ಕನೆಕ್ಟ್ ಮಾಡಿರಿ.

APN ಆಯ್ಕೆ ಮಾಡಿರಿ:

ಒಮ್ಮೆ ಜಿಯೋ ಸಿಮ್ ಹಾಕಿದ ಡಾಂಗಲ್ ಅನ್ನು ನಿಮ್ಮ ಕಂಪ್ಯೂಟರ್'ಗೆ ಸಂಪರ್ಕಿಸಿದ ನಂತರದಲ್ಲಿ ನಿಮ್ಮ ಡಾಂಗಲ್ ನಲ್ಲಿ ಸೆಟ್ಟಿಂಗ್ಸ್ ಗೆ ಅಲ್ಲಿ `Access Point Name: Jionet ಎಂದು ಸೆಲೆಕ್ಟ್ ಮಾಡಿರಿ. ನಂತರ ಅಲ್ಲಿರುವ ಮಿಕ್ಕ ಕಾಲಂಗಳನ್ನು ಖಾಲಿ ಬಿಟ್ಟು ಒಕೆ ಕ್ಲಿಕ್ ಮಾಡಿರಿ. ಕೆಲವು ಡಾಂಗಲ್ ಗಳು ಆಟೋಮೆಟಿಕ್ ಆಗಿ APN ಆಯ್ಕೆ ಮಾಡಿಕೊಳ್ಳುತ್ತವೆ. ಅವುಗಳಲ್ಲಿ ಈ ಸೆಟ್ಟಿಂಗ್ ಮಾಡುವ ಅಗತ್ಯ ವಿರುವುದಿಲ್ಲ. ಹಾಗಾಗಿ ಒಮ್ಮೆ ಕನೆಕ್ಟ್ ಆಗುವವರೆಗೂ ಕಾಯಿರಿ.

ಡಾಂಗಲ್ ನಲ್ಲಿ ಜಿಯೋ ಸಿಮ್ ಬಳಸಲು ಶುರು ಮಾಡಿ..!

ಜಿಯೋ ಸಿಮ್ ಒಮ್ಮೆ APN ಸೆಲೆಕ್ಟ್ ಮಾಡಿದ ಮೇಲೆ ನಿಮ್ಮ ಡಾಂಗಲ್ ನಲ್ಲಿ ಜಿಯೋ ಡೇಟಾ ಆಕ್ಟಿವೇಟ್ ಆಗಿರುತ್ತವೆ. ಒಂದು ವೇಳೆ ನಿಮ್ಮ ಡಾಂಗಲ್ ನಲ್ಲಿ ವೈ-ಫೈ ಹಾಟ್‌ಸ್ಪಾಟ್‌ ಇದಲ್ಲಿ ಎರಡು ಮೂರು ಡಿವೈಸ್‌ ಗಳನ್ನು ಒಟ್ಟಾಗಿ ಬಳಸಬಹುದು ಇಲ್ಲವಾದರೆ ನಿಮ್ಮ ಲ್ಯಾಪ್‌ಟಾಪ್ ನಲ್ಲಿ ಇಲ್ಲವೇ ಕಂಪ್ಯೂಟರ್‌ಗೆ ಕನೆಕ್ಟ್ ಮಾಡಿಕೊಂಡು ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿRead more about:
English summary
You can use the SIM card on any devices such as dongles, irrespective of the brand. to know more visit kananda.gizbot.com
Please Wait while comments are loading...
Opinion Poll

Social Counting