ಹೊಸ ವಿನ್ಯಾಸದ ಸ್ಕೈಪ್ ಅನ್ನು ಸ್ನೇಹಿತರೊಂದಿಗೆ ಬಳಸುವುದು ಹೇಗೆ

ಸ್ಕೈಪ್ ಸ್ನಾಪ್‍ಚಾಟ್ ಅನ್ನು ನಕಲು ಮಾಡುತ್ತಿದ್ದು ಹೈಲೈಟ್ ಫೀಚರ್ ನೊಂದಿಗೆ ಬಂದಿದೆ, ಇದರಿಂದ ಬಳಕೆದಾರರು ಚಿತ್ರಗಳನ್ನು, ವೀಡಿಯೊಗಳನ್ನು ಪೋಸ್ಟ್ ಮಾಡಬಹುದು ಹಾಗೂ ಸ್ನೇಹಿತರ ಪ್ರತಿಕ್ರಿಯೆ ಪಡೆಯಬಹುದು.

By Prateeksha
|

ಇನ್ಸಟಾಗ್ರಾಮ್ ಅನ್ನು ಹಿಂಬಾಲಿಸುತ್ತಾ ಈಗ ಸ್ಕೈಪ್ ಕೂಡ ಸ್ನಾಪ್‍ಚಾಟ್ ಅನ್ನು ನಕಲು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಮೈಕ್ರೊಸಾಫ್ಟ್ ತನ್ನ ಮೊಬೈಲ್ ಆಪ್ ನಲ್ಲಿ ಮಾಡಿದ ಪ್ರಮುಖ ಬದಲಾವಣೆ ಬಗ್ಗೆ ಘೋಷಿಸಿತು.

ಹೊಸ ವಿನ್ಯಾಸದ ಸ್ಕೈಪ್ ಅನ್ನು ಸ್ನೇಹಿತರೊಂದಿಗೆ ಬಳಸುವುದು ಹೇಗೆ

ಅದರಲ್ಲಿ ಹೈಲೈಟ್ ಫೀಚರ್ ಕೂಡ ಒಂದು. ಇದು ಬಳಕೆದಾರರಿಗೆ ವೀಡಿಯೊ ಮತ್ತು ಚಿತ್ರಗಳನ್ನು ತೆಗೆಯಲು ಅನುವುಮಾಡುತ್ತದೆ ಮತ್ತು ತಾತ್ಕಾಲಿಕವಾಗಿ ಗೆಳೆಯರಿಗೆ ತೋರಿಸುತ್ತದೆ. ಇದು ಒಂದು ಥರ ಪ್ರಚಲಿತದಲ್ಲಿರುವ ಸ್ನಾಪ್‍ಚಾಟ್ ಸ್ಟೋರಿಜ್ ಇದ್ದಂತೆ.

ಹೊಸ ವಿನ್ಯಾಸದ ಸ್ಕೈಪ್ ಅನ್ನು ಸ್ನೇಹಿತರೊಂದಿಗೆ ಬಳಸುವುದು ಹೇಗೆ

ಇದು ಮೊದಲು ಆಂಡ್ರೊಯಿಡ್ ಡಿವೈಜ್ ನಲ್ಲಿ ಲಭ್ಯ, ನಂತರ ಕ್ರಮೇಣ ಬರುವ ವಾರಗಳಲ್ಲಿ ಐಫೋನ್ ಗಾಗಿ ಹೊಸ ವರ್ಷನ್ ತರಲಾಗುವುದು.
ವಿಂಡೊಸ್ ಮತ್ತು ಮ್ಯಾಕ್ ಗಾಗಿ ವರ್ಷನ್ ಅನ್ನು ಮುಂದಿನ ಕೆಲ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು.

ನಿಮ್ಮನ್ನು ವ್ಯಕ್ತಪಡಿಸಿ

ನಿಮ್ಮನ್ನು ವ್ಯಕ್ತಪಡಿಸಿ

ವಾಯಸ್ ಕಾಲ್ ಅಥವಾ ಮೆಸೆಜ್ ಸಮಯದಲ್ಲಿ ನಿಮ್ಮ ಶಬ್ದ ಕೇಳುವ ಹಾಗೆ ಅಥವಾ ಇಮೊಟಿಕಾನ್ ಕಾಣುವುದೇ ಎಂದು ಧೃಡಪಡಿಸಿಕೊಳ್ಳಿ. ಇದನ್ನು ಸುಲಭವಾಗಿ ಮಾಡಬಹುದು ಯಾವುದೇ ಮೆಸೆಜ್ ಅಥವಾ ವೀಡಿಯೊ ಕಾಲ್ ಪಕ್ಕದಲ್ಲಿ ರಿಯಾಕ್ಷನ್ ಐಕೊನ್ ಮೇಲೆ ತಟ್ಟಿ.

ಹೈಲೈಟ್ಸ್

ಹೈಲೈಟ್ಸ್

ಇದು ನಿಮಗೆ ನಿಮ್ಮ ಇಡೀ ದಿನದ ಪಟ್ಟಿಯನ್ನು ನೀಡುವುದು ಚಿತ್ರಗಳು ಮತ್ತು ವೀಡಿಯೊ ಗಳ ಮೂಲಕ ಕ್ಯಾಮೆರಾ ಮಾಹಿತಿ ಪಡೆಯಲು ಅನುಮತಿ ನೀಡುವ ಮೂಲಕ, ಅದಾದ ನಂತರ ಅದನ್ನು ಹೈಲೈಟ್ಸ್ ನಲ್ಲಿ ಪೊಸ್ಟ್ ಮಾಡಿ ಅಥವಾ ನೇರವಾಗಿ ಸಂಪರ್ಕಗಳಿಗೆ ಅಥವಾ ಗುಂಪುಗಳಿಗೆ ಕಳುಹಿಸಬಹುದು. ಒಮ್ಮೆ ಹೈಲೈಟ್ಸ್ ನಲ್ಲಿ ಪೊಸ್ಟ್ ಮಾಡಿದ ಮೇಲೆ ನಿಮ್ಮ ಕುಟುಂಬ ಮತ್ತು ಸ್ನೇಹಿತರು ಅದಕ್ಕೆ ಪ್ರತಿಕ್ರಿಯಿಸಬಹುದು ಇಮೊಟಿಕೊನ್ಸ್ ಕಳುಹಿಸುವ ಮೂಲಕ ಅಥವಾ ಸಂವಾದವನ್ನು ಆರಂಭಿಸಬಹುದು.

ಬೊಟ್ಸ್

ಬೊಟ್ಸ್

ಹೊಸ ಅಪ್‍ಡೇಟ್ ಮೂಲಕ ಸ್ಕೈಪ್ ಕೆಲ ಆಡ್ ಇನ್ಸ್ ಹೊಂದಿದೆ ಜೊತೆಗೆ ಬೊಟ್ಸ್ ಕೂಡ, ಫೈಂಡ್ ಪ್ಯಾನೆರಲ್ ನಿಮಗೆ ಆಟ, ಸಿನೆಮಾ ಟಿಕೆಟ್ಸ್, ಹೊಟೆಲ್ ಮತ್ತು ಇತ್ಯಾದಿ ಹುಡುಕಲು ಸಹಾಯ ಮಾಡುತ್ತದೆ. ಅದಕ್ಕಿಂತ ಹೆಚ್ಚಾಗಿ, ನೀವು ಎಕ್ಸ್‍ಪೀಡಿಯಾ ಬೊಟ್ಸ್ ಜೊತೆ ಸಂವಾದ ನಡೆಸಬಹುದು ವಿಮಾನದ ಸಮಯ ಮತ್ತು ಬೆಲೆ ತಿಳಿಯಲು. ಕಂಪನಿ ಹೇಳುವಂತೆ ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಫೀಚರ್ಸ್ ಗಳನ್ನು ಸೇರಿಸಲಾಗುವುದು.

Best Mobiles in India

English summary
Following the Instagram, its Skype in the list now for copying Snapchat. A couple of days back, Microsoft announced a major overhaul of its mobile app, including a "Highlights" feature that lets the users capture videos and photos that will be temporarily visible to their friends.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X