ಐಡಿಯಾದಿಂದ 1 ರೂಗೆ 1GB 4G ಡೇಟಾ! ಉಪಯೋಗಿಸಲು ತಲೆ ಬೇಕು!?

ಐಡಿಯಾ 4G ಬಳಕೆದಾರರು ಕೇವಲ 30 ನಿಮಿಷಗಳಲ್ಲಿ ಐಡಿಯಾದ 1GB 4G ಡೇಟಾ ಉಪಯೋಗಿಸಿಕೊಳ್ಳಬಹುದು!

|

ಐಡಿಯಾ ತನ್ನ ಗ್ರಾಹಕರಿಗಾಗಿ ಕೇವಲ 1 ರೂಪಾಯಿಗೆ 1GB 4G ಡೇಟಾ ಆಫರ್‌ ನೀಡಿದೆ. ಆದರೆ , ಈ ಆಫರ್‌ ಕೇವಲ ಒಂದು ಗಂಟೆಗೆ ಮಾತ್ರ ಸೀಮಿತವಾಗಿದ್ದು, ನಾವು ಈ ಆಫರ್‌ ಮೂಲಕ ಹೇಗೆ ಸದುಪಯೋಗಪಡೆಯಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಜಿಯೋ ಫ್ರೀ ಇಂಟರ್‌ನೆಟ್‌ ಆಫರ್ ಮುಂದೆ ಉಳಿದ ಎಲ್ಲಾ ಟೆಲಿಕಾಂಗಳ ಆಫರ್‌ಗಳ ನಗಣ್ಯ!! ಆದರೆ ಇತರೆ ಟೆಲಿಕಾಂಗಳು ನೀಡುವಂತಹ ಕೆಲವು ಆಫರ್‌ಗಳು ಕೂಡ ನಮಗೆ ಹೆಚ್ಚು ಉಪಯೋಗಕ್ಕೆ ಬರುತ್ತವೆ. ಅಂತಹ ಆಫರ್‌ಗಳಲ್ಲಿ ಐಡಿಯಾದ ಈ ನೂತನ ಆಫರ್‌ 1 ರೂಪಾಯಿಗೆ 1GB 4G ಡೇಟಾ ಕೂಡ ಒಂದು.

ಕೇಂದ್ರ ಸರ್ಕಾರದಿಂದಲೇ ಪ್ರತಿ ತಿಂಗಳು ಉಚಿತ ಇಂಟರ್‌ನೆಟ್ ಸೇವೆ!!?

1GB ಇಂಟರ್‌ನೆಟ್‌ ಅನ್ನು ಒಂದು ಗಂಟೆಯಲ್ಲಿ ಹೇಗೆ ಖಾಲಿಮಾಡುವುದು ಎಂಬುದು ಎಲ್ಲರ ಪ್ರಶ್ನೆ. ಆದರೆ ಸರಿಯಾಗಿ ನಾವು ಇದನ್ನು ಉಪಯೋಗಿಸಿದರೆ ನಮಗೆ ಸಿಗುವಂತಹ ಲಾಭಗಳು ಹಲವು!. ಹೌದು, ಐಡಿಯಾ 4G ಬಳಕೆದಾರರು ಕೇವಲ 30 ನಿಮಿಷಗಳಲ್ಲಿ ಐಡಿಯಾದ 1GB 4G ಡೇಟಾ ಉಪಯೋಗಿಸಿಕೊಳ್ಳಬಹುದು! ಹಾಗಾದರೆ 30 ನಿಮಿಷಗಳಲ್ಲಿ ಐಡಿಯಾದ 1GB 4G ಡೇಟಾ ಹೇಗೆ ಉಪಯೋಗಿಸಿಕೊಳ್ಳುವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಒಂದು ರುಪಾಯಿಯಲ್ಲಿ 2 ಸಿನಿಮಾ ಡೌನ್‌ಲೋಡ್‌!

ಒಂದು ರುಪಾಯಿಯಲ್ಲಿ 2 ಸಿನಿಮಾ ಡೌನ್‌ಲೋಡ್‌!

ಐಡಿಯಾದ 4G ಬಳಕೆಯ ವೇಗ ಹೆಚ್ಚಿದ್ದು, ಈ ಆಫರ್‌ ಉಪಯೋಗಿಸಿಕೊಂಡರೆ ಒಂದು ರುಪಾಯಿಯಲ್ಲಿ 2 ಸಿನಿಮಾಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.!! 500MBಯ ಎರಡು ಚಿತ್ರಗಳನ್ನು ಒಂದೇ ಬಾರಿ ಡೌನ್‌ಲೋಡ್‌ ಮಾಡಿದರೆ 1GB ಡೇಟಾ ಮುಗಿಯಲು 30 ನಿಮಿಷ ಸಾಕಾಗುತ್ತದೆ.!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಮಾರ್ಟ್‌ಫೋನ್‌ ಅಪ್‌ಡೇಟ್ ಮಾಡಿ

ಸ್ಮಾರ್ಟ್‌ಫೋನ್‌ ಅಪ್‌ಡೇಟ್ ಮಾಡಿ

ಪ್ರತಿದಿನವೂ ಸ್ಮಾರ್ಟ್‌ಫೋನ್‌ ಆಪ್‌ಗಳು ಅಪ್‌ಡೇಟ್‌ ಆಗುತ್ತಲೇ ಇರುತ್ತವೆ. ನೀವು ಇಂಟರ್‌ನೆಟ್‌ ಆನ್‌ ಮಾಡಿದ ತಕ್ಷಣವೆ ಸ್ಮಾರ್ಟ್‌ಫೋನ್‌ ಅಪ್‌ಡೆಟ್‌ ಮಾಡಲು ಕೇಳಿಕೊಳ್ಳುತ್ತದೆ. ಹಾಗಾಗಿ ಸ್ಮಾರ್ಟ್‌ಫೋನ್‌ ಆಪ್‌ ಅಪ್‌ಡೇಟ್ ಮಾಡಿ ನಿಮ್ಮ ಮೊಬೈಲ್‌ ಅನ್ನು ಸೆಕ್ಯೂರ್‌ ಆಗಿ ಇಡಿ.

ಆಪ್‌ ಡೌನ್‌ಲೋಡ್ ಮಾಡಿ.

ಆಪ್‌ ಡೌನ್‌ಲೋಡ್ ಮಾಡಿ.

ಇಂದು ಬಹುತೇಕ ಎಲ್ಲಾ ಸ್ಮಾರ್ಟ್‌ಪೋನ್‌ಗಳು ಆಂತರಿಕ ಮೆಮೊರಿ ಕಡಿಮೆ ಎಂದರೂ 16 GB ಸಾಮರ್ಥ್ಯ ಹೊಂದಿರುತ್ತದೆ. ಹಾಗಾಗಿ, ಉಪಯೋಗಕ್ಕೆ ಬರಬಹುದಾದ ಎಲ್ಲಾ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿ..

ಆಡಿಯೋ ಸಾಂಗ್ಸ್ ಡೌನ್‌ಲೋಡ್ ಮಾಡಿ.

ಆಡಿಯೋ ಸಾಂಗ್ಸ್ ಡೌನ್‌ಲೋಡ್ ಮಾಡಿ.

ಮ್ಯೂಸಿಕ್‌ ಎಂದರೆ ಎಲ್ಲರಿಗೂ ಪಂಚಪ್ರಾಣ. ದಿನವೂ ಅತ್ಯುತ್ತಮ ಸಾಂಗ್ಸ್ ಬಿಡುಗಡೆಯಾಗುವ ಇಂದಿನ ದಿನಗಳಲ್ಲಿ 1GB 4G ಡೇಟಾ ಮೂಲಕ 50 ರಿಂದ 80 ಆಡಿಯೋ ಸಾಂಗ್ಸ್‌ಗಳನ್ನು ಡೌನ್‌ ಲೋಡ್‌ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Hallo Friends, idea is now offering an amazing offer to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X