ಈ 6 ಟಿಪ್ಸ್‌ಗಳಿಂದ ರಿಲಾಯನ್ಸ್ ಜಿಯೋ 4G ಸಿಮ್ ಇಂಟರ್ನೆಟ್ ವೇಗ ಹೆಚ್ಚಿಸಿಕೊಳ್ಳಿ!

By Suneel
|

ರಿಲಾಯನ್ಸ್ ಜಿಯೋ ಈಗಾಗಲೇ ಬಹುಸಂಖ್ಯಾತ ಬಳಕೆದಾರರನ್ನು ಹೊಂದಿದೆ. ಅಲ್ಲದೇ ಇತರೆ ಟೆಲಿಕಾಂ ಬಳಕೆದಾರರು ಸಹ ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್‌ ಪೋರ್ಟಿಂಗ್ ಮೂಲಕ ಜಂಪ್‌ ಆಗಲು ಬಯಸುತ್ತಿದ್ದಾರೆ. ಆದರೆ ಈಗಾಗಲೇ ಜಿಯೋ 4G ಸಿಮ್‌ ಪಡೆದ ಎಲ್ಲಾ ಬಳಕೆದಾರರು ರಿಲಾಯನ್ಸ್ ಜಿಯೋ ನೀಡುತ್ತಿರುವ ನೆಟ್‌ವರ್ಕ್‌ ವೇಗದ ಬಗ್ಗೆ ಸಮಾಧಾನ ಹೊಂದಿಲ್ಲ.

ರಿಲಾಯನ್ಸ್ ಜಿಯೋ(Jio) ಲಾಂಚ್‌ ನಂತರ ಲೈಫ್‌ ಸ್ಮಾರ್ಟ್‌ಫೋನ್ ಬಳಕೆದಾರರು ಮತ್ತು ಇತ್ತೀಚಿನ ಬಳಕೆದಾರರು ಉತ್ತಮ 4G ನೆಟ್‌ವರ್ಕ್‌ ಅನ್ನು 10-20Mbps ವೇಗದ ವರೆಗೆ ಮಾತ್ರ ಎಂಜಾಯ್ ಮಾಡುತ್ತಿದ್ದಾರೆ. ಸೆಪ್ಟೆಂಬರ್‌ 5 ರಿಂದ ಅಧಿಕೃತವಾಗಿ ಲಭ್ಯವಿರುವ ರಿಲಾಯನ್ಸ್ ಜಿಯೋ ಸಿಮ್‌ಗಳು ಅಧಿಕ ನೆಟ್‌ವರ್ಕ್‌ ಲೋಡ್‌ ಅನ್ನು ಸರ್ವರ್‌ ಮೇಲೆ ಏರುತ್ತಿವೆ. ಈ ಕಾರಣದಿಂದ ಅಪ್‌ಲೋಡ್‌ ಮತ್ತು ಡೌನ್‌ಲೋಡ್‌ ವೇಗ ಹಲವು ಪ್ರದೇಶಗಳ ನೆಟ್‌ವರ್ಕ್‌ನಲ್ಲಿ ಕುಸಿದಿದೆ.

ಅಂದಹಾಗೆ ಇಂದಿನ ಲೇಖನದಲ್ಲಿ ರಿಲಾಯನ್ಸ್ ಜಿಯೋ 4G ಬಳಕೆದಾರರು ಅಪ್‌ಲೋಡ್‌ ಮತ್ತು ಡೌನ್‌ಲೋಡ್‌ ಅನ್ನು ವೇಗಗೊಳಿಸಿಕೊಳ್ಳಬಹುದಾದ ಹಲವು ಸಲಹೆಗಳನ್ನು ನೀಡುತ್ತಿದ್ದೇವೆ. ನಿಮ್ಮ ಡೌನ್‌ಲೋಡ್‌ ಮತ್ತು ಅಪ್‌ಲೋಡ್‌ ವೇಗ 150-500kbps ಇದ್ದಲ್ಲಿ ಈ ಸಲಹೆಗಳನ್ನು ಪಾಲಿಸಿ.

ರಿಲಾಯನ್ಸ್ ಜಿಯೋಚಾಟ್, ವಾಟ್ಸಾಪ್, ಮೆಸೇಂಜರ್ ಆಪ್‌ಗಳ ನಡುವಿನ 6 ವ್ಯತ್ಯಾಸಗಳು

APN ಸೆಟ್ಟಿಂಗ್ಸ್ ಚೇಂಜ್‌ ಮಾಡಿ

APN ಸೆಟ್ಟಿಂಗ್ಸ್ ಚೇಂಜ್‌ ಮಾಡಿ

ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ ವೇಗಗೊಳಿಸಲು APN ಸೆಟ್ಟಿಂಗ್ಸ್ ಬದಲಿಸಬಹುದು. APN ಸೆಟ್ಟಿಂಗ್ಸ್ ಬದಲಿಸಲು ನಿಮ್ಮ ಡಿವೈಸ್‌ನಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ, ಮೊಬೈಲ್‌ ನೆಟ್‌ವರ್ಕ್‌ ಅನ್ನು ಆಯ್ಕೆ ಮಾಡಿ. ಅಲ್ಲಿ ಆದ್ಯತೆ ನೆಟ್‌ವರ್ಕ್‌ ಅನ್ನು LTE ಆಗಿ ಆಯ್ಕೆ ಮಾಡಿ. ನಂತರ ಹಿಂದೆ ಬನ್ನಿ. ನಂತರ APN ಆಯ್ಕೆ ಮಾಡಿ ಸ್ಕ್ರಾಲ್‌ ಡೌನ್‌ ಮಾಡಿ APN ಪ್ರೊಟೊಕಾಲ್ ಆಪ್ಶನ್‌ ಪತ್ತೆ ಮಾಡಿ, ಅದನ್ನು Ipv4/Ipv6 ಬದಲಿಸಿ. ನಂತರ LTE ಆಪ್ಶನ್‌ ಅನ್ನು ಆಯ್ಕೆ ಮಾಡಿ ಸೆಟ್ಟಿಂಗ್ಸ್ ಅನ್ನು ಸೇವ್‌ ಮಾಡಿ.

ರೂಟೆಡ್‌ ಆದ ಫೋನ್‌ಗಳು

ರೂಟೆಡ್‌ ಆದ ಫೋನ್‌ಗಳು

ನಿಮ್ಮ ರೂಟ್‌ ಆದ ಆಂಡ್ರಾಯ್ಡ್ ಫೋನ್‌ ಹೊಂದಿದ್ದಲ್ಲಿ, ಫೋನ್‌ನಲ್ಲಿ 3G/4G ವೇಗ ಆಪ್ಟಿಮೈಜರ್‌ APK ಡೌನ್‌ಲೋಡ್ ಮಾಡಿ ಮತ್ತು ನೆಟ್‌ವರ್ಕ್‌ ವೇಗ ಆಯ್ಕೆ ಮಾಡಿ. ಅಲ್ಲಿ ನೀವು 12/28/7 ಅನ್ನು ಮ್ಯಾಕ್ಸ್ ವೇಗವಾಗಿ ಆಯ್ಕೆ ಮಾಡಿರಿ. ನಂತರ 'Apply Tweak' ಎಂಬಲ್ಲಿ ಕ್ಲಿಕ್ ಮಾಡಿ, ನಿಮ್ಮ ಫೋನ್ ಅನ್ನು ರೀಸ್ಟಾಟ್‌ ಮಾಡಿರಿ.

ರೂಟಿಂಗ್‌ ಮಾಡದೇ VPN ಬಳಕೆ

ರೂಟಿಂಗ್‌ ಮಾಡದೇ VPN ಬಳಕೆ

ಪ್ಲೇ ಸ್ಟೋರ್‌ನಿಂದ 'Snap VPN' ಆಪ್‌ ಡೌನ್‌ಲೋಡ್‌ ಮಾಡಿ. ಆಪ್‌ ಓಪನ್‌ ಮಾಡಿ, ಓಪನ್‌ ಆದ ಪೇಜ್‌ನಲ್ಲಿ ಹಲವು ದೇಶಗಳು ಮತ್ತು ಅಲ್ಲಿನ ಸಿಗ್ನಲ್‌ ಸಾಮರ್ಥ್ಯದ ಪಟ್ಟಿ ಪ್ರದರ್ಶನವಾಗುತ್ತದೆ. ಉತ್ತಮ ಸಿಗ್ನಲ್‌ ಸಾಮರ್ಥ್ಯ ಹೊಂದಿರುವ ದೇಶ ಆಯ್ಕೆ ಮಾಡಿ ಸಂಪರ್ಕ ಪಡೆಯಿರಿ. ಒಮ್ಮೆ ಕನೆಕ್ಷನ್‌ ಸ್ಥಾಪನೆಯಾದರೆ, ಇಂಟರ್ನೆಟ್ ಸಂಪರ್ಕದ ವೇಗವನ್ನು ಚೆಕ್‌ ಮಾಡಿ.

 LTE ಬ್ಯಾಂಡ್‌ ಬದಲಾವಣೆ

LTE ಬ್ಯಾಂಡ್‌ ಬದಲಾವಣೆ

ಬ್ಯಾಂಡ್ 3 ಮತ್ತು 5 ನೀಡುವ ಕವರೇಜ್‌ಗಿಂತ, ಬ್ಯಾಂಡ್‌ 40 ಅತ್ಯುತ್ತಮ ವೇಗವನ್ನು ಆಫರ್‌ ಮಾಡುತ್ತದೆ. 'ಬ್ಯಾಂಡ್ 40' 50 Mbps ಡೌನ್‌ಲೋಡ್‌ ವೇಗವನ್ನು ನೆಟ್‌ವರ್ಕ್‌ ಗುಣಮಟ್ಟ ಮತ್ತು ಸಿಗ್ನಲ್‌ ಸಾಮರ್ಥ್ಯದ ಆಧಾರದಲ್ಲಿ ನೀಡುತ್ತದೆ. ನಿಮ್ಮ ಫೋನ್‌ ಕ್ವಾಲ್ಕಂ ಮತ್ತು ಮೀಡಿಯಾ ಟೆಕ್‌ ಚಿಪ್‌ಸೆಟ್‌ ಆಗಿದ್ದಲ್ಲಿ, LTE ಬ್ಯಾಂಡ್‌ನಿಂದ, ಬ್ಯಾಂಡ್‌ 40 ಗೆ ಬದಲಾವಣೆ ಮಾಡಬಹುದು. ಅದು ಹೇಗೆ ಎಂದು ಈ ಲಿಂಕ್‌ ಅನ್ನು ಕ್ಲಿಕ್ ಮಾಡಿ ತಿಳಿಯಿರಿ.

ವಿವಿಧ ಸರ್ವರ್‌ ಹೆಸರುಗಳನ್ನು ಬಳಸಿರಿ

ವಿವಿಧ ಸರ್ವರ್‌ ಹೆಸರುಗಳನ್ನು ಬಳಸಿರಿ

APN ಸೆಟ್ಟಿಂಗ್ಸ್‌ಗೆ ಹೋಗಿ ಸ್ಕ್ರಾಲ್‌ ಡೌನ್‌ ಮಾಡಿ ಸರ್ವರ್‌ ಸೆಕ್ಷನ್‌ಗೆ ಹೋಗಿ. ಅಲ್ಲಿ www.google.com ಎಂದು ಟೈಪಿಸಿ ಮತ್ತು ಸೆಟ್ಟಿಂಗ್ಸ್ ಅನ್ನು ಸೇವ್‌ ಮಾಡಿ. ನಂತರ ಇಂಟರ್ನೆಟ್‌ಗೆ ಪುನಃ ಕನೆಕ್ಟ್ ಆಗಿ ವೇಗ ಚೆಕ್‌ ಮಾಡಿ

ಕ್ಯಾಶೆ ಕ್ಲಿಯರ್‌ ಮಾಡಿ

ಕ್ಯಾಶೆ ಕ್ಲಿಯರ್‌ ಮಾಡಿ

ಆಂಡ್ರಾಯ್ಡ್ ಸಿಸ್ಟಮ್‌ ರ್ಯಾಂಡಮ್ಲಿ ಹಲವು ಫೈಲ್‌ಗಳನ್ನು ಬಳಸುತ್ತದೆ ಮತ್ತು ಅವುಗಳನ್ನು ಸಿಸ್ಟಮ್‌ನಲ್ಲಿ ಸೇವ್‌ ಮಾಡಿ ಕಾರ್ಯವೈಖರಿಯನ್ನು ಹೆಚ್ಚಿಸುತ್ತದೆ. ಈ ಫೈಲ್‌ಗಳನ್ನು ಕ್ಯಾಶೆ ಎಂದು ಕರೆಯಲಾಗುತ್ತದೆ. ಅಂದಹಾಗೆ ಜಿಯೋ ತಾತ್ಕಾಲಿಕವಾಗಿ ಬಳಕೆದಾರರನ್ನು ದೀರ್ಘ ಮಾಹಿತಿಯನ್ನು ಡೌನ್‌ಲೋಡ್‌ ಮಾಡುವುದರಿಂದ ಬ್ಲಾಕ್‌ ಮಾಡುತ್ತದೆ. ಕಾರಣ ಕ್ಯಾಶೆ ಫೈಲ್ಸ್‌. ಆದ್ದರಿಂದ ರಿಲಾಯನ್ಸ್ ಜಿಯೋ 4G ವೇಗಗೊಳಿಸಲು ಕ್ಯಾಶೆ ಫೈಲ್ಸ್‌ಗಳನ್ನು ರಿಮೂವ್ ಮಾಡಿ. Settings → Storage & USB → Internal Storage→ Cached data→ clear cached data→ ಟ್ಯಾಪ್‌ 'ok'.

ಸೂಚನೆ: ಮೇಲಿನ ಹಂತಗಳನ್ನು ಪಾಲಿಸಿಯೂ ನಿಮ್ಮ ಡಿವೈಸ್‌ನಲ್ಲಿ ನೆಟ್‌ವರ್ಕ್‌ ವೇಗ ಹೆಚ್ಚಾಗದಿದ್ದರೇ, ನೆಟ್‌ವರ್ಕ್‌ ಸಮಸ್ಯೆ ಹೆಚ್ಚಾಗಿರುತ್ತದೆ.

Best Mobiles in India

English summary
Increase Your Reliance Jio 4G SIM Internet Speed With These 6 Solutions. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X