ಐಓಎಸ್ 7 ಮತ್ತು ಐಓಎಸ್ 8 ನ ಅಭೂತಪೂರ್ವ ವಿಶೇಷತೆ

By Shwetha
|

ಇತ್ತೀಚಿನ ಅತ್ಯಾಧುನಿಕ ಐಓಎಸ್ ಅಪ್‌ಡೇಟ್‌ನೊಂದಿಗೆ, ಇದರ ಹಿಂದಿನ ಆವೃತ್ತಿಯನ್ನು ಮೂಲೆಗೊತ್ತಿ ಇದನ್ನು ತಮ್ಮದಾಗಿಸಿಕೊಳ್ಳುವ ತವಕದಲ್ಲಿದ್ದಾರೆ. ಐಓಎಸ್ 8 ಅನ್ನು ಜೂನ್ 2 ರಂದು, ಡಬ್ಲ್ಯೂಡಬ್ಲ್ಯೂಡಿಸಿ (WWDC) ನಲ್ಲಿ ಪ್ರಸ್ತುತಪಡಿಸಲಾಯಿತು. ಐಓಎಸ್ 7 ಗಿಂತಲೂ ಹೆಚ್ಚು ವಿಶೇಷಿತ ವೈಶಿಷ್ಟ್ಯಗಳನ್ನು ಒಳಗೊಂಡಿದ್ದ ಐಓಎಸ್8 ನ ನಿರೀಕ್ಷೆಯಲ್ಲಿ ಎಲ್ಲಾ ಆಪಲ್ ಬಳಕೆದಾರರು ಕಾಯುತ್ತಿದ್ದರು.

ಇದನ್ನೂ ಓದಿ: ದೀಪಾವಳಿ ಕೊಡುಗೆಯ ಒಪ್ಪೊ ಫೋನ್‌ಗಳ ಶ್ರೇಣಿ

ಇನ್ನು ಐಓಎಸ್ 7 ಮತ್ತು ಐಓಎಸ್ 8 ನಲ್ಲಿ ಹಲವಾರು ವ್ಯತ್ಯಾಸಗಳನ್ನು ಮಾರ್ಪಾಡುಗಳನ್ನು ನೀವು ಕಾಣಬಹುದಾಗಿದ್ದು, ಇತ್ತೀಚಿನ ಅಪ್‌ಡೇಟ್ ಏಕೆ ಉತ್ತಮ ಎಂಬುದು ನಿಮಗರಿವಾಗಬಹುದು. ಹಾಗಿದ್ದರೆ ಐಓಎಸ್ 8 ನಲ್ಲಿ ಸೇರಿಸಿರಬಹುದಾದ ವಿಶೇಷತೆಗಳೇನು ಎಂಬುದನ್ನು ಅರಿತುಕೊಳ್ಳುವ ತವಕ ನಿಮ್ಮದಾಗಿದ್ದಲ್ಲಿ ಮುಂದೆ ಓದಿ

ಐಓಎಸ್ 7 ಮತ್ತು ಐಓಎಸ್ 8 ಗಿರುವ ಇತ್ತೀಚಿನ ವ್ಯತ್ಯಾಸಗಳು

#1

#1

ನಿಮ್ಮ ಐಫೋನ್‌ನಲ್ಲಿ ಹಾಟ್ ಸ್ಪಾಟ್ ಅನ್ನು ಸಕ್ರಿಯಗೊಳಿಸುವ ಮೂಲಕ ನಿಮ್ಮ ಮ್ಯಾಕ್ ಅನ್ನು ಸಂಪರ್ಕಪಡಿಸಬಹುದು. ಐಫೋನ್ ಮತ್ತು ಮ್ಯಾಕ್‌ಬುಕ್ ಎರಡರಲ್ಲೂ ಡಾಕ್ಯುಮೆಂಟ್‌ಗಳನ್ನು ಹಂಚಿ ಮತ್ತು ಸಂಪಾದಿಸಿ. ಈ ಆಯ್ಕೆ ಐಓಎಸ್ 7 ನಲ್ಲಿ ಇಲ್ಲ.

#2

#2

ಸ್ಥಳದೊಂದಿಗೆ ಸಂದೇಶಗಳನ್ನು ಕಳುಹಿಸಿ ಮತ್ತು ನಿರ್ದಿಷ್ಟ ಅಪ್ಲಿಕೇಶನ್‌ಗಾಗಿ ಡಿಸ್ಟರ್ಬ್ ಮಾಡದಿರಿ ಆಯ್ಕೆಯನ್ನು ಪಡೆದುಕೊಳ್ಳಿ. ನಿಮ್ಮ ಪ್ರಸ್ತುತ ಸ್ಥಿತಿಯನ್ನು ನಿಮ್ಮ ಸಂಸ್ಥೆ ನೋಡಬಹುದಾದ ವಿಐಪಿ (VIP) ಥ್ರೆಡ್ ಎಂದು ಕರೆಯುವ ಖಾಸಗಿ ಸಂದೇಶವನ್ನು ನಿಮಗೆ ಚಂದಾದಾರಿಕೆ ಮಾಡಿಕೊಳ್ಳಬಹುದು.

#3

#3

ಐಓಎಸ್ 7 ಗಿಂತ 3 ಜಿಬಿ ಸಂಗ್ರಹಕ್ಕಿಂತ 5 ಜಿಬಿಯಷ್ಟನ್ನು ಸಂಗ್ರಹಣೆಯನ್ನು ಹೆಚ್ಚಿಸಿದೆ. ಐಓಎಸ್ 7 ಗಿಂತಲೂ ಇದರಲ್ಲಿ ಡಾಕ್ಯುಮೆಂಟ್ ಅನ್ನು ಸಂಪಾದಿಸಲು ಮತ್ತು ಹಂಚಿಕೊಳ್ಳಲು ತುಂಬಾ ಸುಲಭ. ನೀವು ಐಫೋನ್ ಮತ್ತು ಮ್ಯಾಕ್ ಬುಕ್‌ನಲ್ಲಿ ಡೇಟಾವನ್ನು ಸಂಗ್ರಹಿಸಿಡಬಹುದು.

#4

#4

ಐಓಎಸ್ 7 ಗಿಂತಲೂ ಇದರಲ್ಲಿ ಕೀಬೋರ್ಡ್ ತುಂಬಾ ಭಿನ್ನವಾಗಿದೆ. ನೀವು ಟೈಪ್ ಮಾಡಿದಂತೆ ಪದವನ್ನು ಗುರುತಿಸಲು ಅಥವಾ ಪದದ ಮುಂದುವರಿಕೆಯನ್ನು ಅರಿತುಕೊಳ್ಳಲು ಐಓಎಸ್‌ 8 ಗೆ ಸಾಧ್ಯ. ಆಂಡ್ರಾಯ್ಡ್ ಆವೃತ್ತಿಯಂತೆ ಈ ವ್ಯವಸ್ಥೆ ಒಂದೇ ರೀತಿಯಾಗಿದೆ.

#5

#5

ಐಓಎಸ್ 7 ನಲ್ಲಿ ಆರೋಗ್ಯ ಅಪ್ಲಿಕೇಶನ್ ಇಲ್ಲ. ಐಓಎಸ್ 8 ನ ಬಿಡುಗಡೆಯೊಂದಿಗೆ, ನಿಮ್ಮ ರಕ್ತದೊತ್ತಡ, ನಡಿಗೆಯ ಅಂತರ, ಹೃದಯ ಬಡಿತ ವೇಗ, ಕ್ಯಾಲೋರಿ ನಷ್ಟ ಹೀಗೆ ಹಲವಾರು ಆರೋಗ್ಯ ಅಂಶಗಳನ್ನು ತಿಳಿದುಕೊಳ್ಳಬಹುದು. ಐಓಎಸ್ 7 ಗಿಂತ ಐಓಎಸ್ 8 ಸಾಕಷ್ಟು ವಿಧದಲ್ಲಿ ಮಾರ್ಪಾಡಾಗಿದೆ.

#6

#6

ಐಓಎಸ್ 8 ನಲ್ಲಿ, ನಿಮ್ಮ ಕುಟುಂಬದ ಆರು ಜನರೊಂದಿಗೆ ಹಂಚಿಕೊಳ್ಳುವ ಅಪ್ಲಿಕೇಶನ್ ಅನ್ನು ವಿನ್ಯಾಸಪಡಿಸಲಾಗಿದೆ. ಸ್ಟೋರ್‌ನಿಂದ ಏನನ್ನಾದರೂ ಡೌನ್‌ಲೋಡ್ ಮಾಡುವುದಿದ್ದರೆ ಅಥವಾ ಖರೀದಿಸುವವರಾಗಿದ್ದರೆ, ಕ್ರೆಡಿಟ್ ಕಾರ್ಡ್ ಹೊಂದಿರುವವರ ಅನುಮತಿ ಅಗತ್ಯವಾಗಿರುತ್ತದೆ. ಇದು ಐಓಎಸ್ 7 ನಲ್ಲಿ ಕಂಡುಬರುವುದಿಲ್ಲ.

#7

#7

ಬಹು ಟಾಸ್ಕ್ ಸ್ಕ್ರೀನ್, ಅಪ್ಲಿಕೇಶನ್ ಅನ್ನು ಚಾಲನೆ ಮಾಡದೆ ಅಧಿಸೂಚನೆಗಳು, ಸರಿಯಾದ ಫಲಿತಾಂಶಗಳಿಗಾಗಿ ಸಫಾರಿ ಬ್ರೌಸರ್ ನವೀಕರಣ, ಫೋಟೋಗಳನ್ನು ಸಂಪಾದಿಸುವಲ್ಲಿ ಹೆಚ್ಚಿನ ಅಭಿವೃದ್ಧಿ ಮುಂತಾದ ವ್ಯವಸ್ಥೆಗಳನ್ನು ಹೊಸ ಐಓಎಸ್ 8 ನಲ್ಲಿ ಕಾಣಬಹುದಾಗಿದೆ.

Best Mobiles in India

English summary
This article tells about iOS 8 vs iOS 7: Know the Latest Difference.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X