ಜಿಯೋ 4ಜಿ ಡೇಟಾ ಚೆಕ್ ಮಾಡುವುದು ಹೇಗೆ?

ಜಿಯೋ ಯುಎಸ್‌ಎಸ್‌ಡಿ ಕೋಡ್ಸ್, ಬ್ಯಾಲೆನ್ಸ್ ತನಿಖೆ, 4ಜಿ ಡೇಟಾ ಬಳಕೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸುತ್ತಿದ್ದೇವೆ.

By Shwetha
|

ಜಿಯೋದ ಆಫರ್‌ಗಳನ್ನು ಬಳಕೆದಾರರು ಅರಿತುಕೊಂಡ ನಂತರ ಕೆಲವರು ಉಚಿತವಾಗಿ ಇನ್ನು ಕೆಲವರು ಸಿಮ್‌ಗೆ ಪಾವತಿ ಮಾಡಿ ಜಿಯೋ ಸಿಮ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷದ ಡಿಸೆಂಬರ್ 31 ರವರೆಗೆ ಜಿಯೋದ ಆಫರ್ ಬಳಕೆದಾರರಿಗೆ ದೊರೆಯಲಿದೆ. ವೆಲ್‌ಕಮ್ ಆಫರ್ ಮುಗಿಯುತ್ತಿದ್ದಂತೆ ಸರ್ವೀಸ್ ಪ್ರೊವೈಡರ್ ಒದಗಿಸಲಿರುವ ಪ್ಲಾನ್‌ಗಳನ್ನು ನೀವು ಪಾವತಿಸಿ ಪಡೆದುಕೊಳ್ಳಬೇಕು.

ಓದಿರಿ: ಐಫೋನ್ 8 ನಲ್ಲಿ ಕಂಡುಬರಲಿದೆ ಅತ್ಯದ್ಭುತ ಬದಲಾವಣೆಗಳು

ಈ ಯೋಜನೆಗಳು ರೂ 149 ರಿಂದ ಆರಂಭಗೊಂಡು ರೂ 4,999 ರವರೆಗೆ ಇದ್ದು 28 ದಿನಗಳ ವ್ಯಾಲಿಡಿಯನ್ನು ಪಡೆದುಕೊಂಡಿದೆ. ಜನವರಿ 1, 2017 ರ ನಂತರ ನಿಮ್ಮ ಡೇಟಾ ಬಳಕೆಯ ಮೇಲೆ ನಿಗಾ ಇರಿಸಬೇಕಾಗುತ್ತದೆ. ಜಿಯೋ ಯುಎಸ್‌ಎಸ್‌ಡಿ ಕೋಡ್ ಅನ್ನು ಬಿಡುಗಡೆ ಮಾಡಿದ್ದು ಯಾವುದೇ ತೊಂದರೆ ಇಲ್ಲದೆ ಡೇಟಾ ಪರಿಶೀಲನೆಯನ್ನು ನಿಮಗೆ ನಡೆಸಬಹುದಾಗಿದೆ.

ಓದಿರಿ: ಜಿಯೋ ಸಿಮ್ ಕುರಿತಾದ ಮತ್ತಷ್ಟು ರಹಸ್ಯಗಳು

ನಿಮ್ಮ ಮುಖ್ಯ ಬ್ಯಾಲೆನ್ಸ್ ಪರಿಶೀಲಿಸಿ ನಿಮ್ಮ ಮುಖ್ಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಎರಡು ಹಂತಗಳಿವೆ. *333# ಎಂಬುದಾಗಿ ಡಯಲ್ ಮಾಡುವುದರಿಂದ ನಿಮ್ಮ ಜಿಯೋ ಸಂಖ್ಯೆಯ ಮುಖ್ಯ ಬ್ಯಾಲೆನ್ಸ್ ಅನ್ನು ಇದು ತೋರಿಸುತ್ತದೆ. ಪರ್ಯಾಯವಾಗಿ 55333 ಗೆ ಉಚಿತವಾಗಿ MBAL ಎಂಬುದಾಗಿ ಸಂದೇಶ ಕಳುಹಿಸಿ ಇದು ಎಸ್‌ಎಮ್‌ಎಸ್ ಮೂಲಕ ಬ್ಯಾಲೆನ್ಸ್ ವರದಿಯನ್ನು ನಿಮಗೆ ತಿಳಿಸುತ್ತದೆ.

ಪ್ರಿಪೈಡ್ ಬ್ಯಾಲೆನ್ಸ್ ಮತ್ತು ವ್ಯಾಲಿಡಿಯನ್ನು ಪರಿಶೀಲಿಸಿಕೊಳ್ಳಿ

ಪ್ರಿಪೈಡ್ ಬ್ಯಾಲೆನ್ಸ್ ಮತ್ತು ವ್ಯಾಲಿಡಿಯನ್ನು ಪರಿಶೀಲಿಸಿಕೊಳ್ಳಿ

199 ಗೆ BAL ಎಂಬುದಾಗಿ ಎಸ್ಎಮ್‌ಎಸ್ ಕಳುಹಿಸಿ ಪ್ರಿಪೈಡ್ ಬ್ಯಾಲೆನ್ಸ್ ವಿವರಗಳನ್ನು ನಿಮಗೆ ಅರಿತುಕೊಳ್ಳಬಹುದಾಗಿದೆ.

ಬಿಲ್ ಅಮೌಂಟ್ ತಿಳಿದುಕೊಳ್ಳಲು

ಬಿಲ್ ಅಮೌಂಟ್ ತಿಳಿದುಕೊಳ್ಳಲು

ನಿಮ್ಮ ಪೋಸ್ಟ್‌ಪೇಡ್ ಜಿಯೋ ಸೇವೆಯ ಬಿಲ್ ಪಾವತಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. 199 ಗೆ BILL ಎಂಬುದಾಗಿ ಎಸ್ಎಮ್‌ಎಸ್ ಕಳುಹಿಸಿ ಬಿಲ್ ಮೊತ್ತವನ್ನು ಅರಿತುಕೊಳ್ಳಬಹುದಾಗಿದೆ. ಸೇವೆಯನ್ನು ಬಳಸಲು ನಿಮಗೆ ಎಷ್ಟು ಮೊತ್ತವನ್ನು ವಿಧಿಸಲಾಗಿದೆ ಎಂಬುದನ್ನು ನೀವು ಅರಿತುಕೊಳ್ಳಲಿದ್ದೀರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಾರಿಫ್ ಯೋಜನೆ

ಟಾರಿಫ್ ಯೋಜನೆ

ನೀವು ಚಂದಾದಾರರಾಗಿರುವ ಟಾರಿಫ್ ಪ್ಲಾನ್‌ಗಳ ಬಗ್ಗೆ ನೀವು ಅರಿತುಕೊಂಡಿಲ್ಲ ಎಂದಾದಲ್ಲಿ, 199 ಗೆ MY PLAN ಎಂಬುದಾಗಿ ಸಂದೇಶವನ್ನು ಕಳುಹಿಸಿ ನಿಮಗೆ ಇದರ ಕುರಿತು ಅರಿತುಕೊಳ್ಳಬಹುದಾಗಿದೆ

ನಿಮ್ಮ ಜಿಯೋ ಸಂಖ್ಯೆಯನ್ನು ಅರಿತುಕೊಳ್ಳಲು

ನಿಮ್ಮ ಜಿಯೋ ಸಂಖ್ಯೆಯನ್ನು ಅರಿತುಕೊಳ್ಳಲು

ಯುಎಸ್‌ಎಸ್‌ಡಿ ಕೋಡ್ *1# ಅನ್ನು ಡಯಲ್ ಮಾಡಿಕೊಂಡು ನಿಮ್ಮ ಜಿಯೋ ಸಂಖ್ಯೆಯನ್ನು ಕಂಡುಕೊಳ್ಳಬಹುದಾಗಿದೆ.

ಜಿಯೋದಲ್ಲಿ 4ಜಿ ಡೇಟಾ ಬಳಕೆ

ಜಿಯೋದಲ್ಲಿ 4ಜಿ ಡೇಟಾ ಬಳಕೆ

ಜಿಯೋ ನಿಮಗೆ 4ಜಿ ಡೇಟಾಗೆ ಮಾತ್ರ ಚಾರ್ಜ್ ಮಾಡುತ್ತದೆ ಇದು ತನ್ನ ಪ್ಲಾನ್‌ನೊಂದಿಗೆ ಉಚಿತ ಮತ್ತು ಅನ್‌ಲಿಮಿಟೆಡ್ ಕರೆಗಳು ಹಾಗೂ ಸಂದೇಶಗಳನ್ನು ಪಡೆದುಕೊಳ್ಳಬಹುದಾಗಿದೆ. ಮಿತಿಯನ್ನು ದಾಟದೇ ಇರಲು ಡೇಟಾ ಬಳಕೆಯ ಮೇಲೆ ನೀವು ನಿಗಾ ಇರಿಸಬೇಕು. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ ಡೇಟಾ ಬಳಕೆಯ ಮೇಲೆ ನಿಗಾ ಇಟ್ಟು ಇದನ್ನು ಅರಿತುಕೊಳ್ಳಬಹುದಾಗಿದೆ. ನಿಮ್ಮ ಫೋನ್‌ನಲ್ಲೂ ಡೇಟಾ ಮಿತಿಯನ್ನು ಹೊಂದಿಸಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
In this article we are giving tips on how to Reliance jio ussd codes and how to check balance 4g data usage.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X