ಕಂಪ್ಯೂಟರ್ ಮೌಸ್ ಬಳಕೆಯಲ್ಲಿಯೂ ಟ್ರಿಕ್ಸ್ ಉಪಯೋಗಿಸಿ!!..ಹೇಗೆ?

ಮೌಸ್‌ ಮೂಲಕ ನಾವು ನಿರ್ವಹಿಸಬಹುದಾದ ಹಲವು ಸಣ್ಣ ಸಣ್ಣ ಕೆಲಸಗಳನ್ನೆ ನಾವು ತಿಳಿದಿರುವುದಿಲ್ಲ!!

|

ಮೌಸ್ ಇಲ್ಲದಿದ್ದರೆ ಕಂಪ್ಯೂಟರ್ ಬಳಕೆ ಎಷ್ಟು ಕಷ್ಟ ಆಗುತ್ತಿತ್ತು ಅಲ್ಲವೇ? ಕಂಪ್ಯೂಟರ್ ಬಳಕೆ ಮಾಡುವಾಗ ಮೌಸ್ ಇರಲೇಬೆಕಿರುವುದು ಸಾಮನ್ಯ ಕಂಪ್ಯೂಟರ್ ಬಳಕೆದಾರರ ಅತ್ಯವಶ್ಯಕತೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಮೌಸ್‌ ಮೂಲಕ ನಾವು ನಿರ್ವಹಿಸಬಹುದಾದ ಹಲವು ಸಣ್ಣ ಸಣ್ಣ ಕೆಲಸಗಳನ್ನೆ ನಾವು ತಿಳಿದಿರುವುದಿಲ್ಲ!!

ಹೌದು, ದಿನನಿತ್ಯ ಮೌಸ್ ಬಳಕೆ ಮಾಡುತ್ತಿದ್ದರೂ ಸಹ ಕೆಲವು ಸುಲಭವಾದ ಕಾರ್ಯಗಳನ್ನು ನಾವು ಮೌಸ್‌ ಮೂಲಕ ನಿರ್ವಹಿಸಿರುವುದಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ಮೌಸ್‌ ಮೂಲಕ ನಿರ್ವಹಿಸಬಹುದಾದ ಪರಿಣಾಮಕಾರಿ ಬಳಕೆಯನ್ನು ತಿಳಿಯೋಣ. ತಿಳಿಯಲು ಕೆಳಗಿನ ಸ್ಲೈಡರ್‌ಗಳನ್ನು ನೋಡಿರಿ.!!

ನಿಮಗೆ ಬೇಕಾದಂತೆ ಬದಲಾಯಿಸಿ.!!

ನಿಮಗೆ ಬೇಕಾದಂತೆ ಬದಲಾಯಿಸಿ.!!

ಕಂಟ್ರೋಲ್ ಪ್ಯಾನೆಲ್‌ಗೆ ಹೋಗಿ ಮೌಸ್‌ ಪ್ರಾಪರ್ಟಿಸ್ ಅನ್ನು ತೆರೆದು ಮೌಸ್‌ನ ಕಾರ್ಯಗಳನ್ನು ನಿಮಗೆ ಬೇಕಾದಂತೆ ಕೊಂಚ ಬದಲಾಯಿಸಿಕೊಳ್ಳಲು ಅವಕಾಶವಿದೆ. ಅಲ್ಲಿ ಆಪ್ಷನ್ ಟ್ಯಾಬ್‌ನಲ್ಲಿರುವ 'ಸ್ನಾಪ್ ಟು ಫೀಚರ್' ಅನ್ನು ಆನ್‌ ಮಾಡಿದರೆ ನಿಮ್ಮ ಮೌಸ್‌ ಆಟೋಮ್ಯಾಟಿಕ್‌ ಆಗಿ ಡೈಲಾಗ್‌ ಬಾಕ್ಸ್‌ಗಳ ಕಮಾಂಡ್‌ಗಳಿಗೆ ಓಕೆ ಎನ್ನುತ್ತದೆ.!!

ಸೆಲೆಕ್ಟ್ ಮಾಡುವುದು ಬಹಳ ಸುಲಭ.!!

ಸೆಲೆಕ್ಟ್ ಮಾಡುವುದು ಬಹಳ ಸುಲಭ.!!

ಯಾವುದಾದರೂ ಪದದ ಮೇಲೆ ಎರಡು ಬಾರಿ ಮೌಸ್‌ ಕ್ಲಿಕ್‌ ಮಾಡಿದರೆ ಆ ಪದ ಸೆಲೆಕ್ಟ್ ಆಯ್ಕೆಯಾಗುತ್ತದೆ. ಇದೇ ರೀತಿ ಪದದ ಮೇಲೆ ಮೂರು ಬಾರಿ ಕ್ಲಿಕ್‌ ಮಾಡಿದರೆ ಆ ಪ್ಯಾರಾಗ್ರಾಫ್‌ ಪೂರ್ತಿ ಸೆಲೆಕ್ಟ್ ಆಗುತ್ತದೆ.!! ಕಂಟ್ರೋಲ್ ಕೀ ಹಿಡಿದು ಮೌಸ್‌ನ ಎಡ ಬಟನ್‌ ಅನ್ನು ಅದುಮಿ ನೀವು ಹಲವು ಕಾರ್ಯಗಳನ್ನು ಮಾಡಬಹುದು. ಪದ, ವಾಕ್ಯ, ಪ್ಯಾರಾ, ಪೂರ್ತಿ ಪುಟವನ್ನು ಸೆಲೆಕ್ಟ್ ಮಾಡಿ ಕಟ್‌ ಅಥವಾ ಕಾಪಿ ಮಾಡಲು ಬಳಕೆ ಮಾಡಬಹುದು.

ಗೂಗಲ್‌ನಲ್ಲಿ ಹುಡುಕಿ!!

ಗೂಗಲ್‌ನಲ್ಲಿ ಹುಡುಕಿ!!

ನೀವು ಯಾವುದಾದರೂ ಪದ ಅಥವಾ ವಾಕ್ಯವನ್ನು ಮೌಸ್‌ ಸಹಾಯದಿಂದ ಸೆಲೆಕ್ಟ್ ಮಾಡಿ ಬಲಭಾಗದ ಮೌಸ್‌ ಬಟನ್ ಕ್ಲಿಕ್‌ ಮಾಡಿ. ಅಲ್ಲಿ ಸೆಲೆಕ್ಟ್ ಆದ ಪದ ಅಥವಾ ವಾಕ್ಯವನ್ನು ಗೂಗಲ್‌ನಲ್ಲಿ ಹುಡುಕುವ ಆಯ್ಕೆ ಕಾಣಿಸಿಕೊಳ್ಳುತ್ತದೆ. ಇನ್ನು ಕಂಪ್ಯೂಟರ್‌ ವೆಬ್‌ ವಿಂಡೋದ ಮೇಲ್ಗಡೆ ಮೌಸ್‌ ಅನ್ನು ಡಬಲ್‌ ಕ್ಲಿಕ್‌ ಮಾಡಿದರೆ ಆ ವಿಂಡೋ ಕಿರಿದು ಅಥವಾ ಹಿರಿದಾಗುತ್ತದೆ.

ಒಮ್ಮೆಯೇ ವಿಂಡೋ ಟ್ಯಾಬ್‌ ಕ್ಲೋಸ್ ಮಾಡಿ.!!

ಒಮ್ಮೆಯೇ ವಿಂಡೋ ಟ್ಯಾಬ್‌ ಕ್ಲೋಸ್ ಮಾಡಿ.!!

ನೀವು ಹಲವು ವಿಂಡೋ ಟ್ಯಾಬ್‌ಗಳನ್ನು ಒಮ್ಮೆಯೇ ಕ್ಲೋಸ್ ಮಾಡಿದಾಗ 'ನೀವು ನಿಜಕ್ಕೂ ಇದನ್ನು ಕ್ಲೋಸ್' ಮಾಡಲು ಬಯಸುತ್ತೀರಾ' ಎಂಬ ಆಯ್ಕೆಗಳು ಮೂಡುತ್ತದೆ. ಸ್ನಾಪ್ ಟು ಫೀಚರ್‌ಆನ್‌ ಇದ್ದರೆ ನಿಮ್ಮ ಮೌಸ್‌ ಕರ್ಸರ್‌ ಆಟೋಮ್ಯಾಟಿಕ್‌ ಆಗಿ ಈ ಡೈಲಾಗ್‌ಗೆ ಓಕೆ ಹೇಳುತ್ತದೆ.

Best Mobiles in India

English summary
As you probably know, I'm a huge fan of keyboard shortcuts. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X