100% ನಿಜ, ಈ ಟಿಪ್ಸ್ ಅನುಸರಿಸಿ ಫೋನ್ ಬ್ಯಾಟರಿ ಉಳಿಸಿ

By Shwetha
|

ನಿಮ್ಮ ಸ್ಮಾರ್ಟ್‌ಫೋನ್ ಪೂರ್ಣವಾಗಿ ಚಾರ್ಜ್ ಆದ ನಂತರ ಕೂಡ ಫೋನ್‌ನಲ್ಲಿ ಬ್ಯಾಟರಿ ಸಂಕೇತ ಇಳಿಕೆಯಾಗುತ್ತಿದೆ ಎಂದಾದಲ್ಲಿ ಪ್ರತಿಯೊಬ್ಬರೂ ಬೇರೆ ಬೇರೆ ಉತ್ತರವನ್ನೇ ನೀಡುತ್ತಾರೆ. ನೀವು 100% ಚಾರ್ಜ್ ಅನ್ನು ಫೋನ್‌ಗೆ ಮಾಡಿದ್ದರೂ ಬ್ಯಾಟರಿ ಸೋರಿಕೆ ನಿಮಗೆ ಗೊತ್ತಿಲ್ಲದೆಯೇ ನಡೆಯುತ್ತಿರುತ್ತದೆ.

ಓದಿರಿ: ಜಿಯೋಫೈ, ವರ್ಸಸ್ 4ಜಿ ಸ್ಮಾರ್ಟ್‌ಫೋನ್ ನಿಮ್ಮ ಆಯ್ಕೆ ಯಾವುದು?

ಹಾಗಿದ್ದರೆ ನೀವು ಮಾಡುತ್ತಿರುವ ತಪ್ಪೇನು? ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಎಲ್ಲಿ ಖರ್ಚಾಗುತ್ತಿದೆ ಎಂಬುದನ್ನು ಕಂಡುಕೊಳ್ಳಲು ನೀವು ಏನು ಮಾಡಬೇಕು? ಏನು ಮಾಡಬಾರದು? ಎಂಬುದನ್ನೇ ಇಲ್ಲಿ ಚರ್ಚಿಸಲಿರುವೆವು. ಬನ್ನಿ ಅದೇನು ಎಂಬುದನ್ನು ಕಂಡುಕೊಳ್ಳೋಣ.

ಓದಿರಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಕೀಲಿಕೈ ಈ 10 ಅಂಶಗಳು

ಜಿಪಿಎಸ್ ಆಫ್ ಮಾಡಿ

ಜಿಪಿಎಸ್ ಆಫ್ ಮಾಡಿ

ಆಂಡ್ರಾಯ್ಡ್ ಫೋನ್‌ ಇರಲಿ ಇಲ್ಲವೇ ಐಫೋನ್ ಆಗಿರಲಿ ಜಿಪಿಎಸ್ ಅಥವಾ ಲೊಕೇಶನ್ ಅನ್ನು ಫೋನ್‌ನಲ್ಲಿ ಗುರುತಿಸಲಾಗುತ್ತದೆ. ಇದು ಹೆಚ್ಚುವರಿ ಬ್ಯಾಟರಿಯನ್ನು ಖರ್ಚು ಮಾಡಿಬಿಡುತ್ತದೆ. ನಿಮ್ಮ ಫೋನ್‌ನಿಂದ ಹೆಚ್ಚುವರಿ ಬ್ಯಾಟರಿ ನಿಮಗೆ ಬೇಕು ಎಂದಾದಲ್ಲಿ, ಇದನ್ನು ಆಫ್ ಮಾಡುವುದೇ ಉತ್ತಮ ಉಪಾಯವಾಗಿದೆ.

 ವೈಫೈ ಬಳಸಿ

ವೈಫೈ ಬಳಸಿ

ಸಾಧ್ಯವಾದಷ್ಟು ವೈಫೈ ಬಳಕೆಯನ್ನು ಮಾಡಿ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಸ್ವಯಂಚಾಲಿತವಾಗಿ ವೈಫೈ ಆನ್ ಆಗುವಂತೆ ಫೋನ್ ಸೆಟ್ಟಿಂಗ್ ಅನ್ನು ಪಡೆದುಕೊಂಡಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಸ್ಕ್ರೀನ್ ಅನ್ನು ಆಟೊದಲ್ಲಿರಿಸಿ

ಸ್ಕ್ರೀನ್ ಅನ್ನು ಆಟೊದಲ್ಲಿರಿಸಿ

ಫೋನ್‌ನಲ್ಲಿ ಆಟೊ ಬ್ರೈಟ್‌ನೆಸ್ ಅನ್ನು ಆಫ್ ಮಾಡಿಡುವುದು ಉತ್ತಮವಾದ ವಿಚಾರವಾಗಿದೆ. ನೀವು ಸಾಧ್ಯವಾದಷ್ಟು ಫೋನ್ ಸ್ಕ್ರೀನ್‌ನ ಬ್ರೈಟ್‌ನೆಸ್ ಅನ್ನು ಕಡಿಮೆ ಮಾಡಿ. ಇದರಿಂದ ಕೂಡ ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ನಿಮಗೆ ಉಳಿಸಬಹುದಾಗಿದೆ.

ಬೇಡದೇ ಇರುವ ಅಪ್ಲಿಕೇಶನ್ ತೆಗೆದುಹಾಕಿ

ಬೇಡದೇ ಇರುವ ಅಪ್ಲಿಕೇಶನ್ ತೆಗೆದುಹಾಕಿ

ಆಂಡ್ರಾಯ್ಡ್ ಇಲ್ಲವೇ ಐಫೋನ್ ಆಗಿರಲಿ ಕೆಲವೊಂದು ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನ ಬ್ಯಾಟರಿಗೆ ಮಾರಕವಾಗಿ ಪರಿವರ್ತಿಸಲಿದೆ. ನಿಮ್ಮ ಅಪ್ಲಿಕೇಶನ್‌ಗಳು ಶೇಕಡಾ 10 ಕ್ಕಿಂತ ಅಧಿಕ ಬ್ಯಾಟರಿಯನ್ನು ಬಳಸಿಕೊಳ್ಳುತ್ತಿದೆ ಎಂದಾದಲ್ಲಿ ಇಂತಹ ಅಪ್ಲಿಕೇಶನ್‌ಗಳನ್ನು ನಿವಾರಿಸಿಕೊಳ್ಳಿ.

ಫೇಸ್‌ಬುಕ್ ಬಳಕೆ ಕಡಿಮೆ ಮಾಡಿ

ಫೇಸ್‌ಬುಕ್ ಬಳಕೆ ಕಡಿಮೆ ಮಾಡಿ

ಫೋನ್‌ನ ಬ್ಯಾಟರಿ ಜೀವನಕ್ಕೆ ಅಪಾಯಕಾರಿಯಾಗಿ ಫೇಸ್‌ಬುಕ್ ಪರಿಣಮಿಸಲಿದೆ. ಆದಷ್ಟು ಫೇಸ್‌ಬುಕ್ ಅಪ್ಲಿಕೇಶನ್‌ನ ಬಳಕೆಯನ್ನು ಫೋನ್‌ನಲ್ಲಿ ಕಡಿಮೆ ಮಾಡಿ.

ಬ್ಯಾಟರಿ ಸರ್ವರ್ ಮೋಡ್ ಬಳಸಿ

ಬ್ಯಾಟರಿ ಸರ್ವರ್ ಮೋಡ್ ಬಳಸಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಫೋನ್‌ಗಳು ಬ್ಯಾಟರಿ ಸರ್ವರ್ ಮೋಡ್‌ನಲ್ಲಿ ಬರುತ್ತಿವೆ. ಇದನ್ನು ಆನ್ ಮಾಡಿದಾಗ ಡಿವೈಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೇಡದ ಅಪ್ಲಿಕೇಶನ್‌ಗಳನ್ನು ಈ ಮೋಡ್ ನಿಲ್ಲಿಸುತ್ತದೆ.

Best Mobiles in India

English summary
These steps, ideally, shouldn't be required. But in case you need more battery life you can try them.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X