ವಾಟ್ಸಾಪ್ ಚಾಟ್ ಮರೆಮಾಡುವುದು ಹೇಗೆ?

By Shwetha
|

ವಾಟ್ಸಾಪ್ ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಬಳಸುವ ಅಪ್ಲಿಕೇಶನ್ ಎಂದೇ ಪ್ರಸಿದ್ಧಗೊಂಡಿದೆ. ಆದರೆ ನಿಮ್ಮದೇ ಆದ ಗೌಪ್ಯತಾ ಅಂಶಗಳನ್ನು ನೀವು ಈ ಅಪ್ಲಿಕೇಶನ್‌ನಲ್ಲಿ ಅನುಸರಿಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಗೌಪ್ಯ ವಾಟ್ಸಾಪ್ ಸಂದೇಶಗಳನ್ನು ಬೇರೆಯವರು ಓದಲು ನೀವು ಇಚ್ಛಿಸುವುದಿಲ್ಲ.

ಓದಿರಿ: ಆಂಡ್ರಾಯ್ಡ್ ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?

ಮೋಸದ ಕಣ್ಣುಗಳಿಂದ ನಿಮ್ಮ ಚಾಟ್ ಅನ್ನು ಕಾಪಾಡಿಕೊಳ್ಳಲು ನೀವು ಕೆಲವೊಂದು ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡದೆಯೇ ನಿಮ್ಮ ಸಂವಾದಗಳನ್ನು ಮರೆಮಾಡುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿದುಕೊಳ್ಳಲಿದ್ದೇವೆ.

ನೀವು ಹೈಡ್ ಮಾಡಲು ಬಯಸುವ ಚಾಟ್ ಆರಿಸಿ

ನೀವು ಹೈಡ್ ಮಾಡಲು ಬಯಸುವ ಚಾಟ್ ಆರಿಸಿ

ಮೆಸೆಂಜರ್‌ನಲ್ಲಿ ನೀವು ಯಾವ ಚಾಟ್ ಅನ್ನು ಹೈಡ್ (ಮರೆಮಾಡಲು) ಬಯಸುತ್ತೀರಿ ಎಂಬುದನ್ನು ಆರಿಸಿಕೊಳ್ಳಿ. ಸಂವಾದದ ಮೇಲೆ ದೀರ್ಘವಾಗಿ ಒತ್ತುವುದರ ಮೂಲಕ ಚಾಟ್ ಆಯ್ಕೆಮಾಡಿಕೊಳ್ಳಬಹುದಾಗಿದೆ.

ಸಂವಾದವನ್ನು ಆರ್ಕೈವ್ ಮಾಡಿ

ಸಂವಾದವನ್ನು ಆರ್ಕೈವ್ ಮಾಡಿ

ಸಂವಾದವನ್ನು ಒಮ್ಮೆ ನೀವು ಆಯ್ಕೆಮಾಡಿದ ನಂತರ, ಪರದೆಯ ಬಲ ಮೇಲ್ಭಾಗದಲ್ಲಿ ನೀವು ಮೂರು ಆಪ್ಶನ್ ಅನ್ನು ಪಡೆದುಕೊಳ್ಳುತ್ತೀರಿ.

ಆರ್ಕೈವ್ ಆಪ್ಶನ್

ಆರ್ಕೈವ್ ಆಪ್ಶನ್

ಇದು ನಿಮ್ಮನ್ನು ಮೆನುವಿಗೆ ತೆಗೆದುಕೊಂಡು ಹೋಗುತ್ತದೆ, ಒಂದು ಸಂವಾದವನ್ನು ಮ್ಯೂಟ್ ಮಾಡಲು ಇನ್ನೊಂದು ಸಂವಾದವನ್ನು ಆರ್ಕೈವ್ ಮಾಡಲು. ಚಿತ್ರದಲ್ಲಿ ತೋರಿಸಿರುವಂತೆ ಆರ್ಕೈವ್ ಆಪ್ಶನ್ ಅನ್ನು ನೀವು ಕ್ಲಿಕ್ ಮಾಡಬೇಕಾಗುತ್ತದೆ.

ಒಂದೇ ಹಂತದಲ್ಲಿ ಎಲ್ಲಾ ಸಂದೇಶಗಳನ್ನು ಆರ್ಕೈವ್ ಮಾಡಿ

ಒಂದೇ ಹಂತದಲ್ಲಿ ಎಲ್ಲಾ ಸಂದೇಶಗಳನ್ನು ಆರ್ಕೈವ್ ಮಾಡಿ

ನೀವು ಹೆಚ್ಚು ಸಂದೇಶಗಳನ್ನು ಆರ್ಕೈವ್ ಮಾಡಬೇಕು ಎಂದಾದಲ್ಲಿ, ಒಂದೇ ಹಂತದಲ್ಲಿ ಇದನ್ನು ಮಾಡಬಹುದಾಗಿದೆ.

ವಾಟ್ಸಾಪ್ ಮೆನು ಮತ್ತು ಚಾಟ್

ವಾಟ್ಸಾಪ್ ಮೆನು ಮತ್ತು ಚಾಟ್

ಸೆಟ್ಟಿಂಗ್ಸ್ > ವಾಟ್ಸಾಪ್ ಮೆನು ಮತ್ತು ಚಾಟ್ ಮೇಲೆ ಕ್ಲಿಕ್ ಮಾಡಿ > ಚಾಟ್ ಸೆಟ್ಟಿಂಗ್ಸ್‌ಗೆ ಹೋಗಿ. ಇಲ್ಲಿ ನಿಮಗೆ "ಆರ್ಕೈವ್ ಆಲ್" ಆಪ್ಶನ್ ದೊರೆಯುತ್ತದೆ.

ಎಲ್ಲಾ ಚಾಟ್‌ಗಳನ್ನು ಅನ್‌ಆರ್ಕೈವ್ ಮಾಡುವುದು ಸಾಧ್ಯವೇ?

ಎಲ್ಲಾ ಚಾಟ್‌ಗಳನ್ನು ಅನ್‌ಆರ್ಕೈವ್ ಮಾಡುವುದು ಸಾಧ್ಯವೇ?

ವಾಟ್ಸಾಪ್‌ನ ಚಾಟ್ ಟ್ಯಾಬ್‌ನಲ್ಲಿ, ಆರ್ಕೈವ್ಡ್ ಚಾಟ್‌ಗಳು ಇವೆಯೇ ಎಂಬುದನ್ನು ನೋಡಲು ಕೆಳಭಾಗದವರೆಗೆ ನೀವು ಸ್ಕ್ರಾಲ್ ಮಾಡಬೇಕಾಗುತ್ತದೆ.

ಅನ್‌ಆರ್ಕೈವ್

ಅನ್‌ಆರ್ಕೈವ್

ನಿಮಗೆ ಅನ್‌ಆರ್ಕೈವ್ ಮಾಡಲು ಇದ್ದಲ್ಲಿ ಇಲ್ಲಿ, ಸಂವಾದದ ಮೇಲೆ ದೀರ್ಘವಾಗಿ ಒತ್ತಿರಿ. ನಂತರ, ಆರ್ಕೈವ್ ಆಪ್ಶನ್ ಮೇಲೆ ಸ್ಪರ್ಶಿಸಿ. ನಿಮ್ಮ ಕೆಲಸ ಆದಂತೆಯೇ.

ಎಲ್ಲಾ ಚಾಟ್‌ಗಳನ್ನು ಅನ್‌ಆರ್ಕೈವ್ ಮಾಡುವುದು

ಎಲ್ಲಾ ಚಾಟ್‌ಗಳನ್ನು ಅನ್‌ಆರ್ಕೈವ್ ಮಾಡುವುದು

ಚಾಟ್ ಸೆಟ್ಟಿಂಗ್ಸ್‌ಗೆ ಹೋಗುವುದರ ಮೂಲಕ ಎಲ್ಲಾ ಚಾಟ್‌ಗಳನ್ನು ನಿಮಗೆ ಅನ್‌ಆರ್ಕೈವ್ ಮಾಡಬಹುದಾಗಿದೆ.

ಅನ್‌ಆರ್ಕೈವ್

ಅನ್‌ಆರ್ಕೈವ್

ಮೂರನೇ ಹಂತದಲ್ಲಿ ನಾವು ತಿಳಿಸಿರುವಂತೆ ಅನ್‌ಆರ್ಕೈವ್ ಎಂಬುದಾಗಿ ಸೂಚಿಸಿರುವ ಆಪ್ಶನ್ ಅನ್ನು ಕ್ಲಿಕ್ ಮಾಡುವ ಮೂಲಕ ಇದನ್ನು ನಿರ್ವಹಿಸಬಹುದಾಗಿದೆ.

Best Mobiles in India

English summary
Here, you will get to know the steps involved in archiving a WhatsApp conversation. Take a look at it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X