ಆಧಾರ್ ಇ-ಕೆವೈಸಿ ಸೇವೆ ಏಕೆ ಪಡೆಯಬೇಕು? ನಿಮ್ಮ ಭವಿಷ್ಯಕ್ಕೆ ಏನಿದರ ಕೊಡುಗೆ ತಿಳಿಯಿರಿ?

ಬ್ಯಾಂಕ್ ವ್ಯವಹಾರ, ಸರ್ಕಾರಿ ಸಂಬಂಧಿತ ಮತ್ತು ಬ್ಯುಸಿನೆಸ್ ವ್ಯವಹಾರ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಾಗ "ನಿಮ್ಮ ಗ್ರಾಹಕ ಗುರುತಿಸಿ" ಕ್ರಮವನ್ನು ಅನುಸರಿಸಬೇಕಾಗುತ್ತದೆ.

By Bhaskar
|

ಆಧಾರ್ ಇ-ಕೆವೈಸಿ ಪ್ರಕ್ರಿಯೆ ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಸೇವಾಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಹೇಳಿರುವುದು ಅಕ್ಷರಸಹ ಸತ್ಯ.! ಮಾರುಕಟ್ಟೆಯಲ್ಲಿ ಹೊಸ ನಾವಿನ್ಯತೆಗೆ, ಕಾಗದ ರಹಿತ ವ್ಯವಸ್ಥೆಗೆ ನಾಂದಿ ಹಾಡಲಿರುವ "ನಿಮ್ಮ ಗ್ರಾಹಕ ಗುರುತಿಸಿ" (KYC) ಎಂಬುದು ಗ್ರಾಹಕರ ಗುರುತು/ದಾಖಲಾತಿಗಳನ್ನು ಪರಿಶೀಲಿಸುವ ಒಂದು ಪ್ರಕ್ರಿಯೆ.

ಬ್ಯಾಂಕ್ ವ್ಯವಹಾರ, ಸರ್ಕಾರಿ ಸಂಬಂಧಿತ ಮತ್ತು ಬ್ಯುಸಿನೆಸ್ ವ್ಯವಹಾರ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಾಗ "ನಿಮ್ಮ ಗ್ರಾಹಕ ಗುರುತಿಸಿ" ಕ್ರಮವನ್ನು ಅನುಸರಿಸಬೇಕಾಗುತ್ತದೆ. ಜನಧನ್ ಮತ್ತು ಮುದ್ರಾ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯುವಾಗ ಇದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ(ಯುಐಡಿಎಐ) ಗುರುತಿನ ದಾಖಲಾತಿಯಾಗಿ ಪ್ರಮುಖ ಪಾತ್ರವಹಿಸುತ್ತದೆ.

ಆಧಾರ್ ಕಳೆದರೆ ಆನ್‌ಲೈನ್‌ನಲ್ಲಿ 5 ನಿಮಿಷದಲ್ಲಿ ಡೌನ್‌ಲೋಡ್ ಮಾಡಿ!! ಹೇಗೆ ತಿಳಿಯಿರಿ?

ಹಾಗಾಗಿ ಪ್ರತಿಯೊಬ್ಬ ಭಾರತೀಯ ಆಧಾರ್ ಇ-ಕೆವೈಸಿ ಸೇವೆಯನ್ನು ಪಡೆಯಬೇಕಿದ್ದು, "ನಿಮ್ಮ ಗ್ರಾಹಕ ಗುರುತಿಸಿ" ಪ್ರಯೋಜನಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

 ನಕಲಿ ದಾಖಲಾತಿಗಳಿಗೆ ಪರಿಹಾರ

ನಕಲಿ ದಾಖಲಾತಿಗಳಿಗೆ ಪರಿಹಾರ

ಪ್ರಸ್ತುತ ನಕಲಿ ದಾಖಲಾತಿಗಳ ಸಮಸ್ಯೆ ಎಲ್ಲೆಡೆ ಹರಡಿದೆ. ಇ-ಕೆವೈಸಿ ಪ್ರಕ್ರಿಯೆ ಅಳವಡಿಸುವುದರಿಂದ ಇರುವ ನಕಲಿ ದಾಖಲಾತಿಗಳ ಹಾವಳಿ ಕಡಿಮೆಯಾಗಲಿದೆ. ಮಧ್ಯಸ್ಥಗಾರರ ಕುತಂತ್ರದಿಂದಾಗಿ ಗುರುತಿನ ಚೀಟಿಗಳಲ್ಲಿ ಅನೇಕ ವಂಚನೆಗಳು ಆಗುತ್ತಿರುತ್ತವೆ. ಇನ್ನು ಮುಂದೆ ಯುಐಡಿಎಐ ಮೂಲಕ ನೇರವಾಗಿ ಇ-ಕೆವೈಸಿ ದಾಖಲಾತಿಗಳನ್ನು ಒದಗಿಸುವುದರಿಂದ ಇಂತಹ ನಕಲಿ ದಾಖಲಾತಿ ಹಾಗೂ ವಂಚನೆಗಳು ಇಲ್ಲವಾಗುತ್ತವೆ.

KYC ವ್ಯವಹಾರಗಳು ಸುರಕ್ಷಿತ

KYC ವ್ಯವಹಾರಗಳು ಸುರಕ್ಷಿತ

ನಿವಾಸ ವಿಳಾಸ ದೃಢೀಕರಣ ಹಾಗೂ ಡಿಜಿಟಲ್ ಸಹಿಯನ್ನು ಇ-ಕೆವೈಸಿ ಪ್ರಕ್ರಿಯೆ ಮುಖಾಂತರ ಮುನ್ನಡೆಸುವುದರಿಂದ ಇ-ಕೆವೈಸಿ ಎಲ್ಲಾ ವ್ಯವಹಾರಗಳನ್ನು ಸುರಕ್ಷಿತವಾಗಿ ನಿರ್ವಹಿಸುತ್ತದೆ.

ದತ್ತಾಂಶಗಳ ನಿಯಂತ್ರಣ

ದತ್ತಾಂಶಗಳ ನಿಯಂತ್ರಣ

ಸೇವಾದಾರರು ಪರಿಶೋಧನೆಗಾಗಿ ಇ-ಕೆವೈಸಿ ಎಲ್ಲಾ ವಿನಂತಿಗಳನ್ನು ಸಚಿವಾಲಯಕ್ಕೆ ಒದಗಿಸಬಹುದು. ಸಚಿವಾಲಯ/ನಿಯಂತ್ರಕರು ಇ-ಕೆವೈಸಿ ದತ್ತಾಂಶಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು ಸಂಗ್ರಹ ಅವಧಿ, ಸಂಗ್ರಹ ವಿಧಾನ ಹಾಗೂ ಇನ್ನಿತರ ವಿಷಯಗಳ ನಿಯಮಗಳನ್ನು ರೂಪಿಸಬಹುದು

ಗ್ರಾಹಕರ ಅನುಮತಿ

ಗ್ರಾಹಕರ ಅನುಮತಿ

ಗ್ರಾಹಕರ ಅನುಮತಿಯೊಂದಿಗೆ ಮಾತ್ರ ಇ-ಕೆವೈಸಿ ದತ್ತಾಂಶಗಳನ್ನು ಆಧಾರ್ ದೃಢೀಕರಣದ ಮೂಲಕ ಮಾತ್ರ ಒದಗಿಸಲಾಗುತ್ತದೆ. ನಿವಾಸ ಮತ್ತು ದಾಖಲಾತಿಗಳ ಗೌಪ್ಯತೆಯನ್ನು ರಕ್ಷಿಸುತ್ತದೆ.

ಕಡಿಮೆ ವೆಚ್ಚ

ಕಡಿಮೆ ವೆಚ್ಚ

ಸಾಮಾನ್ಯವಾಗಿ ಇ-ಕೆವೈಸಿ ಹೊರತು ಪಡಿಸಿದ ಯಾವುದೇ ಪ್ರಕ್ರಿಯೆಗಳಲ್ಲೂ ಹೆಚ್ಚೆಚ್ಚು ವೆಚ್ಚಗಳನ್ನು ಗ್ರಾಹಕರು ಭರಿಸುವುದನ್ನು ನೋಡಿದ್ದೇವೆ. ಆದರೆ ಇ-ಕೆವೈಸಿಯಲ್ಲಿ ಕಾಗದ ಪರಿಶೀಲನಾ ಪ್ರಕ್ರಿಯೆ, ಕಾರ್ಯನಿರ್ವಹಣೆ ಮತ್ತು ದತ್ತಾಂಶ ಸಂಗ್ರಹಕ್ಕೆ ಯಾವುದೇ ಹೆಚ್ಚಿನ ವೆಚ್ಚ ತಗಲುವುದಿಲ್ಲ ಹಾಗೂ ಭ್ರಷ್ಟಾಚಾರದ ಅವಕಾಶ ಕಡಿಮೆ ಇರುತ್ತದೆ.

ತಕ್ಷಣದ ಕಾರ್ಯ

ತಕ್ಷಣದ ಕಾರ್ಯ

ಇ-ಕೆವೈಸಿ ಒಂದು ಸ್ವಯಂಚಾಲಿತವಾಗಿರುವ ತಕ್ಷಣದ ಪ್ರಕ್ರಿಯೆ ಆಗಿದೆ. ಇ-ಕೆವೈಸಿ ಡೆಟಾ ನೈಜತೆಯಿಂದ ಒಳಗೊಂಡಿರುತ್ತದೆ. ಅಲ್ಲದೇ ಯಾವುದೇ ವ್ಯಕ್ತಿಯ ಹಸ್ತಕ್ಷೇಪ, ಒತ್ತಡಗಳು ಈ ಪ್ರಕ್ರಿಯೆಯಲ್ಲಿ ಇರುವುದಿಲ್ಲ.

Best Mobiles in India

Read more about:
English summary
The UIDAI recently released a report according to which there were over 40 crore Aadhar cards that were issued to individuals within the country until August 2016. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X