ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್‌ ಪೋರ್ಟ್‌ ಮಾಡುವುದು ಹೇಗೆ?

By Suneel
|

ರಿಲಾಯನ್ಸ್‌ ಜಿಯೋ 4G ಸಿಮ್ ಕಾರ್ಡ್‌ ಮತ್ತು ಸೂಪರ್‌ ಫಾಸ್ಟ್ ನೆಟ್‌ವರ್ಕ್‌ ಭಾರತದ‌ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನವನ್ನುಂಟು ಮಾಡಿದೆ. 4G ಸ್ಮಾರ್ಟ್‌ಫೋನ್‌ ಇರುವ ಪ್ರತಿಯೊಬ್ಬರೂ ಸಹ ತಮ್ಮ ಕೈಗೆ ರಿಲಾಯನ್ಸ್ ಜಿಯೋ 4G ಸಿಮ್ ಪಡೆಯಲು ಸಾಲು ಸಾಲಾಗಿ ರಿಲಾಯನ್ಸ್ ಡಿಜಿಟಲ್‌ ಸ್ಟೋರ್‌ಗಳ ಮುಂದೆ ನಿಲ್ಲುತ್ತಿದ್ದಾರೆ. ರಿಲಾಯನ್ಸ್ ಜಿಯೋ ಸಿಮ್ ಖರೀದಿ ನಂತರವು ಸಿಮ್‌ ಆಕ್ಟಿವೇಟ್‌ ಆಗಲು ಸ್ವಲ್ಪ ಸಮಯ ಬೇಕೆ ಬೇಕು.

ಅಂದಹಾಗೆ ರಿಲಾಯನ್ಸ್ ಜಿಯೋ ಕುರಿತ ಹೊಸ ಸುದ್ದಿ ಏನೆಂದರೆ ಇತರೆ ಟೆಲಿಕಾಂಗಳಾದ ಏರ್‌ಟೆಲ್‌, ವೊಡಾಫೋನ್, ಬಿಎಸ್‌ಎನ್‌ಎಲ್‌ ಮುಂತಾದ ಟೆಲಿಕಾಂ ಗ್ರಾಹಕರು ತಮ್ಮ ಮೊಬೈಲ್‌ ನಂಬರ್‌ಗಳನ್ನು ಜಿಯೋಗೆ ಪೋರ್ಟ್‌ ಮಾಡಲು ಓಡಾಡುತ್ತಿದ್ದಾರೆ. ಇತರೆ ಟೆಲಿಕಾಂಗಳಿಂದ ರಿಲಾಯನ್ಸ್ ಜಿಯೋಗೆ ಪೋರ್ಟ್‌ ಆದ ನಂಬರ್‌ಗಳಿಗಂತೂ ಜಿಯೋ ಪ್ರಿವೀವ್‌ ಆಫರ್ ಸಿಗಲಿದೆಯಂತೆ. ಪೋರ್ಟ್‌ ಆದವರು ಸಹ 90 ದಿನಗಳ ಉಚಿತ ಅನ್‌ಲಿಮಿಟೆಡ್ 4G ಡಾಟಾ, ಕರೆ ಮತ್ತು ಮೆಸೇಜ್ ಆಫರ್‌ ಅನ್ನು ಪಡೆಯಬಹುದು. ನೀವು ಪೋರ್ಟ್ ಮಾಡಲು ಬಯಸ್ಸಿದ್ದೇ ಆದಲ್ಲಿ ಲೇಖನದ ಸ್ಲೈಡರ್‌ಗಳಲ್ಲಿನ ಮಾಹಿತಿ ಓದಿರಿ.

ರಿಲಾಯನ್ಸ್ ಜಿಯೋ 4G, ಸಿಮ್ ಉಚಿತದ ಬಗ್ಗೆ ತಿಳಿಯಲೇಬೇಕಾದ 5 ಮಾಹಿತಿಗಳು

ರಿಲಾಯನ್ಸ್ ಜಿಯೋ

ರಿಲಾಯನ್ಸ್ ಜಿಯೋ

ಅಂದಹಾಗೆ ರಿಲಾಯನ್ಸ್ ಜಿಯೋ ಅಧಿಕೃತವಾಗಿ ಇನ್ನೂ ಸಹ ಲಾಂಚ್‌ ಆಗಿಲ್ಲ. ಶೀಘ್ರದಲ್ಲಿ ರಿಲಾಯನ್ಸ್ ಜಿಯೋ ಅಧಿಕೃತವಾಗಿ ಲಾಂಚ್ ಆಗಲಿದ್ದು, ನಂತರ ಇತರೆ ಟೆಲಿಕಾಂ ಬಳಕೆದಾರರು ರಿಲಾಯನ್ಸ್ ಜಿಯೋಗೆ ಮೊಬೈಲ್ ನಂಬರ್‌ ಅನ್ನು ಪೋರ್ಟ್‌ ಮಾಡಿಕೊಳ್ಳಬಹುದು.

ರಿಲಾಯನ್ಸ್ ಜಿಯೋಗೆ ಪೋರ್ಟ್‌

ರಿಲಾಯನ್ಸ್ ಜಿಯೋಗೆ ಪೋರ್ಟ್‌

ರಿಲಾಯನ್ಸ್ ಜಿಯೋಗೆ ಪೋರ್ಟ್‌ ಆಗಲು ಈ ಹಂತಗಳನ್ನು ಅನುಸರಿಸಿ.
* "PORT ಎಂದು ಟೈಪಿಸಿ ಮುಂದೆ ನಿಮ್ಮ 10 ಸಂಖ್ಯೆಯ ಮೊಬೈಲ್‌ ನಂಬರ್ ಟೈಪಿಸಿ 1900 ಗೆ ಮೆಸೇಜ್‌ ಸೆಂಡ್‌ ಮಾಡಿ
* ನಿಮ್ಮ ನಂಬರ್‌ಗೆ ಒಂದು ಕೋಡ್‌ ಬರುತ್ತದೆ
* ಕೋಡ್‌ ಸಹಿತ ನಿಮ್ಮ ಹತ್ತಿರದ ರಿಲಾಯನ್ಸ್ ಡಿಜಿಟಲ್‌ ಸ್ಟೋರ್‌ಗೆ ಭೇಟಿ ನೀಡಿ, ನಿಮ್ಮ ಗುರುತಿನ ಚೀಟಿ ಜೆರಾಕ್ಸ್‌ ಪ್ರತಿ ಮತ್ತು ಫೋಟೋ ನೀಡಿ
* ನಿಮಗೆ ರಿಲಾಯನ್ಸ್ ಜಿಯೋ 4G ಸಿಮ್‌ ಕಾರ್ಡ್‌ ಪ್ರಿವೀಟ್ ಆಫರ್‌ನೊಂದಿಗೆ ಸಿಗುತ್ತದೆ
* 90 ದಿನಗಳ ಅನ್‌ಲಿಮಿಟೆಡ್‌ ಉಚಿತ ಡಾಟಾ, ಕರೆ ಮತ್ತು ಮೆಸೇಜ್‌ ಆಫರ್ ಪಡೆಯಿರಿ

ಮೈಜಿಯೋ ಆಪ್‌ ಡೌನ್‌ಲೋಡ್ ಅಗತ್ಯವಿಲ್ಲ

ಮೈಜಿಯೋ ಆಪ್‌ ಡೌನ್‌ಲೋಡ್ ಅಗತ್ಯವಿಲ್ಲ

ಉಚಿತ ರಿಲಾಯನ್ಸ್‌ ಜಿಯೋ 4G ಸಿಮ್‌ ಖರೀದಿಗೆ ಮುನ್ನ, ಮೈಜಿಯೋ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಅಗತ್ಯವಿಲ್ಲ. ಪೋರ್ಟ್ ಮೆಸೇಜ್‌ ಸೆಂಡ್‌ ನಂತರ ಟೆಲಿಕಾಂ ಸರ್ವೀಸ್ ಒದಗಿಸುವವರಿಂದ ಕೋಡ್‌ ಬರುತ್ತದೆ. ನಂತರ ನೀವು ರಿಲಾಯನ್ಸ್ ಡಿಜಿಟಲ್‌ ಸ್ಟೋರ್‌ಗಳಿಗೆ ಭೇಟಿ ನೀಡಿ ಸಿಮ್ ಅನ್ನು ಉಚಿತವಾಗಿ ಖರೀದಿಸಬಹುದು.

ಪೋರ್ಟ್‌ ಆದವರಿಗೆ ಪ್ರಿವೀವ್ ಆಫರ್‌ ಏನು?

ಪೋರ್ಟ್‌ ಆದವರಿಗೆ ಪ್ರಿವೀವ್ ಆಫರ್‌ ಏನು?

ಇತರೆ ಟೆಲಿಕಾಂ ಬಳಕೆದಾರರು ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್ ಪೋರ್ಟ್‌ ಪಡೆದವರು ಸಹ ಪ್ರಿವೀವ್ ಆಫರ್ ಉಚಿತ 90 ದಿನಗಳ ಅನ್‌ಲಿಮಿಟೆಡ್ ಡಾಟಾ, ಉಚಿತ ಕರೆ ಮತ್ತು ಮೆಸೇಜ್‌ ಆಫರ್ ಸಿಗಲಿದೆ.

ಸರಳವಾಗಿ ಸಿಮ್ ಪಡೆಯಿರಿ

ಸರಳವಾಗಿ ಸಿಮ್ ಪಡೆಯಿರಿ

ರಿಲಾಯನ್ಸ್ ಸಿಮ್‌ ಪಡೆಯುವ ಕ್ರಮವನ್ನು ಸರಳಗೊಳಿಸಿದೆ. ರಿಲಾಯನ್ಸ್ ಡಿಜಿಟಲ್‌ ಸ್ಟೋರ್‌ಗಳಿಗೆ ಭೇಟಿ ನೀಡಿ ನಿಮ್ಮ KYC ಡಾಕ್ಯುಮೆಂಟ್‌ಗಳನ್ನು ನೀಡಿ.

 ಯಾವುದೇ ಕೂಪನ್ ಕೋಡ್‌ ಅಗತ್ಯವಿಲ್ಲ

ಯಾವುದೇ ಕೂಪನ್ ಕೋಡ್‌ ಅಗತ್ಯವಿಲ್ಲ

ಓಪನ್‌ ಸೇಲ್‌ನಲ್ಲಿ ಉಚಿತವಾಗಿ ಸಿಮ್‌ ಅನ್ನು ಯಾವುದೇ ಕೂಪನ್‌ ಕೋಡ್‌ ನೀಡದೆ ಖರೀದಿಸಬಹುದು. ಪ್ರಿವೀವ್‌ ಆಫರ್ ನಿರ್ಬಂಧನೆ ಜಿಯೋ ಉದ್ಯೋಗಿಗಳಿಗೆ ಮಾತ್ರ .

 ಜಿಯೋ ಕರೆ ಮಾಡಲು ಜಿಯೋಜಾಯಿನ್‌ ಆಪ್ ಕಡ್ಡಾಯ

ಜಿಯೋ ಕರೆ ಮಾಡಲು ಜಿಯೋಜಾಯಿನ್‌ ಆಪ್ ಕಡ್ಡಾಯ

ಜಿಯೋ 4G ಸಿಮ್ ಆಕ್ಟಿವೇಟ್‌ ಆದ ನಂತರ ಒಮ್ಮೆ ಮೆಸೇಜ್‌ ಅಥವಾ ಕರೆ ರಿಜಿಸ್ಟರ್‌ ಮೊಬೈಲ್‌ ನಂಬರ್‌ಗೆ ಬರುತ್ತದೆ. ನಂತರ ನೀವು ಮೊಬೈಲ್‌ನಲ್ಲಿ ಇನ್‌ಸರ್ಟ್‌ ಮಾಡಿರುವ ಸಿಮ್‌ನ ಸಿಗ್ನಲ್‌ ಬರುತ್ತದೆ. ನಂತರ ಡಿವೈಸ್‌ಗೆ ಜಿಯೋಜಾಯಿನ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಆಪ್ ಉಚಿತ ಕರೆ ಮಾಡಲು ಕಡ್ಡಾಯ. ಈ ಆಪ್‌ ಅನ್ನು ಲೈಪ್‌ ಲೈನ್‌ ಸ್ಮಾರ್ಟ್‌ಫೋನ್‌ಗಳನ್ನು ಹೊರತುಪಡಿಸಿ ಇತರೆ ಡಿವೈಸ್‌ಗಳು ಡೌನ್‌ಲೋಡ್‌ ಮಾಡಿಕೊಳ್ಳಬೇಕು.

 ಉಚಿತ ಕಂಟೆಂಟ್‌ ಸರ್ವೀಸ್ ಪಡೆಯಿರಿ

ಉಚಿತ ಕಂಟೆಂಟ್‌ ಸರ್ವೀಸ್ ಪಡೆಯಿರಿ

ಪ್ರಿವೀವ್‌ ಆಫರ್ ಅನ್‌ಲಿಮಿಟೆಡ್‌ ಮತ್ತು ಉಚಿತ ಆಕ್ಸೆಸ್ ನೀಡುತ್ತಿದ್ದು, ಜಿಯೋ ಆಪ್‌ 'ಜಿಯೋ ಪ್ಲೇ, ಜಿಯೋಆನ್‌ಡಿಮ್ಯಾಂಡ್‌, ಜಿಯೋಬೀಟ್ಸ್, ಜಿಯೋಎಕ್ಸ್‌ಪ್ರೆಸ್‌ನ್ಯೂಸ್‌' ಇತರೆ ಕಂಟೆಂಟ್ ಸೇವೆಗಳನ್ನು ನೀಡಲಿದೆ. ಇವುಗಳನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.

Best Mobiles in India

Read more about:
English summary
Enjoy Free Reliance Jio 4G Data and Calls for 90 Days On Your Existing Number with MNP. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X