ಜಿಯೋಗೆ ಈವರೆಗೂ ಆಗಿರುವ ನಷ್ಟ ಎಷ್ಟು? ಓದಿದ್ಮೇಲೆ ನಗಾಡ್‌ಬೇಡಿ ಪ್ಲೀಸ್!!

ಜಿಯೋಗೆ ಕಳೆದ ಆಗಿರುವ ನಷ್ಟ ಎಷ್ಟು ಎಂದು ಕೇಳಿದರೆ ನಿಮಗೆ ನಗುತರಿಸುತ್ತದೆ.!

|

ಆರು ತಿಂಗಳ ಉಚಿತ ಸೇವೆಯನ್ನು ನೀಡಿದ್ದ ಜಿಯೋಗೆ ಕಳೆದ ಆಗಿರುವ ನಷ್ಟ ಎಷ್ಟು ಎಂದು ಕೇಳಿದರೆ ನಿಮಗೆ ನಗುತರಿಸುತ್ತದೆ.! ಹೌದು, ಆರು ತಿಂಗಳು ಉಚಿತ ಸೇವೆ ನೀಡಿರುವ ಜಿಯೋಗೆ ಕಳೆದ ಆರು ತಿಂಗಳಿನಲ್ಲಿ ಕೇವಲ 22.5 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿದೆ.!!

ಓದಿರಿ: BSNL ಆಫರ್..249 ರೂ.ಗೆ ಪ್ರತಿದಿನ 10GB ಡೇಟಾ, ಮತ್ತೆ?

ನೀವು ನಂಬಲೇಬೇಕು ಏಕೆಂದರೆ ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ (ಬಿಎಸ್ಇ) ಜಿಯೋ ಸಲ್ಲಿಸಿದ್ದ ಲೆಕ್ಕ ಪತ್ರದಲ್ಲಿ ಈ ವಿವರವಿದ್ದು, ಮಾರ್ಚ್ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 22.5 ಕೋಟಿ ರೂ. ಮತ್ತು ಈ ಹಿಂದಿನ ಹಣಕಾಸು ವರ್ಷದಲ್ಲಿ ಕೇವಲ 7.46 ಕೋಟಿ ರೂ. ನಿವ್ವಳ ನಷ್ಟವನ್ನು ಅನುಭವಿಸಿರುವುದಾಗಿ ಜಿಯೋ ಹೇಳಿದೆ.!!

ಓದಿರಿ: ಆಫರ್ ಮುಗಿದರೂ ಜಿಯೋ ಉಚಿತವಾಗಿರುವುದೇಕೆ?..ಎಷ್ಟು ದಿನ ಈ ಆಫರ್?

ಕಳೆದ 6 ತಿಂಗಳಿನಲ್ಲಿ ಜಿಯೋದ ಒಟ್ಟು ಆದಾಯ 2.25 ಕೋಟಿ ರೂ.ಗಳಿಂದ 54 ಲಕ್ಷ ರೂ.ಗೆ ಇಳಿಕೆಯಾಗಿದೆ ಎಂದು ಮಾಹಿತಿ ಸಲ್ಲಿಸಿದೆ.! ಹಾಗಾದರೆ, ಜಿಯೋಗೆ ಏಕೆ ಇಷ್ಟು ಕಡಿಮೆ ನಷ್ಟವಾಗಿದೆ.? ಜನರು ಊಹಿಸಿದ್ದಕ್ಕಿಂತ ಜಿಯೋ ಬೇರೆ ಏನು ಆದಾಯ ಪಡೆಯುತ್ತಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

2 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ!!

2 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ!!

2010ರಲ್ಲಿ ಆರಂಭಗೊಂಡಿದ್ದ ಜಿಯೋ 6 ವರ್ಷಗಳ ಎಲ್‍ಟಿಇ ನೆಟ್‍ವರ್ಕ್ ವಿಸ್ತರಣೆ ಮಾಡಿ, 2016ರ ಸೆಪ್ಟೆಂಬರ್‍ನಲ್ಲಿ ಆರಂಭಗೊಂಡಿತ್ತು. 2 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗಿದರುವ ರಿಲಾಯನ್ಸ್ ಇಂಡಸ್ಟ್ರೀಸ್ ಒಡೆತನದ ಜಿಯೋ ಆರು ತಿಂಗಳಿಗೆ ಕೇವಲ 22.5 ಕೋಟಿ ನಷ್ಟ ಅನುಭವಿಸಿರುವುದು ಎಲ್ಲರಿಗೂ ಹುಬ್ಬೇರಿಸುವಂತಾಗಿದೆ.!!

7.2 ಕೋಟಿ ಜನ ಪ್ರೈಮ್ ಸದಸ್ಯರು!!

7.2 ಕೋಟಿ ಜನ ಪ್ರೈಮ್ ಸದಸ್ಯರು!!

ಆರು ತಿಂಗಳ ಜಿಯೋ ಉಚಿತ ಸೇವೆಯ ನಂತರ ಜಿಯೋ ಪ್ರೈಮ್ ಆಫರ್ ಅನ್ನು ಬಿಡುಗಡೆ ಮಾಡಿತ್ತು. ಈ ಪ್ರೈಮ್ ಆಫರ್‌ಗೆ 7.2 ಕೋಟಿ ಜನರು ಸದಸ್ಯರಾಗಿದ್ದರು.ಇದರಲ್ಲಿ ಜಿಯೋ ಪೇಡ್ ಸೇವೆಗೆ 5 ಕೋಟಿಗೂ ಹೆಚ್ಚು ಜನರು ಮನಸ್ಸು ಮಾಡಿದ್ದರರು.!!

ಹಾಗಾದರೆ ಜಿಯೋಗೆ ಇಷ್ಟು ಕಡಿಮೆ ನಷ್ಟವೇಕೆ?

ಹಾಗಾದರೆ ಜಿಯೋಗೆ ಇಷ್ಟು ಕಡಿಮೆ ನಷ್ಟವೇಕೆ?

ಜಿಯೋವಿನ ಉಚಿತ ಸೇವೆಯನ್ನು ಬಳಸಬೇಕು ಎಂದರೆ ಜಿಯೋ ಸೇವೆಗಳಾದ ಜಿಯೋ ಮೂವಿ, ಜಿಯೋ ಚಾಟ್ ಮತ್ತು ಇತರ ಎಲ್ಲಾ ಸೇವೆಗಳನ್ನಿ ಜಿಯೋ ಗ್ರಾಹಕರು ಬಳಸಲೇಬೇಕು.. ಇವುಗಳ ನೆರವು ಪಡೆದು ಜಾಹಿರಾತಿನಿಂದ ಆದಾಯವನ್ನು ಜಿಯೋ ಪಡೆಯುತ್ತದೆ ಎನ್ನಲಾಗಿದೆ.

ಮುಂದೆ ಗಳಿಸಬಹುದಾದ ಆದಾಯ ಎಷ್ಟು?

ಮುಂದೆ ಗಳಿಸಬಹುದಾದ ಆದಾಯ ಎಷ್ಟು?

ಜಿಯೋ ಆದಾಯ ಮತ್ತು ನಷ್ಟದ ಲೆಕ್ಕದ ಬಗ್ಗೆ ಜನರು ಅಂದುಕೊಂಡಿದ್ದೇ ಬೇರೆ. ಆದರೆ, ಮಾರುಕಟ್ಟೆಯಲ್ಲಿ ಆಗಿದ್ದೇ ಬೇರೆ.!! ಲೆಕ್ಕಪತ್ರದಲ್ಲಿ ತೋರಿಸಿರುವ ಆದಾಯ ನಷ್ಟದ ಪ್ರಮಾಣ ನಂಬಲೂ ಅಸಾಧ್ಯವಾದರೂ ನಂಬಲೇ ಬೇಕು.!! ಇನ್ನೊಂದು ಶಾಕಿಂಗ್ ಎಂದರೆ 2020 ಕ್ಕೆ ಜಿಯೋ ಗಳಿಸುವ ಆದಾಯ ಕೇಲವ 200 ಕೋಟಿಗಳಂತೆ!!

ಓದಿರಿ:ಕಂಪ್ಯೂಟರ್ ವೈರಸ್ ಎಂದರೆ ಏನು? ಸಮಸ್ಯೆ ಹೇಗೆ ಕಂಡುಹಿಡಿಯುವುದು? ಫುಲ್ ಡೀಟೆಲ್ಸ್!!

Best Mobiles in India

English summary
Jio's total income dropped to Rs 54 lakh against Rs 2.25 crore for the six-month period. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X