ಜಿಯೋ 4G ನೆಟ್‌ವರ್ಕ್‌ ಮತ್ತು ಡೌನ್‌ಲೋಡ್‌ ಸಮಸ್ಯೆಗೆ ಪರಿಹಾರ ಏನು ಗೊತ್ತೇ?

By Suneel
|

ಇದೀಗತಾನೆ ರಿಲಾಯನ್ಸ್ ಜಿಯೋ ವಾಣಿಜ್ಯಾತ್ಮಕವಾಗಿ ಲಾಂಚ್‌ ಆಗಿದೆ. ಈಗಾಗಲೇ ರಿಲಾಯನ್ಸ್ ಜಿಯೋ 4G ಸಿಮ್‌ ಖರೀದಿಸಿದ ಬಳಕೆದಾರರು ಡೌನ್‌ಲೋಡ್‌ನಲ್ಲಿ ನಿರತರಾಗಿರುವಾಗ ಹತೋಟಿಗೆ ಸಿಗದ ನೆಟ್‌ವರ್ಕ್‌ ಅನುಭವ ಪಡೆದಿದ್ದಾರೆ. ಅಲ್ಲದೇ ಹಲವು ಬಳಕೆದಾರರು ನೆಟ್‌ವರ್ಕ್‌ ಮಿತಿ ಸಮಸ್ಯೆ ಬಗ್ಗೆ ದೂರನ್ನು ಸಹ ನೀಡುತ್ತಿದ್ದಾರೆ. ಜಿಯೋ ಸೇವೆ ನೀಡುವವರು ಮಾತ್ರ ಜಿಯೋ ನೆಟ್‌ವರ್ಕ್‌ ಮತ್ತು ಡಾಟಾ ಬಳಕೆಯಲ್ಲಿ ಯಾವುದೇ ಮಿತಿಯನ್ನು ನೀಡಿಲ್ಲ. ಖಂಡಿತವಾಗಿ ಜಿಯೋ ಆಫರ್‌ ಅನ್‌ಲಿಮಿಟೆಡ್ ಎಂದು ಹೇಳೀದ್ದಾರೆ.

ರಿಲಾಯನ್ಸ್ ಜಿಯೋ 4G ಸಿಮ್‌ ಬಳಕೆದಾರರಿಗೆ ಡೌನ್‌ಲೋಡ್‌ ಮತ್ತು ಸ್ಟ್ರೀಮಿಂಗ್ ಸಮಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದು ಸರ್ವರ್‌ ಸಮಸ್ಯೆ ಎಂದು ಜಿಯೋ ಸೇವೆ ನೀಡುವವರು ಹೇಳಿದ್ದಾರೆ. ಸತ್ಯವೆಂದರೆ ನೀವು ಡೌನ್‌ಲೋಡ್‌ ಮತ್ತು ಕಂಟೆಂಟ್ ಸ್ಟ್ರೀಮಿಂಗ್ ಅನ್ನು ಒಂದೇ ಸರ್ವರ್‌ನಲ್ಲಿ ನಿರ್ವಹಿಸುತ್ತಿದ್ದರೆ ಅಥವಾ ಒಂದೇ ಸ್ಥಳದಲ್ಲಿ 3G ನೆಟ್‌ವರ್ಕ್‌ ಉಪಯೋಗಿಸುತ್ತಿದ್ದರೆ ಯಾವುದೇ ಸಮಸ್ಯೆ ಇಲ್ಲ. ಖಚಿತವಾಗಿ ಸಮಸ್ಯೆ ಇರುವುದು ರಿಲಾಯನ್ಸ್ ಜಿಯೋ 4G ವೇಗದಲ್ಲೇ ಎಂದು ತಿಳಿಯಬೇಕು. ನೀವು ಸಹ ರಿಲಾಯನ್ಸ್ ಜಿಯೋ 4G ಬಳಕೆದಾರರಾಗಿದ್ದಲ್ಲಿ ಸಾಮಾನ್ಯ ಜಿಯೋ ನೆಟ್‌ವರ್ಕ್‌ ಸಮಸ್ಯೆ ಯಾವುವು ಮತ್ತು ಅದಕ್ಕೆ ಪರಿಹಾರ ಏನು ಎಂದು ಕೆಳಗಿನ ಸ್ಲೈಡರ್‌ ಓದಿ ತಿಳಿಯಿರಿ.

ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್‌ ಪೋರ್ಟ್‌ ಮಾಡುವುದು ಹೇಗೆ?

ಸಾಮಾನ್ಯವಾಗಿ ಜಿಯೋ 4G ಹತೋಟಿ ಸಮಸ್ಯೆಗಳು

ಸಾಮಾನ್ಯವಾಗಿ ಜಿಯೋ 4G ಹತೋಟಿ ಸಮಸ್ಯೆಗಳು

* ವೆಬ್‌ಸೈಟ್‌, ಗೋಗಲ್‌ ಪ್ಲೇ ಸ್ಟೋರ್‌ ಅಥವಾ ಯೂಟ್ಯೂಬ್ ನಿಧಾನವಾಗಿರುತ್ತದೆ
* ಯೂಟ್ಯೂಬ್ ಉತ್ತಮವಾಗಿದ್ದರು, ಪ್ಲೇ ಸ್ಟೋರ್ ಲೋಡ್‌ ಆಗಲು ಸಮಯ ತೆಗೆದುಕೊಳ್ಳುತ್ತದೆ.
* ಟೊರೆಂಟ್ ಸರಿಯಾಗಿ ನಿರ್ವಹಿಸುತ್ತಿದ್ದರು, ವೆಬ್‌ಸೈಟ್‌ ಒದಗಿಸುತ್ತಿರುವ ನೇರ ಡೌನ್‌ಲೋಡಿಂಗ್ ನಿಧಾನವಾಗಿರುತ್ತದೆ
* ಬ್ರೌಸಿಂಗ್ ವೇಗ ಉತ್ತಮವಾಗಿದ್ದರೂ, ಡೌನ್‌ಲೋಡ್ ಅನುಭವದ ವೇಗ ಸಮಸ್ಯೆ ಇರುತ್ತದೆ.
* ಹಾಟ್‌ಸ್ಪಾಟ್‌ ವೇಗ ಸ್ಮಾರ್ಟ್‌ಫೋನ್‌ನಲ್ಲಿ ಚೆನ್ನಾಗಿರುತ್ತದೆ. ಆದರೆ ಇಂಟರ್ನೆಟ್‌ ವೇಗ ಪಿಸಿಯಲ್ಲಿ ಅಥವಾ ಮ್ಯಾಕ್‌ನಲ್ಲಿ ಡೌನ್‌ಲೋಡ್‌ ಸಮಯದಲ್ಲಿ ನಿಧಾನವಾಗಿರುತ್ತದೆ.

 ಜಿಯೋ ವೇಗದ ಸಮಸ್ಯೆಗೆ ಪರಿಹಾರವಿದೆಯೇ?

ಜಿಯೋ ವೇಗದ ಸಮಸ್ಯೆಗೆ ಪರಿಹಾರವಿದೆಯೇ?

ನಾವು ಮೇಲೆ ತಿಳಿಸಿದ ಸಮಸ್ಯೆಗಳನ್ನು ಜಿಯೋ 4G ಬಳಕೆದಾರರು ಎದುರಿಸುತ್ತಿದ್ದಾರೆ. ಅಲ್ಲದೇ ಈ ಸಮಸ್ಯೆಗಳ ಕುರಿತು ದೂರುಗಳು ಆನ್‌ಲೈನ್‌ನಲ್ಲಿ ಸಭೆಗಳಲ್ಲಿವೆ. ಖಂಡಿತ ಸಮಸ್ಯೆಗೆ ಪರಿಹಾರ ಇದೆ.

 LTE ನೆಟ್‌ವರ್ಕ್‌ ಅನ್ನು ಬ್ಯಾಂಡ್‌ 40 ಗೆ ಲಾಕ್‌ ಮಾಡಿ

LTE ನೆಟ್‌ವರ್ಕ್‌ ಅನ್ನು ಬ್ಯಾಂಡ್‌ 40 ಗೆ ಲಾಕ್‌ ಮಾಡಿ

ಉತ್ತಮ ಇಂಟರ್ನೆಟ್‌ ವೇಗಕ್ಕಾಗಿ ನೀವು LTE ನೆಟ್‌ವರ್ಕ್‌ ಅನ್ನು ಬ್ಯಾಂಡ್‌ 40 ಗೆ ಲಾಕ್‌ ಮಾಡಿದ್ದೀರಾ ಎಂದು ಪರೀಕ್ಷಿಸಿ. LTE ನೆಟ್‌ವರ್ಕ್‌ ಅನ್ನು ಬ್ಯಾಂಡ್‌ 40 ಗೆ ಲಾಕ್‌ ಮಾಡುವುದರಿಂದ ಇಂಟರ್ನೆಟ್‌ ವೇಗ 55 Mbps ಪಡೆಯಬಹುದು.

APN ಸೆಟ್ಟಿಂಗ್ಸ್

APN ಸೆಟ್ಟಿಂಗ್ಸ್

APN ಸೆಟ್ಟಿಂಗ್ಸ್ ಬದಲಾಯಿಸಿದ ನಂತರ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಅಗತ್ಯವಿದ್ದಲ್ಲಿ ರೀಬೂಟ್‌ ಮಾಡಿ. APN ಸೆಟ್ಟಿಂಗ್ ಬದಲಾವಣೆ ಈ ಕೆಳಗಿನ ರೀತಿ ಇರಲಿ
APN Name: Jionet,
Authentication: None,
APN Type: Default,
supl; Bearer: LTE.
ಇತರೆ ಬದಲಾವಣೆಗಳನ್ನು ಮಾಡದಿರಿ.

ಎಲ್ಲಾ ಜಿಯೋ ಆಪ್‌ಗಳು ಇನ್‌ಸ್ಟಾಲ್ ಆಗಿರಲಿ

ಎಲ್ಲಾ ಜಿಯೋ ಆಪ್‌ಗಳು ಇನ್‌ಸ್ಟಾಲ್ ಆಗಿರಲಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎಲ್ಲಾ ಜಿಯೋ ಆಪ್‌ಗಳು ಇನ್‌ಸ್ಟಾಲ್‌ ಆಗಿರಲಿ. ಮೈಜಿಯೋ ಆಪ್‌ ಇನ್‌ಸ್ಟಾಲ್‌ ಆದ ನಂತರ ಎಲ್ಲಾ ಆಪ್‌ಗಳು ಡೌನ್‌ಲೋಡ್‌ ಆಗಿ ಇನ್‌ಸ್ಟಾಲ್ ಆಗಲು 'Install All' ಎಂಬಲ್ಲಿ ಟ್ಯಾಪ್‌ ಮಾಡಿ.

ಗರಿಷ್ಠ ಸಿಗ್ನಲ್‌ ಅನ್ನು ಚೆಕ್ ಮಾಡಿ

ಗರಿಷ್ಠ ಸಿಗ್ನಲ್‌ ಅನ್ನು ಚೆಕ್ ಮಾಡಿ

ಮೊಬೈಲ್‌ಗೆ ಗರಿಷ್ಠ ಮಟ್ಟದ ಸಿಗ್ನಲ್‌ ಸಿಗುವ ಸ್ಥಳಕ್ಕೆ ನಿಮ್ಮ ಮೊಬೈಲ್‌ ಅನ್ನು ಸ್ಥಳಾಂತರಿಸಿ. ಉತ್ತಮ ಕನೆಕ್ಟಿವಿಟಿ ಮತ್ತು ವೇಗಕ್ಕಾಗಿ ಮೊಬೈಲ್ ಸ್ಥಳಾಂತರ ಅಗತ್ಯ.

ಯುಎಸ್‌ಬಿ ಟೆಥರಿಂಗ್‌ ಬಳಸಿ

ಯುಎಸ್‌ಬಿ ಟೆಥರಿಂಗ್‌ ಬಳಸಿ

ಮೊಬೈಲ್ ಹಾಟ್‌ಸ್ಪಾಟ್‌ ಕನೆಕ್ಷನ್‌ ಬದಲು ಯುಎಸ್‌ಬಿ ಟೆಥರಿಂಗ್‌ ಅನ್ನು ಬಳಸಿ. ಕಾರಣ ಕೆಲವು ಮೊಬೈಲ್‌ಗಳು ಹಾಟ್‌ಸ್ಟಾಪ್ ವ್ಯಾಪ್ತಿ ಮತ್ತು ಸಾಮರ್ಥ್ಯವನ್ನು ಮಿತಿಯಾಗಿ ಹೊಂದಿರುತ್ತವೆ.

ಮೊಬೈಲ್‌ನಲ್ಲಿ ಕ್ಯಾಶ್‌ ಅನ್ನು ಕ್ಲಿಯರ್‌ ಮಾಡಿ

ಮೊಬೈಲ್‌ನಲ್ಲಿ ಕ್ಯಾಶ್‌ ಅನ್ನು ಕ್ಲಿಯರ್‌ ಮಾಡಿ

ನಿಮ್ಮ ಮೊಬೈಲ್‌ನಲ್ಲಿ ಸೆಟ್ಟಿಂಗ್ಸ್>> ಸ್ಟೋರೇಜ್‌>> ಕ್ಲಿಯರ್ ಕ್ಯಾಶ್‌ ನಿರ್ವಹಣೆ ಮಾಡಿ. ಹೀಗೆ ಮಾಡುವುದರಿಂದ ಇಂಟರ್ನೆಟ್ ಕನೆಕ್ಷನ್‌ ವೇಗಗೊಳ್ಳುತ್ತದೆ.

Best Mobiles in India

English summary
Try These 6 Fixes to Resolve the Reliance Jio 4G Speed Throttling Issue. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X