ಜಿಯೋ ವೈಫೈ ಹಾಟ್‌ಸ್ಪಾಟ್‌ಗೆ ಕನೆಕ್ಟ್ ಆಗುವುದು ಹೇಗೆ?

By Shwetha
|

ರಿಲಾಯನ್ಸ್ ಜಿಯೋ ಯೋಜನೆಗಳು ಘೋಷಣೆಯಾಗುತ್ತಿದ್ದಂತೆಯೇ, ಸರ್ವೀಸ್ ಪ್ರೊವೈಡರ್‌ಗಳಿಂದ 4ಜಿ ಸಿಮ್ ಅನ್ನು ಪಡೆದುಕೊಳ್ಳುವಲ್ಲಿ ಬಳಕೆದಾರರು ವ್ಯಸ್ಥರಾಗಿದ್ದಾರೆ. ಈ ಯೋಜನೆಯಲ್ಲಿ ವೈಫೈ ಹಾಟ್‌ಸ್ಪಾಟ್ ಸೇವೆ ಕೂಡ ಇದ್ದು ಜಿಯೋ ನೆಟ್ ಎಂಬುದಾಗಿ ಇದನ್ನು ಕರೆದಿದ್ದಾರೆ ಇದು ಸಾರ್ವಜನಿಕ ಹಾಟ್‌ಸ್ಪಾಟ್ ಸೇವೆಯಾಗಿದೆ. ಶಾಪಿಂಗ್ ಮಾಲ್‌ಗಳು, ಏರ್‌ಪೋರ್ಟ್, ಪಾರ್ಕ್‌ಗಳಲ್ಲಿ ಹಾಟ್‌ಸ್ಪಾಟ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ.

ಓದಿರಿ: ಏರ್‌ಸೆಲ್ V/S ಬಿಎಸ್‌ಎನ್‌ಎಲ್ V/S ಟಾಟಾ ಡೊಕೊಮೊ ಟಾರಿಫ್ ಸ್ಪರ್ಧೆ: ಯಾವುದು ಉತ್ತಮ

ಜಿಯೋದ ಪ್ಲಾನ್ ರೂ 499 ಆರಂಭಗೊಂಡು ಜಿಯೋ ನೆಟ್ ವೈಫೈ ಡೇಟಾವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಇಂದಿಲ್ಲಿ ನಿಮ್ಮ ಸಮೀಪದ ಜಿಯೋ ನೆಟ್ ಹಾಟ್‌ಸ್ಪಾಟ್‌ಗೆ ಸಂಪರ್ಕ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಜಿಯೋ ನೆಟ್ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ

ಜಿಯೋ ನೆಟ್ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಜಿಯೋ ನೆಟ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿ. ಆಂಡ್ರಾಯ್ಡ್ ಮತ್ತು ಐಓಎಸ್ ಎರಡಕ್ಕೂ ಇದು ಲಭ್ಯ. ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಂಡ ನಂತರ, ಹತ್ತಿರದ ಹಾಟ್‌ಸ್ಪಾಟ್‌ಗೆ ಸಂಪರ್ಕವನ್ನು ಪಡೆದುಕೊಳ್ಳಲು ನಿಮ್ಮನ್ನು ಪ್ರಾಂಪ್ಟ್ ಮಾಡುತ್ತದೆ.

ಜಿಯೋ ಖಾತೆ ರಚಿಸಿಕೊಳ್ಳಿ

ಜಿಯೋ ಖಾತೆ ರಚಿಸಿಕೊಳ್ಳಿ

ಜಿಯೋ ನೆಟ್ ವೈಫೈ ಸೇವೆಯನ್ನು ಬಳಸಿಕೊಳ್ಳಲು ಜಿಯೋ ಖಾತೆಯನ್ನು ಹೊಂದಿರಬೇಕು. ಜಿಯೋ ನೆಟ್ ಹಾಟ್‌ಸ್ಪಾಟ್ ಇರುವ ಹತ್ತಿರದ ಸ್ಥಳವನ್ನು ಜಿಯೋ ನೆಟ್ ಅಪ್ಲಿಕೇಶನ್ ತೋರಿಸುವಂತೆ ಅದನ್ನು ಬಳಸಿ. ಇದು ನಿಮ್ಮ ಪಬ್ಲಿಕ್ ವೈಫೈ ಪ್ರೊಫೈಲ್ ಅನ್ನು ಸ್ವಯಂಚಾಲಿತವಾಗಿ ರಚಿಸುತ್ತದೆ. ವೈಫೈ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಜಿಯೋ ನೆಟ್ ವೈಫೈಗೆ ಸಂಪರ್ಕವನ್ನು ಪಡೆದುಕೊಳ್ಳಿ.

ಹತ್ತಿರದ ಜಿಯೋನೆಟ್ ಹಾಟ್‌ಸ್ಪಾಟ್‌ಗಳನ್ನು ಹುಡುಕಿಕೊಳ್ಳಿ

ಹತ್ತಿರದ ಜಿಯೋನೆಟ್ ಹಾಟ್‌ಸ್ಪಾಟ್‌ಗಳನ್ನು ಹುಡುಕಿಕೊಳ್ಳಿ

ನಿಮ್ಮ ಸಮೀಪದ ಜಿಯೋ ನೆಟ್ ಹಾಟ್‌ಸ್ಪಾಟ್ ಅನ್ನು ಹುಡುಕಿಕೊಳ್ಳಲು, ಜಿಯೋ ನೆಟ್ ಅಪ್ಲಿಕೇಶನ್ ತೆರೆಯಿರಿ ಮತ್ತು ಮೆನುಗೆ ಹೋಗಿ. 'ಫೈಂಡ್ ಜಿಯೋನೆಟ್ ಹಾಟ್‌ಸ್ಪಾಟ್' ಎಂದು ತೋರಿಸುವ ಆಪ್ಶನ್ ಅನ್ನು ತಟ್ಟಿರಿ. ನಕ್ಷೆ ಗೋಚರಗೊಳ್ಳುತ್ತದೆ ಮತ್ತು ಹಾಟ್‌ಸ್ಪಾಟ್ ಇದರಲ್ಲಿ ಕಂಡುಬರುತ್ತದೆ. ನಗರದಲ್ಲಿ ಈಗ ಸೀಮಿತ ಹಾಟ್‌ಸ್ಪಾಟ್‌ಗಳಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹಾಟ್‌ಸ್ಪಾಟ್‌ಗಳು ನಿಮಗೆ ಲಭ್ಯವಾಗಲಿದೆ.

ಜಿಯೋ ನೆಟ್ ಬಳಕೆಯ ದರಗಳು

ಜಿಯೋ ನೆಟ್ ಬಳಕೆಯ ದರಗಳು

ಪ್ರಸ್ತುತ ಜಿಯೋ ನೆಟ್ ಟ್ರಯಲ್ ವೈಫೈ ಉಚಿತವಾಗಿದ್ದು ಜಿಯೋ ಟಾರಿಫ್ ಯೋಜನೆಗಳನ್ನು ಒಳಗೊಂಡು ಜಿಯೋ ಹಾಟ್‌ಸ್ಪಾಟ್‌ಗಳು ಬರಲಿವೆ. ಯೋಜನೆಗಳ ಪ್ರಕಾರ, ನೀವು ಮಿತಿಯನ್ನು ಮೀರಿದಾಗ, ಸರ್ವೀಸ್ ಪ್ರೊವೈಡರ್ ನಿಮಗೆ ಜಿಬಿ ಅನುಸಾರವಾಗಿ ರೂ 50 ಅನ್ನು ಚಾರ್ಜ್ ಮಾಡುತ್ತಾರೆ.

ಸಿಗ್ನಲ್ ವೀಕ್ ಆಗಿದ್ದಲ್ಲಿ ಏನು ಮಾಡಬೇಕು?

ಸಿಗ್ನಲ್ ವೀಕ್ ಆಗಿದ್ದಲ್ಲಿ ಏನು ಮಾಡಬೇಕು?

ವೈಫೈ ಹಾಟ್‌ಸ್ಪಾಟ್ ಮತ್ತು ನಿಮ್ಮ ಡಿವೈಸ್‌ ನಡುವಿನ ಅಂತರವನ್ನು ಆಧರಿಸಿ ಜಿಯೋ ವೈಫೈ ಹಾಟ್‌ಸ್ಪಾಟ್ ನಿಂತಿದೆ. ಆಕ್ಸೆಸ್ ಪಾಯಿಂಟ್‌ನ ಬಳಿಗೆ ನೀವು ಹೋದಷ್ಟು ಬಲವಾದ ಸಿಗ್ನಲ್ ಅನ್ನು ಪಡೆದುಕೊಳ್ಳುತ್ತೀರಿ.

Best Mobiles in India

English summary
Here, we have detailed the steps involved in locating the JioNet Hotspots. Also, you can get to know how to connect to the nearest JioNet Hotspot.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X