ಸೋನಿಯ ಸ್ಮಾರ್ಟ್‌ವಾಚ್ SWR10 ವಿಶೇಷತೆ ಏನು?

By Shwetha
|

ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಮಾರುಕಟ್ಟೆಗಳು ಭಾರತದಲ್ಲಿ ಭಾರೀ ವೇಗದಲ್ಲಿ ಬೆಳೆಯುತ್ತಿದೆ, ಇದೇ ರೀತಿಯಲ್ಲಿ ಇನ್ನೊಂದು ಡಿವೈಸ್ ಕೂಡ ಮಾರುಕಟ್ಟೆಯ ವೇಗವನ್ನು ತನ್ನ ಹಿಡಿತದಲ್ಲಿ ತೆಗೆದುಕೊಳ್ಳುವ ಯೋಜನೆಯನ್ನು ಮಾಡುತ್ತಿದೆ ಹೌದು ನಾವು ಮಾತನಾಡುತ್ತಿರುವುದು ಸ್ಮಾರ್ಟ್‌ವಾಚ್ ಕುರಿತಾಗಿದೆ.

ಹೆಚ್ಚಿನ ಫೋನ್ ತಯಾರಿಕಾ ಕಂಪೆನಿಗಳು ಈ ವೇರಿಯೇಬಲ್ ವರ್ಗವನ್ನು ವಶಪಡಿಸಿಕೊಂಡಿದ್ದು ಸ್ಯಾಮ್‌ಸಂಗ್ ಮತ್ತು ಸೋನಿಯಂತಹ ದೊಡ್ಡ ದೊಡ್ಡ ಕಂಪೆನಿಗಳೂ ಕೂಡ ತಮ್ಮದೇ ಫ್ಲ್ಯಾಗ್‌ಶಿಪ್ ಅಡಿಯಲ್ಲಿ ಸ್ಮಾರ್ಟ್‌ವಾಚ್‌ಗಳನ್ನು ಹೊರತರುತ್ತಿವೆ. ಇತರೇ ಕಂಪೆನಿಗಳೂ ಕೂಡ ತಮ್ಮ ತಮ್ಮ ಅಪೂರ್ವ ಕೊಡುಗೆಗಳ ಮೂಲಕ ಮುಂದಕ್ಕೆ ಬರುವ ತಯಾರಿಯನ್ನು ಮಾಡುತ್ತಿವೆ.

ಸೋನಿಯು ತನ್ನ ಹೊಸ ವೇರಿಯೇಬಲ್ ಉತ್ಪನ್ನವನ್ನು ಮಾರುಕಟ್ಟೆಗೆ ತರುವ ಪ್ರಯತ್ನದಲ್ಲಿದ್ದು ಅದರ ಹೆಸರು SWR10 ಎಂದಾಗಿದೆ. ಸೋನಿ ಎಕ್ಸ್‌ಪೀರಿಯಾ Z2 ನೊಂದಿಗೆ ಸೋನಿಯು ಈ ವೇರಿಯೇಬಲ್ ಅನ್ನು ಹೊರತಂದಿದ್ದು ಇದರ ಬೆಲೆ ರೂ 5,999 ಆಗಿದೆ. ಇದು ಸುದೃಢವಾದ ಬಟನ್ ಅನ್ನು ಹೊಂದಿದ್ದು ಬಳಸಲು ಹಿತಕಾರಿಯಾಗಿದೆ.

ಇದು ಮೂರು ಸಣ್ಣ ಎಲ್‌ಇಡಿ ಲೈಟ್‌ಗಳನ್ನು ಹೊಂದಿದ್ದು ಪ್ರಸ್ತುತ ವಾಚ್ ಯಾವ ಮೋಡ್‌ನಲ್ಲಿದೆ ಎಂಬುದನ್ನು ತೋರಿಸುತ್ತದೆ. ಇದು ಸೋನಿ ಫೋನ್‌ಗಳಿಗೆ ಮಾತ್ರವೇ ಬಲಸಬಹುದಾದ ಮಿತಿಯನ್ನು ಹೊಂದಿಲ್ಲ ಇದಕ್ಕೆ ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಬೆಂಬಲ ಬೇಕಾಗಿದೆ. ಇದು ಬ್ಲ್ಯೂಟೂತ್ ಎಲ್‌ಇ ಮತ್ತು ಎನ್‌ಎಫ್‌ಸಿ ತಂತ್ರಜ್ಞಾನವನ್ನು ಕೂಡ ಬಳಸಿಕೊಳ್ಳಲಿದೆ.

ಈ ವೇರಿಯೇಬಲ್ ಕುರಿತಾದ ಇನ್ನಷ್ಟು ವಿವರವಾದ ಮಾಹಿತಿಯನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

#1

#1

ನಿಮಗೆ ಗೊತ್ತಿರುವಂತೆ, ಇದು 24/7 ವೇರಿಯೇಬಲ್ ಡಿವೈಸ್ ಆಗಿದೆ. ಇದು ಜಲಪ್ರತಿರೋಧಕ ಶಕ್ತಿಯನ್ನು ಹೊಂದಿದ್ದು ನೀವು ಯಾವ ಕೆಲಸದಲ್ಲಿದ್ದಾಗಲೂ ಇದನ್ನು ಬಳಸಬಹುದಾಗಿದೆ. ನಿಮ್ಮ ಯಾವುದೇ ಧಿರಿಸಿಗೂ ಇದು ಅತ್ಯಂತ ಸೂಕ್ತವಾಗಿದೆ ಮತ್ತು ಪರ್ಫೆಕ್ಟ್ ಮ್ಯಾಚ್ ಆಗಿದೆ. ಬಳಕೆದಾರರು ಹೆಚ್ಚಿನ ರೀತಿಯ ಬಣ್ಣಗಳನ್ನು ಆಯ್ಕೆ ಮಾಡಬಹುದಾಗಿದ್ದು ಸೋನಿಯ ಫಾಸ್ಟನಿಂಗ್ ಬಟನ್ ಮತ್ತು ಎಲ್‌ಇಡಿಗಳು ಪ್ರೀಮಿಯಮ್ ನೋಟವನ್ನು ನೀಡಲಿದೆ.

#2

#2

ಹೊಸ ಸ್ಮಾರ್ಟ್‌ಬ್ಯಾಂಡ್ SWR10 ಹಲವಾರು ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅದರಲ್ಲಿ ಪ್ರಮುಖವಾದುದು ಲೈಫ್ ಬುಕ್‌ಮಾರ್ಕ್‌ಗಳಾಗಿವೆ. ತಮ್ಮ ಸ್ಮಾರ್ಟ್‌ಬ್ಯಾಂಡ್‌ನಲ್ಲಿರುವ ಕೀಯನ್ನು ಒತ್ತಿ ಹಿಡಿದು ಏನನ್ನಾದರೂ ದಾಖಲಿಸುವ ಕೆಲಸವನ್ನು ಬಳಕೆದಾರರು ಮಾಡಬಹುದಾಗಿದೆ. ನಂತರ ನೀವು ದಾಖಲಿಸಿದ್ದಕ್ಕೆ ನಿಮಗೆ ಪ್ರವೇಶವನ್ನು ಪಡೆಯಬಹುದಾಗಿದೆ.

#3

#3

ಎಲ್ಲಾ ರೀತಿಯ ಬೆಂಬಲವನ್ನು ಈ ಹೊಸ ಡಿವೈಸ್ ಹೊಂದಿದೆ. ಸೋನಿ ಸ್ಮಾರ್ಟ್‌ಬ್ಯಾಂಡ್ SWR10 ಇದಕ್ಕಿಂತ ಭಿನ್ನವಾಗಿಲ್ಲ. ಈ ಅಪ್ಲಿಕೇಶನ್ ನಿಮ್ಮ ದೈಹಿಕ ಸಾಮಾಜಿಕ ಮತ್ತು ಮನರಂಜನೆಯ ಚಟುವಟಿಕೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಈ ಅಪ್ಲಿಕೇಶನ್ ನಿಮಗೆ ಹವಾಮಾನದ ಬಗೆಗೆ ಮಾಹಿತಿಯನ್ನು ಕೂಡ ನೀಡುತ್ತದೆ.

#4

#4

ತೆಗೆಯಬಹುದಾದ ಕೋರ್ ಯೂನಿಟ್‌ನೊಂದಿಗೆ ಆರಾಮದಾಯಕವಾದ ವೃಸ್ಟ್ ಬ್ಯಾಂಡ್‌ನಿಂದಿಗೆ ಸೋನಿಯ ಸ್ಮಾರ್ಟ್‌ಬ್ಯಾಂಡ್ ಬಂದಿದೆ. ಇದು ಸುಧಾರಿತ ಸೆನ್ಸಾರ್ ತಂತ್ರಜ್ಞಾನವನ್ನು ಹೊಂದಿದ್ದು ಬಳಕೆದಾರರ ಚಲನೆಗಳನ್ನು ಇದು ಅನುಭವಿಸುತ್ತದೆ ಮತ್ತು ಇದಕ್ಕೆ ಹೊಂದಿಕೆಯಾಗಿರುವ ಸ್ಮಾರ್ಟ್‌ಫೋನ್‌ಗೆ ಡೇಟಾವನ್ನು ಕಳುಹಿಸುತ್ತದೆ.

#5

#5

ನಿಮ್ಮ ಜೀವನವನ್ನು ಇನ್ನಷ್ಟು ಸುಲಭಗೊಳಿಬೇಕೆಂಬ ದಿಶೆಯಲ್ಲಿ ಈ ಬ್ಯಾಂಡ್ ಕಾರ್ಯನಿರ್ವಹಿಸುತ್ತದೆ. ನೀವು ಮಾಡುವ ಪ್ರತಿಯೊಂದು ಕೆಲಸದ ಮೇಲೆ ನಿಗಾವಹಿಸುವ ಸ್ಮಾರ್ಟ್‌ಬ್ಯಾಂಡ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ನೀವು ಹೊಂದಿಸುವುದು ಆವಶ್ಯಕವಾಗಿದೆ.

Best Mobiles in India

English summary
This article tells that Sony Smartbrand SWR10 Now official in India top 5 features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X