ಜಿಯೋ ಸಿಮ್‌ನಲ್ಲಿ ಬಳಕೆದಾರರಿಗೆ ತಲೆನೋವಾಗಿರುವ ಸಮಸ್ಯೆಗೆ ಇಲ್ಲಿದೆ ಪರಿಹಾರ

By Shwetha
|

ರಿಲಾಯನ್ಸ್ ಜಿಯೋ ಆಫರ್ ಭಾರತದಲ್ಲಿ ಹೆಚ್ಚು ಸುದ್ದಿಯಲ್ಲಿರುವ ವಿಷಯವಾಗಿದ್ದು ತನ್ನ ಪ್ರಿವ್ಯೂ ಆಫರ್ ಅನ್ನೇ ಫೋನ್ ಬಳಕೆದಾರರಿಗೆ ನೀಡುವುದರ ಮೂಲಕ ಇದು ಫೋನ್ ಪ್ರಿಯರಲ್ಲಿ ಮಂದಹಾಸವನ್ನು ಮೂಡಿಸಿದೆ. ಅದಾಗ್ಯೂ ಕೆಲವು ಬಳಕೆದಾರರು 4ಜಿ ಸಿಮ್ ಕಾರ್ಡ್ ಸಮಸ್ಯೆಯನ್ನು ಉಂಟುಮಾಡುತ್ತಿದೆ ಎಂಬುದಾಗಿ ದೂರಿತ್ತಿದ್ದಾರೆ. ಸಿಮ್ ಕಾರ್ಡ್ ನಾನ್ ಆಕ್ಟಿವೇಶನ್, ಕರೆಗಳನ್ನು ಮಾಡಲು ಸಾಧ್ಯವಾಗದೇ ಇರುವುದು, ಕಡಿಮೆ ಸಂಪರ್ಕ ವೇಗ, ಆಕ್ಟಿವೇಶನ್‌ನಲ್ಲಿ ವಿಳಂಬ ಹೀಗೆ ದೂರುಗಳ ಪಟ್ಟಿಯನ್ನೇ ಬಳಕೆದಾರರ ಮುಂದಿಟ್ಟಿದ್ದಾರೆ.

ಓದಿರಿ: ಜಿಯೋ ಸಿಮ್ ಉಚಿತವಾಗಿ ಬೇಕಿದ್ದರೆ ಕ್ಯೂನಲ್ಲಿ ನಿಲ್ಲಿ, ಇಲ್ಲವೇ ಪಾವತಿಸಿ

ಇಂತಹ ಸಮಸ್ಯೆಗಳನ್ನು ಹೆಚ್ಚಿನ ಜಿಯೋ ಚಂದಾದಾರರು ಫೇಸ್ ಮಾಡುತ್ತಿದ್ದು ಸರ್ವೀಸ್ ಪ್ರೊವೈಡರ್‌ಗಳಿಂದ ಜಿಯೋ ಗ್ರಾಹಕರು ಎಸ್‌ಎಮ್‌ಎಸ್ ಅನ್ನು ಪಡೆದುಕೊಳ್ಳುತ್ತಿದ್ದು ಟೆಲಿ ವೆರಿಫಿಕೇಶನ್ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಲು ಪ್ರೊವೈಡರ್‌ಗಳು ಗ್ರಾಹಕರಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬ ಅಂಶವನ್ನೇ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಇದು ಗಂಭೀರ ಸಮಸ್ಯೆಯಲ್ಲ

ಇದು ಗಂಭೀರ ಸಮಸ್ಯೆಯಲ್ಲ

ಸಿಮ್ ಕಾರ್ಡ್ ಆಕ್ಟಿವೇಟ್ ಆದ ನಂತರ ಜಿಯೋ ಟೆಲಿ ವೆರಿಫಿಕೇಶನ್ ಎಸ್‌ಎಮ್‌ಎಸ್ ಬಳಕೆದಾರರಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಿದೆ. ಸಿಮ್ ಕಾರ್ಡ್ ಆಕ್ಟಿವೇಟ್ ಆದನಂತರ ಕರೆ ಮತ್ತು ಎಸ್‌ಎಮ್‌ಎಸ್ ಅನ್ನು ಕಳುಹಿಸಬಹುದಾಗಿದೆ. 1977 ಅನ್ನು ಡಯಲ್ ಮಾಡುವುದರ ಮೂಲಕ ವೆರಿಫಿಕೇಶನ್ ಪ್ರೊಸೆಸ್ ಅನ್ನು ಸಂಪೂರ್ಣಗೊಳಿಸಿದವರು ಇನ್ನೊಂದು ಪರಿಶೀಲನೆ ಹಂತಕ್ಕೆ ಹೋಗಬೇಕಾಗಿಲ್ಲ.

ಭದ್ರಪಡಿಸಿ

ಭದ್ರಪಡಿಸಿ

ಜಿಯೋ ಬಳಕೆದಾರರು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದ್ದು ಗುರುತು ಪರಿಶೀಲನೆ ಪ್ರಕ್ರಿಯೆಗೆ ಅವರನ್ನು ತೆಗೆದುಕೊಂಡು ಹೋಗುವ ಎಸ್‌ಎಮ್‌ಎಸ್ ಅನ್ನು ಬಳಕೆದಾರರು ಪಡೆದುಕೊಳ್ಳುತ್ತಾರೆ. 1977 ಗೆ ಕರೆ ಮಾಡುವ ಮೂಲಕ ವಾಯ್ಸ್ ಮತ್ತು ಡೇಟಾ ಸೇವೆಗಾಗಿ ಜಿಯೋ ಸಂಖ್ಯೆ ವೆರಿಫಿಕೇಶನ್ ಅನ್ನು ಮಾಡುತ್ತದೆ.

ಟೆಲಿ ವೆರಿಫಿಕೇಶನ್

ಟೆಲಿ ವೆರಿಫಿಕೇಶನ್

ಹೊಸ ಜಿಯೋ ಬಳಕೆದಾರರು ಕೂಡಲೇ ಟೆಲಿ ವೆರಿಫಿಕೇಶನ್ ಅನ್ನು ಪೂರ್ಣಗೊಳಿಸಬೇಕು ಮತ್ತು ಎಸ್‌ಎಮ್‌ಎಸ್ ನಂತರ ಪಡೆದುಕೊಳ್ಳುವುದನ್ನು ತಡೆಗಟ್ಟಬಹುದಾಗಿದೆ.

ಪುನಃ ಎಸ್‌ಎಮ್‌ಎಸ್ ಕಳುಹಿಸುವಲ್ಲಿಂದ ಜಿಯೋವನ್ನು ನಿಲ್ಲಿಸಿ

ಪುನಃ ಎಸ್‌ಎಮ್‌ಎಸ್ ಕಳುಹಿಸುವಲ್ಲಿಂದ ಜಿಯೋವನ್ನು ನಿಲ್ಲಿಸಿ

ಮೈ ಜಿಯೋ ಅಪ್ಲಿಕೇಶನ್ ಅನ್ನು ಪರಿಶೀಲಿಸುವ ಮೂಲಕ 90 ದಿನಗಳ ಪ್ರಿವ್ಯೂ ಆಫರ್ ಅನ್ನು ನೀವು ಆಕ್ಟಿವೇಟ್ ಮಾಡಬೇಕು.

90 ದಿನಗಳ ಸೇವೆ

90 ದಿನಗಳ ಸೇವೆ

90 ದಿನಗಳ ಸೇವೆ ಮತ್ತು ಅನಿಯಮಿತ ಡೇಟಾ ಮತ್ತು ಕರೆಗಳ ಸೌಲಭ್ಯಗಳನ್ನು ನೀವು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಕೂಡಲೇ ಆಕ್ಟಿವೇಟ್ ಮಾಡಿಕೊಳ್ಳದೇ ಇದ್ದಲ್ಲಿ ಎಕ್ಸ್‌ಪೈಯರಿ ದಿನಾಂಕವನ್ನು ನೀವು ಪಡೆದುಕೊಳ್ಳುತ್ತೀರಿ.

ಪರಿಶೀಲನೆಗೆ 1977 ಗೆ ಕರೆಮಾಡಿ

ಪರಿಶೀಲನೆಗೆ 1977 ಗೆ ಕರೆಮಾಡಿ

ಜಿಯೋ ಸಂಖ್ಯೆಯಿಂದ 1977 ಗೆ ಕರೆಮಾಡಿ ಮತ್ತು ಆದ್ಯತೆಯ ಭಾಷೆಯನ್ನು ಆರಿಸಿ. ನಂತರ ಖಾತೆ/ಗುರುತು ವೆರಿಫಿಕೇಶನ್ ಆಪ್ಶನ್ ಅನ್ನು ನೀವು ಆಯ್ಕೆಮಾಡಬೇಕಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಯಲ್ಲಿರುವ ಕೀಯನ್ನು ಆರಿಸಿ.

4ಜಿ ಸಂಖ್ಯೆ ಆಕ್ಟಿವೇಟ್

4ಜಿ ಸಂಖ್ಯೆ ಆಕ್ಟಿವೇಟ್

ನಿಮ್ಮ 4ಜಿ ಸಂಖ್ಯೆ ಆಕ್ಟಿವೇಟ್ ಆಗಿದೆ ಎಂಬುದನ್ನು ನೀವು ಕೇಳಿಸಿಕೊಳ್ಳುತ್ತೀರಿ ಮತ್ತು ಕರೆಯನ್ನು ನೀವು ತಿರಸ್ಕರಿಸಬಹುದಾಗಿದೆ.

ಬೇಡದ ಎಸ್‌ಎಮ್‌ಎಸ್‌ಗಳ ಕಿರಿಕಿರಿ ಇಲ್ಲ

ಬೇಡದ ಎಸ್‌ಎಮ್‌ಎಸ್‌ಗಳ ಕಿರಿಕಿರಿ ಇಲ್ಲ

ಈ ಹಂತಗಳನ್ನು ಪೂರ್ಣಗೊಳಿಸಿದ ನಂತರ, ಟೆಲಿ ವೆರಿಫಿಕೇಶನ್‌ಗೆ ನಿಮ್ಮನ್ನು ಕರೆದುಕೊಂಡು ಹೋಗುವ ಕಿರಿಕಿರಿಯ ಎಸ್‌ಎಮ್‌ಎಸ್ ಕೋರಿಕೆಯನ್ನು ನೀವು ಪಡೆದುಕೊಳ್ಳಲಾರಿರಿ. ಜಿಯೋ ಕೆಲವೊಂದು ಸಮಸ್ಯೆಗಳನ್ನು ಹೊಂದಿದ್ದರೂ ಇದು ಅಧಿಕೃತವಾಗಿ ಲಾಂಚ್ ಆದ ನಂತರ ಈ ಸಮಸ್ಯೆಗಳನ್ನು ಪರಿಹರಿಸಲಿದೆ.

Best Mobiles in India

English summary
There are Jio customers with the SMS from the service provider requesting them to complete the tele-verification process despite having their SIM activated and enjoying the free and unlimited Preview Offer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X