7 ಟೆಕ್ ತಪ್ಪುಗಳನ್ನು ಮಾಡಬೇಡಿ

By Ashwath
|

ಗ್ಯಾಜೆಟ್‌ಗಳು ಹೆಚ್ಚು ಹೆಚ್ಚು ನಮ್ಮಲ್ಲಿ ಸಂಗ್ರಹವಾದಂತೆ ಅವುಗಳ ರಕ್ಷಣೆಯ ಜವಾಬ್ದಾರಿ ಸಹ ಹೆಚ್ಚಿರುತ್ತದೆ. ಆದರೆ ಕೆಲವೊಮ್ಮೆ ನಮ್ಮದೇ ಆದ ಕೆಲವು ತಪ್ಪುಗಳಿಂದ ಗ್ಯಾಜೆಟ್‌ಗಳನ್ನು ಹಾಳುಮಾಡಿಕೊಳ್ಳುತ್ತೇವೆ. ಹೀಗಾಗಿಇಂದು ಟೆಕ್‌ ಗ್ಯಾಜೆಟ್‌ಗಳನ್ನು ಖರೀದಿಸುವಾಗ,ಬಳಸುವಾಗ ಏನೇನು ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಮಕ್ಕಳ ಕೈಗೆ ಸಾಧನ ಸಿಗದಿರಲಿ:

ಮಕ್ಕಳ ಕೈಗೆ ಸಾಧನ ಸಿಗದಿರಲಿ:


ಮಕ್ಕಳ ಕೈಗೆ ಸುಲಭವಾಗಿ ಎಲೆಕ್ಟ್ರಾನಿಕ್‌ ಸಾಧನ ಸಿಗುವಂತೆ ಇಡಬೇಡಿ. ಆಟದ ಸಾಮಾಗ್ರಿ ಎಂದು ಭಾವಿಸಿ ಮಕ್ಕಳು ಆಟ ಆಡಿ ಬೀಳಿಸಿದರೆ ಸಾಧನ ಹಾಳಾಗುವ ಸಾಧ್ಯತೆ ಇರುತ್ತದೆ.

 ಫೈಲ್‌ ಫಾರ್ಮೆಟ್‌:

ಫೈಲ್‌ ಫಾರ್ಮೆಟ್‌:


ಬಹಳಷ್ಟು ಜನ ಕಡತ(ಫೈಲ್‌) ಬೇರೆ ಯಾವುದೋ ಫಾರ್ಮೆಟ್‌ನಲ್ಲಿ ಸೇವ್‌ ಮಾಡುತ್ತಾರೆ. ಈ ರೀತಿ ಮಾಡದೇ ಸೇವ್‌ ಮಾಡುವ ಮೊದಲು ಅದು ಯಾವ ಫಾರ್ಮೆಟ್‌‌ನಲ್ಲಿ ಸೇವ್‌ ಆಗುತ್ತದೆ ಎಂಬುದನ್ನು ನೋಡಿಕೊಂಡು ಸೇವ್‌ ಮಾಡಿದ್ದರೆ ಉತ್ತಮ

 ಉಚಿತ ಆಪ್‌ ಡೌನ್‌ಲೋಡ್‌ ಮಾಡಬೇಡಿ:

ಉಚಿತ ಆಪ್‌ ಡೌನ್‌ಲೋಡ್‌ ಮಾಡಬೇಡಿ:


ಸ್ಮಾರ್ಟ್‌ಫೋನ್‌/ಟ್ಯಾಬ್ಲೆಟ್‌ಗಳಲ್ಲಿ ಬೇಕಾದ ಆಪ್‌ಗಳನ್ನೇ ಮಾತ್ರ ಡೌನ್‌ಲೋಡ್‌ ಮಾಡಿ. ಆಪ್‌ ಅಂಗಡಿಗಳಲ್ಲಿ ಉಚಿತವಾಗಿ ಸಿಗುತ್ತದೆ ಎಂದು ಆಪ್‌ಗಳನ್ನು ಡೌನ್‌ಲೋಡ್‌ ಮಾಡಬೇಡಿ. ಡೌನ್‌ಲೋಡ್‌ ಮಾಡಿದ ಬಳಿಕ ಇಷ್ಟವಾಗದಿದ್ದಲ್ಲಿ ಅದನ್ನು ಅನ್‌ ಇನ್‌ಸ್ಟಾಲ್‌ ಮಾಡಿಬಿಡಿ.ಅನ್‌ಇನ್‌ಸ್ಟಾಲ್‌ ಮಾಡದಿದ್ದಲ್ಲಿ ಫೋನಿನ ಮೆಮೊರಿಯ ರ್‍ಯಾಮ್‌ ಮೆಮೊರಿಯನ್ನು ಕಬಳಿಸುತ್ತಿರುತ್ತದೆ.

 ಕಡಿಮೆ ಬ್ಯಾಟರಿಯಲ್ಲಿ ಪ್ರಯಾಣ:

ಕಡಿಮೆ ಬ್ಯಾಟರಿಯಲ್ಲಿ ಪ್ರಯಾಣ:


ಮನೆ ಬಿಟ್ಟು ಬೇರೆ ಕಡೆಗೆ ಹೋಗುವಾಗ ಬಹಳಷ್ಟು ಜನ ತಮ್ಮ ಸ್ಮಾರ್ಟ್‌ಫೋನ್‌‌‌/ಟ್ಯಾಬ್ಲೆಟ್‌‌ ಬ್ಯಾಟರಿ ಚಾರ್ಜ್‌ ಮಾಡದೇ ಪ್ರಯಾಣ ಮಾಡುತ್ತಾರೆ.ಪ್ರಯಾಣದ ಸಂದರ್ಭದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಬಳಸಲು ಆರಂಭಿಸಿದ್ದರೆ ಕೆಲವೇ ಕ್ಷಣದಲ್ಲಿ ಸಾಧನದಲ್ಲಿರುವ ಬ್ಯಾಟರಿ ಖಾಲಿಯಾಗುತ್ತದೆ. ಹೀಗಾಗಿ ಹೊರಗಡೆ ಪ್ರಯಾಣಕ್ಕೆ ಹೋಗುವ ಮೊದಲು ಸಂಪೂರ್ಣ‌ವಾಗಿ ಬ್ಯಾಟರಿಯನ್ನು ಚಾರ್ಜ್‌ ಮಾಡಿ ಪ್ರಯಾಣ ಮಾಡುವುದು ಉತ್ತಮ.

 ಹಳೇಯ ಆಂಡ್ರಾಯ್ಡ್ ಫೋನ್‌ ಖರೀದಿಸಬೇಡಿ:

ಹಳೇಯ ಆಂಡ್ರಾಯ್ಡ್ ಫೋನ್‌ ಖರೀದಿಸಬೇಡಿ:


ಗೂಗಲ್ ಆಂಡ್ರಾಯ್ಡ್ ಓಎಸ್‌‌ನ್ನು ಅಪ್‌ಗ್ರೇಡ್‌ ಮಾಡುತ್ತಲೇ ಇರುತ್ತದೆ. ಹೀಗಾಗಿ ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ಹಳೇಯ ಆಂಡ್ರಾಯ್ಡ್‌ ಓಎಸ್‌‌ ಸ್ಮಾರ್ಟ್‌ಫೋನ್‌ ಖರೀದಿಸಬೇಡಿ.ಸಾಧ್ಯವಾದಷ್ಟು ಆಂಡ್ರಾಯ್ಡ್‌ ಹೊಸ ಓಎಸ್‌‌,ಅಥವಾ ಕಂಪೆನಿ ಓಎಸ್‌ ಅಪ್‌ಗ್ರೇಡ್‌ಗೆ ಅವಕಾಶ ಕಲ್ಪಿಸುತ್ತದೋ ಎನ್ನುವುದನ್ನು ನೋಡಿಕೊಂಡು ಖರೀದಿಸಿದರೆ ಉತ್ತಮ.

 ಸಮಸ್ಯೆ ನಿವಾರಿಸಲು ಪ್ರಯತ್ನಿಸಿ:

ಸಮಸ್ಯೆ ನಿವಾರಿಸಲು ಪ್ರಯತ್ನಿಸಿ:


ಯಾವುದೇ ಸಮಸ್ಯೆ ಸೃಷ್ಟಿಯಾದಲ್ಲಿ ಕೂಡಲೇ ಬೇರೆಯವರ ಸಹಾಯ ಕೇಳಬೇಡಿ. ಇಂಟರ್‌ನೆಟ್‌ನಲ್ಲಿ ಆ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂದು ಟೈಪ್‌ ಮಾಡಿದರೆ ಬೇಕಾದಷ್ಟು ಫಲಿತಾಂಶ ತೋರಿಸುತ್ತದೆ. ಈ ಫಲಿತಾಂಶವನ್ನು ನೋಡಿ ಸಮಸ್ಯೆ ನಿವಾರಿಸಲು ಪ್ರಯತ್ನಿಸಿ. ಆ ಬಳಿಕವೂ ಸಮಸ್ಯೆ ಪರಿಹಾರವಾಗದಿದ್ದಲ್ಲಿ ತಜ್ಞರನ್ನು ಸಂಪರ್ಕಿಸಿ.

ಇಮೇಲ್‌  ಐಡಿ:

ಇಮೇಲ್‌ ಐಡಿ:


[email protected] ಈ ಇಮೇಲ್‌ ಐಡಿ ಈಗ ಇಷ್ಟವಾಗಬಹುದು. ಆದರೆ ಉದ್ಯೋಗ ಸಂದರ್ಭದಲ್ಲಿ ಅಥವಾ ಬೇರೆಯವರಿಗೆ ಇಮೇಲ್‌ ಮೂಲಕ ಪ್ರತಿಕ್ರಿಯಿಸುವಾಗ ಈ ಐಡಿ ಅಷ್ಟೇನು ಸರಿ ಕಾಣುವುದಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X