ಟೆಕ್ ಟಿಪ್ಸ್...ಲಿಂಕ್‌ ತೆರೆಯುವ ಸಮಯ ಉಳಿಸಿ!! ಏನಿದು?

ಲಿಂಕ್‌ ತೆರೆದುಕೊಳ್ಳಲು ಮೊಬೈಲ್‌ನಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆಯೇ?

|

ಆನ್‌ಲೈನ್ ಸುದ್ದಿಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಲಿಂಕ್‌ಗಳಾಗಿ ಎಲ್ಲರನ್ನು ತಲುಪುತ್ತಿವೆ. ಸುದ್ದಿಗಳನ್ನು ಓದಲು ಲಿಂಕ್ ತೆರೆದರೆ ಆ ಜಾಲತಾಣದ ಡಿಫಾಲ್ಟ್‌ ಬ್ರೌಸರ್‌ನಿಂದ ಆ ಲಿಂಕ್‌ ತೆರೆದುಕೊಳ್ಳುತ್ತದೆ. ಹೀಗೆ ಲಿಂಕ್‌ ತೆರೆದುಕೊಳ್ಳಲು ಮೊಬೈಲ್‌ನಲ್ಲಿ ಹೆಚ್ಚು ಸಮಯ ಹಿಡಿಯುತ್ತದೆ.!!

ಫೇಸ್‌ಬುಕ್‌ಗೆ ಶೇರ್‌ ಆಗಿರುವ ಯೂಟ್ಯೂಬ್‌ ವಿಡಿಯೊ ಒಂದನ್ನು ನೀವು ನಿಮ್ಮ ಸ್ಮಾರ್ಟ್‌ಫೋನ್‌ ಮೂಲಕ ತೆರೆಯಲು ಬಯಸಿದರೆ ಲಿಂಕ್‌ ಕ್ಲಿಕ್‌ ಮಾಡಿದ ತಕ್ಷಣ ಅದು ಫೇಸ್‌ಬುಕ್‌ ಡಿಫಾಲ್ಟ್‌ ಬ್ರೌಸರ್‌ ಮೂಲಕ ತೆರೆದುಕೊಳ್ಳಲು ಆರಂಭಿಸುತ್ತದೆ.! ನಂತರ ಯೂಟ್ಯೂಬ್‌ಗೆ ಸಂಪರ್ಕ ಪಡೆದು ನೀವು ಕ್ಲಿಕ್‌ ಮಾಡಿದ ವಿಡಿಯೊ ತೆರೆದುಕೊಳ್ಳುತ್ತದೆ. ಹೀಗೆ ಲಿಂಕ್‌ ತೆರೆದುಕೊಳ್ಳಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ.

ಟೆಕ್ ಟಿಪ್ಸ್...ಲಿಂಕ್‌ ತೆರೆಯುವ ಸಮಯ ಉಳಿಸಿ!! ಏನಿದು?

ಜಿಯೋ ಪ್ರೈಮ್ ಆಫರ್‌ಗೆ ಆನ್‌ಲೈನ್‌ನಲ್ಲಿ ರಿಜಿಸ್ಟರ್ ಆಗುವುದು ಹೇಗೆ?

ಹಾಗಾಗಿ, ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಆಗಿರುವ ಲಿಂಕ್‌ ತೆರೆಯಬೇಕಾದರೆ ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಆಪ್‌ ಮೂಲಕ ತೆರೆಯಿರಿ. ಫೇಸ್‌ಬುಕ್‌ನಲ್ಲಿ ಶೇರ್‌ ಆಗಿರುವ ಯೂಟ್ಯೂಬ್ ವಿಡಿಯೊ ಲಿಂಕ್‌ ತೆರೆಯಬೇಕೆಂದರೆ ಆ ಲಿಂಕ್‌ ಕ್ಲಿಕ್ಕಿಸಿ. ಅದು ಡಿಫಾಲ್ಟ್‌ ಬ್ರೌಸರ್‌ನಿಂದ ತೆರೆದುಕೊಳ್ಳಲು ಮುಂದಾದಾಗ ಬಲಭಾಗದಲ್ಲಿ ಕಾಣುವ ಆಯ್ಕೆಗಳಿಗೆ ಹೋಗಿ ಅಲ್ಲಿ Open in YouTube ಎಂಬಲ್ಲಿ ಕ್ಲಿಕ್ ಮಾಡಿ.

ಟೆಕ್ ಟಿಪ್ಸ್...ಲಿಂಕ್‌ ತೆರೆಯುವ ಸಮಯ ಉಳಿಸಿ!! ಏನಿದು?

ಈಗ ಆ ಲಿಂಕ್‌ ಯೂಟ್ಯೂಬ್ ಮೂಲಕ ಬೇಗನೆ ತೆರೆದುಕೊಳ್ಳುತ್ತದೆ. ಇದರಿಂದ ನಿಮ್ಮ ಸಮಯವೂ ಉಳಿಯುತ್ತದೆ.!! ಇನ್ನು ನೀವು ಯಾವ ಲಿಂಕ್‌ ತೆರೆಯುತ್ತಿದ್ದೀರೋ ಆ ಆಪ್ ನಿಮ್ಮಲ್ಲಿದ್ದರೆ ಆ ಆಪ್ ಮೂಲಕವೇ ಲಿಂಕ್‌ ತೆರೆಯಿರಿ. ಇದರಿಂದ ಲಿಂಕ್‌ ಬೇಗನೆ ತೆರೆಯುತ್ತದೆ ಮತ್ತು ಸಮಯವೂ ಉಳಿಯುತ್ತದೆ.

Best Mobiles in India

English summary
learn more about opening a social media link. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X