ಹ್ಯಾಕರ್‌ಗಳಿಂದ ಜಿಮೇಲ್ ಸಂರಕ್ಷಣೆ ಹೇಗೆ?

ಗಿಜ್‌ಬಾಟ್ ಇಂದಿಲ್ಲಿ ನೀಡುತ್ತಿರುವ ಸಲಹೆಗಳು ಹ್ಯಾಕರ್‌ಗಳ ದಿಕ್ಕನ್ನು ತಪ್ಪಿಸಿ ನಿಮ್ಮ ಖಾತೆಯನ್ನು ಸಂರಕ್ಷಿಸಲಿದೆ.

By Shwetha
|

ಯಾವುದೇ ಸಾಮಾಜಿಕ ಮಾಧ್ಯಮ ಅಥವಾ ಜಿಮೇಲ್‌ನಂತಹ ತಾಣದಲ್ಲಿ ಇಂದು ದೋಷಪೂರಿತ ಚಟುವಟಿಕೆಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಅದಾಗ್ಯೂ ಕೆಲವೊಂದು ಸಲಹೆಗಳನ್ನು ಪಾಲಿಸುವುದರ ಮೂಲಕ ನಿಮ್ಮ ಖಾತೆಗಳನ್ನು ಹ್ಯಾಕರ್‌ಗಳಿಂದ ಸಂರಕ್ಷಿಸಿಕೊಳ್ಳಬಹುದಾಗಿದೆ.

ಓದಿರಿ: ಜಿಯೋದಿಂದ ಉಚಿತ ಕಾಲರ್ ಟ್ಯೂನ್ ಪಡೆದುಕೊಳ್ಳುವುದು ಹೇಗೆ?

ಇಂದು ಪ್ರತಿಯೊಬ್ಬರೂ ಜಿಮೇಲ್ ಖಾತೆಯನ್ನು ಹೊಂದಿದ್ದು ಇದು ಹ್ಯಾಕರ್‌ಗಳಿಗೆ ಸಾಮಾನ್ಯ ವೇದಿಕೆ ಎಂದೆನಿಸಿಬಿಟ್ಟಿದ್ದು ಅವರಿಗೆ ಉತ್ತಮ ಸದಾವಕಾಶವನ್ನು ಕಂಡುಕೊಳ್ಳುವ ವಿಧಾನ ಎಂದೇ ಪರಿಗಣಿತವಾಗಿದೆ. ಆದರೆ ಗಿಜ್‌ಬಾಟ್ ಇಂದಿಲ್ಲಿ ನೀಡುತ್ತಿರುವ ಸಲಹೆಗಳು ಹ್ಯಾಕರ್‌ಗಳ ದಿಕ್ಕನ್ನು ತಪ್ಪಿಸಿ ನಿಮ್ಮ ಖಾತೆಯನ್ನು ಸಂರಕ್ಷಿಸಲಿದೆ.

ಓದಿರಿ: ಫೇಸ್‌ಬುಕ್ ಆಪ್ ಬಳಸಿಕೊಂಡು ಫೋಟೋ ಎಡಿಟ್ ಮಾಡುವುದು ಹೇಗೆ?

ಇಮೇಲ್ ಎಕ್ಸ್‌ಟೆನ್ಶನ್ ಸಹಾಯ

ಇಮೇಲ್ ಎಕ್ಸ್‌ಟೆನ್ಶನ್ ಸಹಾಯ

ತಮ್ಮ ಪಿಸಿಯಲ್ಲಿ ಗೂಗಲ್ ಕ್ರೋಮ್ ಅನ್ನು ತೆರೆಯಬೇಕು. ಕೆಟ್ಟ ಇಮೇಲ್ ಅನ್ನು ಕ್ಲಿಕ್ ಮಾಡಿ ಮತ್ತು 'ಆಡ್ ಟು ಕ್ರೋಮ್" ಎಂಬುದಾಗಿ ಉಳಿಸಿಕೊಂಡು ಟ್ರ್ಯಾಕ್ ಮಾಡಿದ ಇಮೇಲ್‌ಗೆ ಅದನ್ನು ಸೇರಿಸಿ. ಕ್ರೋಮ್‌ಗೆ ಅದನ್ನು ಸೇರಿಸಿದ ನಂತರ, ಜಿಮೇಲ್ ಖಾತೆಗೆ ಬಳಕೆದಾರ ಲಾಗಿನ್ ಆದಂತೆಲ್ಲಾ ಇಮೇಲ್‌ಗಳನ್ನು ತೆರೆದಂತೆಲ್ಲಾ ಇದು ಕಣ್ಣಿನ ಚಿತ್ರವಿರುವ ಗುರುತನ್ನು ತೋರಿಸುತ್ತದೆ ಇದರರ್ಥ ಇಮೇಲ್ ಅನ್ನು ಹ್ಯಾಕರ್ ಟ್ರ್ಯಾಕ್ ಮಾಡಿದ್ದಾನೆ ಎಂದಾಗಿರುತ್ತದೆ.

ಗೂಗಲ್ 2 ಸ್ಟೆಪ್ ವೆರಿಫಿಕೇಶನ್

ಗೂಗಲ್ 2 ಸ್ಟೆಪ್ ವೆರಿಫಿಕೇಶನ್

ಗೂಗಲ್ ವೆರಿಫಿಕೇಶನ್ ಪ್ರೊಸೆಸ್ ಹೆಚ್ಚು ಸುಭದ್ರ ಮತ್ತು ಸುರಕ್ಷಿತ ಎಂದೆನಿಸಿದ್ದು ಬೇರೆ ಬೇರೆ ತೊಂದರೆಗಳು ಮತ್ತು ಹ್ಯಾಕರ್‌ಗಳಿಂದ ನಿಮ್ಮ ಜಿಮೇಲ್ ಖಾತೆಯನ್ನು ಇದು ಸಂರಕ್ಷಿಸುತ್ತದೆ. ಇದು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು, ಜಿಮೇಲ್ ಬಳಕೆದಾರರು ಒಂದು ಸಮಯದ ಲಾಗಿನ್ ಕೋಡ್ ಅನ್ನು ನೀಡಬೇಕು ಇದು ಟೆಕ್ಸ್ಟ್ ಅಥವಾ ಅಥೆಂಟಿಕೇಶನ್ ಅಪ್ಲಿಕೇಶನ್ ಮುಖಾಂತರವಾಗಿರಬೇಕು.

ಸೆಕ್ಯುರಿಟಿ ಕೋಡ್

ಸೆಕ್ಯುರಿಟಿ ಕೋಡ್

ಎಲ್ಲಿಯಾದರೂ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲು ಯಾರಾದರೂ ಪ್ರಯತ್ನಿಸಿದಲ್ಲಿ, ಸೆಕೆಂಡರಿ ಡಿವೈಸ್‌ನ ಸೆಕ್ಯುರಿಟಿ ಕೋಡ್ ಅನ್ನು ಹ್ಯಾಕರ್ ಗುರುತಿಸಬೇಕು, ಇದು ಸಾಮಾನ್ಯವಾಗಿ ಕಷ್ಟವಾಗಿರುತ್ತದೆ ಮತ್ತು ಇದು ನಿಮ್ಮ ಖಾತೆಯನ್ನು ಸಂರಕ್ಷಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಸ್ಪ್ಯಾಮ್ ಅಥವಾ ಫಿಶ್ಶಿಂಗ್ ಸಂದೇಶಗಳನ್ನು ನಿರಾಕರಿಸಿ

ಯಾವುದೇ ಸ್ಪ್ಯಾಮ್ ಅಥವಾ ಫಿಶ್ಶಿಂಗ್ ಸಂದೇಶಗಳನ್ನು ನಿರಾಕರಿಸಿ

ಜಿಮೇಲ್ ಬಳಕೆದಾರರು ಯಾವುದೇ ದೋಷಪೂರಿತ ಇಮೇಲ್‌ಗಳನ್ನು ಅವಾಯ್ಡ್ ಮಾಡಲೇಬೇಕು "ಯುವರ್ ಮನಿ ಈಸ್ ವೈಟಿಂಗ್" "ಕ್ಲೈಮ್ ಯುವರ್ ರಿವಾರ್ಡ್" ಮೊದಲಾದವು. ಇಂತಹ ಇಮೇಲ್‌ಗಳನ್ನು ತೆರೆಯದಿರಿ ಮತ್ತು ಅಜ್ಞಾತ ಸ್ವೀಕೃತದಾರರು ಇದನ್ನು ಕಳುಹಿಸುತ್ತಿರುತ್ತಾರೆ.

ನಿಮ್ಮ ಸಂಪರ್ಕ ಸಂಖ್ಯೆಯನ್ನು ಯಾವಾಗಲೂ ಅಪ್‌ಡೇಟ್ ಮಾಡಿಕೊಳ್ಳುತ್ತಿರಿ

ನಿಮ್ಮ ಸಂಪರ್ಕ ಸಂಖ್ಯೆಯನ್ನು ಯಾವಾಗಲೂ ಅಪ್‌ಡೇಟ್ ಮಾಡಿಕೊಳ್ಳುತ್ತಿರಿ

ನಿಮ್ಮ ಖಾತೆಯನ್ನು ನೀವು ಬಳಸುತ್ತಿರುವ ಸಂಖ್ಯೆಯೊಂದಿಗೆ ಅಪ್‌ಡೇಟ್ ಮಾಡುತ್ತಿರಿ, ನಿಮ್ಮ ಖಾತೆಯಲ್ಲಿ ಏನಾದರೂ ದೋಷಪೂರಿತ ಚಟುವಟಿಕೆಗಳು ನಡೆಯುತ್ತಿದೆಯೇ ಎಂಬುದನ್ನು ಕಂಡುಕೊಳ್ಳಿ.

ರಿಕವರಿ ಇಮೇಲ್ ವಿಳಾಸವನ್ನು ಬಳಸುವುದು ಅಗತ್ಯ

ರಿಕವರಿ ಇಮೇಲ್ ವಿಳಾಸವನ್ನು ಬಳಸುವುದು ಅಗತ್ಯ

ದೋಷಪೂರಿತ ಚಟುವಟಿಕೆಗಳನ್ನು ಅರಿತುಕೊಳ್ಳಲು ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡುವ ಬದಲಿಗೆ, ಪ್ರತಿಯೊಬ್ಬ ಜಿಮೇಲ್ ಬಳಕೆದಾರರು ಪರ್ಯಾಯ ಇಮೇಲ್ ವಿಳಾಸವನ್ನು ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
We at GizBot have come up with tricks to follow to protect your Gmail account from being attacked by hackers and stalkers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X