ಯಾವುದೇ ಗ್ಯಾಜೆಟ್ ಖರೀದಿಸುವಾಗ ಈ ಅಂಶಗಳು ತಲೆಯಲ್ಲಿರಲಿ

By Shwetha
|

ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಖರೀದಿಸುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ಸಣ್ಣ ಮಟ್ಟಿಗಿನ ಯೋಜನೆಯೊಂದನ್ನು ನೀವು ಸಿದ್ಧಪಡಿಸಬೇಕು, ಇದು ನಿಮ್ಮ ಹಣವನ್ನು ಉಳಿತಾಯ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನೀವು ಯಾವುದೇ ಗ್ಯಾಜೆಟ್‌ಗಳನ್ನು ಖರೀದಿಸುವ ಮುನ್ನ ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನು ಕುರಿತು ಮಾಹಿತಿ ನೀಡುತ್ತಿದ್ದೇವೆ.

ಓದಿರಿ: ರಾತ್ರಿ ವೇಳೆಯಲ್ಲಿ ಕಂಪ್ಯೂಟರ್ ಶಟ್‌ಡೌನ್ ಏಕೆ ಮಾಡಬೇಕು?

ಕ್ಯಾಲೆಂಡರ್ ಪರಿಶೀಲಿಸಿ

ಕ್ಯಾಲೆಂಡರ್ ಪರಿಶೀಲಿಸಿ

ನೀವು ಅವಸರದಲ್ಲಿ ಇಲ್ಲವೆಂದಾದಲ್ಲಿ, ಹಬ್ಬಗಳ ಸೀಸನ್‌ಗಾಗಿ ಕಾಯಿರಿ. ಈ ಸಮಯದಲ್ಲಿ ನಿಮಗೆ ದರಕಡಿತ ಆಫರ್‌ಗಳು ಲಭ್ಯವಿರುತ್ತದೆ ಅದನ್ನು ಬಳಸಿಕೊಳ್ಳಿ. ನಿಮಗೆ ಈ ಸಮಯದಲ್ಲಿ ಉತ್ತಮ ಡೀಲ್‌ಗಳು ದೊರೆಯುತ್ತದೆ.

ರಿವ್ಯೂ ಪರಿಶೀಲಿಸಿಕೊಳ್ಳಿ

ರಿವ್ಯೂ ಪರಿಶೀಲಿಸಿಕೊಳ್ಳಿ

ಗ್ಯಾಜೆಟ್‌ಗಳಿಗಾಗಿ ಇರುವ ಜಾಹೀರಾತುಗಳಿಗೆ ಮಾರುಹೋಗಬೇಡಿ. ನೀವು ಯಾವುದೇ ಗ್ಯಾಜೆಟ್ ಅನ್ನು ಖರೀದಿಸುವ ಮುನ್ನ, ಗ್ರಾಹಕರ ಮತ್ತು ಉತ್ಪನ್ನ ರಿವ್ಯೂವನ್ನು ಗಮನಿಸಿಕೊಳ್ಳಿ. ಆನ್‌ಲೈನ್ ಮತ್ತು ಆಫ್‌ಲೈನ್ ಇವೆರಡರಲ್ಲೂ ಇದನ್ನು ಮಾಡಲು ಸಾಧ್ಯ. ರಿವ್ಯೂಗಳನ್ನು ಪರಿಶೀಲಿಸಿದೇ ಗ್ಯಾಜೆಟ್‌ಗಳನ್ನು ಜಾಹೀರಾತುಗಳಿಗೆ ಮರುಳಾಗಿ ಖರೀದಿಸದಿರಿ.

ಅಪ್ಲಿಕೇಶನ್‌ಗಳ ಮೂಲಕ ಹೋಲಿಕೆ

ಅಪ್ಲಿಕೇಶನ್‌ಗಳ ಮೂಲಕ ಹೋಲಿಕೆ

ಅಪ್ಲಿಕೇಶನ್ ರೆವಲ್ಯೂಶನ್ ಮೂಲಕ ಸ್ಮಾರ್ಟ್‌ಫೋನ್ ಮಾಲೀಕರು ಉತ್ತಮವಾದ ಬೆಲೆ ಹೋಲಿಕೆಯನ್ನು ಆನ್‌ಲೈನ್ ರೀಟೈಲರ್‌ಗಳಲ್ಲಿ ಮತ್ತು ಸ್ಥಳೀಯ ಶಾಪ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಇದು ನಿಮಗೆ ಸರಿಯಾದ ಡೇಟಾವನ್ನು ಒದಗಿಸುತ್ತವೆ ಆದರೆ ಮಾರುಕಟ್ಟೆ ಡೇಟಾ ಅಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಆನ್‌ಲೈನ್ ಮೋಸದ ಬಗ್ಗೆ ಎಚ್ಚರವಿರಲಿ

ಆನ್‌ಲೈನ್ ಮೋಸದ ಬಗ್ಗೆ ಎಚ್ಚರವಿರಲಿ

ಆನ್‌ಲೈನ್‌ನಲ್ಲಿ ನೀವು ಗ್ಯಾಜೆಟ್ ಅನ್ನು ಖರೀದಿಸುತ್ತಿದ್ದೀರಿ ಎಂದಾದಲ್ಲಿ ನೀವು ಮೋಸಕ್ಕೆ ಒಳಗಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಉತ್ತಮವಾದ ನಿಖರ ಮಾಹಿತಿಯುಳ್ಳ ವೆಬ್‌ಸೈಟ್‌ಗಳಿಂದಲೇ ಶಾಪ್ ಮಾಡಿ. ತಯಾರಕರ ವಾರಂಟಿಯನ್ನು ಹೊಂದಿರುವ ಉತ್ಪನ್ನವನ್ನೇ ಖರೀದಿಸಿ.

ಮರುಪರಿಶೀಲನೆ

ಮರುಪರಿಶೀಲನೆ

ಅತಿಮುಖ್ಯವಾದ ಅಂಶವೆಂದರೆ ನೀವು ಖರೀದಿಸಿರುವ ಉತ್ಪನ್ನ ತೆರೆದ ಮತ್ತು ಯಾವುದೇ ಹಾನಿಯನ್ನು ಮಾಡಿಕೊಂಡಿಲ್ಲ ಎಂಬುದನ್ನು ಖಾತ್ರಿಪಡಿಸಿ. ನೀವು ಆಫ್‌ಲೈನ್‌ನಲ್ಲಿ ಖರೀದಿಸುತ್ತಿದ್ದೀರಿ ಎಂದಾದಲ್ಲಿ, ಅಲ್ಲಿಯೇ ನಿಮಗೆ ಪರಿಶೀಲಿಸಿಕೊಳ್ಳಬಹುದಾಗಿದೆ. ಆನ್‌ಲೈನ್‌ನಲ್ಲಿ ಆದಲ್ಲಿ ನೀವು ಶಿಪ್‌ಮೆಂಟ್ ಅನ್ನು ಪಡೆದುಕೊಂಡ ನಂತರ ಒಮ್ಮೆ ಪರಿಶೀಲಿಸಿ.

Best Mobiles in India

English summary
Divyan Gupta, CEO, Gizmofashion.com, has shared some tips to keep in mind while buying a gadget.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X