ನಿಮ್ಮ ಲ್ಯಾಪ್‌ಟಾಪ್ ತಂಪಾಗಿರಲಿ!!!

By Shwetha
|

ಇಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಖರೀದಿಸಿದ ನಂತರ ಅದನ್ನು ಜೋಪಾನವಾಗಿ ಇರಿಸಿಕೊಳ್ಳುವುದು ಹೆಚ್ಚು ಪರಿಶ್ರಮದ ಕೆಲಸ ಎಂಬುದೇ ನಿಮ್ಮ ಭಾವನೆಯಾಗಿರಬಹುದು ಆದರೆ ನಿಮ್ಮ ಬೆಲೆಬಾಳುವ ಸಮಯವನ್ನು ಉಳಿಸಿ ಕೆಲವೊಂದು ಸರಳ ಹಂತಗಳನ್ನು ಅನುಸರಿಸುವ ಮೂಲಕ ಲ್ಯಾಪ್‌ಟಾಪ್, ಮೊಬೈಲ್, ಟ್ಯಾಬ್ಲೆಟ್ ಮೊದಲಾದ ದುಬಾರಿ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬಹುದಾಗಿದೆ.

ಓದಿರಿ: ಆನ್‌ಲೈನ್‌ನಲ್ಲಿ ಆಧಾರ್‌ಕಾರ್ಡ್ ಸ್ಟೇಟಸ್ ಪರಿಶೀಲನೆ ಹೇಗೆ?

ಇದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದೀರಾ? ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ನಿಮ್ಮ ಲ್ಯಾಪ್‌ಟಾಪ್ ಸುರಕ್ಷತೆಯನ್ನು ಮನೆಯಲ್ಲೇ ದೊರೆಯುವ ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಮೊಟ್ಟೆ ಕಾರ್ಟಾನ್ಸ್

ಮೊಟ್ಟೆ ಕಾರ್ಟಾನ್ಸ್

ಮೊಟ್ಟೆಯನ್ನಿಡುವ ಖಾಲಿ ಟ್ರೇಯನ್ನು ಲ್ಯಾಪ್‌ಟಾಪ್ ಸ್ಟ್ಯಾಂಡ್ ಅನ್ನಾಗಿ ಬಳಸಿ. ನಿಮ್ಮ ಕಾಲ ಮೇಲೆ ಇಡುವುದರಿಂದ ಬಿಸಿಯಾಗುವುದು ಇಲ್ಲವೇ ಮತ್ತಿತರ ಸಮಸ್ಯೆಗಳನ್ನು ನೀವು ಎದುರಿಸಬಹುದು ಆದ್ದರಿಂದ ಮೊಟ್ಟೆ ಟ್ರೇಯನ್ನು ಸ್ಟ್ಯಾಂಡ್ ಮಾದರಿಯಲ್ಲಿ ಉಪಯೋಗಿಸಿ

ಸುತ್ತಲಿನ ವಾತಾವರಣವನ್ನು ತಂಪಾಗಿರಿಸಿ

ಸುತ್ತಲಿನ ವಾತಾವರಣವನ್ನು ತಂಪಾಗಿರಿಸಿ

ನಿಮ್ಮ ಸುತ್ತಲಿನ ವಾತಾವರಣ ತಂಪಾಗಿರಲಿ. ಹವಾನಿಯಂತ್ರಿತ ಸ್ಥಳ ಮತ್ತು ತಂಪಾದ ಸ್ಥಳದಲ್ಲಿ ಲ್ಯಾಪ್‌ಟಾಪ್ ಅನ್ನು ಇರಿಸುವುದರಿಂದ ಸಿಸ್ಟಮ್ ಬಿಸಿಯಾಗುವುದು ತಪ್ಪುತ್ತದೆ

ಧೂಳು ತೆಗೆಯಿರಿ

ಧೂಳು ತೆಗೆಯಿರಿ

ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳು ಬಿಸಿಯಾಗುವುದಕ್ಕೆ ಧೂಳು ಒಂದು ಕಾರಣ. ಕಂಪ್ರೆಸ್ಡ್ ಏರ್ ಸ್ಪ್ರೆಯನ್ನು ಬಳಸಿ ಧೂಳು ಇರುವಲ್ಲಿ ಉಪಯೋಗಿಸಿ. ಹತ್ತಿಯನ್ನು ಬಳಸಿ ಲ್ಯಾಪ್‌ಟಾಪ್ ಇಲ್ಲವೇ ಕಂಪ್ಯೂಟರ್ ಧೂಳು ತೆಗೆಯಬಹುದು.

ನಿಮ್ಮ ಸೆಟ್ಟಿಂಗ್ಸ್ ಪರಿಶೀಲಿಸಿ ಮತ್ತು ಹೊಂದಿಸಿ

ನಿಮ್ಮ ಸೆಟ್ಟಿಂಗ್ಸ್ ಪರಿಶೀಲಿಸಿ ಮತ್ತು ಹೊಂದಿಸಿ

ಹೆಚ್ಚಿನ ಗ್ರಾಫಿಕ್ಸ್ ಲೋಡ್‌ ಅನ್ನು ಲ್ಯಾಪ್‌ಟಾಪ್ ತಾಳಿಕೊಳ್ಳುತ್ತದೆ ಎಂಬುದನ್ನು ಖಾತ್ರಿಪಡಿಸಿ.

ವಿಶ್ರಾಂತಿ ನೀಡಿ

ವಿಶ್ರಾಂತಿ ನೀಡಿ

ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಬಳಸುತ್ತಿದ್ದೀರಿ ಎಂದಾದಲ್ಲಿ, ಇದನ್ನು ಪ್ರತ್ಯೇಕಿಸಿ. ಆಗಾಗ್ಗೆ ಸಿಸ್ಟಮ್ ಅನ್ನು ಸ್ಲೀಪ್ ಮೋಡ್ ಇಲ್ಲವೇ ಶಟ್‌ಡೌನ್ ಮಾಡುವುದು ಮಾಡಬೇಡಿ. ನಿಮ್ಮ ಡೆಸ್ಕ್‌ಟಾಪ್ ತೆಗೆದುಕೊಳ್ಳುವ ಎಲ್ಲಾ ಭಾರವನ್ನು ಲ್ಯಾಪ್‌ಟಾಪ್ ತಡೆದುಕೊಳ್ಳಲಾರದು ಎಂಬುದು ನೆನಪಿರಲಿ. ಆದ್ದರಿಂದ ಜಾಗರೂಕತೆಯಿಂದ ಬಳಸಿ.

Best Mobiles in India

English summary
By using one (or all) of these techniques, you can keep your laptop cool and efficient without squandering your money on a cooling pad, we have got five really simple hacks for you.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X