ನೀವು ಕಂಡರಿಯದ ಲಾಲಿಪಪ್ ವಿಶೇಷತೆಗಳು

By Shwetha
|

ಆಂಡ್ರಾಯ್ಡ್ 5.0 ಲಾಲಿಪಪ್ ಅನ್ನು ನೆಕ್ಸಸ್ 9 ಹಾಗೂ ನೆಕ್ಸಸ್ 6 ನಲ್ಲಿ ನಮಗೆ ಕಾಣಬಹುದಾಗಿದೆ ಈ ಆವೃತ್ತಿಯು ಮುಂಬರುವ ದಿನಗಳಲ್ಲಿ ಹೆಚ್ಚಿನ ಡಿವೈಸ್‌ಗಳಲ್ಲಿ ಬರಲಿದ್ದು ನಿಮಗೆ ಈ ಓಎಸ್ ಕುರಿತಾದ ಅಭೂತಪೂರ್ವ ಸಂಗತಿಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಇದನ್ನೂ ಓದಿ: ಹೊಟ್ಟೆಕಿಚ್ಚು ಉಂಟುಮಾಡುವ ಐಫೋನ್ ಆಪ್ಸ್‌ಗಳಿವು

ಲಾಲಿಪಪ್‌ನ ಈ ವಿಶೇಷತೆಗಳು ನಿಜಕ್ಕೂ ಕಣ್ಮನಸೆಳೆಯುವಂತಿದ್ದು ಓಎಸ್‌ನ ಕಮಾಲು ಅದನ್ನು ನಿಮ್ಮ ಡಿವೈಸ್‌ನಲ್ಲಿ ಇನ್‌ಸ್ಟಾಲ್ ಮಾಡುವಂತೆ ಮಾಡುತ್ತದೆ. ಲಾಲಿಪಪ್‌ನ ಅದ್ಭುತ ವಿಶೇಷತೆಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಅರಿತುಕೊಳ್ಳಿ. ಇದು ಹೆಚ್ಚು ಪ್ರಯೋಜನಕಾರಿಯಾಗಿರುವ ಸಲಹೆ ಮತ್ತು ಸೂಚನೆಗಳಾಗಿದ್ದು ನಿಮ್ಮಲ್ಲಿ ಬೆರಗನ್ನುಂಟು ಮಾಡುವುದು ಸಹಜವಾಗಿದೆ.

#1

#1

ಲಾಲಿಪಪ್ ಚಿತ್ರದ ಮೇಲೆ ಹೆಚ್ಚು ಬಾರಿ ನೀವು ತಟ್ಟಿದಾಗ ಮತ್ತು ದೀರ್ಘವಾಗಿ ಒತ್ತಿದಾಗ ಆಂಡ್ರಾಯ್ಡ್ ಥೀಮ್ ಉಳ್ಳ ಮಿನಿ ಗೇಮ್ ಈಸ್ಟರ್ ಎಗ್ ಗೇಮ್ ಕಾಣಸಿಗುತ್ತದೆ.

#2

#2

ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಹೆಚ್ಚು ತಂತ್ರಜ್ಞಾನವನ್ನು ಈ ದಿನಗಳಲ್ಲಿ ಅಳವಡಿಸಿದ್ದು ಆಂಡ್ರಾಯ್ಡ್‌ನ ಲಾಲಿಪಪ್‌ನಲ್ಲಿ ನಿರ್ದಿಷ್ಟವಾಗಿ ನಿಮಗೆ ಸೆಟ್ಟಿಂಗ್ಸ್ ಮೆನುವನ್ನು ಹುಡುಕಬಹುದಾಗಿದೆ. ನೀವು ಏನನ್ನು ಎದುರು ನೋಡುತ್ತಿದ್ದೀರೋ ಅದನ್ನು ವೇಗ ಮತ್ತು ಸರಳವಾಗಿ ನಿಮಗೆ ದೊರಕಿಸಿಕೊಡುತ್ತದೆ.

#3

#3

ಲಾಲಿಪಪ್‌ನಲ್ಲಿ ಅಧಿಸೂಚನೆ ಪಟ್ಟಿ ಭಿನ್ನವಾಗಿದ್ದು ಅಧಿಸೂಚನೆ ಅಥವಾ ಕ್ವಿಕ್ ಸೆಟ್ಟಿಂಗ್‌ಗಳನ್ನು ಪಡೆದುಕೊಳ್ಳಲು ಪರದೆಯ ಭಿನ್ನ ಭಾಗಗಳಲ್ಲಿ ನಿಮಗೆ ಕೆಳಕ್ಕೆ ಸ್ಲೈಪ್ ಮಾಡುವ ಅಗತ್ಯವಿರುವುದಿಲ್ಲ. ಅಧಿಸೂಚನೆಗಳನ್ನು ಪಡೆಯಲು ಒಮ್ಮೆ ಮಾತ್ರವೇ ಕೆಳಕ್ಕೆ ಸ್ಪೈಪ್ ಮಾಡಿದರೆ ಸಾಕು.

#4

#4

ಲಾಕ್‌ಸ್ಕ್ರೀನ್‌ನ ಮಧ್ಯಭಾಗದಲ್ಲಿ ಅಧಿಸೂಚನೆಗಳು ಪ್ರದರ್ಶನಗೊಳ್ಳುವುದು ಉತ್ತಮ ವಿಷಯವೇ. ಆದರೂ ಕೆಲವೊಂದು ರಹಸ್ಯ ಅಧಿಸೂಚನೆಗಳನ್ನು ನೀವು ಮರೆಮಾಡಬೇಕೆಂದು ಬಯಸಿದಲ್ಲಿ ಸೆಟ್ಟಿಂಗ್ಸ್ > ಸೌಂಡ್ ಹಾಗೂ ನೋಟಿಫಿಕೇಶನ್ಸ್ > ಡಿವೈಸ್ ಲಾಕ್ ಆದಾಗ ಅತಿ ಸೂಕ್ಷ್ಮ ಅಧಿಸೂಚನೆಗಳನ್ನು ಮರೆಮಾಡಲು ನೀವು ಆರಿಸಬಹುದಾಗಿದೆ.

#5

#5

ಮೂರನೇ ವ್ಯಕ್ತಿ ಫ್ಲ್ಯಾಶ್‌ಲೈಟ್/ಟಾರ್ಚ್ ಅಪ್ಲಿಕೇಶನ್‌ಗಳು ತುಂಬಾ ಪ್ರಸಿದ್ಧವಾಗಿದ್ದು, ನೀವು ಇದನ್ನು ಡೌನ್‌ಲೋಡ್ ಮಾಡಲೇಬೇಕು. ಆದರೆ ಲಾಲಿಪಪ್‌ನಲ್ಲಿ ನೀವು ಇದನ್ನು ಡೌನ್‌ಲೋಡ್ ಮಾಡಬೇಕಾದ ಅಗತ್ಯವೇ ಇಲ್ಲ. ಅಧಿಸೂಚನೆಯಲ್ಲಿ ನಿಮಗೆ ಈ ಅಪ್ಲಿಕೇಶನ್ ದೊರೆಯುತ್ತದೆ.

#6

#6

ನಿಮ್ಮ ಮೊಬೈಲ್ ಫೋನ್‌ನಲ್ಲಿ ನೀವು ಡೇಟಾ ಮಿತಿಯನ್ನು ಹೊಂದಿದ್ದರೆ ಲಾಲಿಪಪ್ ಅದನ್ನು ಪರಿಶೀಲಿಸಲು ನಿಮಗೆ ಸುಲಭ ಮಾರ್ಗವನ್ನು ಒದಗಿಸಿಕೊಡುತ್ತದೆ. ಅಧಿಸೂಚನೆ ಪಟ್ಟಿಯಲ್ಲಿ, ಸೆಲ್ಯುಲರ್ ಐಕಾನ್ ಮೇಲೆ ತಟ್ಟಿ ಮತ್ತು ಇಲ್ಲಿ ನೀವು ಎಷ್ಟು ಎಮ್‌ಬಿ ಬಳಸಿದ್ದೀರಿ ಎಂಬ ಮಾಹಿತಿ ಲಭ್ಯವಾಗುತ್ತದೆ.

#7

#7

ಆಂಡ್ರಾಯ್ಡ್ ಯೂಸರ್ ಪ್ರೊಫೈಲ್‌ಗಳು ಮತ್ತು ಗೆಸ್ಟ್ ಮೋಡ್ ಅನ್ನು ಹೊಂದಿದೆ ಆದರೆ ಇದನ್ನು ಹೊಂದಿಸಲು ನಿಮಗೆ ಸಮಯ ಬೇಕಾಗುತ್ತದೆ. ಆದರೆ ಲಾಲಿಪಪ್‌ನ ಸ್ಕ್ರೀನ್ ಪಿನ್ನಿಂಗ್ ಅನ್ನು ಬಳಸಿ ಅಪ್ಲಿಕೇಶನ್ ಅನ್ನು ಪಿನ್ ಮಾಡಬಹುದು. ಇದರಿಂದ ಮತ್ತೊಬ್ಬ ವ್ಯಕ್ತಿಯ ಕೈಗೆ ನಿಮ್ ಫೋನ್ ಹೋದಾಗ ನೀವು ಪಿನ್ ಮಾಡಿರುವ ಅಪ್ಲಿಕೇಶನ್ ಮಾತ್ರವೇ ಅವರಿಗೆ ನೋಡಬಹುದಾಗಿದೆ. ಇದನ್ನು ಸಕ್ರಿಯಗೊಳಿಸಲು ಸೆಟ್ಟಿಂಗ್ಸ್ > ಸೆಕ್ಯುರಿಟಿ > ಸ್ಕ್ರೀನ್ ಪಿನ್ನಿಂಗ್ ಹೀಗೆ ಮಾಡಿ.

#8

#8

ನೀವು ಆಂಡ್ರಾಯ್ಡ್ ಲಾಲಿಪಪ್ ಅನ್ನು ಮೊದಲ ಬಾರಿಗೆ ಬಳಸುತ್ತಿದ್ದೀರಿ ಎಂದಾದಲ್ಲಿ ಟ್ಯಾಪ್ ಮತ್ತು ಗೋ ಆಯ್ಕೆ ಯಾವುದೇ ಗೂಗಲ್ ಆಂಡ್ರಾಯ್ಡ್ ಬಳಕೆದಾರರಿಗೆ ಇದು ಉಪಯೋಗಕಾರಿಯಾಗಿರುತ್ತದೆ.

#9

#9

ಇದು ಗೂಗಲ್‌ನ ಡು ನಾಟ್ ಡಿಸ್ಟರ್ಬ್ ಮೋಡ್ ಆಗಿದ್ದು ನಿಮ್ಮ ವಾಲ್ಯುಮ್ ಅಪ್ ಅಥವಾ ಡೌನ್ ಬಟನ್ ಬಳಸಿ ಪ್ರವೇಶಿಸಬಹುದಾಗಿದೆ. ಸ್ಲೈಡರ್ ಅಡಿಯಲ್ಲಿ ನಿಮಗೆ ಮೂರು ಆಯ್ಕೆಗಳನ್ನು ನೀಡಲಾಗಿದ್ದು ನನ್, ಪ್ರಿಯಾರ್ಟಿ ಮತ್ತು ಆಲ್ ಎಂಬುದರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬೇಕಾಗುತ್ತದೆ. ಪ್ರಿಯಾರ್ಟಿಯು ನಿಮಗೆ ಕಸ್ಟಮೈಸ್ ಮಾಡಿದ ಅಧಿಸೂಚನೆಗಳನ್ನು ಪ್ರವೇಶಿಸುವ ಅನುಮತಿಯನ್ನು ನೀಡುತ್ತದೆ.

#10

#10

ಎಲ್‌ಜಿ ಜಿ2 ಡಿವೈಸ್‌ನಲ್ಲಿ ಮಾತ್ರವೇ ನೋಡಬಹುದಾದ ಅತಿ ವಿಶಿಷ್ಟ ಫೀಚರ್ ಇದೀಗ ಲಾಲಿಪಪ್‌ನಲ್ಲೂ ಕಾಣಬಹುದಾಗಿದೆ. ಪವರ್ ಬಟನ್ ಅನ್ನು ಬಳಸುವ ಬದಲಿಗೆ, ಸ್ವಿಚ್ ಆನ್ ಮಾಡಲು ಪರದೆಗೆ ಎರಡು ಬಾರಿ ತಟ್ಟಿದರೆ ಸಾಕು.

Best Mobiles in India

English summary
This article tells about Android 5.0 Lollipop has arrived with the Nexus 9 and Nexus 6 and will be rolling out to thousands of devices over the coming weeks and months.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X