ಗೂಗಲ್‌ ಕ್ಲೌಡ್‌ ಸ್ಟೋರೇಜ್‌ನಿಂದ ದೊಡ್ಡಗಾತ್ರದ ಫೈಲ್‌ ಶೇರ್ ಮಾಡುವುದು ಹೇಗೆ?

ದೊಡ್ಡಗಾತ್ರದ ಫೈಲ್‌ಗಳನ್ನು ಮೇಲ್‌ಗೆ ಅಟ್ಯಾಚ್‌ ಮಾಡಿ ಕಳಿಸುವ ಅಗತ್ಯವಿಲ್ಲ.!!

Written By:

ಮೇಲ್‌ನಲ್ಲಿ ಚಿಕ್ಕಗಾತ್ರದ ಫೈಲ್‌ಗಳನ್ನು ನೇರವಾಗಿ ಅಟ್ಯಾಚ್‌ ಮಾಡಿ ಕಳಿಸಬಹುದು. ಆದರೆ, ಹೆಚ್ಚಿನ ಗಾತ್ರದ ಫೈಲ್‌ಗಳನ್ನು ಮೇಲ್‌ ಮೂಲಕ ಕಳಿಸುವುದು ಹೆಚ್ಚು ಕಿರಿಕಿರಿಯ ಕೆಲಸ ಎನ್ನಬಹುದು. ಏಕೆಂದರೆ ಹೆಚ್ಚು ಗಾತ್ರವಿರುವ ಫೈಲ್‌ಗಳು ಮೇಲ್‌ಗೆ ಅಟ್ಯಾಚ್‌ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ ಅಲ್ಲವೇ.

ಹಾಗಾಗಿ, ಇನ್ನು ನಿಮ್ಮ ದೊಡ್ಡಗಾತ್ರದ ಫೈಲ್‌ಗಳನ್ನು ಮೇಲ್‌ಗೆ ಅಟ್ಯಾಚ್‌ ಮಾಡಿ ಕಳಿಸುವ ಅಗತ್ಯವಿಲ್ಲ. ನಿಮ್ಮ ಡಿವೈಸ್‌ಗಳನ್ನು ಕ್ಲೌಡ್‌ ಸ್ಟೋರೇಜ್‌ಗೆ ಸಿಂಕ್‌ ಮಾಡಿ ನಿಮ್ಮ ಡ್ರೈವ್‌ನಲ್ಲಿರುವ ಈ ಫೈಲ್‌ಗಳ ಲಿಂಕ್‌ ಅನ್ನು ನೀವು ಕಳಿಸಬೇಕಾದವರಿಗ ಹಂಚಿಕೊಂಡರೆ ಸಾಕು. ಈ ಲಿಂಕ್ ಕ್ಷಣಮಾತ್ರದಲ್ಲಿ ಅವರಿಗೆ ಸೆಂಡ್‌ ಆಗುತ್ತದೆ.!!

ಗೂಗಲ್‌ ಕ್ಲೌಡ್‌ ಸ್ಟೋರೇಜ್‌ನಿಂದ ದೊಡ್ಡಗಾತ್ರದ ಫೈಲ್‌ ಶೇರ್ ಮಾಡುವುದು ಹೇಗೆ?

ಆನ್‌ಲೈನ್‌ನಲ್ಲಿ ಆಧಾರ್ ಮೂಲಕ "ಜಿಯೋ DTH" ಮುಂಗಡ ಬುಕ್ಕಿಂಗ್ ಹೇಗೆ?

ಈಗಾಗಲೇ ಅಪ್‌ಲೋಡ್‌ ಆಗಿರುವ ಫೈಲ್‌ಗಳನ್ನು ಮತ್ತೆ ಮೇಲ್‌ಗೆ ಅಪ್‌ಲೋಡ್ ಮಾಡುವುದು ಎರಡೆರಡು ಕೆಲಸ ಮಾಡಿದಂತೆ. ಹೀಗಾಗಿ ಕ್ಲೌಡ್‌ ಸ್ಟೋರೇಜ್‌ನಲ್ಲಿರುವ ಫೈಲ್‌ಗಳ ಲಿಂಕ್‌ ಅನ್ನು ನೀವು ಮೇಲ್‌ ಮೂಲಕ ಹಂಚಿಕೊಂಡರೆ ಸಾಕು. ಗೂಗಲ್‌ ಡ್ರೈವ್‌, ಯಾಹೂ ಡ್ರೈವ್‌, ಮೈಕ್ರೊಸಾಫ್ಟ್‌ನ ಒನ್‌ಡ್ರೈವ್‌ನ ಕ್ಲೌಡ್‌ ಸ್ಟೋರೇಜ್‌ನಲ್ಲಿ ಸೇವ್‌ ಆಗಿರುವ ನಿಮ್ಮ ಫೈಲ್‌ಗಳನ್ನು ಮತ್ತೆ ನೀವು ಮೇಲ್‌ಗೆ ಅಟ್ಯಾಚ್‌ ಮಾಡಿ ಕಳಿಸುವ ಅಗತ್ಯವಿಲ್ಲ.!!

ಗೂಗಲ್‌ ಕ್ಲೌಡ್‌ ಸ್ಟೋರೇಜ್‌ನಿಂದ ದೊಡ್ಡಗಾತ್ರದ ಫೈಲ್‌ ಶೇರ್ ಮಾಡುವುದು ಹೇಗೆ?

ಇನ್ನು ಡ್ರೈವ್‌ನಲ್ಲಿರುವ ಫೈಲ್‌ ಲಿಂಕ್‌ ಶೇರ್‌ ಮಾಡುವ ವೇಳೆ ನೀವು ಕಳಿಸುವವರಿಗೆ ಅದನ್ನು ಅಕ್ಸೆಸ್‌ ಮಾಡುವ ಪರ್ಮಿಷನ್‌ ಕೇಳುತ್ತದೆ. ಅವರು ಪರ್ಮಿಷನ್‌ಗೆ ಓಕೆ ಒತ್ತಿದರೆ ಆಯಿತು. ನೀವು ಕಳಿಸಿದ ಫೈಲ್‌ನ ಲಿಂಕ್‌ ಅನ್ನು ನಿಮ್ಮವರು ಅಕ್ಸೆಸ್‌ ಮಾಡಬಹುದು. ಹೀಗೆ ಮೇಲ್‌ ಮೂಲಕ ಅಟ್ಯಾಚ್‌ ಮಾಡಿ ಫೈಲ್‌ ಕಳಿಸುವ ಬದಲಿಗೆ ನಿಮ್ಮ ಕ್ಲೌಡ್‌ ಸ್ಟೋರೇಜ್‌ನಲ್ಲಿರುವ ಫೈಲ್‌ಗಳ ಲಿಂಕ್‌ ಅನ್ನು ಶೇರ್‌ ಮಾಡಿ ಸಮಯ ಉಳಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Google Cloud Storage is a key part of storing and working with Big Data on Google Cloud Platform. to know more visit to kannada.gizbot.com
Please Wait while comments are loading...
Opinion Poll

Social Counting