ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ಕಾರಣವಾಗಿರುವ ಅಂಶಗಳಿವು

By Shwetha
|

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳನ್ನು ಆಟಿಕೆಯಂತೆ ಬಳಸಲಾಗುತ್ತಿದೆ. ಈ ಫ್ಲ್ಯಾಶ್ ಗ್ಯಾಜೆಟ್‌ಗಳನ್ನು ನೀವು ಜಾಗರೂಕರಾಗಿ ಬಳಸಿಲ್ಲ ಎಂದಾದಲ್ಲಿ ನಿಮ್ಮ ಪ್ರಾಣಕ್ಕೆ ಇವುಗಳು ಹಾನಿಕಾರಕವಾಗಬಲ್ಲುದು. ಫೋನ್ ಬ್ಲಾಸ್ಟಿಂಗ್‌ನಂತಹ ಘಟನೆಗಳನ್ನು ನೀವು ಓದಿರುತ್ತೀರಿ ಮತ್ತು ಕೇಳಿರುತ್ತೀರಿ. ಫೋನ್ ಬ್ಲಾಸ್ಟ್ ಉಂಟಾಗುವುದು ಏಕೆ ಮತ್ತು ಅದನ್ನು ತಡೆಗಟ್ಟಲು ನೀವು ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ಚರ್ಚಿಸಲಿದ್ದೇವೆ.

ಓದಿರಿ: ಸ್ಮಾರ್ಟ್‌ಫೋನ್‌ ಚಾರ್ಜಿಂಗ್ ವೇಗ ಸ್ಲೋ ಆಗಿದೆಯೇ? ಎಚ್ಚರ!

ಬ್ರ್ಯಾಂಡ್ ಫೋನ್‌ ಖರೀದಿಸಿ

ಬ್ರ್ಯಾಂಡ್ ಫೋನ್‌ ಖರೀದಿಸಿ

ಸಾಧ್ಯವಾದಷ್ಟು ಬ್ರ್ಯಾಂಡ್ ಫೋನ್‌ಗಳನ್ನೇ ಖರೀದಿಸಿ. ಫೋನ್ ಸೂಕ್ತವಾದ IMEI ಸಂಖ್ಯೆಯನ್ನು ಹೊಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಪ್ರತಿಯೊಂದು ಫೋನ್ ಅನ್ನು ಗುರುತಿಸುವ ಕೋಡ್ ಇದಾಗಿದೆ. ಬಾಕ್ಸ್ ಮತ್ತು ರಶೀದಿಯಲ್ಲಿ ಸಂಖ್ಯೆಯನ್ನು ಪರಿಶೀಲಿಸಿ.

ವೋಲ್ಟೇಜ್ ವ್ಯಾಲ್ಯೂ

ವೋಲ್ಟೇಜ್ ವ್ಯಾಲ್ಯೂ

ಫೋನ್ ಖರೀದಿಸುವಾಗ ಇಯರ್ ಫೋನ್, ಬ್ಯಾಟರಿ ಮತ್ತು ಚಾರ್ಜರ್ ಅನ್ನು ಪರಿಶೀಲಿಸಿಕೊಳ್ಳಿ. ವೋಲ್ಟೇಜ್ ವ್ಯಾಲ್ಯೂವನ್ನು ನಿಖರವಾಗಿ ಪರಿಶೀಲಿಸಿಕೊಳ್ಳಿ.

ಓವರ್ ಚಾರ್ಜ್

ಓವರ್ ಚಾರ್ಜ್

ಹ್ಯಾಂಡ್‌ಸೆಟ್‌ನ ಸ್ಫೋಟಕ್ಕೆ ಕಾರಣವಾಗುವ ಬ್ಯಾಟರಿ ಓವರ್ ಚಾರ್ಜ್ ಅನ್ನು ಬ್ಯಾಟರಿ ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

 ಏಕೆ ಸಂಭವಿಸುತ್ತದೆ

ಏಕೆ ಸಂಭವಿಸುತ್ತದೆ

ಫೋನ್ ಚಾರ್ಜ್ ಆಗುತ್ತಿರುವಾಗ ಮತ್ತು ಕಾಲ್ ಬಾಂಬಿಂಗ್ ಅನ್ನು ನಡೆಸುತ್ತಿರುವಾಗ ಫೋನ್ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು.

ಕಡಿಮೆ ದರ್ಜೆಯ ಬಿಡಿಭಾಗ

ಕಡಿಮೆ ದರ್ಜೆಯ ಬಿಡಿಭಾಗ

ಫೋನ್‌ನ ಮದರ್ ಬೋರ್ಡ್ ಮೇಲೆ ಚಾರ್ಜಿಂಗ್ ಒತ್ತಡವನ್ನು ಹೇರುತ್ತದೆ, ಚಾರ್ಜ್ ಮಾಡುತ್ತಿರುವ ಸಂದರ್ಭದಲ್ಲಿ ಫೋನ್ ಬಳಸುವುದು ಒತ್ತಡವನ್ನು ಹೇರಬಹುದು. ಇದು ಕೆಲವು ಡಿವೈಸ್‌ಗಳಲ್ಲಿರುವ ಕಡಿಮೆ ದರ್ಜೆಯ ಬಿಡಿಭಾಗಗಳ ಮೇಲೆ ಪ್ರತೀಕೂಲ ಪರಿಣಾಮವನ್ನು ಬೀರಿ ಫೋನ್ ಸ್ಫೋಟಕ್ಕೆ ಕಾರಣವಾಗುತ್ತದೆ.

ಮಿಸ್ಡ್ ಕಾಲ್ ಮತ್ತು ಕರೆಗಳನ್ನು ಸ್ವೀಕರಿಸುವುದಾಗಿದೆ

ಮಿಸ್ಡ್ ಕಾಲ್ ಮತ್ತು ಕರೆಗಳನ್ನು ಸ್ವೀಕರಿಸುವುದಾಗಿದೆ

ಅಂತರಾಷ್ಟ್ರೀಯ ಕರೆಗಳಿಂದ ಮಿಸ್ಡ್ ಕಾಲ್ ಮತ್ತು ಕರೆಗಳನ್ನು ಸ್ವೀಕರಿಸುವುದಾಗಿದೆ. ಯಾರಾದರೂ ಈ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸಿದಲ್ಲಿ ಇದು ನಿರ್ದಿಷ್ಟ ಸಮಯದವರೆಗೆ ಸಂವಹನ ನಡೆಯುತ್ತಿರುತ್ತದೆ ಮತ್ತು ಫೋನ್ ಬ್ಲಾಸ್ಟ್ ಉಂಟಾಗುತ್ತದೆ.

ಫೋನ್ ಸ್ಫೋಟಕ್ಕೆ ಕಾರಣ

ಫೋನ್ ಸ್ಫೋಟಕ್ಕೆ ಕಾರಣ

ಕೆಲವೊಂದು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಮಾಲ್‌ವೇರ್ ಅಥವಾ ಬಗ್ ಕೂಡ ಫೋನ್ ಸ್ಫೋಟಕ್ಕೆ ಕಾರಣವಾಗಿದೆ.

ಚೀನಾ ತಯಾರಕ ಫೋನ್‌

ಚೀನಾ ತಯಾರಕ ಫೋನ್‌

ಚೀನಾ ತಯಾರಕ ಫೋನ್‌ಗಳು ಕಡಿಮೆ ದರದಲ್ಲಿ ಲಭ್ಯವಾಗುತ್ತಿದ್ದು, ಇವುಗಳಲ್ಲಿ ಬಳಸಲಾಗುವ ಹಾರ್ಡ್‌ವೇರ್ ಮತ್ತು ಇತರ ಬಿಡಿಭಾಗಗಳು ಬ್ರ್ಯಾಂಡೆಡ್ ಆಗಿರುವುದಿಲ್ಲ. ಇಯರ್ ಫೋನ್‌ಗಳು ಮತ್ತು ಬ್ಯಾಟರಿಗಳು ಕಳಪೆ ಗುಣಮಟ್ಟವನ್ನು ಹೊಂದಿದ್ದು ಫೋನ್‌ಗೆ ಹಾನಿಯನ್ನುಂಟು ಮಾಡಲಿದೆ.

ಆಂಟಿ - ವೈರಸ್ ಸಾಫ್ಟ್‌ವೇರ್‌

ಆಂಟಿ - ವೈರಸ್ ಸಾಫ್ಟ್‌ವೇರ್‌

ಮೊಬೈಲ್ ಫೋನ್‌ಗಳಲ್ಲಿರುವ ಆಂಟಿ - ವೈರಸ್ ಸಾಫ್ಟ್‌ವೇರ್‌ಗಳು ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಆದ್ದರಿಂದಲೇ ಥರ್ಡ್ ಪಾರ್ಟಿ ವೆಂಡೋರ್‌ಗಳಿಂದ ಡೌನ್‌ಲೋಡ್ ಮಾಡುವುದನ್ನು ನೀವು ನಿಲ್ಲಿಸಬೇಕು. ಇನ್ ಬಿಲ್ಟ್ ಸ್ಟೋರ್ ಅಥವಾ ಓಎಸ್ ಒದಗಿಸುವ ಮಾರ್ಕೆಟ್ ಅಪ್ಲಿಕೇಶನ್‌ನಿಂದಲೇ ಡೌನ್‌ಲೋಡ್ ಮಾಡಿಕೊಳ್ಳಿ.

ಥರ್ಡ್ ಪಾರ್ಟಿ ಟೂಲ್‌

ಥರ್ಡ್ ಪಾರ್ಟಿ ಟೂಲ್‌

ಕೆಲವೊಂದು ಮಾಲ್‌ವೇರ್ ಸಾಫ್ಟ್‌ವೇರ್‌ಗಳು ಫೋನ್‌ನ ಓಎಸ್ ವ್ಯವಸ್ಥೆಯಲ್ಲಿ ಬಗ್ ಅನ್ನು ರಚಿಸಬಹುದು, ಅಂತೆಯೇ ಥರ್ಡ್ ಪಾರ್ಟಿ ಟೂಲ್‌ಗಳಿಂದ ಆಗಾಗ್ಗೆ ಡೌನ್‌ಲೋಡ್ ಮಾಡುವುದರಿಂದ ಇದು ಈ ಭೀತಿಯನ್ನು ಹೆಚ್ಚಿಸಬಹುದು.

ಭೇಟಿ ನೀಡುತ್ತಿರುವ ಸೈಟ್‌

ಭೇಟಿ ನೀಡುತ್ತಿರುವ ಸೈಟ್‌

ಫೋನ್ ಬಳಸಿ ನೀವು ಭೇಟಿ ನೀಡುತ್ತಿರುವ ಸೈಟ್‌ಗಳು ಎಚ್‌ಟಿಟಿಪಿಎಸ್‌ನಿಂದ ಆರಂಭವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಅಸುರಕ್ಷಿತ ವೈಫೈ

ಅಸುರಕ್ಷಿತ ವೈಫೈ

ಸಾರ್ವಜನಿಕ ಅಥವಾ ಅಸುರಕ್ಷಿತ ವೈಫೈ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಸುಭದ್ರವಲ್ಲದ ಪೋರ್ಟ್‌ನಿಂದ ಹ್ಯಾಕರ್ ಮೊಬೈಲ್ ಡಿವೈಸ್ ಅನ್ನು ಪ್ರವೇಶಿಸಬಹುದು. ಸಾರ್ವಜನಿಕ ಪ್ರದೇಶಗಳಲ್ಲಿ ಬ್ಲ್ಯೂಟೂತ್ ಕನೆಕ್ಟಿವಿಟಿ ಆನ್ ಆಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ದೇಹದಿಂದ ದೂರವಿರಿಸಿ

ದೇಹದಿಂದ ದೂರವಿರಿಸಿ

ಫೋನ್‌ನಲ್ಲಿ ಸಂವಹನ ನಡೆಸುತ್ತಿರುವಾಗ ಅಥವಾ ನೀವು ನಿದ್ದೆ ಹೋದ ಸಂದರ್ಭದಲ್ಲಿ ಫೋನ್ ಅನ್ನು ಆದಷ್ಟು ದೇಹದಿಂದ ದೂರವಿರಿಸಿಕೊಳ್ಳಿ. ತಲೆದಿಂಬಿನ ಕೆಳಗೆ ಟೇಬಲ್ ಪಕ್ಕದಲ್ಲಿ ಅದರಲ್ಲೂ ಗರ್ಭಿಣಿಯರು ಈ ಬಗ್ಗೆ ಸೂಕ್ತ ಕಾಳಜಿಯನ್ನು ವಹಿಸಬೇಕು.

ಇಲೆಕ್ಟ್ರೊ ಮ್ಯಾಗ್ನಟಿಕ್ ಎಮಿಶನ್‌ಗಳನ್ನು ನಿಲ್ಲಿಸುತ್ತದೆ

ಇಲೆಕ್ಟ್ರೊ ಮ್ಯಾಗ್ನಟಿಕ್ ಎಮಿಶನ್‌ಗಳನ್ನು ನಿಲ್ಲಿಸುತ್ತದೆ

ರಾತ್ರಿ ವೇಳೆ ಈ ಮೋಡ್‌ನಲ್ಲಿ ಫೋನ್ ಬಳಸುವುದು ಇಲೆಕ್ಟ್ರೊ ಮ್ಯಾಗ್ನಟಿಕ್ ಎಮಿಶನ್‌ಗಳನ್ನು ನಿಲ್ಲಿಸುತ್ತದೆ. ಸಿಗ್ನಲ್ ವೀಕ್ ಆಗಿರುವಾಗ ಹೆಚ್ಚು ವೇಗದಲ್ಲಿ ಪ್ರಯಾಣಿಸುತ್ತಿರುವಾಗ ಅಂದರೆ ಕಾರು ಅಥವಾ ಟ್ರೈನ್‌ನಲ್ಲಿ ಸಂಚರಿಸುತ್ತಿರುವಾಗ ಸೆಲ್ ಫೋನ್ ಬಳಕೆಯನ್ನು ಕಡಿಮೆ ಮಾಡಿ.

ಒಣಗಿಸಿಕೊಳ್ಳಿ

ಒಣಗಿಸಿಕೊಳ್ಳಿ

ನಿಮ್ಮ ಫೋನ್ ಅಕಸ್ಮತ್ತಾಗಿ ನೀರಿಗೆ ಬಿದ್ದ ಸಂದರ್ಭದಲ್ಲಿ ಬ್ಯಾಟರಿ, ಸಿಮ್ ಮತ್ತು ಮೆಮೊರಿ ಕಾರ್ಡ್‌ಗಳನ್ನು ತೆಗೆದಿರಿಸಿ. ಸ್ವಿಚ್ ಆಫ್ ಮಾಡಿ. ಇದನ್ನು ಚೆನ್ನಾಗಿ ಒಣಗಿಸಿಕೊಳ್ಳಿ. ನಂತರ ಅವುಗಳನ್ನು ಅಕ್ಕಿಚೀಲದಲ್ಲಿ ಹುದುಗಿಸಿಡಿ. ಇದು ನೀರು ಆರಲು ಸಹಕಾರಿಯಾಗಿರುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

8 ಗಂಟೆ ಬೆಳಕು ನೀಡುವ ಉಪ್ಪುನೀರಿನ ಲ್ಯಾಂಪ್ ಆವಿಷ್ಕಾರ</a><br />ಓದಿರಿ: <a href=3G ಡೇಟಾ ಸಂಪರ್ಕವನ್ನು 4G ಗೆ ವೇಗಗೊಳಿಸುವುದು ಹೇಗೆ ?
ಓದಿರಿ: ಬರೇ 30 ಸೆಕೆಂಡ್‌ನಲ್ಲಿ ಫೋನ್ ಚಾರ್ಜ್!!!
ಓದಿರಿ: ಟೆಕ್ ತಂತ್ರ ಬಳಸಿ ಹಣ ಉಳಿಸಿ" title="8 ಗಂಟೆ ಬೆಳಕು ನೀಡುವ ಉಪ್ಪುನೀರಿನ ಲ್ಯಾಂಪ್ ಆವಿಷ್ಕಾರ
ಓದಿರಿ: 3G ಡೇಟಾ ಸಂಪರ್ಕವನ್ನು 4G ಗೆ ವೇಗಗೊಳಿಸುವುದು ಹೇಗೆ ?
ಓದಿರಿ: ಬರೇ 30 ಸೆಕೆಂಡ್‌ನಲ್ಲಿ ಫೋನ್ ಚಾರ್ಜ್!!!
ಓದಿರಿ: ಟೆಕ್ ತಂತ್ರ ಬಳಸಿ ಹಣ ಉಳಿಸಿ" loading="lazy" width="100" height="56" />8 ಗಂಟೆ ಬೆಳಕು ನೀಡುವ ಉಪ್ಪುನೀರಿನ ಲ್ಯಾಂಪ್ ಆವಿಷ್ಕಾರ
ಓದಿರಿ: 3G ಡೇಟಾ ಸಂಪರ್ಕವನ್ನು 4G ಗೆ ವೇಗಗೊಳಿಸುವುದು ಹೇಗೆ ?
ಓದಿರಿ: ಬರೇ 30 ಸೆಕೆಂಡ್‌ನಲ್ಲಿ ಫೋನ್ ಚಾರ್ಜ್!!!
ಓದಿರಿ: ಟೆಕ್ ತಂತ್ರ ಬಳಸಿ ಹಣ ಉಳಿಸಿ

Best Mobiles in India

English summary
Mobile phones may be treated like playthings these days. Several instances have been reported about the phones blasting off suddenly.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X