ಕ್ಸಯೋಮಿ MiPad ಟ್ಯಾಬ್ಲೆಟ್ ಬಣ್ಣಗಳ ವೈವಿಧ್ಯ ಲೋಕ

By Shwetha
|

ಹ್ಯಾಂಡ್‌ಸೆಟ್ ಮಾರಾಟ ಶ್ರೇಣಿಯಲ್ಲಿ ಭಾರತೀಯ ಮಾರುಕಟ್ಟೆ ಮುಂದೆ ಇರುವಂತೆಯೇ ಈಗ ಟ್ಯಾಬ್ಲೆಟ್ ಕ್ಷೇತ್ರಕ್ಕೂ ಈ ವ್ಯವಹಾರ ಮುಂದುವರಿದಿದೆ. ಟ್ಯಾಬ್ಲೆಟ್ ಕ್ಷೇತ್ರದಲ್ಲೂ ಭಾರತದ ಮಾರುಕಟ್ಟೆ ಮುಂದುವರಿಯುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ.

ಆಪಲ್ ಐಪ್ಯಾಡ್ ಮತ್ತು ಜನಪ್ರಿಯ ಐಪ್ಯಾಡ್ ಮಿನಿ ಈಗಷ್ಟೇ ಮೆಚ್ಚುಗೆಯನ್ನು ಗಳಿಸಿ ನಂಬರ್ ಒನ್ ಪಟ್ಟಕ್ಕೇರಿದೆ ಆದರೂ ಜನರು ಟ್ಯಾಬ್ಲೆಟ್‌ಗಿಂತಲೂ ಹೆಚ್ಚು ಆರಾಮದಾಯಕವಾಗಿ ತಮ್ಮ ಫೋನ್‌ನಲ್ಲೇ ವಿಶೇಷ ಸಂತೋಷ ಕಾಣುತ್ತಿರುವುದನ್ನು ಕೂಡ ನಿಮಗೆ ಗಮನಿಸಬಹುದಾಗಿದೆ. ಇತ್ತೀಚೆಗಷಷ್ಟೇ ತನ್ನ Mi3 ಮತ್ತು ರೆಡ್ಮೀ ಶ್ರೇಣಿಯ ಫೋನ್‌ಗಳ ಮೂಲಕ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಚೀನಾ ಕಂಪೆನಿ ಕ್ಸಯೋಮಿ ಈಗ ಟ್ಯಾಬ್ಲೆಟ್ ಕಡೆಗೂ ತನ್ನ ದೃಷ್ಟಿಯನ್ನು ಬೀರಿದೆ.

ಕ್ಸಯೋಮಿಯನ್ನು "ಚೀನಾದ ಆಪಲ್" ಎಂದೇ ಕರೆಯುತ್ತಾರೆ ಏಕೆಂದರೆ ತನ್ನ ದೇಶದಲ್ಲಿ ಇದು ನಂಬರ್ ವನ್ ಬ್ರ್ಯಾಂಡ್ ಅನ್ನಿಸಿಕೊಂಡಿದೆ. ಕ್ಸಯೋಮಿ ಟ್ಯಾಬ್ಲೆಟ್ 2.2 GHz NVIDIA Tegra K1 ಪ್ರೊಸೆಸರ್ ಅನ್ನು ಹೊಂದಿದ್ದು 192-core Kepler GPU ಡಿವೈಸ್‌ನಲ್ಲಿದೆ. ಇದರ RAM ಸಾಮರ್ಥ್ಯ 2ಜಿಬಿಯಾಗಿದ್ದು ಇತ್ತೀಚಿನ ಅತ್ಯಾಧುನಿಕ ಆಂಡ್ರಾಯ್ಡ್ ಆಧಾರಿತ MiUI ROM ಟ್ಯಾಬ್ಲೆಟ್‌ಗಳಲ್ಲಿ ಸಂಯೋಜನೆಗೊಂಡಿದೆ.

ಕ್ಸಯೋಮಿ MiPad ಟ್ಯಾಬ್ಲೆಟ್‌ನ ಇನ್ನಷ್ಟು ವಿವರವಾದ ಮಾಹಿತಿಗಳನ್ನು ಕೆಳಗಿನ ಗ್ಯಾಲರಿಗಳಲ್ಲಿ ಸಂಕ್ಷಿಪ್ತವಾಗಿ ನೋಡೋಣ

#1

#1

ದೊಡ್ಡ ಬ್ಯಾಟರಿ
ಇದು ಸುಸಜ್ಜಿತ ದೊಡ್ಡದಾದ 6700mAh ಬ್ಯಾಟರಿಯನ್ನು ಒಳಗೊಂಡಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ ಕಾರ್ಯನಿರ್ವಹಿಸಲಿದ್ದು ಎರಡು ದಿನಗಳ ಕಾಲ ಬ್ಯಾಟರಿ ಸೇವೆಯನ್ನು ಒದಗಿಸಲಿದೆ.

#2

#2

ಉತ್ತಮ ಓದುವಿಕೆ
ಇದು ಗೇಮ್ಸ್ ಆಡಲು ಅಥವಾ ವೀಡಿಯೋಗಳನ್ನು ನೋಡಲು ಮಾತ್ರ ಉತ್ತಮವಾಗಿರದೇ, ಆನ್‌ಲೈನ್ ವಿಷಯಗಳನ್ನು ಕೂಡ ಯಾವುದೇ ಜಂಜಾಟಗಳಿಲ್ಲದೆ ವೀಕ್ಷಿಸಬಹುದಾಗಿದೆ. ಇದರಲ್ಲಿ ಕ್ಲೌಡ್ ಸಿಂಕ್ ಕೂಡ ಲಭ್ಯವಿದೆ.

#3

#3

ಆಕರ್ಷಕ ಕ್ಯಾಮೆರಾ
ಇದರ ಕ್ಯಾಮೆರಾ ಸಾಮರ್ಥ್ಯ ಅತ್ಯುತ್ತಮವಾಗಿದ್ದು 8 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಈ ಟ್ಯಾಬ್ಲೆಟ್ ಬಂದಿದೆ. ಇದರಲ್ಲಿ 1080p ವೀಡಿಯೋ ರೆಕಾರ್ಡಿಂಗ್ ಕೂಡ ಮಾಡಬಹುದಾಗಿದೆ.

#4

#4

ಸ್ಥಳಾವಕಾಶ
ಇದು ದೊಡ್ಡದಾದ ಆಂತರಿಕ ಸ್ಥಳಾವಕಾಶವನ್ನು ಮಾತ್ರ ಒದಗಿಸದೇ ಇದು 128ಜಿಬಿ ಮೈಕ್ರೋ ಎಸ್‌ಡಿ ಬೆಂಬಲವನ್ನು ಕೂಡ ಒದಗಿಸುತ್ತಿದೆ.

#5

#5

ಬಣ್ಣಗಳ ಲೋಕ
ಟ್ಯಾಬ್ಲೆಟ್ ವ್ಯವಹಾರದಲ್ಲಿ ನಾವು ಬಣ್ಣಗಳ ಕಡೆಗೆ ಗಮನ ಕೊಟ್ಟಾಗ ನಮಗೆ ಅನೇಕ ಅಂಶಗಳು ಗಮನ ಸೆಳೆಯುತ್ತವೆ. ಕ್ಸಯೋಮಿ MiPad ಟ್ಯಾಬ್ಲೆಟ್ ಬಿಳಿ, ನೀಲಿ, ಹಸಿರು, ಹಳದಿ ಮತ್ತು ಗುಲಾಬಿ ಬಣ್ಣಗಳಲ್ಲಿ ಬರುತ್ತಿದೆ.

Best Mobiles in India

Read more about:
English summary
Xiaomi Mipad officially unveiled top 5 features to keep in mind.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X