ದಿಪಾವಳಿ ವಿಶೇಷತೆ: 'ಗ್ಯಾಲಕ್ಸಿ ನೋಟ್ 7'ನೊಂದಿಗೆ ರಾಕಿಂಗ್ ಸ್ಟೈಲ್‌ನಲ್ಲಿ ಹಬ್ಬ ಆಚರಣೆ!

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್ 7' ಸ್ಫೋಟದಿಂದ ಆದ ಪರಿಣಾಮಗಳಿಂದ ಜನರು ನೀಡಿದ ರಿಯಾಕ್ಷನ್‌ಗಳನ್ನು ಒಮ್ಮೆ ನೋಡಲೇ ಬೇಕು.

Written By:

ಹೊಸ ವರ್ಷ ಇನ್ನೂ ಸಹ ದೂರವಿದೆ. ದಿಪಾವಳಿ ಹಬ್ಬದ ಆಚರಣೆ ಇನ್ನೇನೋ ಬರ್ತಾ ಇದೆ. ಹೊಸ ವರ್ಷಕ್ಕೆ ಮತ್ತು ದಿಪಾವಳಿಗೆ ಹಬ್ಬಕ್ಕೆ ಯಾರು ತಮ್ಮ ತಮ್ಮ ಮನೆಗಳಲ್ಲಿ ಹೆಚ್ಚು ಪಟಾಕಿ ಹೊಡಿತಾರೋ, ಇಲ್ವೋ ಗೊತ್ತಿಲ್ಲಾ, ಆದ್ರೆ 'ಸ್ಯಾಮ್‌ಸಂಗ್‌‌ ಗ್ಯಾಲಕ್ಸಿ ನೋಟ್ 7' ಖರೀದಿಸಿರೋ ಮನೆಗಳಲೆಲ್ಲಾ ಪಟಾಕಿಗಿಂತ ಮೊದಲು ಮೊಬೈಲೇ ಸ್ಫೋಟಗೊಂಡಿದೆ.

ಏನ್‌ ಇದು ಏನೇನೋ ಹೇಳ್ತಿದ್ದಾರಲ್ಲಾ ಗಿಜ್‌ಬಾಟ್‌ನಲ್ಲಿ ಅಂತ ಕನ್‌ಪ್ಯೂಸ್‌ ಆಗ್‌ಬೇಡಿ, ಕರೆಕ್ಟ್ ಆಗೇ ಹೇಳ್ತಿದ್ದೀವಿ. ಕೊರಿಯಾ ಮೂಲದ ಮೊಬೈಲ್‌ ತಯಾರಕ ಕಂಪನಿ ಸ್ಯಾಮ್‌ಸಂಗ್‌(Samsung) ಇತ್ತೀಚೆಗಷ್ಟೆ ತನ್ನ 'ಗ್ಯಾಲಕ್ಸಿ ನೋಟ್ 7' ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿತ್ತು. ಈ ಡಿವೈಸ್‌ ಮೊಬೈಲ್‌ ಕ್ಷೇತ್ರದಲ್ಲೇ ಬ್ಯಾಟರಿ ಸಮಸ್ಯೆ ಇಂದ ಹೆಚ್ಚು ಸ್ಫೋಟಗೊಂಡ ಡಿವೈಸ್ ಆಗಿದೆ. ಕರ್ಮ. ಮೊಬೈಲ್‌, ತಕ್ಕೊಂಡೋರಾ ಮನೇಲಿ ಮಾತ್ರ ಸ್ಫೋಟವಾಗದೇ, ಕಂಪನಿಯ ಲಾಭದಲ್ಲಿಯೂ ಬಹುದೊಡ್ಡ ನಷ್ಟದ ಸ್ಫೋಟವಾಯಿತು. ಅಂತು ಚೆನ್ನಾಗಿ ಪಟಾಕಿ ಹೊಡೆದಿದೆ. ಜನರು ಎಡವಿ ಬಿದ್ದರೇ, ಆಕಸ್ಮಿಕವಾಗಿ ಮೊಬೈಲ್ ಸ್ಫೋಟವಾದರೆ ರಕ್ಷಿಸಲು ಹೋಗುವವರಿಗಿಂತ, ಮುಂದೆ ನಿಂತು 32 ಹಲ್ಲುಗಳನ್ನು ಬಿಟ್ಟು ನಗುವವರೇ ಹೆಚ್ಚು. ಇನ್ನೂ ಕೆಲವರು ಒಳಗೊಳಗೆ ನಗುತ್ತಾ, ಬೇಸರ ಮಾಡಲು ಇಚ್ಛಿಸದೇ ನಗುತ್ತಿರುತ್ತಾರೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 7 ಸ್ಫೋಟ, ವಿಮಾನದಲ್ಲಿ ಡಿವೈಸ್ ಬ್ಯಾನ್

ಹೋಗ್ಲಿ ಬಿಡಿ. ನಾವಂತು ಈಗ ಮೇನ್ ಟಾಪಿಕ್'ಗೆ ಬರ್‌ತೀವಿ. ವಿಷಯ ಏನಪ್ಪಾ ಅಂದ್ರೆ, 'ಸ್ಯಾಮ್‌ಸಂಗ್‌‌ ಗ್ಯಾಲಕ್ಸಿ ನೋಟ್ 7' ಸ್ಫೋಟದ ಮೇಲೆ ಸ್ಫೋಟ ಆಗುತ್ತಿರುವ ಹಿನ್ನೆಲೆಯಲ್ಲಿ, ಸ್ಪೋಟ ತಡೆಗಟ್ಟಲು ಹಲವರು ಹಲವು ರೀತಿಯ ಸುರಕ್ಷತೆ ಸಲಹೆಗಳನ್ನು, ರಿಯಾಕ್ಷನ್‌ಗಳನ್ನು ನೀಡಿದ್ದಾರೆ. ಇವರ ಚಟುವಟಿಕೆಗಳಿಂದ, ರಿಯಾಕ್ಷನ್‌ಗಳಿಂದ ಸುರಕ್ಷತೆ ಸಿಗುತ್ತೋ ಇಲ್ವೋ ಗೊತ್ತಿಲ್ಲಾ ಆದ್ರೆ ಹೊಟ್ಟೆ ಹುಣ್ಣಾಗುವಷ್ಟು ನಗುವಂತು ಫ್ರೀ ಆಗಿ ಸಿಗುತ್ತೇ. ಜಸ್ಟ್ ಕೆಳಗಿನ ಪೋಸ್ಟರ್‌ಗಳನ್ನು ನೋಡುತ್ತಾ ಓದುತ್ತಾ ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಸಾರಿಗಿಂತ, ಸೇಫ್‌ ಮುಖ್ಯ

ಚಾರ್ಜ್‌ ಆಗ್‌ಬೇಕಾದ್ರೆ ಸ್ಫೋಟಗೊಂಡ ಮೇಲೆ, ಸಾರಿ ಎನ್ನುವ ಬದಲು, ಸೇಫ್ಟಿ ಫಸ್ಟ್‌. ಅದಿಕ್ಕೆ ಈ ಸೆಟಪ್‌.

ಹೀಗೂ ಉಂಟೆ!

ವಾಟರ್‌ ಪ್ರೂಫ್ ಇದ್ರೆ ಪರವಾಗಿಲ್ಲ. ಹಾಗಂತ ಚಾರ್ಜ್‌ ಜಾಸ್ತಿ ಆಗಿ ಸ್ಫೋಟಗೊಳ್ಳದೇ ಇರಲಿ ಎಂದು ಫೋನ್‌'ನ ಐಸ್‌ ಒಳಗೆ ಇಡುವುದೇ?

ಬಹು ಉಪಯೋಗದ ನೋಟ್‌ 7

ಇಷ್ಟೊಂದು ದೊಡ್ಡ ವಿನ್ಯಾಸದಲ್ಲಿ ಸುರಕ್ಷತೆ ಗ್ಯಾಜೆಟ್. ಐ ಲವ್‌ ದಿಸ್.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಂಟೇಜ್ ಚಾರ್ಜಿಂಗ್ ಸ್ಟೇಷನ್‌

ಎರಡನೇ ಮಹಾಯುದ್ಧ ಸಾಮಗ್ರಿಗಳು ಬೆಳಕಿಗೆ ಬಂದದ್ದು, ನೋಟ್ 7 ನಿಂದ ಸುರಕ್ಷತೆಗಾಗಿ.

ವಿಥೌಟ್ ಕೇಸ್‌

ವಿಥೌಟ್‌ ಕೇಸ್‌. ಹೀಗೂ ಆಗುತ್ತದೆ. ಆದ್ರೆ ಇದು ಮಾತ್ರ ಸೂಪರ್‌ನೋವಾ.

ನೋಟ್ 7 ನಿಂದ ಮನೆ ಬೆಳಗಿಸಿ

ದಯವಿಟ್ಟು ಪ್ರಯತ್ನಿಸದಿರಿ. ನೋಟ್ 7 ನಿಂದ ಮನೆಯೇ ಹೊತ್ತಿ ಉರಿದ ಘಟನೆ ಇದು.

ಸ್ಫೋಟದಲ್ಲೂ ಸೌಂದರ್ಯವನ್ನು ಏಕೆ ಕಾಣಬಾರದು?

'ಗ್ಯಾಲಕ್ಸಿ ನೋಟ್ 7' ಸ್ಫೋಟದ ನಂತರ ಸೌಂದರ್ಯವನ್ನೂ ಹೀಗೆ ಕಾಣಬಹುದು.

ಯೂ ಆರ್‌ ಟೂ ಲೇಟ್‌

ಡಿವೈಸ್ ಅನ್ನು ಎಕ್ಸ್‌ಚೇಂಜ್‌ ಮಾಡಲು ತುಂಬಾ ಬೇಗ ಬಂದಹಾಗಿದೆ.

ಮತ್ತೊಮ್ಮೆ ನೆನಪಿಸಿಕೊಳ್ಳಿ

ಹಡಗಿನಲ್ಲಿ ಪ್ರಯಾಣಿಸುವವರು ಸಹ ರೀಕಾಲ್‌ ಮಾಡಿಕೊಳ್ಳಿ. ಏಕೆ ಎಂದು ಫೋಟೋ ಗಮನಿಸಿ.

ಸ್ಯಾಮ್‌ಸಂಗ್‌ ಇಂಜಿನಿಯರ್‌ ನೋಟ್ 7 ಪರಿಶೀಲನೆ ನಡೆಸುತ್ತಿರುವುದು

ಮೊತ್ತೊಮ್ಮೆ ಹೋಪ್‌ ಇತ್ತು. ನಿಜವಾಗಿಯೂ ಸ್ಯಾಮ್‌ಸಂಗ್ ಹೆಚ್ಚು ಖರೀದಿ ಆಗುತ್ತೆ ಅಂತ. ಆದ್ರೆ ಈ ಹೋಪ್ ನೋಡಿ. ಕ್ಲಿಕ್ ಮಾಡಿ.

ದಕ್ಷಿಣ ಕೊರಿಯಾ ಜನರು ರಾಕ್‌

ಹೋ ಗಾಡ್‌. ದಿಸ್‌ ಇಸ್‌ ಬ್ಯಾನ್‌ಗಮ್‌ ಸ್ಟೈಲ್‌. ಮ್ಯೂಸಿಕ್‌ ಕೇಳಿಸೋಕೆ ಆಗಲ್ಲಾ... ಸಾರಿ

ಹೆಡ್‌ಫೋನ್‌ ಬಗ್ಗೆ ಒಂದಿಷ್ಟು!

ಆಪಲ್‌ಗಿಂತ ಹೈಲೆವೆಲ್‌ ಏರ್‌ಪೋಡ್ಸ್‌ಗಳನ್ನು ರೆಡಿ ಮಾಡಿದ್ರು. ನೀವೆ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
12 Hilarious Reactions To Samsung Galaxy Note 7 Blowing Up. To know more visit kannada.gizbot.com
Please Wait while comments are loading...
Opinion Poll

Social Counting