ಏಲಿಯನ್ ಜೀವನವನ್ನು ಬೆಂಬಲಿಸುವ 15 ಕೌತುಕ ಸಂಗತಿಗಳು

By Shwetha
|

ಬಾಹ್ಯಾಕಾಶ ವಾಸಿಗಳಾದ ಏಲಿಯನ್‌ಗಳು ಹಾರುವ ತಟ್ಟೆಯಲ್ಲಿ ಭುಮಿಗೆ ಆಗಮಿಸುವ ಸಣ್ಣ ಜೀವಿಗಳು ಎಂದು ನೀವು ಕರೆಯಬಹುದಾದ, ಇದ್ದರೂ ಅಗೋಚರವಾಗಿರುವ ಈ ಜೀವಿಗಳ ಸುತ್ತ ಸತ್ಯ ಘಟನೆಗಳು ಹರಿದಾಡುತ್ತಲೇ ಇರುತ್ತವೆ. ಭೂಮಿಗೆ ಬಂದಿಳಿದಾಗ ಏನಾದರೊಂದು ಕುರುಹನ್ನು ಮಾನವ ಲೋಕಕ್ಕೆ ಬಿಟ್ಟು ಹೋಗುವ ಈ ನಿರುಪದ್ರವಿಗಳು ಇವೆಯೇ ಇದ್ದರೂ ಭೂಮಿಯಲ್ಲಿ ಏಕೆ ವಾಸಿಸುತ್ತಿಲ್ಲ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

ಆದರೆ ಅನ್ವೇಷಣೆಗಳಿಂದಲೇ ಸತ್ಯಘಟನೆಗಳನ್ನು ಬಯಲು ಮಾಡಬಹುದು ಎಂಬ ಸತ್ಯವನ್ನು ಅರಿತಿರುವ ವಿಜ್ಞಾನಿಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರಂತರ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಈ ಒಳಗುಟ್ಟನ್ನೇ ಅಂದರೆ ಸತ್ಯದ ಅನ್ವೇಷಣೆಯನ್ನು ಸ್ಲೈಡರ್ ಮೂಲಕ ನಾವು ನಿಮಗೆ ತಿಳಿಸುತ್ತಿದ್ದೇವೆ.

#1

#1

ನಾಸಾದ ಅಪೋಲೋ 11 ಮಿಶನ್‌ನಲ್ಲಿ ತಮ್ಮ ಸ್ಥಳದಿಂದ ಹಾರುವ ವಸ್ತುವೊಂದನ್ನು ನೋಡಿದ್ದಾರೆ. ನಾಸಾದ ವಿಜ್ಞಾನಿಗಳಿಗೆ ತಾವು ನೋಡಿರುವ ವಿಷಯದ ಬಗ್ಗೆ ಅಷ್ಟೊಂದು ಖಾತ್ರಿ ಇರಲಿಲ್ಲ.

#2

#2

ಪುರಾತನ ಈಜಿಪ್ಟ್‌ಗೆ ಭೇಟಿ ನೀಡಿದ್ದರು ಈಜಿಪ್ಟ್‌ನ್‌ನ ಈ ಚಿತ್ರಕಲೆಗಳಲ್ಲಿ ಹೆಲಿಕಾಪ್ಟರ್ ಚಿತ್ರವನ್ನು ನಾವು ಗಮನಿಸಬಹುದು. ಏಲಿಯನ್‌ಗಳು ಪುರಾತನ ಈಜಿಪ್ಟ್‌ಗೆ ಭೇಟಿ ನೀಡಿದ್ದರು ಎಂಬ ಕುರುಹುಗಾಗಿ ಈ ಚಿತ್ರವನ್ನು ಕೆತ್ತದ್ದಾರೆ ಎಂಬ ಮಾತು ಇದೆ.

#3

#3

ಫ್ರೆಂಚ್ ಅರಸ ನೆಪೋಲಿಯನ್ ಬೋನಾಪಾರ್ಟೆ ಅಸ್ಥಿಪಂಜರದಲ್ಲಿ ಸೇರ್ಪಡೆಯಾಗಿದ್ದ ಅರ್ಧ ಇಂಚಿನ ವಿದೇಶಿ ವಸ್ತುವೊಂದನ್ನು ನೋಡಿ ವಿಜ್ಞಾನಿಗಳು ನಿಜಕ್ಕೂ ದಿಗ್ಬ್ರಾಂತರಾಗಿದ್ದರು. ಇವರು ಏಲಿಯನ್‌ಗಳನ್ನು ಭೇಟಿಯಾಗಿದ್ದರು ಎಂಬ ವದಂತಿ ಕೂಡ ಇತ್ತು.

#4

#4

ಫೆಬ್ರವರಿ 24, 1942 ರಂದು ಆಗಸದಲ್ಲಿ ಕಣ್ಣು ಕೋರೈಸುವ ಬೆಳಕಿನ ಕಿಡಿಯೊಂದು ಹಠಾತ್ತಾಗಿ ಕಾಣಿಸಿಕೊಂಡಿತ್ತು. ಈ ಬೆಳಕು ಎಲ್ಲಿಂದ ಬರುತ್ತಿದೆ ಎಂಬುದೇ ಜನರನ್ನು ಭಯಭೀತಗೊಳಿಸಿತ್ತು. ಆದರೆ ಇದು ಹೇಗೆ ಕಾಣಿಸಿಕೊಂಡಿತೋ ಹಾಗೆಯೇ ಅದೃಶ್ಯವಾಯಿತು. ಯಾವುದೇ ಹಾನಿಯನ್ನುಂಟು ಮಾಡಿಲ್ಲ.

#5

#5

ವೀನಸ್ ಗ್ರಹದಿಂದ ತೆಗೆದ ಚಿತ್ರ ಇದಾಗಿದ್ದು ರಷ್ಯಾದ ವಿಜ್ಞಾನಿ ಲಿಯೋನಿಯಡ್ ಸ್ಯಾನ್‌ಫಾರ್ಮಲಿಟಿ ಸೆರೆಹಿಡಿದಿದ್ದಾರೆ. ಗ್ರಹದಲ್ಲಿ ಈ ಜೀವಿ ಇರುವ ಚಿತ್ರವನ್ನು ಇವರು ಭೂಮಿಗೆ ಕಳುಹಿಸಿದ್ದಾರೆ.

#6

#6

ತಂತ್ರಜ್ಞಾನದ ಬಳಕೆಯಿಲ್ಲದೆ 220 ಮಿಲಿಯನ್ ಜ್ಯೋತಿವರ್ಷಗಳಿಂದಾಚೆಗೆ ಸಿಗ್ನಲ್ ಒಂದು ಬಂದಿರುವುದಾಗಿ ಒಹಿಯೊ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದು ಹೆಚ್ಚು ಬಲಯುತವಾಗಿತ್ತು ಮತ್ತು ಯಾವುದೇ ತಂತ್ರಜ್ಞಾನದ ಬಳಕೆಯಿಲ್ಲದೆ ಇದು ಅವರನ್ನು ತಲುಪಿತ್ತು.

#7

#7

ಡೆಲ್ಟಾ ಮಾದರಿಯ ದಿನದಿಂದ ದಿನಕ್ಕೆ ತಮ್ಮ ಪ್ರಸ್ತುತಿಯನ್ನು ಸಾರುತ್ತಿರುವ ಏಲಿಯನ್‌ಗಳು ಇಂತಹುದೇ ಆಕಾರವನ್ನು ಹೊಂದಿದೆ ಎಂದು ಹೇಳಲಾಗುವುದಿಲ್ಲ. ವೆಟ್ರನ್ ಪೈಲೆಟ್ ಮತ್ತು ಆತನ ಅಧಿಕಾರಿ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ "ಡೆಲ್ಟಾ ಮಾದರಿಯ" ವಸ್ತುವೊಂದು ಅವರತ್ತ ಬರುತ್ತಿರುವುದನ್ನು ನೋಡಿದ್ದಾರೆ. ನಂತರ ಅದು ಅಗೋಚರವಾಯಿತು .

#8

#8

2001 ರ ಅಧ್ಯಯನ ಹೇಳುವಂತೆ ಜ್ಯುಪಿಟರ್ ರೆಡ್ ಮೂನ್ ಯುರೋಪಾವನ್ನು ಫ್ರೋಜನ್ ಮತ್ತು ಬ್ಯಾಕ್ಟೀರಿಯಾದಿಂದ ನಿರ್ಮಿಸಲಾಗಿದೆ. ಬಾಹ್ಯಾಕಾಶದಲ್ಲಿ ಜನ್ಮತಾಳುವ ಸುಧಾರಿತ ಬದುಕನ್ನು ಎತ್ತಿ ತೋರಿಸುವ ಚಿಹ್ನೆ ಇದಾಗಿದೆ.

#9

#9

ಮಂಗಳ ಗ್ರಹ ನಿವಾಸಿಗಳ ಪಳೆಯುಳಿಕೆಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಬಿಲಿಯಗಟ್ಟಲೆ ವರ್ಷಗಳ ಹಿಂದೆ ಅವರು ಬಿಟ್ಟುಹೋದ ಗುರುತು ಇದಾಗಿದೆ ಎಂಬುದಾಗಿ ತಿಳಿದು ಬಂದಿದೆ.

#10

#10

2004 ಕ್ಕಿಂತಲೂ ಮೊದಲು, ಮೂರು ಸ್ವತಂತ್ರ ಗುಂಪುಗಳು ಮಂಗಳನ ವಾತಾವರಣದಲ್ಲಿ ಹೆಚ್ಚು ಪ್ರಮಾಣದ ಮಿಥೇನ್ ಇರುವುದಾಗಿ ವರದಿ ಮಾಡಿದ್ದಾರೆ. ಮೂಲಗಳ ಪ್ರಕಾರ ಜೀವ ಇರುವ ವಸ್ತುಗಳು ಮಾತ್ರವೇ ಮಿಥೇನ್ ಅನ್ನು ನಿರ್ಮಾಣ ಮಾಡಬಹುದಾಗಿದೆ.

#11

#11

ಸಪ್ಟೆಂಬರ್ 2010 ರಂದು ಯುಎಸ್ ಮಲೇಶಿಯನ್ ಆಸ್ಟ್ರೊಫಿಸಿಯಸ್ಟ್ ಮಜ್‌ಲಾನ್ ಓತ್‌ಮನ್ ಅವರನ್ನು ಎಲ್ಲಾ ಬಾಹ್ಯಾಕಾಶಿ ಸಂಬಂಧಿತ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ರಾಯಭಾರಿಯನ್ನಾಗಿ ನೇಮಿಸಿತು.

#12

#12

2002 ರಲ್ಲಿ ರಷ್ಯಾದ ವಿಜ್ಞಾನಿಗಳು ಮೈಕ್ರೋಬ್ ಅನ್ನು ಅನ್ವೇಷಿಸಿದ್ದು ಸಾಯದೇ ಹೆಚ್ಚು ಪ್ರಮಾಣದ ರೇಡಿಯೇಶನ್‌ನೊಂದಿಗೆ ಜೀವಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿದೆ ಎಂಬುದನ್ನು ಕಂಡುಕೊಂಡರು. ಈ ಮೈಕ್ರೋಬ್ ಜನ್ಮತಾಳಿದ್ದು ಮಂಗಳನಲ್ಲಾಗಿದೆ.

#13

#13

2004 ರಲ್ಲಿ, ಬಾಹ್ಯಾಕಾಶದಿಂದ ರೇಡಿಯೊ ಅಲೆಗಳನ್ನು ಪರೀಕ್ಷಿಸಿದ್ದು ಇದರಲ್ಲೊಂದು ಸಿಗ್ನಲ್ ಹೆಚ್ಚು ಬಲವಾಗಿತ್ತು. ನಮ್ಮನ್ನು ಸಂಪರ್ಕಿಸುವ ಏಲಿಯನ್ ಪರಿವಾರದ ಧ್ವನಿಯಾಗಿ ಇದು ತಲುಪಿತ್ತು.

#14

#14

ಬ್ರಿಟೀಷ್ ವಿಜ್ಞಾನಿಗಳು ಬಲೂನ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿದಾಗ ಇದು ಸಣ್ಣ ಬಯಾಲಾಜಿಕಲ್ ಆರ್ಗಾನಿಸಮ್‌ಗಳನ್ನು ಹೊತ್ತುಕೊಂಡು ಬಂದಿತ್ತು. ಇದರಿಂದ ಏಲಿಯನ್ ಜೀವನ ಬಾಹ್ಯಾಕಾಶದಲ್ಲಿ ಜನ್ಮತಾಳಿದ್ದು ಹೌದು ಎಂಬುದನ್ನು ಖಾತ್ರಿಪಡಿಸಿತು.

#15

#15

ನಮ್ಮ ಗ್ಯಾಲಕ್ಸಿ, ಮಿಲ್ಕಿ ವೇ ಗ್ಯಾಲಕ್ಸಿಯು 120,000 ಬೆಳಕಿನ ವರ್ಷಗಳದಾಚೆಗೂ ಅಳತೆಯನ್ನು ಹೊಂದಿದ್ದು ಇದು 400 ನಕ್ಷತ್ರಗಳನ್ನು ಒಳಗೊಂಡಿದೆ. ಇದರಲ್ಲಿರುವ ಅರ್ಧದಷ್ಟು ನಕ್ಷತ್ರಗಳು ತಮ್ಮ ಕಕ್ಷೆಯೊಳಗೆ ಕನಿಷ್ಟ ಪಕ್ಷ ಒಂದು ಗ್ರಹವನ್ನು ಒಳಗೊಂಡಿದೆ. ಇಲ್ಲಿ ಸಾಕಷ್ಟು ಗ್ರಹಗಳಿದ್ದು ಇದುವರೆಗೆ ಏಲಿಯನ್ ಜೀವನವನ್ನು ಅನ್ವೇಷಿಸಲಾಗಿಲ್ಲ ಎಂಬುದಕ್ಕೆ ಉತ್ತಮ ಅವಕಾಶವಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಮಾನವ ಕುಟುಂಬದ ಹೊಸ ಸದಸ್ಯರು</a><br /><a href=ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!
ಭೂಮಿಯ ಮೇಲಿರುವ ಏಳು ರಹಸ್ಯಮಯ ಸ್ಥಳಗಳು" title="ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಮಾನವ ಕುಟುಂಬದ ಹೊಸ ಸದಸ್ಯರು
ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!
ಭೂಮಿಯ ಮೇಲಿರುವ ಏಳು ರಹಸ್ಯಮಯ ಸ್ಥಳಗಳು" loading="lazy" width="100" height="56" />ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ಮಾನವ ಕುಟುಂಬದ ಹೊಸ ಸದಸ್ಯರು
ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!
ಭೂಮಿಯ ಮೇಲಿರುವ ಏಳು ರಹಸ್ಯಮಯ ಸ್ಥಳಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಲೇಖನಗಳು

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
Aliens. Extraterrestrials. Space Men. Whatever you call them, sightings have been around since man first gazed into the skies. And what follows are 15 signs that just may prove they very well exist.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X