ಘೋರ ದುರಂತ: ಜಲಸಮಾಧಿಯಾಗಲಿರುವ ವಿಶ್ವ ವಿಸ್ಮಯಗಳು

By Shwetha
|

ಗ್ರೀನ್ ಲ್ಯಾಂಡ್, ಅಂಟಾರ್ಟಿಕಾ ಮತ್ತು ಆರ್ಕಟಿಕ್‌ನಲ್ಲಿರುವ ಮಂಜುಗಡ್ಡೆ ಕರಗಿ ನೀರಾಗಿ ಹರಿದು ಸಮುದ್ರವನ್ನು ಸೇರುವುದರಿಂದ ವಿಶ್ವದಲ್ಲಿರುವ ಸಮುದ್ರಗಳಲ್ಲಿ ನೀರಿನ ಪ್ರಮಾಣ ಹೆಚ್ಚಲಿದೆ, ಇದು ಭೂಮಿಯ ಮೇಲಿರುವ ಜೀವ ಸಂಕುಲಗಳಿಗೆ ಅಪಾಯವನ್ನು ತಂದೊಡ್ಡಲಿದೆ ಎಂಬುದಾಗಿ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಪುರಾತನ ಕಾಲದಿಂದಲೂ ಪಳೆಯುಳಿಕೆಗಳಾಗಿ ನೆಲೆಸಿರುವ ಅತ್ಯಮೂಲ್ಯ ಪ್ರಾಚ್ಯ ವಸ್ತುಗಳನ್ನು ನಾವು ಕಳೆದುಕೊಳ್ಳಲಿದ್ದೇವೆ.

ಓದಿರಿ: ವಿಚಿತ್ರ ರೋಗಗಳಿದ್ದರೂ ಬದುಕಿದ್ದ ಅಸಾಮಾನ್ಯ ವ್ಯಕ್ತಿಗಳು

2014 ರ ಪತ್ರಿಕೆಯೊಂದು ಸುದ್ದಿಯೊಂದನ್ನು ಬಿಡುಗಡೆ ಮಾಡಿದ್ದು ಇದರ ಪ್ರಕಾರ ಯುನೆಸ್ಕೊದ ಐದನೇ ಒಂದು ಭಾಗದಷ್ಟು 720 ವಿಶ್ವ ಪ್ರಾಚ್ಯ ಸ್ಥಳಗಳು ಸಮುದ್ರ ಮಟ್ಟದ ಗಣನೀಯ ಏರಿಕೆಯಿಂದಾಗಿ ಜಲಸಮಾಧಿಯಾಗಲಿದೆ. ವಿಶ್ವದ ಅದ್ಭುತಗಳು ಇದರಲ್ಲಿ ಸೇರಿಕೊಂಡಿದ್ದು ಜಾಗತಿಕ ತಾಪಮಾನ 3.6 ಡಿಗ್ರಿ ಫ್ಯಾರನ್ ಹೀಟ್ ಅನ್ನು ತಲುಪಿದಾಗ ನಡೆಯುವ ಸಂಭವವನ್ನು ತಡೆಯಲು ಸಾಧ್ಯವಿಲ್ಲ ಎಂಬುದಾಗಿ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಓದಿರಿ: ಅನ್ವೇಷಣೆಯ ಹಾದಿಯಲ್ಲಿರುವ ಟಾಪ್ 20 ವಿಶ್ವರಹಸ್ಯಗಳು

ಇಂದಿನ ಲೇಖನದಲ್ಲಿ ಮುಳುಗಡೆಯಾಗಲಿರುವ ಈ ಸ್ಥಳಗಳ ಬಗ್ಗೆ ನಿಮಗೆ ಮಾಹಿತಿಯನ್ನು ನಾವು ನೀಡಲಿದ್ದು ಇದು ನಮ್ಮ ನಡುವೆ ಇದ್ದುದು ಹೌದೇ ಎಂಬ ಕುತೂಹಲ ನಿಮ್ಮಲ್ಲಿ ಉಂಟಾಗುವುದು ಖಂಡಿತ.

#1

#1

ಈ ದೈತ್ಯ ಕಲ್ಲಿನ ತಲೆಗಳ ಸ್ಥಳೀಯ ಹೆಸರು ನಿಮಗೆ ಗೊತ್ತಿಲ್ಲ ಎಂದಾದಲ್ಲಿ, ನಿಮ್ಮ ಮನೆಯ ಟಿವಿಯಲ್ಲಿ ಇದನ್ನು ನೀವು ನೋಡಿರುತ್ತೀರಿ. ಕೆಲವೊಮ್ಮೆ ಪೇಂಟಿಂಗ್‌ಗಳಲ್ಲಿ ಕೂಡ ಇದನ್ನು ಬಳಸಿಕೊಂಡಿರುತ್ತಾರೆ.

#2

#2

2,000 ಹಳೆಯದಷ್ಟು ಪುರಾತನ ಮುಖಗಳನ್ನು ಪೊಲಿನೇಶಿಯನ್ ಜನಗಳು ನಿರ್ಮಿಸಿದ್ದು ಈ ಐಲ್ಯಾಂಡ್‌ನಲ್ಲಿ ಅವರು ವಾಸಿಸುತ್ತಿದ್ದರು, ಇದನ್ನವರು ರಾಪಾ ನೂಯಿ ಎಂಬುದಾಗಿ ಕರೆದಿದ್ದಾರೆ.

#3

#3

ಹವಾಮಾನ ಬದಲಾವಣೆ, ಸಮುದ್ರ ಮಟ್ಟದ ಏರಿಕೆ, ದಡಗಳ ಕುಸಿತ ಈಗಾಗಲೇ ಈ ದ್ವೀಪದಲ್ಲಿ ನಡೆಯುತ್ತಿರುವ ಕ್ರಿಯೆಯಾಗಿದೆ.

#4

#4

ದೈತ್ಯ ಅಲೆಗಳು ಈ ಕಲ್ಲಿನ ಪ್ರತಿಮೆಗಳ ಮೇಲೆ ಅಪ್ಪಳಿಸುತ್ತಿದ್ದು ಅವುಗಳನ್ನು ಶಿಥಿಲಗೊಳಿಸುತ್ತಿವೆ. ಇವುಗಳು ಇನ್ನೂ ನಾಶಕ್ಕೆ ಹೋದಂತೆಲ್ಲಾ ಅವುಗಳು ಸಂಪೂರ್ಣವಾಗಿ ಜಲಸಮಾಧಿಯಾಗಲಿವೆ.

#5

#5

ಆಸ್ಟ್ರೇಲಿಯಾದ ಸಿಡ್ನಿ ಒಪೇರಾ ಹೌಸ್ ವಿಶ್ವದ ಪರಂಪರೆ ಸೈಟ್‌ಗಳಲ್ಲಿ ಒಂದೆನಿಸಿದ್ದು, ಸಮುದ್ರ ಮಟ್ಟ ಹೆಚ್ಚಳ ಹೊಡೆತಕ್ಕೆ ಇದೂ ಸಿಲುಕಿದೆ.

#6

#6

ಬರೇ 43 ವರ್ಷಗಳಲ್ಲಿ, ಯುನೆಸ್ಕೊ ಈ ಕಟ್ಟಡವನ್ನು '20 ನೇ ಶತಮಾನದ ವಾಸ್ತುಕಲೆ ಕಾರ್ಯ' ಎಂಬುದಾಗಿ ಬಣ್ಣಿಸಿದೆ.

#7

#7

ಆದರೆ ಒಪೇರಾ ಹೌಸ್ ಸಮುದ್ರ ಮಟ್ಟಕ್ಕಿಂತ ಬರೇ 11 ಫೀಟ್ ಅಂತರದಲ್ಲಿ ನಿಂತಿದೆ ಅಂತೆಯೇ ಕಟ್ಟಡದ ಅಡಿಭಾಗವು ಸಮುದ್ರ ನೀರು ಮತ್ತು ಉಪ್ಪಿನಿಂದಾಗಿ ಶಿಥಿಲಗೊಂಡು ತಳೆಯುತ್ತಿದೆ.

#8

#8

ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಎಲಿಫೆಂಟಾ ಐಸ್‌ಲ್ಯಾಂಡ್ಸ್, ಪ್ರಮುಖ ಪುರಾತತ್ವ ಸ್ಥಳವಾಗಿ ಪರಿಗಣಿಸಲಾಗಿದ್ದು ಎಲಿಫೆಂಟಾ ಗುಹೆಗಳು ಪ್ರಮುಖವಾದುದಾಗಿದೆ.

#9

#9

ಇಲ್ಲಿರುವ ಶಿಲ್ಪಕಲಾ ರಚನೆಗಳು 1,500 ವರ್ಷಗಳಷ್ಟು ಹಳೆಯದಾಗಿದ್ದು, ಭಾರತೀಯ ಕಲೆಗಳ ಸೂಕ್ತ ಅಭಿವ್ಯಕ್ತಿ ಎಂಬ ಬಣ್ಣನೆಗೆ ಒಳಗಾಗಿವೆ. ಯುನೆಸ್ಕೊದ ಪ್ರಕಾರ ಇದು ಹೆಚ್ಚು ಪುರಾತನ ಕಲಾ ಆಸ್ತಿಯಾಗಿದೆ.

#10

#10

23 ಫೀಟ್ ಉದ್ದವಿರುವ ಶಿವನ ಪ್ರತಿಮೆ ಇಲ್ಲಿದ್ದು ಸೃಷ್ಟಿಕರ್ತ, ರಕ್ಷಕ, ಮತ್ತು ಧ್ವಂಸಕ ಎಂಬ ಮೂರು ರೀತಿಯಲ್ಲಿ ಪರಿಗಣಿಸಲಾಗಿದೆ

#11

#11

ಈ ಗುಹೆಗಳು ಈಗಾಗಲೇ ಮಾನ್ಸೂನ್ ಹೊಡೆತಕ್ಕೆ ಸಿಲುಕಿದ್ದು ಸಮೀಪದ ಕಾರ್ಖಾನೆಗಳ ಕಲ್ಮಶಗಳಿಂದ ಪತನವನ್ನು ಕಂಡುಕೊಳ್ಳುತ್ತಿದೆ. ಜಾಗತಿಕ ತಾಪಮಾನ 1.8 ಫ್ಯಾರನ್ ಹೀಟ್‌ನಲ್ಲಿದ್ದು, ಏರುತ್ತಿರುವ ಸಮುದ್ರ ಕೂಡ ಇದರೊಂದಿಗೆ ಸೇರಿಕೊಂಡಿದೆ.

#12

#12

ಜಾಗತಿಕ ತಾಪಮಾನದ ಅಪಾಯದಂಚಿನಲ್ಲೇ ನಾವುಗಳು ಇದ್ದು, ಅದನ್ನು ಹೆಚ್ಚು ಕಡಿಮೆ ನಾವು ಮೀರಿದ್ದೇವೆ. 2100 ಕ್ಕಿಂತಲೂ ಹೆಚ್ಚು ಮಟ್ಟದಲ್ಲಿ ಜಗತ್ತಿನಲ್ಲಿರುವ ಸಮುದ್ರ ಮಟ್ಟಗಳು ಏರುವ ಸಾಧ್ಯತೆ ಇದೆ.

#13

#13

ಫ್ರಾನ್ಸ್‌ನಲ್ಲಿರುವ ಮೋಂಟ್ ಸೈಂಟ್ ಮೈಕೆಲ್ ಸಣ್ಣ ಶಿಲೆಗಳಿಂದ ಆವೃತವಾಗಿರುವ ದ್ವೀಪವಾಗಿದ್ದು, ಅತ್ಯಂತ ಸುಂದರವಾಗಿದೆ.

#14

#14

ಸುತ್ತಲೂ ನೀರಿನಿಂದ ಕೂಡಿರುವ ಈ ಸ್ಥಳದಲ್ಲಿ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

#15

#15

ಆದರೆ ಏರುತ್ತಿರುವ ತಾಪಮಾನ ಈ ದ್ವೀಪವನ್ನು ಮುಳುಗಿಸಲಿದ್ದು ಸುಂದರ ತಾಣವೊಂದು ಶೀಘ್ರದಲ್ಲಿಯೇ ಜಲಸಮಾಧಿಯಾಗಲಿದೆ.

#16

#16

ಲಿಬಿಯಾದಲ್ಲಿರುವ ಈ ಸ್ಥಳವು ರೋಮನ್ ಸಾಮ್ರಾಜ್ಯದ ಕಲಾತಿಲಕ ಎಂದೆನಿಸಿದೆ.

#17

#17

1,000 ವರ್ಷಗಳಷ್ಟು ಹಳೆಯದಾಗಿರುವ ಈ ನಗರವು ವಿಶ್ವದ ಪುರಾತತ್ವ ಸ್ಥಳಗಳಲ್ಲಿ ಒಂದಾಗಿದೆ.

#18

#18

ಹಲವಾರು ನಾಗರೀಕತೆಗಳ ದ್ಯೋತಕವಾಗಿ ಕೂಡ ಈ ನಗರವನ್ನು ಪರಿಗಣಿಸಲಾಗಿದೆ. ಮೆಡಿಟರೇನಿಯನ್ ಸಮುದ್ರದಲ್ಲಿ ನೀರಿನಿ ಪ್ರಮಾಣ ಹೆಚ್ಚುತ್ತಿರುವುದರಿಂದ ಈ ನಗರವು ಜಲಸಮಾಧಿಯ ಭೀತಿಯನ್ನು ಎದುರಿಸಲಿದೆ.

#19

#19

ತಾಪಮಾನದ ಬದಲಾವಣೆ ಮಾತ್ರವಲ್ಲದೆ, ನಡೆಯುತ್ತಿರುವ ಸಿವಿಲ್ ಯುದ್ಧ ಕೂಡ ನಗರವನ್ನು ಧೂಳೀಪಟ ಮಾಡುತ್ತಿದೆ. ಸ್ಥಳಕ್ಕೆ ಹಾನಿಯನ್ನು ತೀವ್ರ ಪ್ರಮಾಣದಲ್ಲಿ ಮಾಡುತ್ತಿದೆ.

#20

#20

800 ವರ್ಷಗಳಷ್ಟು ಹಳತಾಗಿರುವ ಈ ಸೂರ್ಯ ದೇವಸ್ಥಾನ ಭಾರತದ ಪಶ್ಚಿಮ ಕರಾವಳಿಯಲ್ಲಿದೆ. ಯುನೆಸ್ಕೊ ಈ ಸ್ಥಳವನ್ನು ಪುರಾತನ ಕಲಾ ಸಂಸ್ಕೃತಿ ಎಂದೇ ಕರೆದಿದ್ದು 12 ವರ್ಷಗಳ ಕಾಲ 1,200 ಕಲಾವಿದರು ಇದನ್ನು ನಿರ್ಮಿಸಿದ್ದಾರೆ.

#21

#21

ಕೊನಾರ್ಕ್ ನಗರವು ಸಮುದ್ರ ಮಟ್ಟಕ್ಕಿಂತ ಏಳು ಫೀಟ್ ಎತ್ತರದಲ್ಲಿದ್ದು, ಒಂದು ಮಂಜುಗಡ್ಡೆಯ ಹೊದಿಕೆ ಕೂಡ ಈ ಧಾರ್ಮಿಕ ಸ್ಥಳವನ್ನು ನೀರು ಪಾಲು ಮಾಡಬಹುದಾಗಿದೆ.

#22

#22

ಫ್ರಾನ್ಸ್ ಯುಎಸ್‌ಗೆ ಕೊಡುಗೆಯಾಗಿ ನೀಡಿರುವ 100 ನೇ ವರ್ಷದ ಸ್ವಾತಂತ್ರ್ಯದ ದ್ಯೋತಕವಾಗಿರುವ ಲೇಡಿ ಲಿಬರ್ಟಿ ನ್ಯೂಯಾರ್ಕ್‌ನ ಹಾರ್ಬರ್‌ನಲ್ಲಿ 130 ವರ್ಷಗಳಿಂದ ನೆಲೆನಿಂತಿದೆ.

#23

#23

ಸಮುದ್ರ ಮಟ್ಟವು ಮೂರು ಫೀಟ್ ಎತ್ತರವನ್ನು ತಲುಪಿದರೂ ಕೂಡ ಸ್ವಾತಂತ್ರ್ಯ ದೇವತೆ ನೀರು ಪಾಲಾಗುವುದು ಖಂಡಿತ. ಇದರೊಂದಿಗೆ ಯುನೆಸ್ಕೊ ಕೊಂಡಾಡಿರುವ, ವಿಶ್ವದ ಮಾನ್ಯತೆ ಪಡೆದುಕೊಂಡಿರುವ ಸ್ವಾತಂತ್ರ್ಯ ದೇವತೆ ಇತಿಹಾಸದ ಪುಟಗಳಲ್ಲಿ ಮಾತ್ರವೇ ಕಾಣಸಿಗುತ್ತಾಳೆ.

Best Mobiles in India

English summary
These world wonders represent just a handful of sites that could be at least partly below local sea level if global temperatures reach a 3.6-degree Fahrenheit warming limit set out by the Paris Agreement.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X