ವಿಸ್ಮಯ: ಬರೇ 30 ವರ್ಷಗಳಲ್ಲಿ ಬದಲಾಗಲಿರುವ ವಿಶ್ವ

By Shwetha
|

ಆಧುನೀಕತೆ ಅಭಿವೃದ್ಧಿಯನ್ನು ಪಡೆದುಕೊಂಡಂತೆಲ್ಲಾ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಉಂಟಾಗುತ್ತಿದೆ. ಅಷ್ಟೊಂದು ವೇಗವಾಗಿ ನಾವು ಮುಂದುವರಿಯುತ್ತಿದ್ದೇವೆ. ಈ ಬೆಳವಣಿಗೆಯನ್ನು ಕಾಣುತ್ತಾ ಹೋದಂತೆಲ್ಲಾ ವರ್ಷದಲ್ಲಿ ನಾವು ಎಷ್ಟು ಶೀಘ್ರವಾಗಿ ಮುಂದುವರಿಯಬಹುದು ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಇಯಾನ್ ಪೀರ್ಸನ್ ಭವಿಷ್ಯಶಾಸ್ತ್ರಜ್ಞ 85% ನಿಖರ ದಾಖಲೆಯನ್ನು ಅನುಸರಿಸಿ 2045 ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವ ರೀತಿಯ ಅಭಿವೃದ್ಧಿಯನ್ನು ಕಂಡುಕೊಳ್ಳಬಹುದು ಎಂಬ ವಿವರವನ್ನು ನೀಡಿದ್ದಾರೆ.

ಓದಿರಿ: ವಿಶ್ವದಲ್ಲೇ ಪ್ರಥಮ ಬಾರಿಗೆ ಸಂಪೂರ್ಣ ದೇಹ ಶಸ್ತ್ರಚಿಕಿತ್ಸೆ

ಕಟ್ಟಡ ರಚನಾ ಕಂಪೆನಿ ಹ್ಯೂಡನ್‌ನೊಂದಿಗೆ ವರದಿಯನ್ನು ಸಿದ್ಧಪಡಿಸಿರುವ ಪೀರ್ಸನ್ ತಂತ್ರಜ್ಞಾನ ಕ್ಷೇತ್ರದಲ್ಲಿ 30 ವರ್ಷಗಳ ನಂತರ ನಾವು ಏನನ್ನು ನಿರೀಕ್ಷಿಸಬಹುದು ಎಂಬ ಅಂಕಿ ಅಂಶಗಳ ವರದಿಯನ್ನು ನೀಡಿದ್ದಾರೆ.

#1

#1

ಕಟ್ಟಡಗಳೊಂದಿಗೆ ಮಾತನಾಡಿ ನಮ್ಮ ಕೋರಿಕೆಯನ್ನು ಇನ್ನು ಮುಂದೆ ಈಡೇರಿಸಿಕೊಳ್ಳುಂತಹ ಅಭಿವೃದ್ಧಿಯನ್ನು ನಾವು ಕಂಡುಕೊಳ್ಳಬಹುದಾಗಿದೆ. ಒಳಾಂಗಣ ತಾಪಮಾನ ಬದಲಾವಣೆ ಕೋರಿಕೆ ಮೊದಲಾದ ವಿನಂತಿಗಳನ್ನು ಬಾಯಿಯಲ್ಲೇ ಹೇಳಿ ಪೂರೈಸಿಕೊಳ್ಳಬಹುದಾಗಿದೆ.
ಚಿತ್ರಕೃಪೆ: ಹ್ಯೂಡನ್

#2

#2

ಉದ್ದನೆಯ ಕಟ್ಟಡಗಳ ರಚನೆಯನ್ನು ನಮಗೆ ಮಾಡಿಕೊಳ್ಳಬಹುದಾಗಿದ್ದು ನಿವಾಸ, ಕಚೇರಿ, ಚಟುವಟಿಕಾ ಕೇಂದ್ರಗಳನ್ನು ನಾವಿಲ್ಲಿ ನಿರ್ಮಿಸಿಕೊಳ್ಳಬಹುದಾಗಿದೆ.
ಚಿತ್ರಕೃಪೆ: ಆಂಡಿ ಸ್ಕೇಲ್ಸ್

#3

#3

'ಬ್ಯಾಕ್ ಟು ದ ಫ್ಯೂಚರ್ ಸೆಕೆಂಡ್' ಸಿನಿಮಾದಲ್ಲಿ ವರ್ಚುವಲ್ ರಿಯಾಲಿಟಿ ಕಿಟಕಿಯನ್ನು ಅಳವಡಿಸಿರುವ ದೃಶ್ಯವಿದ್ದು ಈ ಪರದೆಯನ್ನು ನಮಗೆ ಹೇಗೆ ಬೇಕಾದರೂ ಬದಲಾಯಿಸಿಕೊಳ್ಳಬಹುದಾಗಿದೆ. ನಿಜ ಜೀವನದಲ್ಲೂ ಅತಿ ಕಡಿಮೆ ದರದ ಇಂತಹ ಪರದೆಗಳನ್ನು ನಮ್ಮದಾಗಿಸಿಕೊಳ್ಳಬಹುದಾಗಿದೆ.

#4

#4

ಸೋಲಾರ್ ಕೋಟಿಂಗ್ಸ್ ಸೂರ್ಯನ ಬೆಳಕನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತವೆ.
ಚಿತ್ರಕೃಪೆ: ಕ್ರಿಸ್ ಕಾರ್ಲ್‌ಸನ್

#5

#5

ಕೊಠಡಿಯ ಸುತ್ತ ನೀವು ಓಡಾಡಿದಂತೆಲ್ಲಾ ರೇಡಿಯೇಟಿವ್ ಹೀಟಿಂಗ್ ಮತ್ತು ಸ್ಮಾರ್ಟ್ ಲೈಟಿಂಗ್ ನಿಮ್ಮನ್ನು ಅನುಸರಿಸುತ್ತದೆ.

#6

#6

ಪ್ಯಾನಸೋನಿಕ್ ರೊಬೋಟಿಕ್ ಸೂಟ್ ಒಂದನ್ನು ಅಭಿವೃದ್ಧಿಪಡಿಸುತ್ತಿದ್ದು ಭಾರವಾದ ವಸ್ತುಗಳನ್ನು ಹೊರಲು ಮತ್ತು ಸಾಗಿಸಲು ಇದು ಸಹಾಯ ಮಾಡಲಿದೆ.
ಚಿತ್ರಕೃಪೆ: ಹ್ಯುಂಡಯ್

#7

#7

ಮಾನವರೊಂದಿಗೆ ಕೆಲವೊಂದು ಯೋಜನೆಗಳೊಂದಿಗೆ ರೊಬೋಟ್‌ಗಳು ಕಾರ್ಯನಿರ್ವಹಿಸಲಿದ್ದು, ಯಾವುದಾದರೂ ಅಪಾಯಕಾರಿ ಕೆಲಸಗಳಲ್ಲಿ ಮಾನವರ ಬದಲಿಗೆ ರೊಬೋಗಳು ಕಾರ್ಯನಿರ್ವಹಿಸಲಿವೆ.
ಚಿತ್ರಕೃಪೆ: ಗೆಟ್ಟಿ ಇಮೇಜಸ್

#8

#8

ಕಟ್ಟಡಗಳ 3 ಡಿ ಪ್ರಿಂಟಿಂಗ್ ನಿಧಾನಕ್ಕೆ ಬದಲಾವಣೆಯನ್ನು ಕಂಡುಕೊಳ್ಳಲಿದ್ದು ಹೆಚ್ಚಿನ ಸುಧಾರಣೆಗಳನ್ನು ಈ ಕ್ಷೇತ್ರದಲ್ಲಿ ನಮಗೆ ಕಂಡುಕೊಳ್ಳಬಹುದಾಗಿದೆ.
ಚಿತ್ರಕೃಪೆ: ಯೂಟ್ಯೂಬ್

Best Mobiles in India

English summary
Ian Pearson, a futurologist with an 85% accuracy track record, helped put together a report on what we can expect in the year 2045.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X