ಅಮೆಜಾನ್ ಆಫರ್..1000 ಅದೃಷ್ಟವಂತರಿಗೆ 499 ಕ್ಕೆ ರೆಡ್‌ಮಿ ನೋಟ್ 4!! ನಿಜಾನ?

ಇಂತಹ ಆಫರ್‌ ಪೋಸ್ಟ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.!!

|

ಅತ್ಯುತ್ತಮ ಸ್ಮಾರ್ಟ್‌ಫೊನ್ ರೆಡ್‌ಮಿ ನೋಟ್ 4 ಭಾರತದೆಲ್ಲೆಡ ಸಂಚಲನ ಮೂಡಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಇದನ್ನೆ ದುರುಪಯೋಗಪಡಿಸಿಕೊಳ್ಳಲು ಹವಣಿಸುತ್ತಿರುವ ಸೈಬರ್ ಕ್ರಿಮಿನಲ್‌ಗಳು ಕೇವಲ 499 ರೂಪಾಯಿಗೆ ರೆಡ್‌ಮಿ ನೋಟ್‌ 4 ಸ್ಮಾರ್ಟ್‌ಫೊನ್ ಮಾರಾಟಕ್ಕಿದೆ ಎನ್ನುವ ಸುಳ್ಳು ಜಾಹಿರಾತನ್ನು ಬಿತ್ತುತ್ತಿದ್ದಾರೆ.!!

ಅಮೆಜಾನ್ ಆಫರ್ಸ್ ಎನ್ನುವ ಫೆಸ್‌ಬುಕ್ ಪೇಜ್‌ನಲ್ಲಿ ಈ ರೀತಿಯ ಆಫರ್‌ ಬಗ್ಗೆ ಜಾಹಿರಾತು ನೀಡಲಾಗಿದ್ದು, ಜಾಹಿರಾತು ಲಿಂಕ್ ತೆರೆದರೆ ನೇರವಾಗಿ ಮಾಲ್‌ವೇರ್ ಸೈಟ್‌ ತೆರೆದುಕೊಳ್ಳುತ್ತಿದೆ. ಜನರನ್ನು ಮೋಸಗೊಳಿಸಲು ಸೈಬರ್‌ ಕ್ರಿಮಿನಲ್‌ಗಳು ಈ ರೀತಿಯ ಟ್ರಿಕ್ಸ್ ಮಾಡುತ್ತಿದ್ದು, ಇಂತಹ ಸೈಟ್‌ಗಳ ಬಗ್ಗೆ ಎಚ್ಚರಿಕೆಯನ್ನು ಹೊಂದಬೇಕಿದೆ.

ಅಮೆಜಾನ್ ಆಫರ್..1000 ಅದೃಷ್ಟವಂತರಿಗೆ 499 ಕ್ಕೆ ರೆಡ್‌ಮಿ ನೋಟ್ 4!! ನಿಜಾನ?

ಸ್ಮಾರ್ಟ್‌ಫೋನ್‌ ಎನ್‌ಸ್ಕ್ರಿಪ್ಟ್ ಮಾಡುವುದು ಹೇಗೆ? ಮತ್ತು ಏಕೆ ಮಾಡಲೇಬೇಕು ಗೊತ್ತಾ?

ಈ ಜಾಹಿರಾತು ಲಕ್ಷಾಂತರ ಜನರನ್ನು ತಲುಪಿದ್ದು, ಹಲವರು ಈ ಸುದ್ದಿಗಳನ್ನು ನಂಬಿ ಮೋಸಹೋಗಿರುವ ಸಾಧ್ಯತೆ ಇದೆ. ಯಾವುದೇ ಕಂಪೆನಿ ಆಫರ್ ನೀಡಿದರೂ ಅದು ಕೇವಲ ಅಫಿಶಿಯಲ್ ವೆಬ್‌fಸೈಟ್‌ನಲ್ಲಿ ಮಾತ್ರ ಪ್ರದರ್ಶನವಾಗುತ್ತದೆ. ಇನ್ನು ಈ ಬಗ್ಗೆ ಅಮೆಜಾನ್‌ ಮತ್ತು ಮೈ ಡಾಟ್‌ಕಾಮ್ ವೆಬ್‌ಸೈಟ್‌ನಲ್ಲಿ ಚೆಕ್ ಮಾಡಿದರೆ ಯಾವುದೇ ಆಫರ್ ಇಲ್ಲ.!!

ಅಮೆಜಾನ್ ಆಫರ್..1000 ಅದೃಷ್ಟವಂತರಿಗೆ 499 ಕ್ಕೆ ರೆಡ್‌ಮಿ ನೋಟ್ 4!! ನಿಜಾನ?

ಮೊದಲೇ ಹೇಳಿದಂತೆ ಸೈಬರ್‌ ಕ್ರಿಮಿನಲ್‌ಗಳು ಈ ರೀತಿಯಾಗಿ ವಂಚಿಸಿ ವ್ಯಕ್ತಿಗಳ ವಯಕ್ತಿಕ ದಾಖಲೆಯನ್ನು ಪಡೆಯಲು ಯತ್ನಿಸುತ್ತಾರೆ. ಇದರಿಂದ ಸುಲಭವಾಗಿ ಜನರನ್ನು ಮೋಸಗೊಳಿಸಬಹುದು ಎಂಬುದು ಅವರ ಲೆಕ್ಕಾಚಾರ. ಹಾಗಾಗಿ, ನೀವು ಇಂತಹ ಆಫರ್‌ ಪೋಸ್ಟ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.!!

ಸ್ಮಾರ್ಟಫೋನ್ ಹೆಚ್ಚು ಬಿಸಿಯಾಗದಂತೆ ತಡೆಯುವುದು ಹೇಗೆ?

Best Mobiles in India

English summary
lucky 1000 customer get this offer.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X