'ಬಾಹುಬಲಿ' ಸಿನಿಮಾ ವರ್ಷ ಪೂರೈಸಿದಕ್ಕಾಗಿ ಬಿಡುಗಡೆಯಾದ ಕುತೂಹಲಕಾರಿ ವೀಡಿಯೊ

By Suneel
|

ಭಾರತ ಸಿನಿಮಾ ಕ್ಷೇತ್ರದಲ್ಲಿ ಪ್ರಖ್ಯಾತ ಯಶಸ್ವಿ ಸಿನಿಮಾ ಅಂದ್ರೆ ತೆಲುಗಿನ 'ಬಾಹುಬಲಿ'. 'ಎಸ್‌. ಎಸ್‌. ರಾಜಮೌಳಿ' ನಿರ್ದೇಶನದ ಈ ಸಿನಿಮಾ ಬಿಡುಗಡೆ ಆಗಿ ಕಳೆದ ಜುಲೈ 10 ಕ್ಕೆ ಒಂದು ವರ್ಷ ಆಗಿದೆ.

1.2 ಶತಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಮಹತ್ವ ಪೂರ್ಣ ಸಿನಿಮಾ 'ಬಾಹುಬಲಿ' ಟೀಮ್ ಈಗ ಒಂದನೇ ವರ್ಷಾಚರಣೆಯನ್ನು ಸಂಭ್ರಮದಿಂದ ನೆನಪಿಸಿಕೊಂಡು, ಫ್ಯಾನ್ಸ್‌ಗಳಿಗೂ ಸಹ ಒಂದು ಮಹತ್ವದ ಗಿಫ್ಟ್‌ ಅನ್ನು ನೀಡಿದೆ. ಅಂದಹಾಗೆ ಬಾಹುಬಲಿ ಅಭಿಮಾನಿಗಳಿಗೆ ನೀಡಿರುವ ಗಿಫ್ಟ್ ಎಂದರೆ ಬಾಹುಬಲಿ ಸಿನಿಮಾ ನಿರ್ಮಾಣ ಸಂಧರ್ಭದ ಟೀಮ್ ಎಫರ್ಟ್ ಹೇಗಿತ್ತು ಎಂಬುದರ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ನೀವು ಸಹ ಬಾಹುಬಲಿ ಅಭಿಮಾನಿಗಳೇ ಆಗಿದ್ದಲ್ಲಿ, ಬಾಹುಬಲಿ ಸಿನಿಮಾ ನಿರ್ಮಾಣ ಸಂದರ್ಭದ ಪ್ರಯತ್ನಗಳು ಹೇಗಿದ್ದವು ಎಂಬುದನ್ನು ಈ ಕೆಳಗಿನ ವೀಡಿಯೋ ನೋಡಿ ತಿಳಿಯಿರಿ.

ವಿಎಫ್‌ಎಕ್ಸ್‌ ಗೆ ವೆಚ್ಚವಾದ ಹಣ :

ವಿಎಫ್‌ಎಕ್ಸ್‌ ಗೆ ವೆಚ್ಚವಾದ ಹಣ :

ಬಾಹುಬಲಿ ಸಿನಿಮಾದ ನಿರ್ಮಾಣದಲ್ಲಿ ವಿಶುವಲ್‌‌ ಎಫೆಕ್ಟ್‌ ಮತ್ತು ಟೆಕ್ನಾಲಜಿ ಬಳಕೆಗೆ ವೆಚ್ಚ ಮಾಡಿದ ಹಣ 85 ಕೋಟಿ.

ಫೋಟೋಗಳು :

ಫೋಟೋಗಳು :

ಶೇಕಡ 90 ರಷ್ಟು ಕಂಪ್ಯೂಟರ್‌ ಆಧಾರಿತ ವಿಶುವಲ್‌‌ ಎಫೆಕ್ಟ್‌ ಅನ್ನು ಬಾಹುಬಲಿ ಸಿನಿಮಾಗೆ ಬಳಸಿಕೊಳ್ಳಲಾಗಿದೆ.

ವಿಶುವಲ್‌ ಎಫೆಕ್ಟ್‌ :

ವಿಶುವಲ್‌ ಎಫೆಕ್ಟ್‌ :

ಸುಮಾರು 5000 ವರೆಗೂ ವಿಶುವಲ್‌‌ ಎಫೆಕ್ಟ್‌ ಶಾಟ್ಸ್‌ಗಳನ್ನು ಬಾಹುಬಲಿ ಸಿನಿಮಾಗೆ ಬಳಸಿಕೊಳ್ಳಲಾಗಿದೆ.

ಫೋಟೋಗ್ರಾಫರ್‌ :

ಫೋಟೋಗ್ರಾಫರ್‌ :

ಬಾಹುಬಲಿ ಸಿನಿಮಾ ನಿರ್ಮಾಣಕ್ಕೆ 17 ಕ್ಕೂ ಹೆಚ್ಚು ಕಂಪನಿಗಳ ತಂತ್ರಜ್ಞರು ಛಾಯಾಗ್ರಾಹಕರಾಗಿ ಹಾಗೂ ಇತರೆ ಎಲ್ಲಾ ಟೆಕ್ನಿಕಲ್‌ ಕೆಲಸಗಳಿಗಾಗಿ 600 ಹೆಚ್ಚು ಜನರು ಟೆಕ್ನಿಕಲ್‌ ಕಾರ್ಯಗಳನ್ನು ನಿರ್ವಹಿಸಿದ್ದಾರೆ.

ಸ್ಥಳ :

ಸ್ಥಳ :

ಬಾಹುಬಲಿ ಸಿನಿಮಾ ನಿರ್ಮಾಣದ ಗೂಳಿ ಹೋರಾಟದ ದೃಶ್ಯಾವಳಿಯಲ್ಲಿ ಇರುವ ಸ್ಥಳ, ಬಿಲ್ಡಿಂಗಳು ಸಂಪೂರ್ಣವಾಗಿ ವಿಶುವಲ್‌ ಎಫೆಕ್ಟ್‌ ಆಗಿವೆ.

ಟಾ ಟೀಮ್‌ :

ಟಾ ಟೀಮ್‌ :

ಸಿನಿಮಾದ ಯಶಸ್ವಿಗೆ ಆಡಿಯೋ, ಡಿಜಿಟಲ್‌, ಕ್ಯಾಮೆರಾ, ತಂತ್ರಜ್ಞಾನ, ಜೊತೆಗೆ ಟಾ ಟೀಮ್‌ನಿಂದ ರಚಿತವಾದ ಗೂಳಿ ಹೋರಾಟದ ವಿಶುವಲ್‌ ಎಫೆಕ್ಟ್‌ ಪ್ರಧಾನ ಕಾರಣವಾಗಿದೆ.

ಸಿನಿಮಾ ವೆಚ್ಚ :

ಸಿನಿಮಾ ವೆಚ್ಚ :

ಭಾರತೀಯ ಸಿನಿಮಾದಲ್ಲಿ ಒಂದು ಸಿನಿಮಾ ನಿರ್ಮಾಣಕ್ಕಾಗಿ ಟೆಕ್ನಾಲಜಿಗಾಗಿ ಹೆಚ್ಚು ಹಣ ವೆಚ್ಚ ಮಾಡಿದ ಮೊದಲ ಸಿನಿಮಾ ಬಾಹುಬಲಿ.

2 ವರ್ಷಗಳು :

2 ವರ್ಷಗಳು :

ಬಾಹುಬಲಿ ಸಿನಿಮಾದ ವಿಶುವಲ್‌ ಎಫೆಕ್ಟ್‌ ಸಂಪೂರ್ಣ ಗೊಳಿಸಲು 2 ವರ್ಷಗಳ ಕಾಲಾವಧಿಯನ್ನು ತೆಗೆದುಕೊಳ್ಳಲಾಗಿದೆ.

ಹಾಲಿವುಡ್‌ :

ಹಾಲಿವುಡ್‌ :

300 ಕ್ಕೂ ಹೆಚ್ಚು ಸಿನಿಮಾಗಳನ್ನು ಎಡಿಟಿಂಗ್‌ ಮಾಡಿರುವ ಹಾಲಿವುಡ್‌ ಎಡಿಟರ್‌ ವಿನ್ಸೆಂಟ್‌ ತಬೈಲಾನ್‌ ಈ ಸಿನಿಮಾವನ್ನು ಎಡಿಟಿಂಗ್‌ ಮಾಡಿದ್ದಾರೆ.

ಜುರಾಸಿಕ್‌ ವರ್ಲ್ಡ್‌ :

ಜುರಾಸಿಕ್‌ ವರ್ಲ್ಡ್‌ :

ಇತ್ತೀಚೆಗೆ ಬಿಡುಗಡೆಯಾದ ಜುರಾಸಿಕ್‌ ವರ್ಲ್ಡ್‌ ಸಿನಿಮಾ ಎಡಿಟಿಂಗ್‌ ಮಾಡಿದ ಟೆಕ್ನಿಸಿಯನ್‌ ಬಾಹುಬಲಿ ಸಿನಿಮಾಗೆ ವಿಶುವಲ್‌ ಎಫೆಕ್ಟ್‌ ನೀಡಿದ್ದಾರೆ.

ವಿಶುವಲ್‌ ಅಪ್ಲಿಕೇಶನ್‌ :

ವಿಶುವಲ್‌ ಅಪ್ಲಿಕೇಶನ್‌ :

ಬಾಹುಬಲಿ ಸಿನಿಮಾ ಎಡಿಟಿಂಗ್ ಮಾಡಲು ಪ್ರಸ್ತುತದಲ್ಲಿ ಪ್ರಖ್ಯಾತವಾಗಿ ಚಾಲ್ತಿಯಲ್ಲಿರುವ iQlik ಎಂಬ ಅಪ್ಲಿಕೇಶನ್‌ ಬಳಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ಕಿಸಿಹೆಚ್ಚಿನ ಮಾಹಿತಿಗಾಗಿ ಕ್ಲಿಕ್ಕಿಸಿ

Best Mobiles in India

Read more about:
English summary
As India's Favorite Film Baahubali Completes A Year, Makers Release An Interesting Video Of The Making!. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X