BSNL ನೀಡಿದ ಆಫರ್‌ಗೆ ಬೆಚ್ಚಿದ ಜಿಯೋ, ಏರ್‌ಟೆಲ್..!!! ಯಾವುದು ಆ ಆಫರ್..?

BB 249 ಹೆಸರಿನ ಆಫರ್ ಬಿಡುಗಡೆ ಮಾಡಿರುವ BSNL ಅನ್‌ಲಿಮಿಟೆಡ್ ಡೇಟಾವನ್ನು ಗ್ರಾಹಕರ ಬಳಕೆಗೆ ನೀಡಲು ಮುಂದಾಗಿದೆ.

|

ಖಾಸಗಿ ಕಂಪನಿಗಳೊಂದಿಗೆ ತೀವ್ರ ಸ್ಪರ್ಧೆಗೆ ಧುಮುಕಿರುವ ಸರಕಾರ ಸ್ವಾಮ್ಯದ BSNL ಟೆಲಿಕಾಂ ವಲಯದಲ್ಲಿ ನಡೆಯುತ್ತಿರುವ ದರ ಸಮರದಲ್ಲಿ ತನ್ನ ಕೊಡುಗೆಯನ್ನು ನೀಡುತ್ತಿದೆ ಎಂದರೆ ತಪ್ಪಾಗಲಾರದು. ಇದೇ ಮಾದರಿಯಲ್ಲಿ ಬ್ರಾಡ್ ಬ್ಯಾಂಡ್ ಲೋಕದಲ್ಲಿಯೂ ತನ್ನ ಛಾಪು ಮೂಡಿಸಲು ಮುಂದಾಗಿದ್ದು, ಹೊಸದೊಂದು ಆಫರ್ ಘೋಷಣೆ ಮಾಡಿದೆ.

BSNL ನೀಡಿದ ಆಫರ್‌ಗೆ ಬೆಚ್ಚಿದ ಜಿಯೋ, ಏರ್‌ಟೆಲ್..!!! ಯಾವುದು ಆ ಆಫರ್..?

BB 249 ಹೆಸರಿನ ಆಫರ್ ಬಿಡುಗಡೆ ಮಾಡಿರುವ BSNL ಅನ್‌ಲಿಮಿಟೆಡ್ ಡೇಟಾವನ್ನು ಗ್ರಾಹಕರ ಬಳಕೆಗೆ ನೀಡಲು ಮುಂದಾಗಿದೆ. ಸದ್ಯ ಟೆಲಿಕಾಂ ಮಾದರಿಯಲ್ಲಿಯೇ ಬ್ರಾಡ್ ಬ್ಯಾಂಡ್ ಲೋಕದಲ್ಲಿಯೂ ಸ್ಪರ್ಧೆ ನಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಈಗಾಗಲೇ ಏರ್‌ಟೆಲ್ ತನ್ನ ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ನೀಡುತ್ತಿದೆ.

ರೂ.249ಕ್ಕೆ ಅನ್‌ಲಿಮಿಟೆಡ್ ಡೇಟಾ:

ರೂ.249ಕ್ಕೆ ಅನ್‌ಲಿಮಿಟೆಡ್ ಡೇಟಾ:

BSNL ನೂತನವಾಗಿ ತನ್ನ ಬ್ರಾಡ್ ಬ್ಯಾಂಡ್ ಸೇವೆಯನ್ನು ಬಯಸುವವರಿಗೆ ರೂ.249ಕ್ಕೆ ಅನ್‌ಲಿಮಿಟೆಡ್ ಡೇಟಾವನ್ನು ನೀಡಲಿದ್ದು, ಅದುವೆ ಪ್ರತಿ ನಿತ್ಯ 1GB ಡೇಟಾ 1Mbps ವೇಗದಲ್ಲಿ ದೊರೆಯಲಿದ್ದು, ನಂತರ ವೇಗ ಕೊಂಚ ಕಡಿಮೆ ಆಗಲಿದೆ ಎನ್ನಲಾಗಿದೆ.

ವ್ಯಾಲಿಡಿಟಿ ಒಂದು ವರ್ಷ:

ವ್ಯಾಲಿಡಿಟಿ ಒಂದು ವರ್ಷ:

ಮೊದಲು BB 249 ಪ್ಲಾನ್ ವಾಲಿಡಿಟಿ ಆರು ತಿಂಗಳು ಮಾತ್ರವೇ ಇತ್ತು. ಆದರೆ ಈಗ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಸಲುವಾಗಿ ವ್ಯಾಲಿಡಿಟಿಯನ್ನ ಒಂದು ವರ್ಷಕ್ಕೆ ವಿಸ್ತರಿಸಿದ್ದು, ಅದುವೆ ಅನ್‌ಲಿಮಿಟೆಡ್ ಡೇಟಾವನ್ನು ನೀಡುತ್ತಿದೆ.

ಏರ್‌ಟೆಲ್‌ಗೆ ಸೆಡ್ಡು:

ಏರ್‌ಟೆಲ್‌ಗೆ ಸೆಡ್ಡು:

ಇದೇ ಏರ್‌ಟೆಲ್ ತನ್ನ ಗ್ರಾಹಕರಿಗೆ ಸರ್‌ಪ್ರೈಸ್ ಆಫರ್ ಹೆಸರಿನಲ್ಲಿ ಹೆಚ್ಚಿನ ಡೇಟಾವನ್ನು ನೀಡಲು ಮುಂದಾಗಿತ್ತು. ಆ ಮೂಲಕ ತನ್ನ ಗ್ರಾಹಕನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿತ್ತು. ಇದೇ ಮಾದರಿಯಲ್ಲಿ BSNL ಏರ್‌ಟೆಲ್‌ಗೆ ಸೆಡ್ಡು ಹೊಡೆದು ಹೊಸ ಆಫರ್ ಬಿಡುಗಡೆ ಮಾಡಿದೆ.

ಜಿಯೋ ಬರಲಿದೆ:

ಜಿಯೋ ಬರಲಿದೆ:

ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಜಿಯೋ ಬ್ರಾಡ್‌ಬ್ಯಾಂಡ್ 1GBPS ವೇಗದ ಇಂಟರ್‌ನೆಟ್ ಸೇವೆಯನ್ನು ಅತೀ ಕಡಿಮೆ ಬೆಲೆಗೆ ನೀಡಲಿದೆ ಎನ್ನಲಾಗಿದೆ. ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಸೇವೆಯನ್ನು ಆರಂಭಿಸಲು ಜಿಯೋ ಭರ್ಜರಿ ಸಿದ್ಧತೆ ನಡೆಸಿದ್ದು, ಈ ಹಿನ್ನಲೆಯಲ್ಲಿ ತನ್ನ ಗ್ರಾಹಕರನ್ನು ಕಳೆದುಕೊಳ್ಳಲು ಇಷ್ಟವಿಲ್ಲದ BSNL ಹೊಸ ಆಫರ್‌ ಅನ್ನು ಕಡಿಮೆ ಬೆಲೆಗೆ ನೀಡಲು ಮುಂದಾಗಿದೆ.

Best Mobiles in India

Read more about:
English summary
which is offering unlimited broadband data at just Rs. 249 for six months with a download speed of 2 Mbps till 1GB, and 1 Mbps after 1GB. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X