ಜಿಯೋ ಪ್ರೈಮ್ ಆಫರ್‌ಗೆ ರೀಚಾರ್ಜ್ ಮಾಡಿಸಬೇಕೆ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!!

ಜಿಯೋಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಮೂಡಬಹುದಾದ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಲು ಜಿಯೋ ಬಗೆಗಿನ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡಲಾಗಿದೆ.

Written By:

ಜಿಯೋ ಉಚಿತ ಸೇವೆ ಮುಗಿದ ನಂತರ ಬಹುತೇಕ ಜಿಯೋ ಗ್ರಾಹಕರಿಗೆ ತ್ರಿಶಂಕು ಪರಿಸ್ಥಿತಿ ಉಂಟಾಗಿದೆ. ಪ್ರೈಮ್ ಆಫರ್‌ಗೆ ರೀಚಾರ್ಜ್ ಮಾಡಿಸಬೇಕೆ? ಜಿಯೋಗೆ ಪೋರ್ಟ್ ಆಗಬೇಕೆ? ಮುಂದೆಯೂ ಜಿಯೋ ಇದೇ ರೀತಿ ಸೇವೆಯನ್ನು ನೀಡುತ್ತದೆಯೇ ಎಂದು ಎಲ್ಲರಿಗೂ ಪ್ರಶ್ನೆ ಮೂಡುತ್ತಿದೆ.!!

ಇಷ್ಟು ದಿವಸ ಉಚಿತವಾಗಿದ್ದಕ್ಕೆ ಈಗ ದುಡ್ಡು ನೀಡಬೇಕೆ ಎಂದು ಹಲವರು ಪ್ರಶ್ನೆಯನ್ನು ಕೇಳಿದ್ದೂ ಇದೆ.!! ಹಾಗಾಗಿ, ಜಿಯೋಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಮೂಡಬಹುದಾದ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಲು ಜಿಯೋ ಬಗೆಗಿನ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೀಡಲಾಗಿದೆ. ಒಮ್ಮೆ ಇವುಗಳ ಮೇಲೆ ಕಣ್ಣಾಡಿಸಿ ಜಿಯೋವನ್ನು ಒಪ್ಪಬೇಕೆ ಅಥವಾ ಬಿಡಬೇಕೆ ಎಂದು ನೀವೆ ನಿರ್ಧರಿಸಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಆಪ್ಟಿಕಲ್ ಫೈಬರ್ ಕೇಬಲ್ ಜಾಲ!!

ಜಿಯೋ 2,50,000 ಕಿ.ಮೀ ಉದ್ದದ ಆಪ್ಟಿಕಲ್ ಫೈಬರ್ ಕೇಬಲ್ ಜಾಲವನ್ನು ಹೊಂದಿದ್ದು, 90 ಸಾವಿರಕ್ಕೂ ಹೆಚ್ಚು ಮೊಬೈಲ್ 4ಜಿ ಮೊಬೈಲ್ ಟವರ್‍ಗಳನ್ನು ಸ್ಥಾಪಿಸಿದೆ. ಇದರ ಜೊತೆಗೆ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಕಮ್ಯೂನಿಕೇಶನ್ ಕೇಬಲ್‌ಗಳನ್ನು ಜಿಯೋ ಬಳಸುತ್ತಿದೆ ಉಳಿದ ಕಂಪೆನಿಗಳು ಯಾರು ಇಷ್ಟೊಂದು ನೆಟ್‍ವರ್ಕ್ ಸ್ಥಾಪಿಸಿಲ್ಲ.!!

22 ವೃತ್ತಗಳಲ್ಲಿ ಸ್ಪೆಕ್ಟ್ರಂ ಖರೀದಿ!!

2ಜಿ, 3ಜಿ ಸೇವೆಯಿಂದ ಕೂಡಲೇ 4ಜಿ ಸೇವೆ ನೀಡಬೇಕಾದರೆ ಬಹಳಷ್ಟು ಬಂಡವಾಳ ಬೇಕಾಗುತ್ತದೆ. ಅಷ್ಟೇ ಅಲ್ಲದೇ ಸಮಯವೂ ಹಿಡಿಯುತ್ತದೆ. ಆದರೆ ರಿಲಯನ್ಸ್ 2010ರಲ್ಲೇ 4800 ಕೋಟಿ ರೂ. ನೀಡಿ ಎಲ್ಲ 22 ವೃತ್ತಗಳಲ್ಲಿ ಸ್ಪೆಕ್ಟ್ರಂ ಖರೀದಿ ಮಾಡಿದೆ. ಆದರೆ ಏರ್‍ಟೆಲ್ 15 ವೃತ್ತಗಳಲ್ಲಿ ಖರೀದಿಸಿದ್ದರೆ ಐಡಿಯಾ 10 ಮತ್ತು ವೋಡಾಫೋನ್ 8 ವೃತ್ತಗಳಲ್ಲಿ ಖರೀದಿಸಿದೆ. ಹೀಗಾಗಿ ಜಿಯೋ ಮಾತ್ರ ಭಾರತದಲ್ಲಿ ಎಲ್ಲೆಡೇ 4ಜಿ ಸೇವೆ ನೀಡುವ ಕಂಪೆನಿಯಾಗಿದೆ.!!

1,50,000 ಕೋಟಿ ರೂ. ಬಂಡವಾಳ!!

ಮುಕೇಶ್ ಅಂಬಾನಿ ಈ ಯೋಜನೆಗೆ 1,50,000 ಕೋಟಿ ರೂ. ಬಂಡವಾಳ ಹೂಡಿದ್ದಾರೆ. ಏರ್‍ಟೆಲ್ ತನ್ನ ನೆಟ್‍ವರ್ಕ್ ಆಧುನಿಕರಣಗೊಳಿಸಲು 60 ಸಾವಿರ ಕೋಟಿ ಬಂಡವಾಳ ಹೂಡಿದೆ. ಆರಂಭದ ವರ್ಷಗಳಲ್ಲಿ ಈ ಸೇವೆಯಿಂದ ಯಾವುದೇ ಆದಾಯ ಬರದೇ ಇದ್ದರೂ ಭವಿಷ್ಯದಲ್ಲಿ ಜಿಯೋ ದೇಶದ ದೊಡ್ಡ ಕಂಪೆನಿಯಾಗಿ ಹೊರ ಹೊಮ್ಮುವ ಸಾಧ್ಯತೆಯಿದೆ.!!

ಸಮುದ್ರದ ಆಳದಲ್ಲೂ ಕೇಬಲ್ ಇದೆ!!

ಜಿಯೋ ಬಂಗಾಳಕೊಲ್ಲಿ ಮೂಲಕ ಮಲೇಷ್ಯಾ ಮತ್ತು ಸಿಂಗಾಪುರ್ ನಿಂದ ಚೆನ್ನೈಗೆ ಸಂಪರ್ಕ ಸಾಧಿಸಲು 8 ಸಾವಿರ ಕಿ.ಮೀ ಉದ್ದದ ಫೈಬರ್ ಕೇಬಲ್ ಹಾಕಿದೆ. ಯುರೋಪ್‌ನಿಂದ ಮುಂಬೈಗೆ ಎಳೆಯಲಾಗಿರುವ 20 ಸಾವಿರ ಕಿ.ಮೀ ಉದ್ದದ ಫೈಬರ್ ಕೇಬಲ್‍ನಲ್ಲಿ ಜಿಯೋ ಕೂಡ ಭಾಗವಾಗಿದೆ. ಈ ಕೇಬಲ್‌ಗಳ ಮೂಲಕ ಪ್ರತಿ ಸೆಕೆಂಡ್‌ಗೆ 32-40 ಟೆರಾ ಬೈಟ್ ಡೇಟಾ ಕಳುಹಿಸುವ ಸಾಮರ್ಥ್ಯ ಹೊಂದಿದ್ದರೆ ಏರ್‌ಟೆಲ್ 3.84 ಟೆರಾ ಬೈಟ್‌ ಸಾಮರ್ಥ್ಯದ ಕೇಬಲ್ ಹೊಂದಿದೆ.

ಕೊನೆಯ ಮಾತು?

ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಯನ್ನು ಯಾರು ನೀಡುತ್ತಾರೋ ಆ ಕಂಪೆನಿಗೆ ಗ್ರಾಹಕ ಹೋಗುವುದು ಸಾಮಾನ್ಯ. ಒಂದು ವೇಳೆ ಜಿಯೋ ಸೇವೆ ಉತ್ತಮವಾಗಿಲ್ಲ ಎಂದಾದರೆ ಸಿಮ್ ಪೋರ್ಟ್ ಮಾಡಲು ಅವಕಾಶ ಇದ್ದೆ ಇದೆ. ಆದರೆ ಆರಂಭದಲ್ಲೇ ಜಿಯೋ ಸಿಮ್‍ಗೆ ಪೋರ್ಟ್ ಮಾಡುವ ಮುನ್ನ ಈ ಮೇಲೆ ತಿಳಿಸಿದ ಅಂಶಗಳನ್ನು ನೋಡಿಕೊಂಡು ಪೋರ್ಟ್ ಮಾಡಿಕೊಂಡರೆ ಉತ್ತಮ.

ಓದಿರಿ:ಜಿಯೋಗೆ ತಲೆಬಾಗಿದ ಎಲ್ಲಾ ಟೆಲಿಕಾಂ ಕಂಪೆನಿಗಳು!!..ಅಷ್ಟಕ್ಕೂ ಆಗಿದ್ದೇನು?

ಓದಿರಿ: 2900 ರೂ.ಗೆ 4G ಸ್ಮಾರ್ಟ್‌ಫೋನ್ ಮತ್ತು ಒಂದು ವರ್ಷ ಉಚಿತ ಜಿಯೋ ಸೇವೆ!!

 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Read the article to decide about jio. to know more visit to kannada.gizbot.com
Please Wait while comments are loading...
Opinion Poll

Social Counting