ಒಂದು ಫೆಸ್‌ಬುಕ್ ಚಿತ್ರ ಮಾಡಿದ ಅವಾಂತರ ಎಂತದ್ದು ಗೊತ್ತಾ?

ನೀವು ಶೇರ್ ಮಾಡಿದರೆ ಕ್ಯಾನ್ಸರ್ ಸರ್ಜರಿಗೆ ಫೆಸ್‌ಬುಕ್ ಹಣ ಸಹಾಯ ನೀಡುತ್ತದೆ ಎಂಬ ಬಹುತೇಕ ಸುಳ್ಳು ಸುದ್ದಿಗಳಲ್ಲಿ ಇದೂ ಕೂಡ ಒಂದು.!!

Written By:

ಇವರಿಗೆ ಕ್ಯಾನ್ಸರ್ ಇದ್ದು, ಈ ಪೋಸ್ಟ್‌ ಅನ್ನು ಶೇರ್ ಮಾಡಿ. ನೀವು ಶೇರ್ ಮಾಡಿದರೆ ಈ ಹುಡುಗನ ಸರ್ಜರಿಗೆ ಫೆಸ್‌ಬುಕ್ ಹಣ ಸಹಾಯ ನೀಡುತ್ತದೆ ಎನ್ನುವ ಹಲವು ಪೋಸ್ಟ್‌ಗಳನ್ನು ನೀವು ಫೇಸ್‌ಬುಕ್‌ನಲ್ಲಿ ನೋಡಿರುತ್ತೀರಾ. ಹಾಗಾದರೆ, ಇಂಗ್ಲೆಂಡ್‌ನಲ್ಲೊಂದು ಇಂತಹ ನಕಲಿ ಪೋಸ್ಟ್ ಮಾಡಿದ ಅವಾಂತರ ಎಂತದ್ದು ತಿಳಿಯಿರಿ.

ಫೆಸ್‌ಬುಕ್‌ನಲ್ಲಿ ಏನೇನು ವಿಷಯಗಳು ಗುಲ್ಲೆದ್ದು ಹರಿದಾಡುತ್ತವೆ ನೀವು ಶೇರ್ ಮಾಡಿದರೆ ಕ್ಯಾನ್ಸರ್ ಸರ್ಜರಿಗೆ ಫೆಸ್‌ಬುಕ್ ಹಣ ಸಹಾಯ ನೀಡುತ್ತದೆ ಎಂಬ ಬಹುತೇಕ ಸುಳ್ಳು ಸುದ್ದಿಗಳಲ್ಲಿ ಇದೂ ಕೂಡ ಒಂದು. ಆದರೆ, ಈ ಸುದ್ದಿ, ಕೋಟ್ಯಾಂತರ ಜನರನ್ನು ತಲುಪಿ ಒಂದು ರಾಮಾಯಣವನ್ನೇ ಮಾಡಿದೆ.

ಒಂದು ಫೆಸ್‌ಬುಕ್ ಚಿತ್ರ ಮಾಡಿದ ಅವಾಂತರ ಎಂತದ್ದು ಗೊತ್ತಾ?

ಜಿಯೋ ಎಫೆಕ್ಟ್..ಏರ್‌ಟೆಲ್ ಫೈಟ್..ಮಾರಾಟವಾದ "ಟೆಲಿನಾರ್"!!

ನಕಲಿ ಫೆಸ್‌ಬುಕ್ ಅಕೌಂಟ್‌ ಕ್ರಿಯೇಟ್ ಮಾಡಿದ ಕೆಲವರು ಮೂರು ವರ್ಷದ ಮಗುವಿನ ಫೊಟೊವನ್ನು ಕದ್ದು, ಈ ಹುಡುಗನಿಗೆ ಕ್ಯಾನ್ಸರ್ ಇದ್ದು, ಈ ಪೋಸ್ಟ್‌ ಅನ್ನು ಶೇರ್ ಮಾಡಿ. ನೀವು ಶೇರ್ ಮಾಡಿದರೆ ಈ ಹುಡುಗನ ಸರ್ಜರಿಗೆ ಫೆಸ್‌ಬುಕ್ ಹಣ ಸಹಾಯ ನೀಡುತ್ತದೆ ಎಂದು ಹಾಕಿದ್ದರು. ಇದನ್ನು ನಂಬಿದ ಜನರು ಮಿಲಿಯನ್‌ಗಟ್ಟಲೇ ರಿಯಾಕ್ಟ್ ಮಾಡಿದ್ದಾರೆ.!

ಒಂದು ಫೆಸ್‌ಬುಕ್ ಚಿತ್ರ ಮಾಡಿದ ಅವಾಂತರ ಎಂತದ್ದು ಗೊತ್ತಾ?

ಇನ್ನು ಆ ಹುಡುಗನನ್ನು ನೊಡಿದ ಹಲವು ಜನರು ಮಗುವಿನ ಅಮ್ಮ ಅಲೆನ್ ಸಾರಾಳಿಗೆ ಕಾಲ್‌ ಮಾಡಿ ಈ ಬಗ್ಗೆ ವಿಚಾರಿಸಿದ್ದು, ನಂತರ ಈ ಬಗ್ಗೆ ತಿಳಿದ ಸಾರಾ ಫೆಸ್‌ಬುಕ್‌ಗೆ ಕಂಪ್ಲೆಂಟ್ ಮಾಡಿದ್ದಾರೆ. ಇನ್ನು ಈ ಪೋಸ್ಟ್ ಹಾಕಿದ ಎರಡು ಫೆಸ್‌ಬುಕ್ ಅಕೌಂಟ್‌ಗಳನ್ನು ಫೆಸ್‌ಬುಕ್ ಕಂಪೆನಿ ಡಿಲೀಟ್ ಮಾಡಿದ್ದು, ಶೇರ್‌ ಆಗಿದ್ದ ಎಲ್ಲಾ ನಕಲಿ ಫೋಟೊಗಳನ್ನು ಹಿಂದಕ್ಕೆ ತೆಗೆದುಕೊಂಡಿದೆ.

ಜನರಿಗೆ ಬಹುತೇಕ ಯಾವ ಸುದ್ದಿಗಳನ್ನು ನಂಬಬೇಕು ಬಿಡಬೇಕು ಎಂಬುದನ್ನು ತಿಳಿಯುವ ಹೊತ್ತಿಗಾಗಲೇ ಆ ಹುಡುಗನ ಚಿತ್ರ ಎಲ್ಲರನ್ನು ತಲುಪಿದೆ, ಫೆಸ್‌ಬುಕ್ ಹಣ ಸಹಾಯ ಮಾಡುತ್ತದೆ ಎನ್ನುವುದು ಶುದ್ದ ಸುಳ್ಳಾದರೂ ಹಲವರು ಅದನ್ನು ನಂಬುತ್ತಾರೆ. ಆದರೆ, ಇಂಗ್ಲೆಂಡ್‌ನಲ್ಲಿಯೇ ಜನರು ಇದನ್ನು ನಂಬಿರುವುದು ನಗು ತರಿಸುತ್ತದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Facebook has deleted two accounts following a complaint from a mother of a three-year-old. to know more visit to kannada.gizbot.com
Please Wait while comments are loading...
Opinion Poll

Social Counting