ಫೇಸ್‌ಬುಕ್ ನಿಮ್ಮ ಮೆದುಳನ್ನು ಓದಲು ಮುಂದಾಗಿದೆ!..ಏನಿದು ಕುತೋಹಲವಾದ ಸ್ಟೋರಿ!!

ಫೆಸ್‌ಬುಕ್ ಚಕ್ರಾಧಿಪತಿ ಮಾರ್ಕ್ ಜುಕರ್‌ಬರ್ಗ್ ಅವರು ಅತ್ಯದ್ಬುತ ತಂತ್ರಜ್ಞಾನದ ಹಿಂದೆ ಬಿದ್ದಿದ್ದಾರೆ.!!

Written By:

ಫೇಸ್‌ಬುಕ್ ನಿಮ್ಮ ಮೆದುಳನ್ನು ಓದುವ ಸಾಹಸಕ್ಕೆ ಕೈ ಹಾಕಿದೆ.!! ಹೌದು, ತಂತ್ರಜ್ಞಾನ ಬದಲಾದಂತೆ ಫೆಸ್‌ಬುಕ್ ಸಹ ಬದಲಾಗುತ್ತಿದ್ದು, ಫೆಸ್‌ಬುಕ್ ಚಕ್ರಾಧಿಪತಿ ಮಾರ್ಕ್ ಜುಕರ್‌ಬರ್ಗ್ ಅವರು ಅತ್ಯದ್ಬುತ ತಂತ್ರಜ್ಞಾನದ ಹಿಂದೆ ಬಿದ್ದಿದ್ದಾರೆ.!!

ಪ್ರಪಂಚದಲ್ಲಿಯೇ ಅತ್ಯಧಿಕ ಬಳಕೆದಾರರನ್ನು ಹೊಂದಿರುವ ಫೆಸ್‌ಬುಕ್, ಎಲ್ಲರಿಗಿಂತ ಮೊದಲು ತಾನು ಸಾಧಿಸಬೇಕು ಎಂಬ ಹಟಕ್ಕೆ ಬಿದ್ದಿದೆ. ಹಾಗೆಯೇ ಅದನ್ನು ಸಾಧಿಸುತ್ತಿದೆ ಕೂಡ.!! ಹಾಗಾಗಿ, ಫೇಸ್‌ಬುಕ್ ಕೈಗೊಂಡಿರುವ ಈ ಯೋಜನೆ ಭವಿಷ್ಯದಲ್ಲಿ ನನಸಾಗುವ ಸಾಧ್ಯತೆಯೇ ಹೆಚ್ಚಿದೆ.!!

ಕೇವಲ 24 ಗಂಟೆಯಲ್ಲಿಯೇ ಪೂನಂ ಪಾಂಡೆ 'ಆಪ್' ನಿ‍ಷೇಧಿಸಿದ ಗೂಗಲ್‌!!?

ಹಾಗಾದರೆ, ಫೇಸ್‌ಬುಕ್ ಕೈ ಹಾಕಿರುವ ಈ ಯೋಜನೆ ಏನು? ಮಾನವನ ಬುದ್ದಿಮತ್ತೆಯನ್ನು ಓದಲು ಸಾಧ್ಯವೇ? ತಂತ್ರಜ್ಞಾನ ಎಷ್ಟು ಬದಲಾಗಿದೆ ಎನ್ನುವ ಕುತೋಹಲ ಅಂಶಗಳು ಕೆಳಗಿನ ಸ್ಲೈಡರ್‌ಗಳಲ್ಲಿದ್ದು, ಅವುಗಳು ಯಾವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಫೇಸ್‌ಬುಕ್ ಸಮಾವೇಶದಲ್ಲಿ ಈ ಬಗ್ಗೆ ನಿರ್ಧಾರ.!!

ಮಾನವನ ಮೆದುಳನ್ನು ಓದುವ ತಂತ್ರಜ್ಞಾನಕ್ಕೆ ಫೆಸ್‌ಬುಕ್ ಒಲವುತೋರಿದ್ದು, ಈ ಬಗ್ಗೆ ಫೆಸ್‌ಬುಕ್ ವಾರ್ಷಕ ಸಮಾವೇಶದಲ್ಲಿ ಮಾನವನ ಮೆದುಳನ್ನು ಓದುವ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದೇ ಮೊದಲ ಬಾರಿಗೆ ಇಂತಹ ಸಾಹಸಕ್ಕೆ ಕಂಪೆನಿಯೊಂದು ಕೈ ಹಾಕಿದೆ.!!

ಯಾವ ತಂತ್ರಜ್ಞಾನ ಬಳಕೆ?

ಸಧ್ಯಕ್ಕೆ ಬ್ರೈನ್-ಕಂಪ್ಯೂಟರ್ ಇಂಟರ್‌ಫೆಸ್ ತಂತ್ರಜ್ಞಾನ ಫೇಸ್‌ಬುಕ್ ಆಯ್ಕೆಗೆ ಸೂಕ್ತವಾಗಿದೆ. ಆದರೆ, ಫೇಸ್‌ಬುಕ್ ಆಪ್ಟಿಕಲ್ ಇಮೇಜಿಂಗ್ ತಂತ್ರಜ್ಞಾನವನ್ನು ಮಾನವನ ಮೆದುಳಿನ ಮೇಲೆ ಪ್ರಯೋಗಿಸಲು ಚಿಂತಿಸಿದೆ.ಇದಕ್ಕಾಗಿ 60 ಜನ ವಿಜ್ಞಾನಿಗಳು ಸೇರಿದಂತೆ 8 ತಂಡಗಳು ಕಾರ್ಯನಿರ್ವಹಿಸುತ್ತವೆ!!

ಮೆದುಳನ್ನು ಓದುವ ಉಪಯೋಗ ಏನು?

ಮೆದುಳನ್ನು ಓದುವ ತಂತ್ರಜ್ಞಾನ ಅಳವಡಿಕೆಯ ಮುಖ್ಯ ಉದ್ದೇಶವೇ ಫೇಸ್‌ಬುಕ್ ಬಳಕೆದಾರನ ಆಲೋಚನೆಗಳನ್ನು ನೇರವಾಗಿ ಪಡೆಯುವುದು. ಇದರಿಂದ ಬಳಕೆದಾರ ಆಲೋಚಿಸಿದ ಚಿಂತನೆಗಳನ್ನು ಫೆಸ್‌ಬುಕ್ ಮೂಲಕ ಹೊರಹಾಕುವುದು.!! ಉದಾ: ಯೋಚಿಸಿದ ಸಂದೇಶವನ್ನು ಬರೆಯದೇ ಕಳುಹಿಸುವುದು.!!

ಮೆದುಳನ್ನು ಓದಲು ಸಾಧ್ಯವಿದೆಯಾ?

ಈಗಾಗಲೇ ಹಲವು ತಂತ್ರಜ್ಞಾನಗಳು ಮಾನವನ ಚಿಂತನೆಗಳನ್ನು ಪತ್ತೆಹಚ್ಚಲು ಬಹಳಷ್ಟು ಪ್ರಯತ್ನಪಟ್ಟಿವೆ. ಅವುಗಳಲ್ಲಿ ಕೆಲವು ಸ್ವಲ್ಪ ಯಶಸ್ವಿಯಾಗಿವೆ., ಫೇಸ್‌ಬುಕ್ ಇದೀಗ "ಸೈಲೆಂಟ್ ಫೆಸ್ ಇಂಟರ್‌ಫೇಸಸ್' ನಿರ್ಮಿಸಲು ಹೊರಟಿದ್ದು, ಬೃಹತ್ ಬಂಡವಾಳ ಮತ್ತು ತಂತ್ರಜ್ಞಾನದಿಂದ ಇದು ಕೂಡ ಸಾಧ್ಯವಾಗಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Want to send a message just by thinking?.to know more visit to kannada.gizbot.com
Please Wait while comments are loading...
Opinion Poll

Social Counting