ಅಣ್ಣಾವ್ರರಿಗೆ ನಮನ ಸಲ್ಲಿಸಿದ ಗೂಗಲ್: ಕನ್ನಡಿಗರೇ ಇಲ್ಲಿ ನೋಡಿ ಎಂತಹ ಗೌರವ

ಇಂದು ಡಾ.ರಾಜ್‌ಕುಮಾರ್ ಅವರ 88ನೇ ಜನ್ಮದಿನವಾಗಿದ್ದು, ಇದರ ಅಂಗವಾಗಿ ಅಣ್ಣಾವ್ರ ಡೂಗಲ್ ನಿರ್ಮಾಣ ಮಾಡಿ ಗೂಗಲ್ ಹುಟ್ಟುಹಬ್ಬಕ್ಕೆ ಶುಭ ಕೋರಿದೆ.

|

ಸರ್ಚ್ ಇಂಜಿನ್ ದೈತ್ಯ ಗೂಗಲ್ ದೇಶ-ವಿದೇಶದ ಪ್ರತಿಷ್ಠಿತ ಸಾಧಕರ ಜನ್ಮದಿನದಂದೂ ಅದರದ್ದೇ ಡೂಗಲ್ ನಿರ್ಮಿಸಿ ಅವರ ಸಾಧನೆಯನ್ನು ತಿಳಿಸುವ ಮತ್ತು ನೆನಪಿಸುವ ಮೂಲಕ ಗೌರವ ವಂದನೆಯನ್ನು ಸಲ್ಲಿಸುತ್ತದೆ. ಇಂದು ಅದೇ ಗೂಗಲ್ ಗೌರವಕ್ಕೆ ನಮ್ಮ ನಿಮ್ಮ ನೆಚ್ಚಿನ ವರ ನಟ ಡಾ. ರಾಜ್‌ಕುಮಾರ್ ಪಾತ್ರರಾಗಿದ್ದಾರೆ.

ಅಣ್ಣಾವ್ರರಿಗೆ ನಮನ ಸಲ್ಲಿಸಿದ ಗೂಗಲ್: ಕನ್ನಡಿಗರೇ ಇಲ್ಲಿ ನೋಡಿ ಎಂತಹ ಗೌರವ

ಓದಿರಿ: ಜಿಯೋ ನೀಡುತ್ತಿರುವ ಬೆಲೆಕಟ್ಟಲಾದ ಉಚಿತ ಸೇವೆಗಳಿದು..!!!

ಇಂದು ಡಾ.ರಾಜ್‌ಕುಮಾರ್ ಅವರ 88ನೇ ಜನ್ಮದಿನವಾಗಿದ್ದು, ಇದರ ಅಂಗವಾಗಿ ಅಣ್ಣಾವ್ರ ಡೂಗಲ್ ನಿರ್ಮಾಣ ಮಾಡಿ ಗೂಗಲ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ಇದು ಕನ್ನಡಿಗರ ಸಂಭ್ರಮವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಗೂಗಲ್ ನಿರ್ಮಿಸಿರುವ ಈ ಡೂಗಲ್ ಮೇಲೆ ಕ್ಲಿಕ್ ಮಾಡಿದಲ್ಲಿ ಅಣ್ಣಾವ್ರ ಕುರಿತ ಸಂಪೂರ್ಣ ಮಾಹಿತಿಯೂ ದೊರೆಯಲಿದೆ.

ಓದಿರಿ: ಜುಲೈನಲ್ಲಿ ನೋಕಿಯಾ ರಿಲೀಸ್: ಯಾವತ್ತು ಅಂದ್ರಾ..??!!

ಇದೇ ಮೊದಲ ಬಾರಿಗೆ ಕನ್ನಡ ನಟನಿಗೆ ಸಂದ ಗೌರವ:

ಇದೇ ಮೊದಲ ಬಾರಿಗೆ ಕನ್ನಡ ನಟನಿಗೆ ಸಂದ ಗೌರವ:

ಅಣ್ಣಾವ್ರ ಚಿತ್ರವನ್ನು ಬಳಸಿ ಗೂಗಲ್ ಡೂಗಲ್ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ ಕನ್ನಡದ ನಟರೊಬ್ಬರಿಗೆ ಇಷ್ಟು ದೊಡ್ಡ ಮಟ್ಟದ ಗೌರವ ದೊರೆತ್ತಿದೆ ಎನ್ನಲಾಗಿದೆ. ಅಣ್ಣಾವ್ರ ಸಾಧನೆಗೆ ಇದು ಕನ್ನಡಿಯಾಗಿದೆ.
ಅಣ್ಣಾವ್ರ ಈ ಡೂಗಲ್ ಮೇಲೆ ಕ್ಲಿಕ್ ಮಾಡಿದರೆ ವಿಕೀಪಿಡಿಯಾ ದಲ್ಲಿ ಅಣ್ಣಾವ್ ರಕುರಿತಾಗಿ ಇರುವ ಸಂಪೂರ್ಣ ಮಾಹಿತಿಯೂ ದೂರೆಯಲಿದ್ದು, ಡಾ. ರಾಜ್ ಬಗ್ಗೆ ತಿಳಿಯಲು ಇದು ಸಹಾಯಕವಾಗಿದೆ.

1929 ಏಪ್ರಿಲ್ 24ರಂದು ಜನಿಸಿದ ಮುತ್ತರಾಜ್ :

1929 ಏಪ್ರಿಲ್ 24ರಂದು ಜನಿಸಿದ ಮುತ್ತರಾಜ್ :

1929 ಏಪ್ರಿಲ್ 24ರಂದು ಜನಿಸಿ ಮುತ್ತರಾಜ್ ಎಂಬ ಹೆಸರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಣ್ಣಾವ್ರ ಹೆಸರನ್ನು ನಂತರ ರಾಜಕುಮಾರ ಎಂದು ಬದಲಾಯಿಸಲಾಯಿತು. ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಅವರು, ಅಭಿಮಾನಿ ದೇವರುಗಳ ಎದೆಯಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ.

ಮಾದರಿ ನಟ; ಡಾ.ರಾಜಕುಮಾರ್:

ಮಾದರಿ ನಟ; ಡಾ.ರಾಜಕುಮಾರ್:

ಅಭಿಮಾನಿಗಳಿಗೆ ಮಾದರಿಯಾಗಿದ್ದ ರಾಜ್, ಎಂದಿಗೂ ತೆರೆಯ ಮೇಲೆ ಧೂಮಪಾನ ಮಾಡುವುದಾಗಲಿ, ಮಧ್ಯಪಾನ ಮಾಡುವುದನ್ನು ಪ್ರೋತ್ಸಾಹ ನೀಡಿರಲಿಲ್ಲ. ಮತ್ತು ಅಂತಹ ಸನ್ನಿವೇಶದಲ್ಲಿ ಕಾಣಿಸಿಕೊಂಡಿಲ್ಲ ಸಹ. ಈ ಮೂಲಕ ಎಲ್ಲಾ ನಟರಿಗೂ ಮಾದರಿಯಾಗಿದ್ದರು. ಇವರ ಬಂಗರದ ಮನುಷ್ಯ ಚಿತ್ರ ಅದೆಷ್ಟೋ ಯುವಕ ಬಾಳಿಗೆ ದಾರಿ ದೀಪ ಸಹ ಆಗಿತ್ತು.

ಅಣ್ಣವ್ರ ಖ್ಯಾತಿ ವ್ಯಾಪ್ತಿ ವಿಸ್ತರಿಸಿದೆ:

ಅಣ್ಣವ್ರ ಖ್ಯಾತಿ ವ್ಯಾಪ್ತಿ ವಿಸ್ತರಿಸಿದೆ:

ಡಾ.ರಾಜ್‌ಕುಮಾರ್ ಅವರ ಖ್ಯಾತಿ ಈಗಾಗಲೇ ದೇಶದಾದ್ಯಂತ ಪಸರಿಸಿದೆ. ಇದೇ ಸಂದರ್ಭದಲ್ಲಿ ಗೂಗಲ್ ಡೂಗಲ್ ಈ ಖ್ಯಾತಿಯ ವ್ಯಾಪ್ತಿಯನ್ನು ಇನಷ್ಟು ವಿಸ್ತರಿಸಿದೆ ಎಂದರೆ ತಪ್ಪಾಗಲಾರದು. ರಾಜ್ ಬಗ್ಗೆ ತಿಳಿಯಲು ಇದೊಂದು ಸುಸಂದರ್ಭವಾಗಿದೆ.

ಆಂಗ್ಲ ಮಾಧ್ಯಮಗಳಲ್ಲಿ ರಾಜ್ ಗುಣಗಾನ:

ಆಂಗ್ಲ ಮಾಧ್ಯಮಗಳಲ್ಲಿ ರಾಜ್ ಗುಣಗಾನ:

ನಮ್ಮ ರಾಜ್ಯದ ಮಾಧ್ಯಮಗಳಲ್ಲಿ ರಾಜ್ ಕುರಿತ ಕಾರ್ಯಕ್ರಮಗಳು ಪ್ರಸಾರವಾಗುವುದು ಸಾಮಾನ್ಯ. ಆದರೆ ಗೂಗಲ್ ಡೂಗಲ್ ನಿಂದಾಗಿ ಅಣ್ಣವ್ರ ಕುರಿತು ಆಂಗ್ಲ ಮಾಧ್ಯಮಗಳು ವರದಿ ಮಾಡಿದ್ದು, ರಾಜ್ ಕುರಿತು ಗುಣಗಾನ ಮಾಡಿದ್ದಾರೆ.

ಅಭಿಮಾನಿ ದೇವರುಗಳು ಫುಲ್ ಖುಷ್:

ಅಭಿಮಾನಿ ದೇವರುಗಳು ಫುಲ್ ಖುಷ್:

ಗೂಗಲ್ ಡೂಗಲ್ ನಿಂದಾಗಿ ಅಣ್ಣಾವ್ರ ಅಭಿಮಾನಿ ದೇವರುಗಳು ಫುಲ್ ಖುಷಿಯಾಗಿದ್ಧಾರೆ. ತಮ್ಮ ನೆಚ್ಚಿನ ತಾರೆಗೆ ಗೌರವ ಸಲ್ಲಿಸಿರುವ ಗೂಗಲ್ ಗೆ ತಮ್ಮ ವಂದನೆಯನ್ನು ಸಲ್ಲಿಸಿದ್ದಾರೆ. ಈ ಮೂಲಕ ತಮ್ಮ ಆರಾಧ್ಯ ದೈವನನ್ನು ದೇಶದ ಮೂಲೆ ಮೂಲೆಗೆ ಪರಿಚಯಿಸಿದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Best Mobiles in India

Read more about:
English summary
Google Doodle marks the birthday of revered Kannada actor. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X