ನಮ್ಮ ಜೀವನವನ್ನು ಮತ್ತಷ್ಟು ಸ್ಮಾರ್ಟ್ ಮಾಡಲಿದೆ ಗೂಗಲ್ ನ ಹೊಸ ಆಯ್ಕೆಗಳು...!!!!!

ಗೂಗಲ್ ಹೊಸ ಹೊಸ ಸಾಫ್ಟ್ ವೇರ್ ಪ್ರಾಡೆಕ್ಟ್ ಗಳನ್ನು ಘೋಷಣೆ ಮಾಡಿದೆ. ಅವುಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

By Precilla Dias
|

ಮೇ 17ರಿಂದ 19ರ ವರೆಗೆ ನಡೆದ ಗೂಗಲ್ I/O ಡೇವಲಪರ್ ಕಾನ್ಫರೆನ್ಸ್ ನಲ್ಲಿ ಗೂಗಲ್ ಹೊಸ ಹೊಸ ಆಯ್ಕೆಯನ್ನು ವಿಷಯಗಳನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಈ ಕುರಿತು ಸಮಾವೇಶದಲ್ಲಿ ಮಾಹಿತಿ ನೀಡಿದ್ದು, ಹೊಸ ಪ್ರಯತ್ನಗಳ ಬಗ್ಗೆ ಬಳಕೆದಾರರಿಗೆ ತಿಳಿಸಿದೆ. ಅವುಗಳು ಯಾವುದು ಎನ್ನುವುದನ್ನು ನಿಮಗೆ ತಿಳಿಸುವ ಪ್ರಯತ್ನ ಇದಾಗಿದೆ.

ನಮ್ಮ ಜೀವನವನ್ನು ಮತ್ತಷ್ಟು ಸ್ಮಾರ್ಟ್ ಮಾಡಲಿದೆ ಗೂಗಲ್ ನ ಹೊಸ ಆಯ್ಕೆಗಳು...!!!!!

ಗೂಗಲ್ ಈ ಬಾರಿ ಸಾಫ್ಟವೇರ್ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿದ್ದು, ಹಾರ್ಡ್ ವೇರ್ ತಯಾರಿಕೆಯ ಕಡೆಗೆ ಗಮನವನ್ನು ಕಡಿಮೆ ಮಾಡಿದೆ. ಹೊಸ ಹೊಸ ಸಾಫ್ಟ್ ವೇರ್ ಪ್ರಾಡೆಕ್ಟ್ ಗಳನ್ನು ಘೋಷಣೆ ಮಾಡಿದೆ. ಅವುಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಆಂಡ್ರಾಯ್ಡ್ O:

ಆಂಡ್ರಾಯ್ಡ್ O:

ಈ ವರ್ಷದಲ್ಲಿ ಗೂಗಲ್ ಆಂಡ್ರಾಯ್ಡ್ O ಓಎಸ್ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಆಂಡ್ರಾಯ್ಡ್ O ಪ್ರಾಯೋಗಿಕವಾಗಿ ಬಿಡುಗಡೆಯಾಗಿದ್ದು, ನೆಕ್ಸಸ್ ಮತ್ತು ಪಿಕ್ಸಲ್ ಫೋನ್ ಗಳಲ್ಲಿ ಪರೀಕ್ಷೆಯೂ ನಡೆಯುತ್ತಿದೆ. ಆಂಡ್ರಾಯ್ಡ್ O ಹೊಸ ಹೊಸ ಆಯ್ಕೆಗಳನ್ನು ಹೊಂದಿರಲಿದ್ದು, ಮುಂದಿನ ತಲೆ ಮಾರಿನ ಆಯ್ಕೆಗಳನ್ನು ಗೂಗಲ್ ಇದರಲ್ಲಿ ನೀಡಲಿದೆ.

ಆಂಡ್ರಾಯ್ಡ್ ಗೋ:

ಆಂಡ್ರಾಯ್ಡ್ ಗೋ:

ಗೂಗಲ್ ಹೊಸದಾಗಿ ಲಾಂಚ್ ಮಾಡಲು ತಯಾರಿ ನಡೆಸಿರುವ ಆಂಡ್ರಾಯ್ಡ್ ಗೋ ಬಜೆಟ್ ಸ್ಮಾರ್ಟ್ ಪೋನ್ ಗಳ ಗೇಮ್ ಚೇಂಜರ್ ಆಗಲಿದೆ ಎನ್ನಲಾಗಿದೆ. ಇದು 1GB RAM ಗಿಂತ ಕಡಿಮೆ ಇರುವ ಸ್ಮಾರ್ಟ್ ಫೋನ್ ಗಳಿಗಾಗಿ ಇದನ್ನು ಡಿಸೈನ್ ಮಾಡಲಾಗಿದೆ. ಕಡಿಮೆ ವೇಗದಲ್ಲಿ ಕಾರ್ಯ ನಿರ್ವಹಿಸುವ ಫೋನ್ ಗಳಲ್ಲಿ ಬಳಸಲು ಹೇಳಿ ಮಾಡಿಸಿದಂತಿದೆ.

ಮತ್ತಷ್ಟು ಅಭಿವೃದ್ಧಿಗೊಂಡ ಗೂಗಲ್ ಅಸಿಸ್ಟೆಂಟ್:

ಮತ್ತಷ್ಟು ಅಭಿವೃದ್ಧಿಗೊಂಡ ಗೂಗಲ್ ಅಸಿಸ್ಟೆಂಟ್:

ಗೂಗಲ್ ಹೊಸದಾಗಿ ಪರಿಚಯಿಸಿರುವ ಗೂಗಲ್ ಅಸಿಸ್ಟೆಂಟ್ ಆಪ್ ಅನ್ನು ಮತ್ತಷ್ಟು ಅಭಿವೃದ್ಧಿ ಪಡೆಸಲಿದ್ದು, ಅಲ್ಲದೇ ಇದನ್ನು ಆಪಲ್ ಫೋನ್ ಗಳಲ್ಲಿ ಬಳಕೆ ಮಾಡುವ ರೀತಿಯಲ್ಲಿ ರೂಪಿಸಲಾಗುತ್ತಿದೆ. ಈಗಾಗಲೇ ಬಳಕೆಯಲ್ಲಿರುವ ಸಿರಿ ಗೆ ಇದು ಸ್ಪರ್ಧೆ ನೀಡಲಿದೆ. ಈಗಾಗಲೇ ಅಮೆರಿಕಾದ ಮಾರುಕಟ್ಟೆಯಲ್ಲಿ ಇದು ಬಳಕೆಗೆ ಮುಕ್ತವಾಗಿದೆ. ಅಲ್ಲದೇ ಅನೇಕ ಭಾಷೆಗಳಿಗೆ ಗೂಗಲ್ ಅಸಿಸ್ಟೆಂಟ್ ಸಪೋರ್ಟ್ ಮಾಡುವ ರೀತಿಯಲ್ಲಿ ಡಿಸೈನ್ ಮಾಡಲಾಗುತ್ತಿದೆ.

ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗದಂತೆ ಬಳಕೆ ಹೇಗೆ? ಸಿಂಪಲ್ ಟ್ರಿಕ್ಸ್!!ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗದಂತೆ ಬಳಕೆ ಹೇಗೆ? ಸಿಂಪಲ್ ಟ್ರಿಕ್ಸ್!!

ಗೂಗಲ್ ಹೋಮ್ ಗೆ ಮತ್ತಷ್ಟು ಶಕ್ತಿ:

ಗೂಗಲ್ ಹೋಮ್ ಗೆ ಮತ್ತಷ್ಟು ಶಕ್ತಿ:

2016ರಲ್ಲಿ ಬಿಡುಗಡೆಗೊಂಡ ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್ ಅನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಗೂಗಲ್ ಮುಂದಾಗಲಿದೆ. ಮುಂದಿನ ದಿನಗಳಲ್ಲಿ ಗೂಗಲ್ ಹೋಮ್ ನಲ್ಲಿ ಹಾಂಡ್ ಫ್ರೀ ಕಾಲಿಂಗ್ ಪ್ರೋಟೆಕ್ಟಿವ್ ಅಸಿಸ್ಟೆಂಟ್, ಶೆಡ್ಯೂಲ್ಡ್ ಕ್ಯಾಲೆಂಡರ್, ರಿಮೆಂಡರ್ ಗಳು ಸೇರಿದಂತೆ ಅನೇಕ ಹೊಸ ಹೊಸ ಆಯ್ಕೆಗಳನ್ನು ನೀಡಲು ಗೂಗಲ್ ಮುಂದಾಗಲಿದೆ.

ಗೂಗಲ್ ಜಾಬ್ಸ್:

ಗೂಗಲ್ ಜಾಬ್ಸ್:

ಇಂದಿನ ದಿನಗಳಲ್ಲಿ ನೌಕರಿಯನ್ನು ಹುಡುಕಲು ಆನ್ ಲೈನ್ ಬಳಕೆಯು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗೂಗಲ್ ಆ ಕ್ಷೇತ್ರಕ್ಕೂ ಕಾಲಿಡಲು ಮುಂದಾಗಿದೆ. ಇದಕ್ಕಾಗಿ ಸದ್ಯ ಮಾರುಕಟ್ಟೆಯಲ್ಲಿ ಇರುವ ಕೆಲಸ ಕೊಡಿಸುವ ವೈಬ್ ತಾಣಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಗೂಗಲ್ ಚಿಂತನೆಯನ್ನು ನಡೆಸಿದೆ ಎನ್ನಲಾಗಿದೆ. ಇದು ಶೀಘ್ರವೇ ಕಾರ್ಯಾರಂಭ ಮಾಡಲಿದೆ.

ಜಿಮೇಲ್ ನಲ್ಲಿ ಸ್ಮಾರ್ಟ್ ರಿಪ್ಲೇ ಆಯ್ಕೆ:

ಜಿಮೇಲ್ ನಲ್ಲಿ ಸ್ಮಾರ್ಟ್ ರಿಪ್ಲೇ ಆಯ್ಕೆ:

ಜಿಮೇಲ್ ಆಪ್ ಅನ್ನು ಹೆಚ್ಚು ಅಭಿವೃದ್ಧಿ ಮಾಡಲು ಗೂಗಲ್ ಮುಂದಾಗಿದೆ. ಇದರಲ್ಲಿ ಹೊಸ ಆಯ್ಕೆಯನ್ನು ನೀಡಲಿದ್ದು, ಮೇಲ್ ಗಳಿಗೆ ಸ್ಮಾರ್ಟ್ ಅಗಿ ರಿಪ್ಲೇಯನ್ನು ಕೊಡುವಂತಹ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದು ನಿಮ್ಮ ಕೆಲಸವನ್ನು ಕಡಿಮೆ ಮಾಡಲಿದೆ. ಅಲ್ಲದೇ ಸ್ಮಾರ್ಟ್ ಸಹ ಮಾಡಲಿದೆ.

ಗೂಗಲ್ ಫೋಟ್ಸೋ:

ಗೂಗಲ್ ಫೋಟ್ಸೋ:

ಗೂಗಲ್ ಪೋಟೋ ಪ್ಲಾಟ್ ಫಾರ್ಮ್ ಅನ್ನು ಇಂದು ಸುಮಾರು 500 ಮಿಲಿಯನ್ ಜನರು ಬಳಕೆ ಮಾಡುತ್ತಿದ್ದು, ಇದು ಆಂಡ್ರಾಯ್ಡ್ ಮತ್ತು ಐಎಸ್ಓ ಬಳಕೆದಾರಿಗೆ ಮುಕ್ತವಾಗಿದೆ. ಅದಕ್ಕಾಗಿ ಗೂಗಲ್ ಪೋಟೋ ಬಳಕೆದಾರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ.

ವಿಆರ್ ಹೆಡ್ ಸೆಟ್ ಗಳು:

ವಿಆರ್ ಹೆಡ್ ಸೆಟ್ ಗಳು:

ಸದ್ಯ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿರುವ ವಿಆರ್ ಹೆಡ್ ಸೆಟ್ ಗಳ ತಯಾರಿಕೆಗೆ ಗೂಗಲ್ ಮುಂದಾಗಲಿದ್ದು, ಇದಕ್ಕಾಗಿ ಹೆಚ್ ಟಿಸಿ ಮತ್ತು ಲಿನೋವೋ ದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಇರುವ ವಿಆರ್ ಹೆಡ್ ಸೆಟ್ ಗಿಂತ ಭಿನ್ನವಾದವನ್ನು ಗೂಗಲ್ ನಿರ್ಮಿಸಲಿದೆ.

ಗೂಗಲ್ ಲೆನ್ಸ್:

ಗೂಗಲ್ ಲೆನ್ಸ್:

ಗೂಗಲ್ ಲೈನ್ಸ್ ಹೊಸದಾಗಿ ಗೂಗಲ್ ಪರಿಚಯಿಸುತ್ತಿರುವ ಆಯ್ಕೆಯಾಗಿದ್ದು, ಇದನ್ನು ಸ್ಮಾರ್ಟ್ ಫೋನಿನ ಕ್ಯಾಮೆರಾದೊಂದಿಗೆ ಬಳಸಿಕೊಳ್ಳಬಹುದಾಗಿದೆ. ನೀವು ಯಾವುದೇ ವಸ್ತುವಿನ ಚಿತ್ರವನ್ನು ಈ ಆಪ್ ನಲ್ಲಿ ತೆಗೆದರೆ ಗೂಗಲ್ ಅದಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯವನ್ನು ನಿಮಗೆ ತಿಳಿಸುವ ಪ್ರಯತ್ನವನ್ನು ಮಾಡಲಿದೆ. ಅದು ಹೂ ಆಗಿರಲಿ, ಬೈಕ್ ಆಗಿರಲಿ ಯಾವುದೇ ವಸ್ತುವಾಗಿದ್ದರು ಅದರ ಮಾಹಿತಿ ಲಭ್ಯವಿರಲಿದೆ.

Best Mobiles in India

English summary
Here are all the major announcements those have happened at the Google I/O conference including Android O, Android Go, Google Photos new features, Google Assistant for iOS, etc.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X