ಜಿಯೋ DTH ಬೆಲೆ ಎಷ್ಟು..ಎಷ್ಟು ಚಾನೆಲ್..ಆನ್‌ಲೈನ್‌ ಬುಕ್ಕಿಂಗ್ ಹೇಗೆ? ಫುಲ್ ಡೀಟೆಲ್ಸ್ ಇಲ್ಲಿದೆ.!!

ಜಿಯೋ ತನ್ನ ಪರೀಕ್ಷಾರ್ಥ ಸೇವೆಯನ್ನು ಆರಂಭಿಸಿದ್ದು, ಹಲವೆಡೆ ಪ್ರಾಯೋಗಿಕ ಪರೀಕ್ಷೆಯೂ ಯಶಸ್ವಿಯಾಗಿರುವ ವಿಡಿಯೋಗಳು ಹರಿದಾಡಿವೆ.!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಡಿಟಿಹೆಚ್ ಲಾಂಚ್ ಪ್ರಕ್ರಿಯೇ ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ಅಂಬಾನಿ ಆರಂಭಿಸುತ್ತಿರುವ ಜಿಯೋ DTH ಸೆಟಪ್ ಬಾಕ್ಸ್ ಹೇಗಿರಲಿದೆ ಎಂಬ ಮಾಹಿತಿಯೂ ಈಗಾಗಲೇ ದೊರೆತಾಗಿದೆ. ಮೇ ಮೊದಲ ವಾರದಲ್ಲಿ ಜಿಯೋ DTH ಲಾಂಚ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಜಿಯೋ DTH ತನ್ನ ಬಳಕೆದಾರಿಗಾಗಿ ನಾಲ್ಕು ಡಿಟಿಹೆಚ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ್ದು, ಜಿಯೋ ಸಿಮ್ ರೀತಿಯಲ್ಲಿಯೇ ಜಿಯೋ ಡಿಟಿಹೆಚ್ ಆರು ತಿಂಗಳು ಉಚಿತವಾಗರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಜಿಯೋ ತನ್ನ ಪರೀಕ್ಷಾರ್ಥ ಸೇವೆಯನ್ನು ಆರಂಭಿಸಿದ್ದು, ಹಲವೆಡೆ ಪ್ರಾಯೋಗಿಕ ಪರೀಕ್ಷೆಯೂ ಯಶಸ್ವಿಯಾಗಿರುವ ವಿಡಿಯೋಗಳು ಹರಿದಾಡಿವೆ.!!

ಓದಿರಿ: ಈ ಆಪ್ ಇದ್ದರೆ ಸ್ಮಾರ್ಟ್‌ಫೋನ್ ಕಳೆದುಹೋಗಲು ಸಾಧ್ಯವೇ ಇಲ್ಲ!!

ಸುಮಾರು 432 ಚಾನಲ್‌ಗಳನ್ನು ಜಿಯೋ DTH ಪ್ರಸಾರ ಮಾಡಲಿದ್ದು, ಇದರಲ್ಲಿ 350 SD ನಾರ್ಮಲ್ ಚಾನಲ್‌ಗಳು, 50ಕ್ಕೂ ಹೆಚ್ಚು HD ಚಾನಲ್‌ಗಳು ಲಭ್ಯವಿರಲಿದೆ.! ಇನ್ನು ಇದೇ ಮೊದಲ ಬಾರಿಗೆ 4K ವಿಡಿಯೋಗಳನ್ನು ನೋಡುವ ಅವಕಾಶವನ್ನು ಜಿಯೋ ತನ್ನ ಗ್ರಾಹಕರಿಗೆ ಕಲ್ಪಿಸಿದ್ದು, ಬಿಡುಗಡೆಯ ನಂತರ ಆನ್‌ಲೈನ್‌ನಲ್ಲಿ ಮಾತ್ರ ಜಿಯೋ DTH ಮಾರಾಟಕ್ಕಿದೆ.!!

ಹಾಗಾಗಿ, ಆನ್‌ಲೈನ್‌ನಲ್ಲಿ ಜಿಯೋ DTH ಬುಕ್ ಮಾಡುವುದು ಹೇಗೆ? ಬೆಲೆ ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

1800 ರೂಪಾಯಿಗೆ ಜಿಯೋ DTH !!

ಈಗಾಗಲೇ ಟ್ರೆಂಡ್ ಸೃಷ್ಟಿಸುತ್ತಿರುವ ರಿಲಯನ್ಸ್ ಮಾಲೀತ್ವದ ಜಿಯೋ DTH, 350 SD ನಾರ್ಮಲ್ ಚಾನಲ್‌ಗಳು ಮತ್ತು 50ಕ್ಕೂ ಹೆಚ್ಚು HD ಚಾನಲ್‌ಗಳನ್ನು ಹೊಂದಿದ್ದು, ಜಿಯೋ DTH ಕನೆಕ್ಷನ್ ಪಡೆಯಲು 1800 ರೂ.ಗಳನ್ನು ಪಾವತಿಸಬೇಕು.!!

ಆನ್‌ಲೈನ್‌ ಬುಕ್ಕಿಂಗ್ ಹೇಗೆ

ಜಿಯೋ DTH ಖರೀದಿಸಲು ಆನ್‌ಲೈನ್‌ನಲ್ಲಿ ಬುಕ್ ಮಾಡಬೇಕಿದ್ದು, ಕೆಲವೇ ದಿವಸಗಳಲ್ಲಿ ಶುರುವಾಗುವ ಜಿಯೋ ಡಿಟಿಹೆಚ್ ಅನ್ನು ಮುಂಗಡವಾಗಿ ಬುಕ್ ಮಾಡಲು ಜಿಯೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಜಿಯೋ ಡಿಟಿಹೆಚ್‌ಆಯ್ಕೆ ಕಾಣಿಸುತ್ತವೆ ಅದನ್ನು ಕ್ಲಿಕ್ ಮಾಡಿರಿ

ಆಧಾರ್ ಮಾಹಿತಿ ನೀಡಿ.

ಜಿಯೋ DTH ಖರೀದಿಸಲು ಫೋನ್‌ ನಂಬರ್ ಮತ್ತು ಆಧಾರ್ ಮಾಹಿತಿ ಬೇಕಿದ್ದು, ಡಿಟಿಹೆಚ್ ಬುಕ್ ಮಾಡುವ ಸಮಯದಲ್ಲಿ ಸರಿಯಾಗಿ ಮಾಹಿತಿ ನೀಡಿ. ಇನ್ನು ಹಣ ಪಾವತಿ ಬಗ್ಗೆ ಆನ್‌ಲೈನ್ ಪೇಮೆಂಟ್ ಅಥವಾ ಕ್ಯಾಶ್‌ ಆನ್‌ ಡೆಲಿವರಿ ಆಯ್ಕೆ ಮಾಡಿಕೊಳ್ಳಿ

ನೆನಪಿರಬೇಕಾದ ಅಂಶಗಳು

#1 ಜಿಯೋ ಡಿಟಿಹೆಚ್ ಲಾಂಚ್‌ ನಂತರ ಅಧಿಕೃತವಾಗಿ ಜಿಯೋ ವೆಬ್‌ಸೈಟ್‌ನಲ್ಲಿಯೇ ಮಾರಾಟವಾಗುತ್ತವೆ.
#2 ಜಿಯೋ ಕೇರ್‌ನಂತಹ ಹಲವು ಸೈಟ್‌ಗಳು ಈಗಾಗಲೇ ಬುಕ್ಕಿಂಗ್ ಮಾಡಿ ಎಂದು ಜನರಿಗೆ ಮಾಹಿತಿ ನಿಡುತ್ತಿವೆ. ಆದರೆ ಜಿಯೋ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಜಿಯೋ ಡಿಟಿಹೆಚ್ ಮಾರಾಟ ಇನ್ನು ಶುರುವಾಗಿಲ್ಲ.!!

ಓದಿರಿ: ಶಾಕಿಂಗ್ ನ್ಯೂಸ್..ಬೆಂಗಳೂರಲ್ಲಿ ತಯರಾಗೊ ಐಫೋನ್ ಬೆಲೆ ಕೇವಲ 10,000!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
For Pre Booking of JIO Set Top Box We should Follow Some Steps.to know more visit to kannada.gizbot.com
Please Wait while comments are loading...
Opinion Poll

Social Counting