ಏಪ್ರಿಲ್ 15ರ ನಂತರವೂ ಜಿಯೋ ಉಚಿತ ಸೇವೆ ಕೊನೆಯಾಗಿಲ್ಲ ಏಕೆ?

309 ರೂಪಾಯಿಗಳ ರೀಚಾರ್ಜ್ ಮಾಡಿಸದಿದ್ದವರಿಗೂ ಜಿಯೋ ತನ್ನ ಉಚಿತ ಸೇವೆಯನ್ನು ಮುಂದುವರೆಸುತ್ತಿದೆ.!!

|

ಏಪ್ರಿಲ್ 15ರ ನಂತರವೂ ಜಿಯೋ ಉಚಿತ ಸೇವೆ ಮುಂದುವರೆಯುತ್ತಿರುವುದು ಜಿಯೋ ಗ್ರಾಹಕರಿಗೆ ಶಾಕ್ ಆಗಿದೆ. ಈಗಾಗಲೆ ಪ್ರೈಮ್ ರೀಚಾರ್ಜ್ ಮಾಡಿಸಿದ್ದು, 309 ರೂಪಾಯಿಗಳ ರೀಚಾರ್ಜ್ ಮಾಡಿಸದಿದ್ದವರಿಗೂ ಜಿಯೋ ತನ್ನ ಉಚಿತ ಸೇವೆಯನ್ನು ಮುಂದುವರೆಸುತ್ತಿದೆ.!!

ಹೌದು, ಎಲ್ಲಾ ಜಿಯೋ ಗ್ರಾಹಕರು ಏಪ್ರಿಲ್ 15ರ ನಂತರವೂ ಉಚಿತ ಸೇವೆಯನ್ನು ಪಡೆಯುತ್ತಿದ್ದು, ಎಲ್ಲರಿಗೂ ಜಿಯೋ ಉಚಿತ ಸೇವೆಯ ಮೇಲೆ ಪ್ರಶ್ನೆಗಳು ಮೂಡುತ್ತಿವೆ.? ಜಿಯೋ ಸೇವೆ ಮತ್ತೆ ಉಚಿತವಾಗಿದೆಯೆ? ಏಪ್ರಿಲ್ 15ರ ನಂತರವೂ ಉಚಿತ ಸೇವೆ ಏಕೆ ಮುಂದುವರೆಯುತ್ತಿದೆ.? ಧನ್ ಧನಾ ಧನ್ ಆಪರ್ ರೀಚಾರ್ಜ್ ಮಾಡಿಸದಿದ್ದರೆ ಏನು ಎಂಬ ಪ್ರಶ್ನೆಗಳು ಎಲ್ಲರಲ್ಲಿಯೂ ಹುಟ್ಟಿದೆ.!!

ಓದಿರಿ : ಜಿಯೋ DTH ಬೆಲೆ ಎಷ್ಟು..ಎಷ್ಟು ಚಾನೆಲ್..ಆನ್‌ಲೈನ್‌ ಬುಕ್ಕಿಂಗ್ ಹೇಗೆ? ಫುಲ್ ಡೀಟೆಲ್ಸ್ ಇಲ್ಲಿದೆ.!!

ಹಾಗಾಗಿ, ಏಪ್ರಿಲ್ 15ರ ನಂತರವೂ ಜಿಯೋ ಉಚಿತ ಸೇವೆ ಏಕೆ ನೀಡುತ್ತಿದೆ.? ಕಾರಣ ಏನು.? ಜಿಯೋ ಷರತ್ತುಗಳು ಏನಿತ್ತು? ಎಂಬ ಎಲ್ಲಾ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏಪ್ರಿಲ್ 15ರ ನಂತರವೂ ಮುಂದುವರೆದ ಉಚಿತ ಸೇವೆ!!

ಏಪ್ರಿಲ್ 15ರ ನಂತರವೂ ಮುಂದುವರೆದ ಉಚಿತ ಸೇವೆ!!

ಜಿಯೋ ಉಚಿತ ಸೇವೆ ಏಪ್ರಿಲ್ 15ರ ನಂತರ ಕೊನೆಗೊಳ್ಳುತ್ತದೆ ಎಂದು ಅಂಬಾನಿ ಹೇಳಿದ್ದರು. ಆದರೆ ಏಪ್ರಿಲ್ 15ರ ನಂತರವೂ ಜಿಯೋ ಉಚಿತ ಸೇವೆ ಮುಂದುವರೆಯುತ್ತಿದೆ.!! ಇದು ಅಂಬಾನಿಯ ಮತ್ತೊಂದು ಪ್ಲಾನ್ ಅಷ್ಟೆ!! ಹಾಗಾದರೆ, ಅಂಬಾನಿಯ ಉಚಿತ ಸೇವೆ ಪ್ಲಾನ್ ಏನು ಎಂದು ಕೆಳಗೆ ತಿಳಿಯಿರಿ.

ಧನ್ ಧನಾ ಧನ್ ಆಫರ್‌ನಿಂದಾಗಿ ಉಚಿತ ಸೇವೆ ಮುಂದುವರೆಯಲು ಕಾರಣ!!

ಧನ್ ಧನಾ ಧನ್ ಆಫರ್‌ನಿಂದಾಗಿ ಉಚಿತ ಸೇವೆ ಮುಂದುವರೆಯಲು ಕಾರಣ!!

ಧನ್ ಧನಾ ಧನ್ ಆಫರ್‌ನಲ್ಲಿ ಜಿಯೋ ಷರತ್ತುಗಳು ಏನಿತ್ತು ಎಂಬುದನ್ನು ತಿಳಿದರೆ ಜಿಯೋ ಉಚಿತ ಸೇವೆ ಏಪ್ರಿಲ್ 15ರ ನಂತರವೂ ಏಕೆ ಮುಂದುವರೆಯುತ್ತಿದೆ ಎಂಬುದಕ್ಕೆ ಕಾರಣ ಸಿಗುತ್ತದೆ. ಸಮ್ಮರ್ ಸರ್‌ಪ್ರೈಸ್ ಆಫರ್ ನಂತರ ಬಂದ ಜಿಯೋ ಷರತ್ತುಗಳು ಬದಲಾಗಿದ್ದು, ಏಪ್ರಿಲ್ 15 ಕ್ಕೆ ಜಿಯೋ ಉಚಿತ ಸೇವೆ ನಿಲ್ಲಿಸುವ ಸೂಚನೆ ಇಲ್ಲ.!!

ಟ್ರಾಯ್ ಪ್ರಶ್ನಿಸಿಲ್ಲಾ.!!

ಟ್ರಾಯ್ ಪ್ರಶ್ನಿಸಿಲ್ಲಾ.!!

ಸಮ್ಮರ್ ಸರ್‌ಪ್ರೈಸ್ ಆಫರ್ ನಿಲ್ಲಿಸಲು ಸೂಚನೆ ನೀಡಿದ್ದ ಟ್ರಾಯ್ ಜಿಯೋ ಧನ್ ಧನಾ ಧನ್ ಆಫರ್‌ ಬಗ್ಗೆ ಪ್ರಶ್ನೆ ಎತ್ತಿಲ್ಲ.!! ಹೌದು, ಟ್ರಾಯ್ ಜಿಯೋಗೆ ಬೆಂಬಲ ನೀಡುತ್ತಿದೆ ಎನ್ನುವ ಊಹಾಪೋಹಗಳಿಗೆ ಇದು ಸಾಕ್ಷಿಯಾಗಿದ್ದು, ಜಿಯೋ ಉಚಿತಸೇವೆ ಮತ್ತೆ ಮುಂದುವರೆಯುವ ಲಕ್ಷಣಗಳು ಕಾಣುತ್ತಿವೆ.

ಜಿಯೋ ಸಿಮ್ ಕೊನೆಯಾಗೊಲ್ಲಾ.!!

ಜಿಯೋ ಸಿಮ್ ಕೊನೆಯಾಗೊಲ್ಲಾ.!!

ಹೌದು, ನೀವು ಉಪಯೋಗಿಸುತ್ತಿರುವ ಜಿಯೋ ಸಿಮ್ ಸೇವೆ ಕೊನೆಗೊಳ್ಳುವುದಿಲ್ಲ. ರೀಚಾರ್ಜ್ ಮಾಡಿಸದಿದ್ದರೆ ಜಿಯೋ ಉಚಿತ ಸೇವೆ ನಿಲ್ಲಿಸಲಾಗುವುದು ಎಂದು ಮೆಸೇಜ್ ಪಡೆಯುತ್ತಿದ್ದರೂ ಸಹ, ಜಿಯೋ ಸೇವೆ ಇನ್ನು ಆರು ತಿಂಗಳು ಮುಂದುವರೆಯುವುದು. ಆದರೆ, 1GB ಡೇಟಾ ಪಡೆಯಲು ಸಾಧ್ಯವಿಲ್ಲಾ.!!

ಕೊನೆ ಕ್ಷಣದ ಆಟವಿರಬಹುದು.!!

ಕೊನೆ ಕ್ಷಣದ ಆಟವಿರಬಹುದು.!!

ಜಿಯೋ ಷರತ್ತುಗಳನ್ನು ಬಿಟ್ಟು ನೋಡಿದರೆ, ಇದು ಅಂಬಾನಿಯ ಕೊನೆ ಕ್ಷಣದ ಆಟವಿರಬಹುದು. ಪ್ರೈಮ್ ಗ್ರಾಹಕರನ್ನು ಸೆಳೆಯಲು ಅಂಬಾನಿ ಮತ್ತೆ ಮತ್ತೆ ಕೊಡುಗೆ ನೀಡುತ್ತಿದ್ದು, ಇದು ಅಂಬಾನಿಯ ಕೊನೆಯ ಒವರ್ ಬೌಲಿಂಗ್ ಆಗಬಹುದು. ಆದರೆ, ವಿಕೆಟ್ ಬೀಳದಿದ್ದರೆ ಜನರು ಗೆದ್ದಂತೆ.

Best Mobiles in India

English summary
Many people might be thinking that why their Jio sim is still working even after 15 April 2017.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X