ಗೂಗಲ್‌ನಲ್ಲಿ ಕೆಲಸ ಸಿಕ್ಕರೆ ನೀವು ಮನೆಗೆ ಹೋಗುವುದನ್ನೇ ಮೆರೆಯುವಿರಿ..! ಯಾಕೆ ಗೊತ್ತೆ..?

ಕೆಲಸ ಸಿಕ್ಕ ಖುಷಿಯ ಸಂದರ್ಭವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಲು ಗೂಗಲ್ ಭರ್ಜರಿ ಪಾರ್ಟಿಯನ್ನು ನೀಡಲಿದೆ.

|

ಇಡೀ ಜಗತ್ತಿಗೆ ಹೊಸ ದಾರಿಯನ್ನು ತೋರಿಸುತ್ತಿರುವ ಗೂಗಲ್ ನಲ್ಲಿ ಕೆಲಸ ಮಾಡುವವರಿಗೆ ಹೊಸ ಜಗತ್ತೆ ನಿರ್ಮಾಣಮಾಡಿದೆ. ತನ್ನ ಕಂಪನಿಯಲ್ಲಿ ಕೆಲಸ ಮಾಡುವರಿಗೆ ಇಡೀ ಜಗತ್ತಿನಲ್ಲೇ ಬೇರೆಯಾವ ಕಂಪನಿಯೂ ನೀಡದಂತಹ ಸೌಲಭ್ಯಗಳನ್ನು ನೀಡುತ್ತಿದೆ, ಕಂಪನಿಯಲ್ಲಿ ಕೆಲಸ ಮಾಡುವುದಕ್ಕೆ ಖುಷಿಯಾಗುವಂತಹ ವಾತಾವರಣವನ್ನು ಕಲ್ಪಿಸಿದೆ.

ಗೂಗಲ್‌ನಲ್ಲಿ ಕೆಲಸ ಸಿಕ್ಕರೆ ನೀವು ಮನೆಗೆ ಹೋಗುವುದನ್ನೇ ಮೆರೆಯುವಿರಿ..!

ಓದಿರಿ: ಆಧಾರ್ ಕಾರ್ಡ್ ಕಳೆದ ಹೋದರೆ ಮಾಡಬೇಕಾದ್ದೇನು..?

ಕೈ ತುಂಬ ಸಂಬಳವನ್ನು ನೀಡುವುದಲ್ಲದೇ ನೌಕರರಿಂದ ಹೆಚ್ಚಿನ ಕೆಲಸವನ್ನು ತೆಗೆಸುವುದರಲ್ಲಿ ಗೂಗಲ್ ಮುಂಚುಣಿಯಲ್ಲಿದ್ದು, ಕೆಲಸ ಮಾಡುವ ಸ್ಥಳದಲ್ಲಿ ನೌಕರಿಗೆ ಹೆಚ್ಚಿನ ಸ್ವಾತಂತ್ರವನ್ನು ನೀಡಿದರೆ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ತಿಳಿದು ಗೂಗಲ್ ತಿಳಿದು ತನ್ನ ನೌಕರಿಗೆ ನೀಡುವ ಸೌಲಭ್ಯವಗಳು ಏನು ಎಂಬುದನ್ನು ನಿಮಗೆ ತಿಳಿಸುವ ಕಾರ್ಯ ಇದಾಗಿದೆ.

ಓದಿರಿ: ವಾಟ್ಸ್ಆಪ್ ಗ್ರೂಪ್ ಆಡ್ಮಿನ್‌ಗಳೇ ಎಚ್ಚರ: ನೀವು ಜೈಲು ಸೇರಬೇಕಾದಿತು..!!!

ಗೂಗಲ್ ಅಡುಗೆ ಮನೆ:

ಗೂಗಲ್ ಅಡುಗೆ ಮನೆ:

ಗೂಗಲ್ ವಿಶ್ವದ ನಾನಾ ನಗರಗಳಲ್ಲಿ ಗೂಗಲ್ ತನ್ನ ಆಫೀಸ್ ಹೊಂದಿದೆ. ಅಲ್ಲದೇ ವಿಶ್ವದ ಮೂಲೆ ಮೂಲೆಗಳಿಂದ ನೌಕರರು ಗೂಗಲ್ ಸಂಸ್ಥೆಯನ್ನು ಸೇರಿದ್ದಾರೆ. ಹಾಗಾಗಿ ತನ್ನ ನೌಕರಿಗೆ ಅವರ ಸ್ಥಳೀಯ ಖಾದ್ಯಗಳನ್ನು ಉಣಬಡಿಸಬೇಕು ಎಂಬ ಕಾರಣಕ್ಕೆ ಗೂಗಲ್ ಅಡುಗೆ ಮನೆಯಲ್ಲಿ ವಿವಿಧ ದೇಶಗಳ ಖಾದ್ಯಗಳನ್ನು ತಯಾರಿಸಿ ಉಣಬಡಿಸುತ್ತಿದೆ. ಅದು ಸಹ ಉಚಿತವಾಗಿ.

ಗೂಗಲ್ ಇನ್‌ಶ್ಯೂರೆನ್ಸ್:

ಗೂಗಲ್ ಇನ್‌ಶ್ಯೂರೆನ್ಸ್:

ಗೂಗಲ್ ತನ್ನ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ನೌಕರರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ. ಗೂಗಲ್ ನೌಕರರು ಮರಣಹೊಂದಿದ ಸಂದರ್ಭದಲ್ಲಿ 10 ವರ್ಷಗಳ ಕಾಲ ಅವರ ಕುಟುಂಬಕ್ಕೆ ನೌಕರರು ಪಡೆಯುತ್ತಿದ್ದ ಸಂಬಳದಲ್ಲಿ ಅರ್ಧವನ್ನು ಅವರ ಕುಟುಂಬಕ್ಕೆ ನೀಡಲಿದೆ. ಅಲ್ಲದೇ ಅವರ ಮಕ್ಕಳು 19 ವರ್ಷ ತುಂಬುವ ತನಕ ಪ್ರತಿ ತಿಂಗಳು 1,000 ಡಾಲರ್ ಹಣವನ್ನು ನೀಡಲಿದೆ.

ಗೂಗಲ್‌ನಲ್ಲಿ ಕೆಲಸ 80-20:

ಗೂಗಲ್‌ನಲ್ಲಿ ಕೆಲಸ 80-20:

ಗೂಗಲ್ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರಿಗೆ ಕೆಲಸ ಮಾಡಲು ಎಲ್ಲಾ ಸ್ವಾತಂತ್ರವನ್ನು ನೀಡುತ್ತದೆ. ದಿನದಲ್ಲಿ ಒಬ್ಬ ನೌಕರ 10 ಗಂಟೆ ಕೆಲಸ ಮಾಡುತ್ತಾನೆ ಎಂದಾದರೆ, 8 ಗಂಟೆ ಗೂಗಲ್ ನೀಡುವ ಕೆಲಸವನ್ನು ಮತ್ತೇ ಉಳಿದ 2 ಗಂಟೆಗಳ ಕಾಲ ತಾನು ಬಯಸುವ ಇನ್ಯಾವುದೇ ಕೆಲಸವನ್ನು ಬೇಕಾದರು ಮಾಡುವ ಅವಕಾಶವನ್ನು ಮಾಡಿಕೊಡುತ್ತದೆ.

ಗೂಗಲ್ ಬಸ್:

ಗೂಗಲ್ ಬಸ್:

ತನ್ನ ನೌಕರರು ಐಷಾರಾಮಿ ವ್ಯವಸ್ಥೆಯಲ್ಲಿ ಇರಬೇಕೆಂದು ಬಯಸುವ ಗೂಗಲ್ ತನ್ನ ನೌಕರನ್ನು ಕರೆ ತರಲು ಮತ್ತು ವಾಪಸು ಬಿಡಲು ಐಷಾರಾಮಿ ಬಸ್ ವ್ಯವಸ್ಥೆಯನ್ನು ಮಾಡಿದೆ. ಅದು ಸಹ ಉಚಿತವಾಗಿ. ಈ ಎಲ್ಲ ಸೌಲಭ್ಯಗಳು ಗೂಗಲ್‌ನ ಪ್ರತಿ ಶಾಖೆಯಲ್ಲಿಯೂ ಲಭ್ಯವಿರಲಿದೆ.

ಮಸಾಜ್ ಪಾರ್ಲರ್:

ಮಸಾಜ್ ಪಾರ್ಲರ್:

ಗೂಗಲ್ ತನ್ನ ಕಛೇರಿಯಲ್ಲಿಯೇ ನೌಕರಿಗೆ ಸ್ಪಾ-ಮಸಾಜ್ ಪಾರ್ಲರ್ ನಂತಹ ಸೇವೆಯನ್ನು ನೀಡುತ್ತದೆ. ಇದಕ್ಕಾಗಿ ಅತೀ ಕಡಿಮೆ ದರವನ್ನು ವಿಧಿಸಲಿದೆ. ಇದರಿಂದ ನೌಕರಿಗೆ ರಿಲೀಫ್ ಸಿಗಲಿದೆ. ಅವರ ಕೆಲಸ ಮಾಡುವ ಸಾಮಾರ್ಥ್ಯವನ್ನು ಇದು ಹೆಚ್ಚಿಸಲಿದೆ.

ಗೂಗಲ್‌ ಕಛೇರಿಗೆ ನಾಯಿಗಳಿಗೂ ಪ್ರವೇಶ:

ಗೂಗಲ್‌ ಕಛೇರಿಗೆ ನಾಯಿಗಳಿಗೂ ಪ್ರವೇಶ:

ಗೂಗಲ್ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ತಮ್ಮ ನೆಚ್ಚಿನ ಸಾಕು ಪ್ರಾಣಿಗಳನ್ನು ಕರೆದುಕೊಂಡು ಬರುವ ಅವಕಾಶವನ್ನು ಮಾಡಿಕೊಟ್ಟಿದೆ. ನೌಕರರು ಎಷ್ಟು ಖುಷಿಯಿಂದ ಕಛೇರಿಯಲ್ಲಿ ಇರುವರೋ ಅಷ್ಟೆ ಉತ್ತಮವಾಗಿ ಕಾರ್ಯ ನಿರ್ಹಿಸುವರು ಎಂದುದು ಗೂಗಲ್‌ಗೆ ತಿಳಿದಿದೆ.

ಗೂಗಲ್ ಕಛೇರಿಯಲ್ಲಿದೆ ಸ್ವಿಮ್ಮಿಂಗ್ ಪೂಲ್:

ಗೂಗಲ್ ಕಛೇರಿಯಲ್ಲಿದೆ ಸ್ವಿಮ್ಮಿಂಗ್ ಪೂಲ್:

ಗೂಗಲ್ ತನ್ನ ನೌಕರಿಗೆ ಕೆಲಸ ಮಾಡುವ ಸಂದರ್ಭದಲ್ಲಿ ತಮ್ಮ ಇಚ್ಛೆಯಂತೆ ಕಾರ್ಯನಿರ್ವಹಿಸಬಹುದಾಗಿದೆ. ಇದೇ ಮಾದರಿಯಲ್ಲಿ ಗೂಗಲ್ ಕಛೇರಿಯಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದ್ದು, ನೌಕರರು ಯಾವಗ ಬೇಕಾದರು ಫೂಲ್ ಬಳಸಬಹುದಾಗಿದೆ.

ಗೂಗಲ್ ಕಛೇರಿಯಲ್ಲಿ ಇಂಡೋರ್ ಗೇಮಿಂಗ್:

ಗೂಗಲ್ ಕಛೇರಿಯಲ್ಲಿ ಇಂಡೋರ್ ಗೇಮಿಂಗ್:

ಗೂಗಲ್ ಕಛೇರಿಯಲ್ಲಿ ಇಂಡೋರ್ ಗೇಮ್ ಗಳನ್ನು ಆಡುವ ಅವಕಾಶವನ್ನು ಹೊಂದಿದೆ. ಕೆಲಸ ಮಾಡಿ ಬೇಜಾರು ಹೊಂದಿದವರು ಕೆಲ ಕಾಲ ಆಟವಾಡಲು ಅವಕಾಶ ಮಾಡಿಕೊಡುತ್ತಿದೆ.

ಹೊಸ ನೌಕರರು ಸೇರ್ಪಡೆ ಸಂದರ್ಭದಲ್ಲಿ ಗೂಗಲ್ ನಿಂದ ಪಾರ್ಟಿ:

ಹೊಸ ನೌಕರರು ಸೇರ್ಪಡೆ ಸಂದರ್ಭದಲ್ಲಿ ಗೂಗಲ್ ನಿಂದ ಪಾರ್ಟಿ:

ಗೂಗಲ್ ಕಂಪನಿಗೆ ಕಾಲೇಜು ಮುಗಿಸಿಬಂದು ಸೇರ್ಪಡೆಗೊಳ್ಳುವ ನೌಕರಿಗೆ ಗೂಗಲ್ ಭರ್ಜರಿ ಪಾರ್ಟಿಯನ್ನು ನೀಡಲಿದೆ. ಕಾಲೇಜು ಮುಗಿಸಿದ ಖುಷಿಯಲ್ಲಿ ಹಾಗೂ ಕೆಲಸ ಸಿಕ್ಕ ಖುಷಿಯ ಸಂದರ್ಭವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಲು ಗೂಗಲ್ ಭರ್ಜರಿ ಪಾರ್ಟಿಯನ್ನು ನೀಡಲಿದೆ.

ಗಂಡಸರಿಗೂ ಹೆರಿಗೆ ರಜೆ:

ಗಂಡಸರಿಗೂ ಹೆರಿಗೆ ರಜೆ:

ಮಹಿಳೆಯರಿಗೆ ಹೆರಿಗೆ ರಜೆ ನೀಡುವ ಮಾದರಿಯಲ್ಲಿ ಗಂಡಸರಿಗೂ ಹೆರಿಗೆ ರಜೆಯನ್ನು ನೀಡಲಿದೆ. ಕಾರಣ ಪತ್ನಿಯೊಂದಿಗೆ ಪತಿಯೂ ಜೊತೆಗೆ ಇರಲಿ. ಮಗುವಿಗೆ ತಾಯಿಯೊಂದಿಗೆ ತಂದೆಯೂ ಪ್ರೀತಿಯು ಸಿಗಲಿ ಎಂಬ ಕಾರಣಕ್ಕೆ.

Best Mobiles in India

Read more about:
English summary
Here are some of the things that Google employees cherish the most as benefits of working for Google. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X