ಜಿಯೋವಿನ ಪ್ರಸ್ತುತ ಗ್ರಾಹಕರೆಷ್ಟು? ಎಷ್ಟು ಕಡಿಮೆಯಾಗಿದೆ? ಟ್ರಾಯ್ ನೀಡಿದ ಮಾಹಿತಿ!!!

ಜಿಯೋ ಉಚಿತ ಸೇವೆ ನಿಲ್ಲಿಸಿದ ನಂತರ ಜಿಯೋ ಗ್ರಾಹಕರ ಸಂಖ್ಯೆ ಭಾರಿ ಇಳಿಕೆಯಾಗಿದೆ.!!

|

ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ 2016 ರ ಸೆಪ್ಟಂಬರ್‌ನಿಂದ ಪ್ರಸ್ತುತ ಇಲ್ಲಿಯವರೆಗೂ ಜಿಯೋ ಗ್ರಾಹಕರ ಸಂಖ್ಯೆಯ ಏರುಪೇರುಗಳ ಮಾಹಿತಿ ನೀಡಿದ್ದು, ಜಿಯೋ ಬಗೆಗಿನ ಶಾಕಿಂಗ್ ವಿಷಯವೊಂದು ಹೊರಬಿದ್ದಿದೆ.!!

ಹೌದು, ಜಿಯೋ ಶುರುವಾಗಿನಿಂದ ಹಿಡಿದು ಇಲ್ಲಿಯವರೆಗೂ ಪ್ರತಿ ತಿಂಗಳು ಜಿಯೋಗೆ ಚಂದಾದಾರರಾಗಿರುವ ಮಾಹಿತಿಯನ್ನು ಟ್ರಾಯ್‌ ಬಿಡುಗಡೆ ಮಾಡಿದ್ದು, ಜಿಯೋ ಉಚಿತ ಸೇವೆ ನಿಲ್ಲಿಸಿದ ನಂತರ ಜಿಯೋ ಗ್ರಾಹಕರ ಸಂಖ್ಯೆ ಭಾರಿ ಇಳಿಕೆಯಾಗಿದೆ.!!

ಹಾಗಾದರೆ, ಜಿಯೋ ತನ್ನ ಸೇವೆಗಳಿಗೆ ಶುಲ್ಕ ವಿಧಿಸಿದಾಗ ಜಿಯೋಗೆ ಚಂದಾದಾರರಾದ ಗ್ರಾಹಕರೆಷ್ಟು? ಮತ್ತು ಅದಕ್ಕಿಂತ ಮೊದಲು ಜಿಯೋಗೆ ಚಂದದಾರರು ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಸೆಪ್ಟೆಂಬರ್‌ನಿಂದ ಮಾರ್ಚ್‌ವರೆಗೂ!!

ಸೆಪ್ಟೆಂಬರ್‌ನಿಂದ ಮಾರ್ಚ್‌ವರೆಗೂ!!

ಸೆಪ್ಟೆಂಬರ್‌ 16 ಮಿಲಿಯನ್, ಅಕ್ಟೋಬರ್‌ನಲ್ಲಿ 19.6 ಮಿಲಿಯನ್, ಡಿಸೆಂಬರ್‌ನಲ್ಲಿ 20.3 ಮಿಲಿಯನ್, ಜನವರಿ 2017 ರಲ್ಲಿ ಸಂಸ್ಥೆಯು 18.5 ಮಿಲಿಯನ್, ಫೆಬ್ರವರಿಯಲ್ಲಿ 17 ಮಿಲಿಯನ್ ಗ್ರಾಹಕರು ಮತ್ತು ಮಾರ್ಚ್‌ನಲ್ಲಿ 20 ಮಿಲಿಯನ್ ಗ್ರಾಹಕರು ಜಿಯೋ ತೆಕ್ಕೆಗೆ ಬಿದ್ದಿದ್ದಾರೆ.!!

ಶುಲ್ಕ ವಿಧಿಸಿದಾಗ ಜಿಯೋಗೆ ಚಂದಾದಾರರಾದ ಗ್ರಾಹಕರೆಷ್ಟು?

ಶುಲ್ಕ ವಿಧಿಸಿದಾಗ ಜಿಯೋಗೆ ಚಂದಾದಾರರಾದ ಗ್ರಾಹಕರೆಷ್ಟು?

ಮಾರ್ಚ್ ತಿಂಗಳ ನಂತರ ಜಿಯೋ ತನ್ನ ಶುಲ್ಕ ವಿಧಿಸಿದ ನಂತರ ಸುಮಾರು 6 ದಶಲಕ್ಷ ಚಂದಾದಾರರು ಮಾತ್ರ ಜಿಯೋ ತೆಕ್ಕೆಗೆ ಬಿದ್ದಿದ್ದಾರೆ.!! ಇದು ಜಿಯೋ ಉಚಿತ ಸೇವೆಯನ್ನು ಪಡೆದುಕೊಳ್ಳುತ್ತಿದ್ದವರ ಶೇ 20 ಪರ್ಸೆಂಟ್‌ಗೆ ಸರಿಸಮವಾಗಿದೆ.!!

ಜಿಯೋ ದೇಶದ ಅತಿದೊಡ್ಡ ಬ್ರಾಡ್ಬ್ಯಾಂಡ್!!

ಜಿಯೋ ದೇಶದ ಅತಿದೊಡ್ಡ ಬ್ರಾಡ್ಬ್ಯಾಂಡ್!!

ಇಷ್ಟಾದರೂ ಕೂಡ ಜಿಯೋ ದೇಶದ ಅತಿದೊಡ್ಡ ಮೊಬೈಲ್ ಬ್ರಾಡ್ಬ್ಯಾಂಡ್ ಸೇವಾ ಪೂರೈಕೆದಾರನಾಗಿ ಹೊರಹೊಮ್ಮಿದೆ. ಜಿಯೋ 47.04 ಮಿಲಿಯನ್, ಏರ್‌ಟೆಲ್ 46 ಮಿಲಿಯನ್ , ವೊಡಾಫೋನ್ (37.71 ಮಿಲಿಯನ್) ಮತ್ತು ಐಡಿಯಾ (24.70 ಮಿಲಿಯನ್) ಮೊಬೈಲ್ ಬ್ರಾಡ್ಬ್ಯಾಂಡ್ ಸೇವೆ ನೀಡುತ್ತಿವೆ.

ಪ್ರಸ್ತುತ ಹೆಚ್ಚು ಚಂದಾದಾರನ್ನು ಹೊಂದಿರುವ ಟೆಲಿಕಾಂ?

ಪ್ರಸ್ತುತ ಹೆಚ್ಚು ಚಂದಾದಾರನ್ನು ಹೊಂದಿರುವ ಟೆಲಿಕಾಂ?

ಮಾರ್ಚ್ 2017 ರ ವೇಳೆಗೆ ಭಾರ್ತಿ ಒಟ್ಟು ಚಂದಾದಾರರ ಸಂಖ್ಯೆ 273.65 ಮಿಲಿಯನ್ ಆಗಿದ್ದು, ವೊಡಾಫೋನ್ 209.06 ಮಿಲಿಯನ್ ಮತ್ತು ಐಡಿಯ ಸೆಲ್ಯುಲಾರ್ ಚಂದಾದಾರರ ಸಂಖ್ಯೆ 195.37 ಮಿಲಿಯನ್ ಆಗಿದೆ. ಇನ್ನು ಜಿಯೋ 108 ಮಿಲಿಯನ್‌ ಗ್ರಾಹಕರನ್ನು ಹೊಂದಿದೆ.!!

<strong>ಜಿಯೋ, ಟೆಲಿಕಾಂ ಸೇರಿ ಗ್ರಾಹಕರಿಗೂ ಶಾಕ್ ನೀಡಿದ ಸರ್ಕಾರ!.ಏನು ಗೊತ್ತಾ!?</strong>ಜಿಯೋ, ಟೆಲಿಕಾಂ ಸೇರಿ ಗ್ರಾಹಕರಿಗೂ ಶಾಕ್ ನೀಡಿದ ಸರ್ಕಾರ!.ಏನು ಗೊತ್ತಾ!?

Best Mobiles in India

English summary
The subscriber addition spree of Reliance Jio Infocomm (Jio), which added over 108 million subscribers in just 7 months since September 2016, seems to be losing steam.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X