ನೀವು ಜಿಯೋ DTH ಹಾಕಿಸಬೇಕೇ..? ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ ಜಿಯೋ..!!!!

ಜಿಯೋ ತಾನಾಗಿಯೇ ಆಯ್ದ ಗ್ರಾಹಕರ ಮನೆಗೆ DTH ಸೇವೆಯನ್ನು ಮನೆ ಬಾಗಿಲಿಗೆ ಹೋಗಿ ನೀಡುತ್ತಿದೆ ಎನ್ನಲಾಗಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ಶೀಘ್ರವೇ ಡಿಟಿಹೆಚ್ ಸೇವೆಯನ್ನು ಆರಂಭಿಸಲಿದೆ ಎನ್ನುವ ಸುದ್ದಿಯನ್ನು ನಾವೇ ನಿಮಗೆ ತಿಳಿಸಿದ್ದೇವು, ಈಗ ಜಿಯೋ ಡಿಟಿಹೆಚ್ ಪ್ರಾಯೋಗಿಕ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಅದುವೇ ಬ್ರಾಡ್ ಬ್ಯಾಂಡ್ ಸೇವೆಯೊಂದಿಗೆ ಎಂಬ ವಿಷಯವೂ ತಿಳಿದುಬಂದಿದೆ. ಜಿಯೋ ತಾನಾಗಿಯೇ ಆಯ್ದ ಗ್ರಾಹಕರ ಮನೆಗೆ DTH ಸೇವೆಯನ್ನು ಮನೆ ಬಾಗಿಲಿಗೆ ಹೋಗಿ ನೀಡುತ್ತಿದೆ ಎನ್ನಲಾಗಿದೆ.

ನೀವು ಜಿಯೋ DTH ಹಾಕಿಸಬೇಕೇ..? ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ ಜಿಯೋ..!!!!

ಜಿಯೋ ಕೇಬಲ್ ಸೆಟಪ್‌ ಬಾಕ್ಸ್ ಮಾಮೂಲಿ ಡಿಟಿಹೆಚ್ ನಂತೆ ಇಲ್ಲವಾಗಿದ್ದು, ಇದು ಹೈಬ್ರಿಡ್ ಬಾಕ್ಸ್ ಆಗಿದ್ದು, ಬ್ರಾಡ್ ಬ್ಯಾಂಡ್ ಸೇವೆಯನ್ನು ಬಳಸಿಕೊಂಡು ಕಾರ್ಯನಿರ್ವಹಿಸಲು ಶಕ್ತವಾಗಿದೆ. ಈ ಹಿನ್ನಲೆಯಲ್ಲಿ ಜಿಯೋ FTTH ಫೈಬರ್ ಟು ದ ಹೋಮ್ ಬ್ರಾಡ್ ಬ್ಯಾಂಡ್ ಕೇಬಲ್ ಸಹಾಯದಿಂದಲೇ ಕಾರ್ಯಚರಣೆ ಆರಂಭಿಸಿದೆ ಎನ್ನಲಾಗಿದೆ.

ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..? ಯಾಕಿಲ್ಲ ಇಲ್ಲಿದೇ ಸಂಪೂರ್ಣ ಮಾಹಿತಿ

ಪ್ರಮುಖ ನಗರಗಳಲ್ಲಿ ಬೀಟಾ ಸೇವೆ:

ಪ್ರಮುಖ ನಗರಗಳಲ್ಲಿ ಬೀಟಾ ಸೇವೆ:

ಜಿಯೋ ಡಿಟಿಹೆಚ್ ಸೇವೆಯೂ ದೇಶದ ಪ್ರಮುಖ ನಗರಗಳಲ್ಲಿ ಬೀಟಾ ಸೇವೆಯನ್ನು ಆರಂಭಿಸಿದೆ ಎನ್ನಲಾಗಿದ್ದು, ಜಿಯೋ FTTH ಫೈಬರ್ ಟು ದ ಹೋಮ್ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡುತ್ತಿರುವ ಮನೆಗಳಿಗೆ ಅಳವಡಿಸಿರುವ ಕೇಬಲ್ ಸಹಾಯದಿಂದಲೇ ಡಿಟಿಹೆಚ್ ಸೇವೆಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದೆ ಎನ್ನಲಾಗಿದೆ. ಹಾಗಾಗಿ ಬ್ರಾಡ್ ಬ್ಯಾಂಡ್ ನೊಂದಿಗೆ DTH ಸಹ ಬರುತ್ತಿದೆ.

ಜಿಯೋ ಡಿಟಿಹೆಚ್ ಹೈಬ್ರಿಡ್ ಬಾಕ್ಸ್:

ಜಿಯೋ ಡಿಟಿಹೆಚ್ ಹೈಬ್ರಿಡ್ ಬಾಕ್ಸ್:

ಜಿಯೋ ಡಿಟಿಹೆಚ್ ತನ್ನ ಗ್ರಾಹಕರಿಗೆ ಹೈಬ್ರಿಡ್ ಬಾಕ್ಸ್ ಪರಿಚಯ ಮಾಡುತ್ತಿದ್ದು, ಇದನ್ನು ಕೋರಿಯಾ ಮೂಲದ ಕಂಪನಿಯೊಂದು ನಿರ್ಮಾಣ ಮಾಡಿದೆ ಎನ್ನಲಾಗಿದೆ. ಈಗಾಗಲೇ ಎರಡು ತಿಂಗಳಿಂದ ಈ ಡಿಟಿಹೆಚ್ ಹೈಬ್ರಿಡ್ ಬಾಕ್ಸ್ ಪ್ರಾಯೋಗಿಕ ಪರೀಕ್ಷೆಯೂ ನಡೆಯುತ್ತಿದ್ದು, ಈಗ ಸಾಮಾನ್ಯ ಮನೆಗಳಿಗೆ ಸಂಪರ್ಕವನ್ನು ನೀಡಿ ಪರೀಕ್ಷೆ ಮಾಡಲಾಗುತ್ತಿದೆ.

ಜಿಯೋ ಡಿಟಿಹೆಚ್ ಹೈಬ್ರಿಡ್ ಬಾಕ್ಸ್ ವಿನ್ಯಾಸ:

ಜಿಯೋ ಡಿಟಿಹೆಚ್ ಹೈಬ್ರಿಡ್ ಬಾಕ್ಸ್ ವಿನ್ಯಾಸ:

ಜಿಯೋ DHT ಸೆಟಪ್ ಬಾಕ್ಸ್ HDMI ಸಫೋರ್ಟ್ ಮಾಡಲಿದೆ. ಇದರಲ್ಲಿ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಅಲ್ಲದೇ UHD ವಿಡಿಯೋ ಪ್ರಸಾರದ ಗುಣಮಟ್ಟವನ್ನು ಹೊಂದಿದೆ. ಇದರೊಂದಿಗೆ ವೈ-ಫೈ, ಬ್ಲೂಟೂತ್, ಗೂಗಲ್ ಕ್ರೋಮ್ ಕಾಸ್ಟ್, ವಾಯ್ಸ್ ಕಮೆಂಡ್ ರಿಮೋಟ್ ಕಂಟ್ರೋಲ್ ಮತ್ತು ಆಂಡ್ರಾಯ್ಡ್ ಟಿವಿ ವೈಶಿಷ್ಟವನ್ನು ಹೊಂದಿದೆ.

ಆಕರ್ಷಕ ಬೆಲೆಗಳು:

ಆಕರ್ಷಕ ಬೆಲೆಗಳು:

ಜಿಯೋ ಟೆಲಿಕಾಂ ಸೆಕ್ಟರ್ ಮಾದರಿಯಲ್ಲೇ ಡಿಟಿಹೆಚ್ ಲೋಕದಲ್ಲಿಯೂ ದರ ಸಮರವನ್ನು ಜೋರಾಗಿಯೇ ನಡೆಸುವ ಸಾಧ್ಯತೆ ಇದೆ. ಅದಕ್ಕಾಗಿಯೇ ಹೊಸ ಹೊಸ ಪ್ಲಾನ್ ರೆಡಿ ಮಾಡುತ್ತಿದ್ದು, ಗ್ರಾಹಕರನ್ನು ಮೊದಲಿಗೆ ಆಕರ್ಷಿಸುವ ಪ್ರಯತ್ನದಲ್ಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅತೀ ಹೆಚ್ಚು ಚಾನಲ್‌ಗಳು:

ಅತೀ ಹೆಚ್ಚು ಚಾನಲ್‌ಗಳು:

ಜಿಯೋ ಡಿಟಿಹೆಚ್ ಲೋಕದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟಿ ಹಾಕಲು ಅತೀ ಹೆಚ್ಚು ಹೂಡಿಕೆ ಮಾಡುತ್ತಿದೆ ಎನ್ನಲಾಗಿದೆ. ಎಲ್ಲಾ ಚಾನಲ್ ಗಳನ್ನು ತನ್ನ DTH ಸೇವೆಯಲ್ಲಿ ಗ್ರಾಹಕರಿಗೆ ನೀಡಬೇಕು ಎಂಬ ಯೋಜನೆಯನ್ನು ರೂಪಿಸಿದೆ. ಸುಮಾರು 432 ಚಾನಲ್‌ಗಳನ್ನು ಪ್ರಸಾರವಾಗಲಿದ್ದು, 50ಕ್ಕೂ ಹೆಚ್ಚು HD ಚಾನಲ್‌ಗಳು ಲಭ್ಯವಿರಲಿದೆ.

ಈಗಾಗಲೇ ಪ್ಲಾನ್ ರೆಡಿ ಮಾಡಿದೆ:

ಈಗಾಗಲೇ ಪ್ಲಾನ್ ರೆಡಿ ಮಾಡಿದೆ:

ಜಿಯೋ ಡಿಟಿಹೆಚ್ ತನ್ನ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹಲವಾರು ಪ್ಲಾನ್‌ಗಳನ್ನು ರೆಡಿ ಮಾಡಿಕೊಂಡಿದೆ. ಜಿಯೋ DTH ಬೇಸಿಕ್ ಹೋಮ್ ಪ್ಯಾಕ್, ಜಿಯೋ DTH ಸಿಲ್ವರ್ ಪ್ಲಾನ್, ಜಿಯೋ DTH ಗೋಲ್ಡ್ ಪ್ಲಾನ್, ಜಿಯೋ DTH ಪ್ಲಾಟಿನಂ, ಪ್ಲಾನ್ ಜಿಯೋ DHT ಮೈ ಪ್ಲಾನ್.

Best Mobiles in India

Read more about:
English summary
new report says that Jio is also testing the cable TV STB, which will work on the same FTTH cabling. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X